HomeNewsKarnataka No LPG Shortage-ಎಲ್ಪಿಜಿ ಕೊರತೆ ಸರ್ಕಾರ ಸ್ಪಷ್ಟನೆ

Karnataka No LPG Shortage-ಎಲ್ಪಿಜಿ ಕೊರತೆ ಸರ್ಕಾರ ಸ್ಪಷ್ಟನೆ

Auto Drivers Can Relax

Karnataka No LPG Shortage-ಎಲ್ಪಿಜಿ ಕೊರತೆ ಸರ್ಕಾರ ಸ್ಪಷ್ಟನೆ

ಗ್ಯಾಸ್ ಸಂಕಷ್ಟ ದಿನದಿಂದ ದಿನಕ್ಕೆ ಹೆಚ್ಚಾಗುತ್ತಿದ್ದರೆ, ಆಟೋದವರ ಬದುಕು ಕೂಡಾ ಬೀದಿಗೆ ಬರ್ತಿದೆ. ಗಂಟೆಗಟ್ಟಲ್ಲೇ ಕ್ಯೂ ನಿಂತ್ರೂ ಆಟೋದವರಿಗೆ ಗ್ಯಾಸ್‌ ಸಿಗುತ್ತಿಲ್ಲ. ಹೀಗಿರುವಾಗಿ ರಾಜ್ಯದಲ್ಲಿ ಆಟೋ ಎಲ್‌ಪಿಜಿ ಸರಬರಾಜಿನ ಬಗ್ಗೆ ಸರ್ಕಾರ ಸ್ಪಷ್ಟನೆ ನೀಡಿದೆ. ಸರಬರಾಜಿನಲ್ಲಿ ವ್ಯತ್ಯಾಸ ಕಂಡುಬಂದಿದ್ದರೂ ಯಾವುದೇ ತೊಂದರೆ ಇಲ್ಲ. ಆಟೋ ಚಾಲಕರಿಗೆ ಆತಂಕ ಬೇಡ ಎಂದಿದೆ.ಮಧ್ಯಪ್ರಾಚ್ಯದಲ್ಲಿ ನಡೆಯುತ್ತಿರುವ ಯುದ್ಧದ ಪರಿಣಾಮ,ಎಲ್ ಪಿಜಿ ಗ್ಯಾಸ್ ಬಿಕ್ಕಟ್ಟು ; ಆಟೋ ಚಾಲಕರ ಪರದಾಟ, ದುಡಿಮೆಗೆ ಪೆಟ್ಟು - lpg gas crisis : huge blow to the daily income of auto ...

Read this : Trek safety concerns rise-ಸೋಲೋ ಟ್ರೆಕ್ಕಿಂಗ್ ಬ್ಯಾನ್ ಚರ್ಚೆ

ಬೆಂಗಳೂರು, ಏಪ್ರಿಲ್ 08: ಕರ್ನಾಟಕದಲ್ಲಿ ಗ್ಯಾಸ್​ ಸಿಗದೆ ಆಟೋ ಚಾಲಕರಿಗೆ ಸಂಕಷ್ಟ ಎದುರಾಗಿದೆ. ದಿನವಿಡಿ ದುಡಿಮೆ ಬಿಟ್ಟು ಬಂಕ್​ಗಳ ಬಳಿ ಗಂಟೆಗಟ್ಟಲೇ ಕಾಯುವಂತ ಸ್ಥಿತಿ ನಿರ್ಮಾಣವಾಗಿದೆ. ಇದರಿಂದ ಆಟೋ ಚಾಲಕರು ಹೈರಾಣಾಗಿ ಹೋಗಿದ್ದಾರೆ. ಈ ಮಧ್ಯೆ ಆಟೋ ಗ್ಯಾಸ್ (Auto LPG)​​ ಕೊರತೆ ಬಗ್ಗೆ ವಂದತಿಗಳು ಕೂಡ ಹರಿದಾಡಿದ್ದವು. ಸದ್ಯ ಆಟೋ ಎಲ್​ಪಿಜಿ ಸರಬರಾಜು ಕುರಿತು ಸ್ಪಷ್ಟನೆ ನೀಡಿರುವ ರಾಜ್ಯ ಸರ್ಕಾರ,  ಸರಬರಾಜಿನಲ್ಲಿ ವ್ಯತ್ಯಾಸ ಕಂಡುಬಂದಿದ್ದರೂ ಯಾವುದೇ ತೊಂದರೆ ಇಲ್ಲ ಎಂದು ಹೇಳಿದೆ.

