HomeNewsEngineer ₹18L Scam-ಎಂಜಿನಿಯರ್ 18 ಲಕ್ಷ ಮೋಸ |Kannada Folks

Engineer ₹18L Scam-ಎಂಜಿನಿಯರ್ 18 ಲಕ್ಷ ಮೋಸ |Kannada Folks

Woman Posed as Bride, Stole Money

Engineer ₹18L Scam-ಎಂಜಿನಿಯರ್ 18 ಲಕ್ಷ ಮೋಸ

ಡೇಟಿಂಗ್ ಆಪ್ ಮೂಲಕ ಪರಿಚಯವಾದ ಮಹಿಳೆ, ಮದುವೆಯಾಗುವುದಾಗಿ ನಂಬಿಸಿ ಸಾಫ್ಟ್‌ವೇರ್ ಎಂಜಿನಿಯರ್‌ಗೆ ಆನ್‌ಲೈನ್ ಟ್ರೇಡಿಂಗ್ ಹೆಸರಲ್ಲಿ 18.7 ಲಕ್ಷ ರೂ. ವಂಚಿಸಿದ್ದಾಳೆ. ಈ ಬಗ್ಗೆ ಬೆಂಗಳೂರಿನ ಸೈಬರ್ ಕ್ರೈಮ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಮದುವೆ ಭರವಸೆ ಮತ್ತು ಭಾವನಾತ್ಮಕ ಒತ್ತಡದ ಮೂಲಕ ಹೆಚ್ಚಿನ ಹಣ ಹೂಡಿಕೆಗೆ ಮಹಿಳೆ ಒತ್ತಾಯಿಸಿದ ಕಾರಣ ಸಂತ್ರಸ್ತ ಹಂತ ಹಂತವಾಗಿ ಹಣ ಹೂಡಿಕೆ ಮಾಡಿದ್ದ ಎನ್ನಲಾಗಿದೆ.Dating app friend dupes techie of Rs 50 lakh by promising trading profit & marriage  in Bengaluru | Bengaluru News - Times of India

Read this : Gopalakrishna Naik Attacked-ಕಾಂಗ್ರೆಸ್ ಮುಖಂಡನ ಮೇಲೆ ಚಾಕು ದಾಳಿ

ಬೆಂಗಳೂರು, ಏಪ್ರಿಲ್​​ 02: ಆನ್​​ ಲೈನ್​​ ಹೂಡಿಕೆ ಹೆಸರಲ್ಲಿ ನಡೆಯುವ ವಂಚನೆ ಪ್ರಕರಣಗಳು ಇನ್ನೊಂದು ಹಂತ ತಲುಪಿದ್ದು, ಮದುವೆಯಾಗುವುದಾಗಿ ನಂಬಿಸಿ ಮಹಿಳೆಯೋರ್ವಳು ಸ್ವಾಫ್ಟ್‌ವೇರ್ ಎಂಜಿನಿಯರ್​​ ಓರ್ವನಿಗೆ ಬರೋಬ್ಬರಿ 18 ಲಕ್ಷ ರೂಪಾಯಿಗಳಿಗೂ ಹೆಚ್ಚಿನ ಹಣ ಪಡೆದು ವಂಚಿಸಿರುವ ಘಟನೆ ಬೆಂಗಳೂರಿನ (Bengaluru) ನ್ಯೂ ತಿಪ್ಪಸಂದ್ರದಲ್ಲಿ ನಡೆದಿದೆ. ಪ್ರೀತಿಯ ಹೆಸರಲ್ಲಿ ಮಹಿಳೆ ಹೆಣೆದ ಮೋಸದ ಬಲೆಗೆ ಸಿಲುಕಿ ಹಣ ಕಳೆದುಕೊಂಡ ಎಂಜಿನಿಯರ್​​ ಈಗ ನ್ಯಾಯಕ್ಕೆ ಆಗ್ರಹಿಸಿ ಪೊಲೀಸ್​​ ಠಾಣೆ ಮೆಟ್ಟಿಲೇರಿದ್ದಾನೆ.

