HomeNewsList of candidates - ಪರಿಷತ್ ಚುನಾವಣೆ ಘೋಷಣೆ ಮಾಡಿದ ಬಿಜೆಪಿ: ಜೆಡಿಎಸ್‌ಗೆ 1 ಸ್ಥಾನ

List of candidates – ಪರಿಷತ್ ಚುನಾವಣೆ ಘೋಷಣೆ ಮಾಡಿದ ಬಿಜೆಪಿ: ಜೆಡಿಎಸ್‌ಗೆ 1 ಸ್ಥಾನ

List of candidates - ಪರಿಷತ್ ಚುನಾವಣೆ ಘೋಷಣೆ ಮಾಡಿದ ಬಿಜೆಪಿ: ಜೆಡಿಎಸ್‌ಗೆ 1 ಸ್ಥಾನ

List of candidates – ಪರಿಷತ್ ಚುನಾವಣೆ ಘೋಷಣೆ ಮಾಡಿದ ಬಿಜೆಪಿ: ಜೆಡಿಎಸ್‌ಗೆ 1 ಸ್ಥಾನ

 

ಕರ್ನಾಟಕದಲ್ಲಿ ಮತ್ತೆ ಚುನಾವಣೆಗಳು ಶುರುವಾಗಲಿದೆ. ಕರ್ನಾಟಕ ವಿಧಾನಸಭೆಯ 2 ಕ್ಷೇತ್ರಗಳಿಗೆ ಉಪ ಚುನಾವಣೆ ನಡೆಯಲಿದ್ದು, ವಿಧಾನಪರಿಷತ್ 4 ಕ್ಷೇತ್ರಗಳಿಗೆ ಚುನಾವಣೆ ನಡೆಯಲಿದೆ. ಆದ್ರೆ ಯಾವುದಕ್ಕೂ ಎಲೆಕ್ಷನ್ ದಿನಾಂಕ ಘೋಷಣೆಯಾಗಿಲ್ಲ. ಅದಕ್ಕೂ ಮೊದಲೇ ನಾಲ್ಕು ಪರಿಷತ್ ಕ್ಷೇತ್ರಗಳ ಪೈಕಿ ಮೂರು ಕ್ಷೇತ್ರಕ್ಕೆ ಬಿಜೆಪಿ ತನ್ನ ಅಭ್ಯರ್ಥಿಗಳ ಹೆಸರುಗಳನ್ನು ಘೋಷಣೆ ಮಾಡಿದೆ. ಹಾಗಾದ್ರೆ, ಯಾವ ಕ್ಷೇತ್ರಕ್ಕೆ ಯಾರು? ಜೆಡಿಎಸ್​​ಗೆ ಎಷ್ಟು ಸೀಟು ಎನ್ನುವ ವಿವರ ಇಲ್ಲಿದೆ.

ಕರ್ನಾಟಕ ವಿಧಾನಪರಿಷತ್ (Karnataka Legislative Council) ನಾಲ್ಕು ಕ್ಷೇತ್ರಗಳ ಪೈಕಿ ಮೂರು ಕ್ಷೇತ್ರಗಳಿಗೆ ಬಿಜೆಪಿ ಅಭ್ಯರ್ಥಿಗಳ ಹೆಸರು ಘೋಷಣೆಯಾಗಿದೆ. ಒಟ್ಟು ನಾಲ್ಕು ಸೀಟುಗಳ ಪೈಕಿ ಒಂದು ಸ್ಥಾನವನ್ನು ಮಿತ್ರ ಪಕ್ಷ ಜೆಡಿಎಸ್​​ಗೆ ಬಿಟ್ಟುಕೊಟ್ಟಿದ್ದು, ಇನ್ನುಳಿದ ಮೂರು ಈಶಾನ್ಯ ಶಿಕ್ಷಕರ ಕ್ಷೇತ್ರ, ಪೂರ್ವ ಪದವೀಧರ ಕ್ಷೇತ್ರ ಹಾಗೂ ಆಗ್ನೇಯ ಪದವೀಧರ ಕ್ಷೇತ್ರಕ್ಕೆ ಬಿಜೆಪಿ ತನ್ನ ಅಭ್ಯರ್ಥಿಗಳ ಪಟ್ಟಿಯನ್ನು ಪ್ರಕಟ ಮಾಡಿದೆ.  ಇನ್ನುಳಿದ 1  ಬೆಂಗಳೂರು ಶಿಕ್ಷಕರ ಕ್ಷೇತ್ರವನ್ನು ಜೆಡಿಎಸ್​​ಗೆ ಬಿಟ್ಟುಕೊಟ್ಟಿದೆ. ಇದರೊಂದಿಗೆ ಲೋಕಸಭಾ ಚುನಾವಣೆಯಲ್ಲಿ ಮೈತ್ರಿ ಮಾಡಿಕೊಂಡಿದ್ದ ಜೆಡಿಎಸ್ ಹಾಗೂ ಬಿಜೆಪಿ ವಿಧಾನ ಪರಿಷತ್ ಚುನಾವಣೆಗೂ ತಮ್ಮ ಮೈತ್ರಿಯನ್ನು ಮುಂದುವರೆಸಿದೆ.