ಪ್ರತಿದಿನ 83ರಿಂದ 94 ಮೆಟ್ರಿಕ್ ಟನ್​ವರೆಗೂ ಪೂರೈಕೆ

ಆಟೋ ಎಲ್​ಪಿಜಿ ಸರಬರಾಜು ಕುರಿತು ಮಾಧ್ಯಮ ಪ್ರಕಟಣೆ ಹೊರಡಿಸಿರುವ ರಾಜ್ಯ ಸರ್ಕಾರ, ಸರಬರಾಜಿನಲ್ಲಿ ವ್ಯತ್ಯಾಸ ಕಂಡುಬಂದಿದ್ದರೂ ಯಾವುದೇ ತೊಂದರೆ ಇಲ್ಲ. IOCL, BPC, HPC ಕಂಪನಿಗಳಿಂದ ಗ್ಯಾಸ್​ ಪೂರೈಕೆ ನಡೆಯುತ್ತಿದೆ. ಏಪ್ರಿಲ್ 2ರಿಂದ ಏಪ್ರಿಲ್‌ 6ರವರೆಗೆ ದಿನನಿತ್ಯ ಸರಬರಾಜು ಆಗುತ್ತಿದೆ. ಪ್ರತಿದಿನ 83ರಿಂದ 94 ಮೆಟ್ರಿಕ್ ಟನ್​ವರೆಗೂ ಪೂರೈಕೆ ಮಾಡಲಾಗಿದೆ. ಏಪ್ರಿಲ್ 5ರಂದು ಅತಿ ಹೆಚ್ಚು 94.11 MT ಸರಬರಾಜು ಮಾಡಲಾಗಿದೆ. ಆಟೋ ಚಾಲಕರು ಆತಂಕಪಡಬೇಕಾಗಿಲ್ಲ ಎಂದು ಸರ್ಕಾರ ಹೇಳಿದೆ.

ಇನ್ನು ಎಲ್​ಪಿಜಿ ಪೂರೈಕೆ ವ್ಯವಸ್ಥೆಯನ್ನು ಸರ್ಕಾರ ಸಮೀಕ್ಷೆ ಮಾಡುತ್ತಿದೆ. ಅಗತ್ಯ ಕ್ರಮ ಕೈಗೊಳ್ಳಲಾಗುತ್ತದೆ. ಏಪ್ರಿಲ್ 5ರಂದು ಗರಿಷ್ಠ 94.11 MT ಪೂರೈಕೆಯಾಗಿದೆ. ಆಟೋ ಚಾಲಕರಿಗೆ ಆತಂಕ ಬೇಡ, ಪೂರೈಕೆ ಮೇಲೆ ಸರ್ಕಾರದ ನಿಗಾ ಇದೆ.

  • ದಿನಾಂಕ                            ಆಟೋ ಎಲ್​ಪಿಜಿ ಸರಬರಾಜು (ಮೆಟ್ರಿಕ್ ಟನ್​​ನಲ್ಲಿ)
  • ಏಪ್ರಿಲ್​ 2ರಂದು                             87.78
  • ಏಪ್ರಿಲ್​ 3ರಂದು                             86.05
  • ಏಪ್ರಿಲ್​ 4ರಂದು                             84.80
  • ಏಪ್ರಿಲ್​​ 5ರಂದು                             94.11
  • ಏಪ್ರಿಲ್​ 6ರಂದು                             83.58

ಸದ್ಯ ರಾಜ್ಯದಲ್ಲಿನ ಆಟೋ ಮಾಲೀಕರು ಮತ್ತು ಚಾಲಕರುಗಳು ಆತಂಕ ಪಡದೇ ಮತ್ತು ಯಾವುದೇ ವದಂತಿಗಳಿಗೆ ಕಿವಿ ಕೊಡದೇ ಸಹಕರಿಸುವಂತೆ ರಾಜ್ಯ ಸರ್ಕಾರ ಮನವಿ ಮಾಡಿದೆ.

