HomeNewsAtlee movie title reveled-ಅಲ್ಲು–ಅಟ್ಲಿ ಅಪ್‌ಡೇಟ್

Atlee movie title reveled-ಅಲ್ಲು–ಅಟ್ಲಿ ಅಪ್‌ಡೇಟ್

Title reveal April 8

Atlee movie title reveled-ಅಲ್ಲು–ಅಟ್ಲಿ ಅಪ್‌ಡೇಟ್

Allu Arjun-Atlee: ಅಟ್ಲಿ, ಅಲ್ಲು ಅರ್ಜುನ್​​ಗಾಗಿ ಹಾಲಿವುಡ್ ಮಾದರಿ ಕತೆ ಹೆಣೆದಿದ್ದು, ಸಿನಿಮಾಕ್ಕಾಗಿ ಹಾಲಿವುಡ್​ನ ಹಲವು ಖ್ಯಾತನಾಮ ವಿಎಫ್​​ಎಕ್ಸ್ ಸಂಸ್ಥೆಗಳೊಟ್ಟಿಗೆ ಕೈಜೋಡಿಸಿದ್ದು, ಭಾರತೀಯ ಚಿತ್ರರಂಗದ ಪ್ರತಿಭಾವಂತ ನಟ-ನಟಿಯರನ್ನು ಸಿನಿಮಾ ತಂಡಕ್ಕೆ ಸೇರಿಸಿಕೊಂಡಿದ್ದಾರೆ. ಸಿನಿಮಾದ ಅಪ್​​ಡೇಟ್ ಒಂದು ಹೊರಬಿದ್ದಿದ್ದು, ಅಲ್ಲು ಅರ್ಜುನ್ ಅಭಿಮಾನಿಗಳಲ್ಲಿ ಕುತೂಹಲ ಮೂಡಿಸಿದೆ.ಅಲ್ಲು ಅರ್ಜುನ್-ಅಟ್ಲಿ ಸಿನಿಮಾಕ್ಕೆ ಮತ್ತೊಬ್ಬ ಸ್ಟಾರ್ ನಟ ಎಂಟ್ರಿ - Kannada News |  Vijay Sethupathi joins Allu Arjun and Atlee movie team | TV9 Kannada

Read this : Jaiswal Sooryavanshi Record-ದಾಖಲೆ ಧ್ವಂಸ ಬ್ಯಾಟಿಂಗ್

‘ಪುಷ್ಪ’ ಮತ್ತು ‘ಪುಷ್ಪ 2’ ಸಿನಿಮಾದ ಬಳಿಕ ಅಲ್ಲು ಅರ್ಜುನ್ (Allu Arjun) ಎದುರು ಹಲವಾರು ಅವಕಾಶಗಳು, ಆಯ್ಕೆಗಳು ಇದ್ದವು ಆದರೆ ಅಲ್ಲು ಅರ್ಜುನ್ ಅವರು ತಮಿಳಿನ ಅಟ್ಲಿ ಜೊತೆಗೆ ಸಿನಿಮಾ ಮಾಡಲು ಮುಂದಾದರು. ಆರಂಭದಲ್ಲಿ ಸ್ವತಃ ಅಲ್ಲು ಅರ್ಜುನ್ ಅಭಿಮಾನಿಗಳು ತಮ್ಮ ಮೆಚ್ಚಿನ ನಟನ ನಿರ್ಣಯದ ಬಗ್ಗೆ ಅನುಮಾನ ವ್ಯಕ್ತಪಡಿಸಿದ್ದರು. ಆದರೆ ಅಟ್ಲಿ, ಅಲ್ಲು ಅರ್ಜುನ್​​ಗಾಗಿ ಹಾಲಿವುಡ್ ಮಾದರಿ ಕತೆ ಹೆಣೆದಿದ್ದು, ಸಿನಿಮಾಕ್ಕಾಗಿ ಹಾಲಿವುಡ್​ನ ಹಲವು ಖ್ಯಾತನಾಮ ವಿಎಫ್​​ಎಕ್ಸ್ ಸಂಸ್ಥೆಗಳೊಟ್ಟಿಗೆ ಕೈಜೋಡಿಸಿದ್ದು, ಭಾರತೀಯ ಚಿತ್ರರಂಗದ ಪ್ರತಿಭಾವಂತ ನಟ-ನಟಿಯರನ್ನು ಸಿನಿಮಾ ತಂಡಕ್ಕೆ ಸೇರಿಸಿಕೊಂಡಿದ್ದಾರೆ. ಸಿನಿಮಾದ ಅಪ್​​ಡೇಟ್ ಒಂದು ಹೊರಬಿದ್ದಿದ್ದು, ಅಲ್ಲು ಅರ್ಜುನ್ ಅಭಿಮಾನಿಗಳಲ್ಲಿ ಕುತೂಹಲ ಮೂಡಿಸಿದೆ.

