HomeNewsUS Pays Migrants to Leave-ಅಮೆರಿಕ ಹೋಗುವವರಿಗೆ ಹಣ ಆಫರ್ |Kannada Folks

US Pays Migrants to Leave-ಅಮೆರಿಕ ಹೋಗುವವರಿಗೆ ಹಣ ಆಫರ್ |Kannada Folks

Cash & flights for voluntary exit

US Pays Migrants to Leave-ಅಮೆರಿಕ ಹೋಗುವವರಿಗೆ ಹಣ ಆಫರ್

US offers 2,600 USD, free travel etc for illegal immigrants to leave the country: ಅಮೆರಿಕದಲ್ಲಿ ಅಕ್ರಮವಾಗಿ ನೆಲಸಿರುವ ವಲಸಿಗರನ್ನು ಬಲವಂತವಾಗಿ ಡೀಪೋರ್ಟ್ ಮಾಡುವ ಮುನ್ನ ಅವರಿಗೆ ಸರ್ಕಾರ ಹೊಸ ಆಫರ್ ಕೊಟ್ಟಿದೆ. ತಾವಾಗಿಯೇ ದೇಶ ಬಿಟ್ಟು ಹೋಗಲು ನಿರ್ಧರಿಸಿದರೆ ಅವರಿಗೆ ಫ್ಲೈಟ್ ವ್ಯವಸ್ಥೆ ಮಾಡಲಾಗುವುದು. 2,600 ಡಾಲರ್​ಗಳ ಎಕ್ಸಿಟ್ ಬೋನಸ್ ಕೊಡಲಾಗುವುದು ಎಂದು ಅಲ್ಲಿಯ ಗೃಹ ಇಲಾಖೆ ಹೇಳಿದೆ.Indian man claims ₹4,000 flight savings with ChatGPT hacks; internet  divided | Today News

Read this : Meti Family Gets Ticket-ಬಾಗಲಕೋಟೆ ಟಿಕೆಟ್ ಫೈನಲ್ |Kannada Folks

ವಾಷಿಂಗ್ಟನ್, ಮಾರ್ಚ್ 18: ಅಕ್ರಮವಾಗಿ ವಾಸಿಸುತ್ತಿರುವ ವಲಸಿಗರನ್ನು ಹೊರಗೆ ಕಳುಹಿಸಲು ಅಮೆರಿಕದ ಸರ್ಕಾರ ಹೊಸ ಪ್ಲಾನ್ ಹಾಕಿದೆ. ವಲಸಿಗರು ತಾವಾಗಿಯೇ ಹೊರ ಹೋಗಲು ಬಯಸಿದರೆ ಒಂದಷ್ಟು ಹಣಕಾಸು ನೆರವು ಕೊಡುವುದಾಗಿ ಸರಕಾರ ಹೇಳಿದೆ. ಈ ವಲಸಿಗರು ಹೊರಹೋಗುವುದಾದರೆ ಅವರಿಗೆ 2,600 ಡಾಲರ್​ಗಳ ಎಕ್ಸಿಟ್ ಬೋನಸ್ ಕೊಡಲಾಗುವುದು. ಅಂದರೆ, ಸುಮಾರು ಎರಡೂವರೆ ಲಕ್ಷ ರೂ ಪ್ರೋತ್ಸಾಹ ಧನ ಕೊಡಲಾಗುವುದು. ಜೊತೆಗೆ, ದಂಡಪಾವತಿ ಇತ್ಯಾದಿಯಿಂದ ವಿನಾಯಿತಿ ಸಿಗುತ್ತದೆ. ಫ್ಲೈಟ್ ಟಿಕೆಟ್ ಅನ್ನೂ ಸರ್ಕಾರವೇ ಒದಗಿಸುತ್ತದೆ.

