HomeNewsDonald Trump - ಯುದ್ಧ ನಿಲ್ಲಿಸುವ ಸುಳಿವು ನೀಡಿದ ಟ್ರಂಪ್|Kannada Folks

Donald Trump – ಯುದ್ಧ ನಿಲ್ಲಿಸುವ ಸುಳಿವು ನೀಡಿದ ಟ್ರಂಪ್|Kannada Folks

Donald Trump - ಯುದ್ಧ ನಿಲ್ಲಿಸುವ ಸುಳಿವು ನೀಡಿದ ಟ್ರಂಪ್; ಕದನವಿರಾಮಕ್ಕೆ ಇರಾನ್ ಜೊತೆ ಅಮೆರಿಕ ಮಾತುಕತೆ

Donald Trump – ಯುದ್ಧ ನಿಲ್ಲಿಸುವ ಸುಳಿವು ನೀಡಿದ ಟ್ರಂಪ್; ಕದನವಿರಾಮಕ್ಕೆ ಇರಾನ್ ಜೊತೆ ಅಮೆರಿಕ ಮಾತುಕತೆ

 

ಇರಾನ್ ಮೇಲೆ ಅಮೆರಿಕ ಮತ್ತು ಇಸ್ರೇಲ್​ನ ಯುದ್ಧ ಶುರುವಾಗಿ 24 ದಿನಗಳಾಗಿವೆ. ಕದನವಿರಾಮಕ್ಕೆ ಹಲವು ದೇಶಗಳು ಮನವೊಲಿಸಲು ಪ್ರಯತ್ನಿಸಿದ್ದರೂ ಯಾವುದೇ ಪ್ರಯೋಜನವಾಗಿರಲಿಲ್ಲ. ಆದರೆ, ಇದೀಗ ಇರಾನ್ ಜೊತೆಗಿನ ಉದ್ವಿಗ್ನತೆಯನ್ನು ತಗ್ಗಿಸುವ ಬಗ್ಗೆ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಸುಳಿವು ನೀಡಿದ್ದಾರೆ. ಇರಾನ್ ಜೊತೆ’ಉತ್ಪಾದಕ’ ಮಾತುಕತೆಗಳು ನಡೆದಿದ್ದು, ಟೆಹ್ರಾನ್​ನ ಮೇಲಿನ ವಿದ್ಯುತ್ ಸ್ಥಾವರದ ಮೇಲಿನ ದಾಳಿಗಳು ಸ್ಥಗಿತಗೊಂಡಿವೆ ಎಂದು ಹೇಳಿದ್ದಾರೆ.

ವಾಷಿಂಗ್ಟನ್, ಮಾರ್ಚ್ 23: ಇರಾನ್ ಜೊತೆಗಿನ ಯುದ್ಧದ ಕಾರ್ಮೋಡ ಸರಿಯುವ ಬಗ್ಗೆ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ (Donald Trump) ಸುಳಿವು ನೀಡಿದ್ದಾರೆ. ಇರಾನ್ (Iran War), ಇಸ್ರೇಲ್ ಮತ್ತು ಅಮೆರಿಕದ ನಡುವಿನ ಯುದ್ಧದ ಪರಿಣಾಮವನ್ನು ಗಲ್ಫ್ ರಾಷ್ಟ್ರಗಳೂ ಅನುಭವಿಸಿದ್ದವು. ಇದರ ಪರೋಕ್ಷ ಪರಿಣಾಮವನ್ನು ಭಾರತ ಸೇರಿದಂತೆ ಇತರೆ ದೇಶಗಳೂ ಅನುಭವಿಸಿದ್ದವು. ಜಗತ್ತಿನಾದ್ಯಂತ ತೈಲ, ಇಂಧನದ ಬಿಕ್ಕಟ್ಟು ಎದುರಾಗಿದೆ. ಯುದ್ಧ ಶುರುವಾಗಿ 24 ದಿನಗಳ ನಂತರ ಇದೀಗ ಈ ಯುದ್ಧಕ್ಕೆ ತೆರೆ ಬೀಳುವ ಲಕ್ಷಣಗಳೂ ಗೋಚರಿಸುತ್ತಿವೆ.