2025ರ ನವೆಂಬರ್‌ನಲ್ಲಿ Flutrr ಡೇಟಿಂಗ್ ಆಪ್‌ ಮೂಲಕ 29 ವರ್ಷದ ಸ್ವಾಫ್ಟ್‌ವೇರ್ ಎಂಜಿನಿಯರ್​​ಗೆ ಮಹಿಳೆಯೊಬ್ಬಳ ಪರಿಚಯವಾಗಿತ್ತು. ಆಕೆ ತನ್ನನ್ನು ಮುಂಬೈ ಮೂಲದ ಅಂಜಲಿ ಕುಶ್ಲಾನಿ ಎಂದು ಪರಿಚಯಿಸಿಕೊಂಡು, ನಂತರ ವಾಟ್ಸಾಪ್ ಮೂಲಕ ನಿಯಮಿತವಾಗಿ ಈತನ ಸಂಪರ್ಕದಲ್ಲಿದ್ದಳು. ಇದಾದ ಕೆಲ ಸಮಯದ ಬಳಿಕ ಪ್ರೀತಿಯ ಹೆಸರಲ್ಲಿ ಸಂತ್ರಸ್ತನ ನಂಬಿಸಿದ್ದ ಮಹಿಳೆ, ಆತನ ಜೊತೆಗೆ ಸಲುಗೆ ಬೆಳೆಸಿಕೊಂಡಿದ್ದಳು. ಹೀಗಾಗಿ ಸಾಫ್ಟ್‌ವೇರ್ ಎಂಜಿನಿಯರ್​​ ಆಕೆಯ ಜೊತೆಗೆ ಭವಿಷ್ಯದ ಕನಸು ಕೂಡ ಕಂಡಿದ್ದ. ಇದನ್ನೇ ಬಂಡವಾಳ ಮಾಡಿಕೊಂಡ ಆಕೆ ಕೆಲ ವಾರಗಳ ಬಳಿಕ ಆಕೆ ಆನ್‌ಲೈನ್ ಟ್ರೇಡಿಂಗ್ ಬಗ್ಗೆ ಪರಿಚಯಿಸಿ, ತನ್ನ ಮಾರ್ಗದರ್ಶನದಲ್ಲಿ ಹೂಡಿಕೆ ಮಾಡಲು ಈತನನ್ನು ಪ್ರೇರೇಪಿಸಿದ್ದಳು. ಆರಂಭದಲ್ಲಿ ಸಂದೇಹಗೊಂಡಿದ್ದ ಸಂತ್ರಸ್ತ ಎಂಜಿನಿಯರ್​ 40,000 ಹೂಡಿಕೆ ಮಾಡಿದ್ದು, ಇದಕ್ಕೆ ಚಿಕ್ಕ ಮಟ್ಟಿನ ಲಾಭವೂ ಆತನಿಗೆ ಸಿಕ್ಕಿತ್ತು. ಹೀಗಾಗಿ ಆಕೆಯ ಮೇಲೆ ಎಂಜಿನಿಯರ್​​ ಹೆಚ್ಚು ವಿಶ್ವಾಸ ಹೊಂದಿದ್ದ ಎನ್ನಲಾಗಿದೆ.