ಅಮೆರಿಕದ ಗೃಹ ಭದ್ರತಾ ಇಲಾಖೆ ಇಂಥದ್ದೊಂದು ಆಫರ್ ಅನ್ನು ಅಕ್ರಮ ವಲಸಿಗರಿಗೆ ನೀಡಿದೆ. ಎಲ್ಲಾ ದೇಶದಿಂದ ಬಂದು ಅಕ್ರಮವಾಗಿ ನೆಲಸಿರುವ ವಲಸಿಗರಿಗೆ ಇದು ಅನ್ವಯ ಆಗುತ್ತದೆ. ತಮ್ಮ ದೇಶಕ್ಕೆ ವಾಪಸ್ ಹೋಗುವಂತೆ ಕೊಟ್ಟಿರುವ ಗಡುವು ಮೀರಿ ನೆಲಸಿರುವವರನ್ನು ಬಂಧಿಸಿ, ದಂಡ ವಿಧಿಸಿ, ಬಲವಂತವಾಗಿ ಗಡೀಪಾರು ಮಾಡುವ ಕಾನೂನು ಅಮೆರಿಕದಲ್ಲಿ ತರಲಾಗಿದೆ. ಆದರೆ, ಆ ಪರಿಸ್ಥಿತಿಯಲ್ಲಿ ಸಿಲುಕಲು ಬಯಸದೆ ಗೌರವಯುತವಾಗಿ ಹೊರಹೋಗಲು ಅವಕಾಶ ಬಯಸುತ್ತಿರುವವರಿಗೆ ಗೃಹ ಇಲಾಖೆ ಆಫರ್ ಕೊಟ್ಟಿದೆ.

ಅಮೆರಿಕದಿಂದ ತಾವಾಗೇ ಹೊರಹೋಗಲು ಬಯಸುವ ಅಕ್ರಮ ವಲಸಿಗರಿಗೆ 2,600 ಡಾಲರ್​ಗಳ ಎಕ್ಸಿಟ್ ಬೋನಸ್ ಕೊಡಲಾಗುತ್ತದೆ. ಉಚಿತವಾಗಿ ಪ್ರಯಾಣ ವ್ಯವಸ್ಥೆಯನ್ನು ಸರ್ಕಾರವೇ ಮಾಡುತ್ತದೆ. ಕೆಲ ದಂಡಗಳಿಂದಲೂ ವಿನಾಯಿತಿ ಕೊಡುತ್ತದೆ.

ಅಮೆರಿಕದ ಗೃಹ ಇಲಾಖೆಯ ಟ್ವೀಟ್

‘ನೀವು ನಿಮ್ಮ ದೇಶಕ್ಕೆ ಬೇಕಾದರೆ ಹೋಗಬಹುದು. ಅಥವಾ ನಿಮಗೆ ಕಾನೂನುಬದ್ಧ ವಾಸಕ್ಕೆ ಅವಕಾಶ ಇರುವ ದೇಶಕ್ಕೆ ಬೇಕಾದರೂ ಹೋಗಬಹುದು. ನೀವಾಗಿಯೇ ಹೋದರೆ ಭತ್ಯೆ ಕೊಡಲಾಗುತ್ತದೆ’ ಎಂದು ಅಮೆರಿಕದ ಗೃಹ ಇಲಾಖೆ ಹೇಳಿದೆ.

ಇಲಾಖೆ ತನ್ನ ಎಕ್ಸ್ ಅಕೌಂಟ್​ನಿಂದ ಮಾಡಿದ ಒಂದು ಟ್ವೀಟ್​ನಲ್ಲಿ ತಾಜ್​ಮಹಲ್ ಫೋಟೋ ಕೂಡ ಇದೆ. ಅದು ಅಕ್ರಮವಾಗಿ ನೆಲಸಿರುವ ಭಾರತೀಯರನ್ನು ಉದ್ದೇಶಿಸಿ ಮಾಡಿರುವಂಥದ್ದು. ಅಮೆರಿಕದಲ್ಲಿ ಅಕ್ರಮವಾಗಿ ನೆಲಸಿರುವ ವಲಸಿಗರಲ್ಲಿ ಭಾರತೀಯ ಸಮುದಾಯ 3ನೇ ಸ್ಥಾನ ಪಡೆಯುತ್ತದೆ.

Follow Us 

Follow KannadaFolks channel on WhatsApp

Visit the Kannadafolks.in follow the latest updates

Subscribe and Receive exclusive content and updates on your favourite topics

Subscribe to KannadaFloks YouTube Channel and watch Videos

 

 

Subscribe for Free and Support Us 

ನಿಮ್ಮ ಈ - ಮೇಲ್ ಬಳಸಿ 👇ಇದೀಗ ಉಚಿತವಾಗಿ 🆓 ಚಂದಾದಾರರಾಗಿ..!  ನಿಮಗೆ ನಮ್ಮ ಕಥೆಗಳು, ಹಾಡುಗಳು ಮತ್ತು ಮಾಹಿತಿ ಇಷ್ಟವಾದರೆ ನಿಮ್ಮ ಸಮೂಹಕ್ಕೆ ಶೇರ್ ಮಾಡುವುದನ್ನ ಮರೆಯದಿರಿ 
RELATED ARTICLES

LEAVE A REPLY

Please enter your comment!
Please enter your name here

- Advertisment -

Most Popular

Recent Comments