ಕೈಗಾರಿಕಾ ವಲಯಕ್ಕೆ ಎಲ್​ಪಿಜಿ ಹಂಚಿಕೆಗೆ ಮಾರ್ಗಸೂಚಿ 

ಇನ್ನು ಕೈಗಾರಿಕಾ ವಲಯಕ್ಕೆ ಎಲ್​ಪಿಜಿ ಹಂಚಿಕೆ ಕುರಿತು ಕೇಂದ್ರದಿಂದ ಹೊಸ ಮಾರ್ಗಸೂಚಿ ಬಿಡುಗಡೆ ಮಾಡಲಾಗಿದೆ. ಈ ಬಗ್ಗೆ ಪೆಟ್ರೋಲಿಯಂ ಮತ್ತು ನೈಸರ್ಗಿಕ ಅನಿಲ ಸಚಿವಾಲಯ ಕಾರ್ಯದರ್ಶಿ ಡಾ.ನೀರಜ್ ಮಿತ್ತಲ್​ರಿಂದ ರಾಜ್ಯ, ಕೇಂದ್ರಾಡಳಿತ ಪ್ರದೇಶಗಳ ಮುಖ್ಯ ಕಾರ್ಯದರ್ಶಿಗಳಿಗೆ ಅಧಿಕೃತ ಪತ್ರ ರವಾನಿಸಲಾಗಿದೆ.

  • ವಿವಿಧ ಕೈಗಾರಿಕಾ ವಲಯಗಳಿಗೆ ಶೇ.70ರಷ್ಟು LPG ಹಂಚಿಕೆಗೆ ನಿರ್ಧಾರ.
  • ಪಿಎನ್‌ಜಿ ಸುಧಾರಣೆ ತಂದ ರಾಜ್ಯಗಳಿಗೆ ಹೆಚ್ಚುವರಿ ಶೇ.10ರಷ್ಟು ಎಲ್‌ಪಿಜಿ
  • ಫಾರ್ಮಾ, ಫುಡ್, ಅಗ್ರಿಕಲ್ಚರ್ ಸೇರಿ ಪ್ರಮುಖ ವಲಯಗಳಿಗೆ ಅನಿಲ ಪೂರೈಕೆ
  • ಬೃಹತ್ LPG ಬಳಕೆಗೆ ದಿನಕ್ಕೆ 0.2 ಟಿಎಂಟಿ ಮಿತಿ ನಿಗದಿ
  • ನೈಸರ್ಗಿಕ ಅನಿಲ ಬಳಸಲು ಸಾಧ್ಯವಿಲ್ಲದ ಘಟಕಗಳಿಗೆ ಮೊದಲ ಆದ್ಯತೆ
  • ಸಿಜಿಡಿ ಘಟಕಗಳಿಗೆ ಪಿಎನ್‌ಜಿ ನೋಂದಣಿ ಕಡ್ಡಾಯ
  • ಪ್ಯಾಕೇಜಿಂಗ್, ಪೇಂಟ್, ಸ್ಟೀಲ್ ಮತ್ತು ಸೆರಾಮಿಕ್ ಘಟಕಗಳಿಗೆ ಸಿಗಲಿದೆ ನೆರವು
  • ಮಾರುಕಟ್ಟೆಯ ಬೇಡಿಕೆಗೆ ತಕ್ಕಂತೆ ಅನಿಲಪೂರೈಕೆ ವ್ಯವಸ್ಥೆ

ಮಾರ್ಚ್​​ 2026ರ ಬಳಕೆ ಆಧರಿಸಿ ಕೈಗಾರಿಕೆಗಳಿಗೆ ಇಂಧನ ಕೋಟಾ ನಿಗದಿ

 

Follow Us 

Follow KannadaFolks channel on WhatsApp

Visit the Kannadafolks.in follow the latest updates

Subscribe and Receive exclusive content and updates on your favourite topics

Subscribe to KannadaFloks YouTube Channel and watch Videos

Subscribe for Free and Support Us 

ನಿಮ್ಮ ಈ - ಮೇಲ್ ಬಳಸಿ 👇ಇದೀಗ ಉಚಿತವಾಗಿ 🆓 ಚಂದಾದಾರರಾಗಿ..!  ನಿಮಗೆ ನಮ್ಮ ಕಥೆಗಳು, ಹಾಡುಗಳು ಮತ್ತು ಮಾಹಿತಿ ಇಷ್ಟವಾದರೆ ನಿಮ್ಮ ಸಮೂಹಕ್ಕೆ ಶೇರ್ ಮಾಡುವುದನ್ನ ಮರೆಯದಿರಿ 
RELATED ARTICLES

LEAVE A REPLY

Please enter your comment!
Please enter your name here

- Advertisment -

Most Popular

Recent Comments