ಸಿನಿಮಾದ ಟೈಟಲ್ ಪೋಸ್ಟರ್ ನಾಳೆ ಅಂದರೆ ಏಪ್ರಿಲ್ 08ಕ್ಕೆ ಬಿಡುಗಡೆ ಆಗಲಿದೆ. ಸಿನಿಮಾದ ಪೋಸ್ಟರ್ ಬಿಡುಗಡೆ ಸುದ್ದಿ ನೀಡುವ ಸಲುವಾಗಿ ಅಲ್ಲು ಅರ್ಜುನ್ ಸೇರಿದಂತೆ ಚಿತ್ರತಂಡ ಇಂದು (ಏಪ್ರಿಲ್ 07) ಪೋಸ್ಟರ್ ಒಂದನ್ನು ಹಂಚಿಕೊಂಡಿದೆ. ಪೋಸ್ಟರ್​ನಲ್ಲಿ ರಾಕ್ಷಸನ ಬೃಹತ್ ಕೈ ಒಂದು ಕಾಣುತ್ತಿದೆ. ದೈಥ್ಯ ರಾಕ್ಷಸನ ಮುಂಗೈನ ಚಿತ್ರ ಇದಾಗಿದ್ದು, ಬೆರಳ ತುದಿಗಿರುವ ಚೂಪಾದ ದೊಡ್ಡ ಉಗುರುಗಳು ಭೀತಿ ಮೂಡಿಸುವಂತಿವೆ.

ಅಟ್ಲಿ ಮತ್ತು ಅಲ್ಲು ಅರ್ಜುನ್ ಅವರ ಈ ಸಿನಿಮಾ ಹಾಲಿವುಡ್​ನ ‘ಗಾರ್ಡಿಯನ್ಸ್ ಆಫ್ ದಿ ಗ್ಯಾಲೆಕ್ಸಿ’ ಮಾದರಿಯ ಕತೆಯನ್ನು ಹೊಂದಿರಲಿದೆ. ಸಿನಿಮಾದ ಕತೆ ನಡೆಯುವುದು ಭೂಮಿಯಲ್ಲಿ ಅಲ್ಲವಂತೆ ಬೇರೆ ಯಾವುದೋ ಲೋಕದಲ್ಲಂತೆ. ಅಲ್ಲಿ ಅತ್ಯಾಧುನಿಕ ವಾಹನಗಳು, ಅತ್ಯಾಧುನಿಕ ಶಸ್ತ್ರಾಸ್ತ್ರಗಳು, ಚಿತ್ರ, ವಿಚಿತ್ರ ಆಕಾರದ ದೈತ್ಯರು, ಪ್ರಾಣಿಗಳು ಇರಲಿವೆ. ಇವುಗಳ ನಡುವೆ ಮನುಷ್ಯರು ಅಸ್ಥಿತ್ವಕ್ಕಾಗಿ ಹೋರಾಡುವ ಕತೆಯನ್ನು ಈ ಸಿನಿಮಾ ಒಳಗೊಂಡಿರಲಿದೆಯಂತೆ.

ಸಿನಿಮಾಕ್ಕಾಗಿ ಅಟ್ಲಿ, ಹಾಲಿವುಡ್​ನ ಹಲವು ಪ್ರಸಿದ್ಧ ವಿಎಫ್​​ಎಕ್ಸ್ ಸಂಸ್ಥೆಗಳು, ಜನಪ್ರಿಯ ಸ್ಟುಡಿಯೋಗಳ ಜೊತೆಗೆ ಕೈಜೋಡಿಸಿದ್ದಾರೆ. ಸಿನಿಮಾನಲ್ಲಿ ದೀಪಿಕಾ ಪಡುಕೋಣೆ ನಾಯಕಿಯಾಗಿ ನಟಿಸುತ್ತಿದ್ದಾರೆ. ಸಿನಿಮಾನಲ್ಲಿ ರಶ್ಮಿಕಾ ಮಂದಣ್ಣ ಸಹ ಇದ್ದು, ಈ ಸಿನಿಮಾನಲ್ಲಿ ಅವರು ವಿಲನ್ ಆಗಿ ನಟಿಸುತ್ತಿದ್ದಾರೆ ಎನ್ನಲಾಗುತ್ತಿದೆ. ಸಿನಿಮಾಕ್ಕೆ ಸನ್ ನೆಟ್​​ವರ್ಕ್ಸ್​​ನ ಕಲಾನಿಧಿ ಮಾರನ್ ಅವರು ಬಂಡವಾಳ ಹೂಡಿದ್ದಾರೆ. ಇದು ಅವರ ಈ ವರೆಗಿನ ಅತಿ ದೊಡ್ಡ ಬಜೆಟ್ ಸಿನಿಮಾ ಎನ್ನಲಾಗುತ್ತಿದೆ.

Follow Us 

Follow KannadaFolks channel on WhatsApp

Visit the Kannadafolks.in follow the latest updates

Subscribe and Receive exclusive content and updates on your favourite topics

Subscribe to KannadaFloks YouTube Channel and watch Videos

Subscribe for Free and Support Us 

ನಿಮ್ಮ ಈ - ಮೇಲ್ ಬಳಸಿ 👇ಇದೀಗ ಉಚಿತವಾಗಿ 🆓 ಚಂದಾದಾರರಾಗಿ..!  ನಿಮಗೆ ನಮ್ಮ ಕಥೆಗಳು, ಹಾಡುಗಳು ಮತ್ತು ಮಾಹಿತಿ ಇಷ್ಟವಾದರೆ ನಿಮ್ಮ ಸಮೂಹಕ್ಕೆ ಶೇರ್ ಮಾಡುವುದನ್ನ ಮರೆಯದಿರಿ 
RELATED ARTICLES

LEAVE A REPLY

Please enter your comment!
Please enter your name here

- Advertisment -

Most Popular

Recent Comments