Bjp Jds Seat Share In Karnataka,Lok Sabha Elections : ಕೊನೆಗೂ ಅಧಿಕೃತವಾಯ್ತು ಬಿಜೆಪಿ - ಜೆಡಿಎಸ್‌ ಸೀಟು ಹಂಚಿಕೆ! ದಳಪತಿಗಳಿಗೆ ಸಿಕ್ಕ ಕ್ಷೇತ್ರಗಳು ಯಾವುವು? - lok sabha elections 2024 bjp jds seat ...

 

Read this:ಜೈಲಿನಲ್ಲಿ ದರ್ಶನ್​​ಗೆ ಸಿಕ್ತು ಟಿವಿ ಆದರೆ ಬೇಕಾಗಿದ್ದು ಸಿಗಲಿಲ್ಲ  Kannada News | Darshan Thoogudeepa got Tv in his jail barrack | kannadafolks
ಯಾರು ಯಾವ ಕ್ಷೇತ್ರಕ್ಕೆ?

ಈಶಾನ್ಯ ಶಿಕ್ಷಕರ ಕ್ಷೇತ್ರಕ್ಕೆ ಸುಶೀಲ್ ನಮೋಶಿ, ಪೂರ್ವ ಪದವೀಧರ ಕ್ಷೇತ್ರಕ್ಕೆ ಎಸ್.ವಿ ಸಂಕನೂರ್ ಹಾಗೂ ಆಗ್ನೇಯ ಪದವೀಧರ ಕ್ಷೇತ್ರದ ಟಿಕೆಟ್ ಕೆ.ಎಂ.ಸುರೇಶ್ ಅವರಿಗೆ ನೀಡಲಾಗಿದೆ. ಇನ್ನುಳಿದ ಬೆಂಗಳೂರು ಶಿಕ್ಷಕರ ಕ್ಷೇತ್ರವನ್ನು ಜೆಡಿಎಸ್​​ಗೆ ಬಿಟ್ಟುಕೊಟ್ಟಿದ್ದು, ಜೆಡಿಎಸ್ ಯಾರನ್ನು ಕಣಕ್ಕಿಳಿಸಲಿದೆ ಎನ್ನುವುದೇ ಕುತೂಹಲ ಮೂಡಿಸಿದೆ.

ಜೆಡಿಎಸ್​​ಗೆ 1 ಸ್ಥಾನ

ಒಟ್ಟು ನಾಲ್ಕು ಕ್ಷೇತ್ರಗಳಲ್ಲಿ ಜೆಡಿಎಸ್ ಎರಡಕ್ಕೆ ಬೇಡಿಕೆ ಇಟ್ಟಿತ್ತು. ಬೆಂಗಳೂರು ಶಿಕ್ಷಕರ ಮತ್ತು ಆಗ್ನೇಯ ಪದವೀಧರ ಪದವೀಧರ ಕ್ಷೇತ್ರಗಳನ್ನು ಜೆಡಿಎಸ್ ಕೇಳಿತ್ತು. ಆದ್ರೆ, ಆಗ್ನೇಯ ಪದವೀಧರ ಕ್ಷೇತ್ರವನ್ನು ಬಿಜೆಪಿಯ ಚಿದಾನಂದಗೌಡ ಪ್ರತಿನಿಧಿಸುತ್ತಿದ್ದಾರೆ. ಹೀಗಾಗಿ ಈ ಕ್ಷೇತ್ರವನ್ನು ಬಿಜೆಪಿ ಬಿಟ್ಟುಕೊಟ್ಟಿಲ್ಲ. ಇನ್ನು ಕಾಂಗ್ರೆಸ್‌ನ ಪುಟ್ಟಣ್ಣ ಇರುವ ಬೆಂಗಳೂರು ಶಿಕ್ಷಕರ ಕ್ಷೇತ್ರವನ್ನು ಜೆಡಿಎಸ್​​ಗೆ ಬಿಟ್ಟು ಕೊಡಲಾಗಿದೆ.

