Thalapathy Vijay – ವಿಜಯ್ನ ಪೋರ್ಟ್ಫೋಲಿಯೋ ಇಂಟರೆಸ್ಟಿಂಗ್; ಹೂಡಿಕೆಯಲ್ಲಿ ಸಂಪ್ರದಾಯವಾದಿ; ಎಲ್ಲೆಲ್ಲಿದೆ ಅವರ 624 ಕೋಟಿ ರೂ ಹಣ?
Actor turned politician Vijay’s Wealth Revealed: Rs 624 Crore Assets & Traditional Investments ನಟ ವಿಜಯ್ ಅವರ ಟಿವಿಕೆ ಪಕ್ಷದ ದಿಗ್ವಿಜಯದ ನಂತರ, ಅವರ ಆಸ್ತಿಪಾಸ್ತಿ ಮತ್ತು ಹೂಡಿಕೆಗಳ ಬಗ್ಗೆ ಕುತೂಹಲ ಹೆಚ್ಚಿದೆ. ಚುನಾವಣಾ ಅಫಿಡವಿಟ್ ಪ್ರಕಾರ, ವಿಜಯ್ 624 ಕೋಟಿ ರೂ. ಆಸ್ತಿ ಹೊಂದಿದ್ದು, ಶೂನ್ಯ ಸಾಲಗಾರರಾಗಿದ್ದಾರೆ. ಹೆಚ್ಚಿನ ಹಣವನ್ನು ಬ್ಯಾಂಕ್ ಠೇವಣಿ ಮತ್ತು ರಿಯಲ್ ಎಸ್ಟೇಟ್‌ನಲ್ಲಿ ಹೂಡಿಕೆ ಮಾಡುವ ಮೂಲಕ ಅವರು ಸಂಪ್ರದಾಯಸ್ಥ ಹೂಡಿಕೆದಾರರಂತೆ ಗೋಚರಿಸುತ್ತಾರೆ. ಷೇರು ಮಾರುಕಟ್ಟೆಯಲ್ಲಿ ಅವರ ಹೂಡಿಕೆ ಅತ್ಯಲ್ಪ.
ಹೊಸ ತಲೆಮಾರಿನ ಜನರನ್ನು ಮತಪೆಟ್ಟಿಗೆಗೆ ಆಕರ್ಷಿಸಿದ ವಿಜಯ್ ಅವರು ಹೂಡಿಕೆ ವಿಚಾರದಲ್ಲಿ ಮಹಾನ್ ಸಂಪ್ರದಾಯಸ್ಥರಂತೆ ಗೋಚರಿಸುತ್ತಾರೆ. ಅವರು ಚುನಾವಣಾ ಅಫಿಡವಿಟ್ನಲ್ಲಿ ಘೋಷಿಸಿಕೊಂಡ ಒಟ್ಟು ಆಸ್ತಿ 624 ಕೋಟಿ ರೂ. ಅದರಲ್ಲಿ ಚರಾಸ್ತಿ 404 ಕೋಟಿ ರೂ, ಚಿರಾಸ್ತಿ 220 ಕೋಟಿ ರೂ. ಶೂನ್ಯ ಸಾಲ ಹೊಂದಿರುವ ಅಪರೂಪದ ರಾಜಕಾರಣಿ.

Read here: Thalapathy Vijay ಅವರ ಐತಿಹಾಸಿಕ ಗೆಲುವು ಮತ್ತು 17 ವರ್ಷಗಳ ಅಧಿಕಾರದ ಪಯಣ
ವಿಜಯ್ ಅವರ ಆಸ್ತಿಪಾಸ್ತಿ ವಿವರ
ದಳಪತಿ ವಿಜಯ್ ಅವರ ಒಟ್ಟು ಆಸ್ತಿ: 624 ಕೋಟಿ ರೂ
- ಬ್ಯಾಂಕ್ಗಳಲ್ಲಿ: 404 ಕೋಟಿ ರೂ
- ರಿಯಲ್ ಎಸ್ಟೇಟ್ ಆಸ್ತಿಗಳು: 220 ಕೋಟಿ ರೂ
- ವಾರ್ಷಿಕ ಆದಾಯ: 184.53 ಕೋಟಿ ರೂ
ವಿಜಯ್ ಅವರ ಬ್ಯಾಂಕ್ ಡೆಪಾಸಿಟ್ಗಳು
- ಚೆನ್ನೈನ ಸಾಲಿಗ್ರಾಮಮ್ನಲ್ಲಿರುವ ಇಂಡಿಯನ್ ಓವರ್ಸೀಸ್ ಬ್ಯಾಂಕ್ನ ಒಂದು ಸೇವಿಂಗ್ಸ್ ಅಕೌಂಟ್ನಲ್ಲಿ 213 ಕೋಟಿ ರೂ ಬ್ಯಾಲನ್ಸ್ ಹೊಂದಿದ್ದಾರೆ.