ಮಧ್ಯಪ್ರಾಚ್ಯ ಉದ್ವಿಗ್ನತೆ ಮತ್ತಷ್ಟು ತೀವ್ರ: ಇರಾನ್ ನೂತನ ಪರಮೋಚ್ಛ ನಾಯಕ ಗಾಯಗೊಂಡಿರುವುದು ನಿಜ ಆದರೆ, ಬದುಕಿದ್ದಾನೆ; ಡೊನಾಲ್ಡ್ ಟ್ರಂಪ್

Read this: Donald Trump – ಇರಾನ್ ಜೊತೆ ಮಾತುಕತೆ ನಡೆಯುತ್ತಿದೆ, ಆದರೆ ಯುದ್ಧ ಅಂತ್ಯಕ್ಕೆ ಒಪ್ಪಂದಕ್ಕೆ ಸಿದ್ಧವಿಲ್ಲ.

ಇರಾನ್ ಜೊತೆಗಿನ ಬಿಕ್ಕಟ್ಟನ್ನು ಶಮನಗೊಳಿಸಲು ಅಮೆರಿಕ ಪ್ರಯತ್ನಿಸುತ್ತಿದೆ ಎಂದು ಸುಳಿವು ನೀಡಿರುವ ಯುಎಸ್ ಅಧ್ಯಕ್ಷ ಡೊನಾಲ್ಡ್ ಟ್ರಂಪ್, ಕಳೆದ 2 ದಿನಗಳಲ್ಲಿ ಇರಾನ್ ಕಡೆಯಿಂದ ನಡೆದ ಮಾತುಕತೆಗಳ ನಂತರ ಟೆಹ್ರಾನ್‌ನ ವಿದ್ಯುತ್ ಸ್ಥಾವರಗಳು ಮತ್ತು ಇಂಧನ ಮೂಲಸೌಕರ್ಯವನ್ನು ಗುರಿಯಾಗಿಸುವ ದಾಳಿಯನ್ನು ಮುಂದಿನ 5 ದಿನಗಳವರೆಗೆ ಮುಂದೂಡಲು ಅಮೆರಿಕದ ಮಿಲಿಟರಿಗೆ ನಿರ್ದೇಶನ ನೀಡಿದ್ದಾರೆ ಎನ್ನಲಾಗಿದೆ.

ಈ ಬಗ್ಗೆ ಟ್ರೂತ್ ಸೋಷಿಯಲ್ ಮೀಡಿಯಾದಲ್ಲಿ ಪೋಸ್ಟ್ ಮಾಡಿರುವ ಅವರು ಇರಾನ್ ಜೊತೆಗೆ ತುಂಬಾ ಒಳ್ಳೆಯ ಉತ್ಪಾದಕ (ಪ್ರೊಡಕ್ಟಿವ್) ಮಾತುಕತೆಗಳನ್ನು ನಡೆಸಲಾಗಿದೆ. ಇರಾನಿನ ವಿದ್ಯುತ್ ಸ್ಥಾವರಗಳು ಮತ್ತು ಇಂಧನ ಮೂಲಸೌಕರ್ಯದ ಮೇಲಿನ ಎಲ್ಲಾ ಮಿಲಿಟರಿ ದಾಳಿಗಳನ್ನು ಐದು ದಿನಗಳ ಅವಧಿಗೆ ಮುಂದೂಡಲು ನಾನು ಸೂಚಿಸಿದ್ದೇನೆ. ಇರಾನ್ ಜೊತೆ ನಡೆಯುತ್ತಿರುವ ಸಭೆಗಳು ಮತ್ತು ಚರ್ಚೆಗಳ ಕಾರಣದಿಂದ ಈ ನಿರ್ಧಾರ ತೆಗೆದುಕೊಳ್ಳಲಾಗಿದೆ” ಎಂದು ಅವರು ಹೇಳಿದ್ದಾರೆ.

ಆದರೆ, ಇರಾನ್ ಇದುವರೆಗೂ ಟ್ರಂಪ್ ಅವರ ಈ ಹೇಳಿಕೆಗಳಿಗೆ ಪ್ರತಿಕ್ರಿಯಿಸಿಲ್ಲ ಮತ್ತು ಎರಡೂ ದೇಶಗಳ ನಡುವಿನ ಮಾತುಕತೆಗಳ ಬಗ್ಗೆ ಒಪ್ಪಿಕೊಂಡಿಲ್ಲ. ಒಳ್ಳೆಯ ಸಂಗತಿಯೆಂದರೆ ಟ್ರಂಪ್ ಅವರ ಈ ಹೇಳಿಕೆಯು ಕಚ್ಚಾ ತೈಲದ ಬೆಲೆಗಳನ್ನು ಶೇ. 11ರಷ್ಟು ಕಡಿಮೆಯಾಗಿಸಲು ಸಹಾಯ ಮಾಡಿದೆ. ಯುದ್ಧದ ಆರಂಭದ ನಂತರ ತೈಲದ ದರಗಳು ಭಾರಿ ಪ್ರಮಾಣದಲ್ಲಿ ಹೆಚ್ಚಾಗಿತ್ತು.