ಇದರ ನಂತರ ದೊಡ್ಡ ಮೊತ್ತಗಳನ್ನು ಹೂಡಿಕೆ ಮಾಡಲು ಪ್ರೇರೇಪಿತನಾದ ಈತ, ಸ್ನೇಹಿತರಿಂದ ಮತ್ತು ಇತರ ಮಾದರಿಯ ಸಾಲಗಳನ್ನು ತೆಗೆದುಕೊಂಡು ಹಣ ಹೂಡಿಕೆ ಮಾಡಿದ್ದ. ಡಿಸೆಂಬರ್ ವೇಳೆಗೆ ಒಟ್ಟು 5.6 ಲಕ್ಷ ರೂ. ಹೂಡಿಕೆ ಮಾಡಿದಿದ್ದು, ನಂತರ ಈ ಮೊತ್ತ ಇನ್ನಷ್ಟು ಹೆಚ್ಚಾಗಿತ್ತು. ಮದುವೆ ಭರವಸೆ ಮತ್ತು ಭಾವನಾತ್ಮಕ ಒತ್ತಡದ ಮೂಲಕ ಹೆಚ್ಚಿನ ಹಣ ಹೂಡಿಕೆಗೆ ಮಹಿಳೆ ಒತ್ತಾಯಿಸಿದ ಕಾರಣ ಸಂತ್ರಸ್ತ ಹಂತ ಹಂತವಾಗಿ ಒಟ್ಟು 18.7 ಲಕ್ಷ ರೂ. ಹೂಡಿಕೆ ಮಾಡಿದ್ದ. ಈ ಪೈಕಿ 10 ಲಕ್ಷ ರೂ. ಸಾಲ ಮಾಡಿ ನೀಡಿರುವ ಹಣ ಎಂಬುದೂ ಈಗ ಬಹಿರಂಗವಾಗಿದೆ.

ಹೂಡಿಕೆ ಹೆಸರಲ್ಲಿ ನೀಡಿದ್ದ ಹಣವನ್ನು ಹಿಂತೆಗೆದುಕೊಳ್ಳಲು ಸಾಧ್ಯವಾಗದಾಗ ಎಂಜಿನಿಯರ್​​  ಅನುಮಾನಗೊಂಡು ಈ ಬಗ್ಗೆ ವಿಚಾರಿಸಿದ ಬಳಿಕ ಆರೋಪಿ ಮಹಿಳೆ ಈತನ ಜೊತೆಗಿನ ಸಂಪರ್ಕ ಕಡಿತಗೊಳಿಸಿದ್ದಳು. ಹೀಗಾಗಿ ತಾನು ಮೋಸ ಹೋಗಿರುವ ಬಗ್ಗೆ ಅರಿತ ಸ್ವಾಫ್ಟ್‌ವೇರ್ ಎಂಜಿನಿಯರ್​​, ಈ ಕುರಿತು ಪೂರ್ವ ಸೈಬರ್ ಕ್ರೈಮ್ ಪೊಲೀಸ್ ಠಾಣೆಗೆ ದೂರು ನೀಡಿದ್ದಾನೆ. ಐಟಿ ಕಾಯ್ದೆ ಹಾಗೂ ಭಾರತೀಯ ನ್ಯಾಯ ಸಂಹಿತೆ ಕಲಂ 318 ಅಡಿಯಲ್ಲಿ ಆರೋಪಿತ ಮಹಿಳೆಯ ವಿರುದ್ಧ ಪ್ರಕರಣ ದಾಖಲಾಗಿದೆ.

Follow Us 

Follow KannadaFolks channel on WhatsApp

Visit the Kannadafolks.in follow the latest updates

Subscribe and Receive exclusive content and updates on your favourite topics

Subscribe to KannadaFloks YouTube Channel and watch Videos

 

 

Subscribe for Free and Support Us 

ನಿಮ್ಮ ಈ - ಮೇಲ್ ಬಳಸಿ 👇ಇದೀಗ ಉಚಿತವಾಗಿ 🆓 ಚಂದಾದಾರರಾಗಿ..!  ನಿಮಗೆ ನಮ್ಮ ಕಥೆಗಳು, ಹಾಡುಗಳು ಮತ್ತು ಮಾಹಿತಿ ಇಷ್ಟವಾದರೆ ನಿಮ್ಮ ಸಮೂಹಕ್ಕೆ ಶೇರ್ ಮಾಡುವುದನ್ನ ಮರೆಯದಿರಿ 
RELATED ARTICLES

LEAVE A REPLY

Please enter your comment!
Please enter your name here

- Advertisment -

Most Popular

Recent Comments