- ಎಕ್ಸಿಸ್ ಬ್ಯಾಂಕ್ನಲ್ಲಿ 40 ಕೋಟಿ ರೂ, ಐಒಬಿಯಲ್ಲಿ 25 ಕೊಟಿ ರೂ, ಎಚ್ಡಿಎಫ್ಸಿ ಬ್ಯಾಂಕಲ್ಲಿ 20 ಕೋಟಿ ರೂ, ಎಸ್ಬಿಐನಲ್ಲಿ 15 ಕೋಟಿ ರೂ ಹೀಗೆ ವಿವಿಧ ಬ್ಯಾಂಕುಗಳಲ್ಲಿ 100 ಕೋಟಿ ರೂ ಮೊತ್ತದ ಫಿಕ್ಸೆಡ್ ಡೆಪಾಸಿಟ್ಗಳನ್ನು ಹೊಂದಿದ್ದಾರೆ.
- ಷೇರುಗಳಲ್ಲಿ ಅವರ ಹೂಡಿಕೆ 20 ಲಕ್ಷ ರೂಗಿಂತಲೂ ಕಡಿಮೆ. ಜಯನಗರ್ ಪ್ರಾಪರ್ಟಿ ಷೇರುಗಳಲ್ಲಿ 19.69 ಲಕ್ಷ ರೂ, ಐಒಬಿಯ ಷೇರುಗಳಲ್ಲಿ 9,600 ರೂ ಮತ್ತು ಸನ್ ಪೇಪರ್ ಮಿಲ್ ಷೇರುಗಳಲ್ಲಿ 25,000 ರೂ ಹೂಡಿಕೆ ಮಾಡಿದ್ದಾರೆ.
ವಿಜಯ್ ಅವರ ರಿಯಲ್ ಎಸ್ಟೇಟ್ ಹೂಡಿಕೆಗಳು
- ವಿಜಯ್ ಅವರ ಸ್ಥಿರಾಸ್ತಿಗಳ ಮೌಲ್ಯ 220 ಕೋಟಿ ರೂನಷ್ಟು ಇದೆ. ನೀಲಂಕರೈ, ಸಾಲಿಗ್ರಾಮಮ್, ಮೈಲಾಪುರ್, ಎಗ್ಮೋರ್ ಮತ್ತಿತರೆಡೆ 115 ಕೋಟಿ ರೂ ಮೌಲ್ಯದ 10 ವಾಸ ಸ್ಥಳಗಳನ್ನು ಹೊಂದಿದ್ದಾರೆ.
- ಪರಿವಾಕ್ಕಮ್, ತ್ಯಾಗರಾಜನಗರ್, ಶೋಲಿಂಗನಲ್ಲೂರ್, ಕೋಪ್ಪೂರ್ನಲ್ಲಿ 82.8 ಕೋಟಿ ರೂ ಮೌಲ್ಯದ ಕಮರ್ಷಿಯಲ್ ಆಸ್ತಿಗಳನ್ನು ಹೊಂದಿದ್ದಾರೆ.
- ವಾಟ್ಟಪಟ್ಟಿ ಗ್ರಾಮ್, ಕೊಡೈಕೆನಲಾಲ್ನಲ್ಲಿ 20 ಲಕ್ಷ ರೂ ಮೌಲ್ಯದ ಕೃಷಿ ಭೂಮಿ ಹೊಂದಿದ್ದಾರೆ.