ಕಾಂಗ್ರೆಸ್ ಅಭ್ಯರ್ಥಿಗಳು

ಕಾಂಗ್ರೆಸ್ ಈಗಾಗಲೇ ನಾಲ್ಕು ಕ್ಷೇತ್ರಗಳಿಗೆ ಅಭ್ಯರ್ಥಿಗಳ ಪಟ್ಟಿಯನ್ನು ಪ್ರಕಟಿಸಿದೆ. ಬೆಂಗಳೂರು ಶಿಕ್ಷಕರ ಕ್ಷೇತ್ರದಿಂದ ಪುಟ್ಟಣ್ಣ ಮರು ಸ್ಪರ್ಧೆ ಮಾಡಲಿದ್ದಾರೆ. ಪಶ್ಚಿಮ ಪದವೀಧರರ ಕ್ಷೇತ್ರದಿಂದ ಮೋಹನ್ ಲಿಂಬಿಕೈ, ಆಗ್ನೇಯ ಪದವೀಧರರ ಕ್ಷೇತ್ರದಿಂದ ಶಶಿ ಹುಲಿಕುಂಟೆಮಠ ಮತ್ತು ಈಶಾನ್ಯ ಶಿಕ್ಷಕರ ಕ್ಷೇತ್ರದ ಟಿಕೆಟ್ ಶರಣಪ್ಪ ಮಟ್ಟೂರ್ ಅವರಿಗೆ ನೀಡಲಾಗಿದೆ.

2020ರಲ್ಲಿ ಪಶ್ಚಿಮ ಪದವೀಧರರ ಕ್ಷೇತ್ರ, ಆಗ್ನೇಯ ಪದವೀಧರರ ಕ್ಷೇತ್ರ, ಈಶಾನ್ಯ ಶಿಕ್ಷಕರ ಕ್ಷೇತ್ರ ಮತ್ತು ಬೆಂಗಳೂರು ಶಿಕ್ಷಕರ ಕ್ಷೇತ್ರಗಳಿಗೆ ಚುನಾವಣೆಗಳು ನಡೆದವು. ಎರಡು ಪದವೀಧರರ ಕ್ಷೇತ್ರಗಳಿಂದ ಎಸ್ ವಿ ಸಂಕನೂರು ಮತ್ತು ಚಿದಾನಂದ್ ಗೌಡ ಆಯ್ಕೆಯಾದ್ದರು. ಎರಡು ಶಿಕ್ಷಕರ ಕ್ಷೇತ್ರಗಳಿಂದ ಶಶಿಲ್ ನಮೋಶಿ ಮತ್ತು ಪುಟ್ಟಣ್ಣ ಆಯ್ಕೆಯಾದ್ದರು. ನಾಲ್ವರೂ ಬಿಜೆಪಿಯವರಾಗಿದ್ದರು. ಆದರೆ ಪುಟ್ಟಣ್ಣ ಕೇಸರಿ ಪಕ್ಷವನ್ನು ತೊರೆದು ಕಾಂಗ್ರೆಸ್ ಸೇರಿದ್ದರು. ನಂತರ, ಅವರು ಕಾಂಗ್ರೆಸ್ ಅಭ್ಯರ್ಥಿಯಾಗಿ ಅದೇ ಕ್ಷೇತ್ರದಿಂದ ಮರು ಆಯ್ಕೆಯಾದರು. ಇವರೆಲ್ಲರ ಅವಧಿಗಳು 2026ರ ನವೆಂಬರ್ 11 ರಂದು ಕೊನೆಗೊಳ್ಳುತ್ತವೆ. ಆದ್ರೆ, ಅವಧಿ ಮುಗಿಯುವ ಒಂದು ತಿಂಗಳ ಮೊದಲು ಚುನಾವಣೆಗಳನ್ನು ನಡೆಸಬೇಕು.

Read this:Pakistan-ಪಾಕಿಸ್ತಾನದಲ್ಲಿ ರಕ್ತದೋಕುಳಿ  Daily News

 

Follow Us 

Follow KannadaFolks channel on WhatsApp

Visit the Kannadafolks.in follow the latest updates

Subscribe and Receive exclusive content and updates on your favourite topics

Subscribe to KannadaFloks YouTube Channel and watch Videos

Subscribe for Free and Support Us 

ನಿಮ್ಮ ಈ - ಮೇಲ್ ಬಳಸಿ 👇ಇದೀಗ ಉಚಿತವಾಗಿ 🆓 ಚಂದಾದಾರರಾಗಿ..!  ನಿಮಗೆ ನಮ್ಮ ಕಥೆಗಳು, ಹಾಡುಗಳು ಮತ್ತು ಮಾಹಿತಿ ಇಷ್ಟವಾದರೆ ನಿಮ್ಮ ಸಮೂಹಕ್ಕೆ ಶೇರ್ ಮಾಡುವುದನ್ನ ಮರೆಯದಿರಿ 
RELATED ARTICLES

LEAVE A REPLY

Please enter your comment!
Please enter your name here

- Advertisment -

Most Popular

Recent Comments