ಹಾರ್ಮುಜ್ ಜಲಸಂಧಿಯನ್ನು ತೆರೆಯಲು ಇರಾನ್‌ಗೆ ಅಮೆರಿಕ 48 ಗಂಟೆಗಳ ಗಡುವು ನೀಡಿದ ಒಂದು ದಿನದ ನಂತರ ಟ್ರಂಪ್ ಇರಾನ್ ಮೇಲಿನ ದಾಳಿಯನ್ನು ಮುಂದೂಡುವ ನಿರ್ಧಾರ ತೆಗೆದುಕೊಂಡಿದ್ದಾರೆ. ಜಾಗತಿಕ ಕಚ್ಚಾ ತೈಲದ ಸುಮಾರು ಶೇ. 20ರಷ್ಟು ಸಾಗಣೆ ಸ್ಥಳವನ್ನು ತೆರೆಯಲು ಇರಾನ್ ವಿಫಲವಾದರೆ ಅಮೆರಿಕದ ಪಡೆಗಳು ಅದರ ಇಂಧನ ಮೂಲಸೌಕರ್ಯವನ್ನು ಧ್ವಂಸ ಮಾಡುತ್ತವೆ ಎಂದು ಅಮೆರಿಕದ ಅಧ್ಯಕ್ಷ ಟ್ರಂಪ್ ಎಚ್ಚರಿಕೆ ನೀಡಿದ್ದರು.

ಟ್ರಂಪ್‌ರ ಬೆದರಿಕೆಗೆ ಪ್ರತಿಕ್ರಿಯೆಯಾಗಿ, ತೈಲಕ್ಕೆ ಪ್ರಮುಖ ಸಾಗಣೆ ಮಾರ್ಗವಾಗಿರುವ ಹಾರ್ಮುಜ್ ಜಲಸಂಧಿಯು ಇಸ್ಲಾಮಿಕ್ ಗಣರಾಜ್ಯದ ಶತ್ರುಗಳನ್ನು ಹೊರತುಪಡಿಸಿ ಬೇರೆ ಎಲ್ಲರಿಗೂ ಮುಕ್ತವಾಗಿದೆ ಎಂದು ಇರಾನ್ ಹೇಳಿತ್ತು. ಎಲ್ಲಾ ಮಧ್ಯಪ್ರಾಚ್ಯ ರಾಷ್ಟ್ರಗಳ ವಿದ್ಯುತ್ ಸ್ಥಾವರಗಳು ಮತ್ತು ಇಂಧನ ಮೂಲಸೌಕರ್ಯಗಳನ್ನು ಧ್ವಂಸಗೊಳಿಸುವ ಎಚ್ಚರಿಕೆಯನ್ನೂ ಅದು ನೀಡಿತ್ತು.

 

Read this : Donald Trump-ಡೊನಾಲ್ಡ್ ಟ್ರಂಪ್ ಅವರ ಸ್ಟೇಟ್ ಆಫ್ ದಿ ಯೂನಿಯನ್ ಭಾಷಣ|Kannada Folks

 

Follow Us 

Follow KannadaFolks channel on WhatsApp

Visit the Kannadafolks.in follow the latest updates

Subscribe and Receive exclusive content and updates on your favourite topics

Subscribe to KannadaFloks YouTube Channel and watch Videos

Subscribe for Free and Support Us 

ನಿಮ್ಮ ಈ - ಮೇಲ್ ಬಳಸಿ 👇ಇದೀಗ ಉಚಿತವಾಗಿ 🆓 ಚಂದಾದಾರರಾಗಿ..!  ನಿಮಗೆ ನಮ್ಮ ಕಥೆಗಳು, ಹಾಡುಗಳು ಮತ್ತು ಮಾಹಿತಿ ಇಷ್ಟವಾದರೆ ನಿಮ್ಮ ಸಮೂಹಕ್ಕೆ ಶೇರ್ ಮಾಡುವುದನ್ನ ಮರೆಯದಿರಿ 
RELATED ARTICLES

LEAVE A REPLY

Please enter your comment!
Please enter your name here

- Advertisment -

Most Popular

Recent Comments