- ಪೋರೂರ್, ಸಾಲಿಗ್ರಾಮಮ್ ಮತ್ತು ನೀಲಂಕರೈನಲ್ಲಿ 22 ಕೋಟಿ ರೂ ಮೌಲ್ಯದ ಕೃಷಿಯೇತರ ಜಮೀನು ಹೊಂದಿದ್ದಾರೆ.
ವಿಜಯ್ ಅವರ ಒಟ್ಟಾರೆ ಹೂಡಿಕೆ ಪ್ರವೃತ್ತಿ ಹೇಗೆ?
ಅವರ ಆಸ್ತಿಪಾಸ್ತಿ ಮತ್ತು ಹೂಡಿಕೆ ಗಮನಿಸಿದರೆ ವಿಜಯ್ ಅವರು ಸಂಪ್ರದಾಯಸ್ಥರಂತೆ ಗೋಚರವಾಗುತ್ತಾರೆ. ಹಿಂದಿನ ತಲೆಮಾರುಗಳ ಜನರ ರೀತಿಯಲ್ಲಿ ಹೆಚ್ಚಿನ ಹಣವು ಬ್ಯಾಂಕ್ ಡೆಪಾಸಿಟ್ ಮತ್ತು ರಿಯಲ್ ಎಸ್ಟೇಟ್ಗಳಲ್ಲಿ ಹೂಡಿಕೆ ಮಾಡಿದ್ದಾರೆ. ಷೇರುಗಳಲ್ಲಿ ಶೇ. 1ಕ್ಕಿಂತಲೂ ಕಡಿಮೆ ಹೂಡಿಕೆ ಮಾಡಿರುವುದು ಗಮನಾರ್ಹ.
ವಿಜಯ್ ಅವರ ವಾಹನ, ಒಡವೆ ಇತ್ಯಾದಿ ಆಸ್ತಿಗಳು
ವಿಜಯ್ ಅವರು ಐದು ಕಾರು ಮತ್ತು ಒಂದು ಬೈಕ್ ಹೊಂದಿದ್ದಾರೆ. ಇವೆಲ್ಲವೂ ಕಳೆದ ಐದಾರು ವರ್ಷಗಳಲ್ಲಿ ಖರೀದಿಸಿರುವಂಥವು. ಟೊಯೊಟಾ ಲೆಕ್ಸಸ್ 350, ಬಿಎಂಡಬ್ಲ್ಯು ಐ7, ಟೊಯೊಟಾ ವೆಲ್ಫೈರ್, ಬಿಎಂಡಬ್ಲ್ಯು 530, ಮಾರುತಿ ಸ್ವಿಫ್ಟ್, ಟಿವಿಎಸ್ ಎಕ್ಸ್ಎಲ್ ಸೂಪರ್ ಬೈಕ್ ವಾಹನಗಳಿವೆ ಎಂದು ವಿಜಯ್ ಘೋಷಿಸಿಕೊಂಡಿದ್ದಾರೆ. ಇದರಲ್ಲಿ ಟೊಯೊಟಾ ಲೆಕ್ಸಸ್ ಕಾರಿನ ಮೌಲ್ಯ ಮೂರು ಕೋಟಿ ರೂ ಇದೆ. ಬಿಎಂಡಬ್ಲ್ಯು ಐ7 ಕಾರಿನ ಮೌಲ್ಯ 2 ಕೋಟಿ ರೂಗೂ ಅಧಿಕ ಇದೆ. ವಿಜಯ್ ಅವರು 1.2 ಕೋಟಿ ರೂ ಮೌಲ್ಯದ 883 ಗ್ರಾಮ್ ತೂಕದ ಚಿನ್ನ ಮತ್ತು ಒಡವೆ ಆಸ್ತಿಗಳನ್ನು ಹೊಂದಿದ್ದಾರೆ.
Follow Us
Follow KannadaFolks channel on WhatsApp
Visit the Kannadafolks.in follow the latest updates
Subscribe and Receive exclusive content and updates on your favourite topics
Subscribe to KannadaFloks YouTube Channel and watch Videos
Support Us 


