HomeNewsPrema on Her Struggles-Prema ನಟನೆಯ ಕಷ್ಟಗಳ ನೆನಪು |Kannada Folks

Prema on Her Struggles-Prema ನಟನೆಯ ಕಷ್ಟಗಳ ನೆನಪು |Kannada Folks

She recalls the hardships she faced during her early days as a lead actress

Prema on Her Struggles-Prema ನಟನೆಯ ಕಷ್ಟಗಳ ನೆನಪು

Actress Prema: ಎವರ್‌ಗ್ರೀನ್ ನಟಿ ಪ್ರೇಮಾ ಅವರು ಇತ್ತೀಚೆಗೆ ತಮ್ಮ ಸುದೀರ್ಘ 23 ವರ್ಷಗಳ ಸಿನಿಮಾ ಬದುಕಿನ ಸಿಹಿ-ಕಹಿ ನೆನಪುಗಳನ್ನು ಹಂಚಿಕೊಂಡಿದ್ದಾರೆ. ಯಾವುದೇ ಸಿನಿಮಾ ಹಿನ್ನೆಲೆ ಇಲ್ಲದೆ ಚಿತ್ರರಂಗಕ್ಕೆ ಕಾಲಿಟ್ಟ ಅವರು, ಸ್ಟಾರ್ ನಟಿಯಾಗಿ ಬೆಳೆದ ಹಾದಿ ಎಷ್ಟೊಂದು ಕಠಿಣವಾಗಿತ್ತು ಎಂಬುದನ್ನ ಮನಬಿಚ್ಚಿ ಮಾತನಾಡಿದ್ದಾರೆ. ಈ ವೇಳೆ ಸಿನಿಮಾ ಒಂದರಲ್ಲಿ ನಟಿಸುವಾಗ ಅನುಭವಿಸಿದ ನೋವು, ಅದರಂದ ಆದ ಹಾನಿಯ ಬಗ್ಗೆಯೂ ಮಾತನಾಡಿದ್ದಾರೆ ನಟಿ.

Actress Prema reveals the real reason she got divorced after 10 years of  marriage| ʼಅವೆಲ್ಲವೂ ನನ್ನನ್ನು ಕಡಿದಂತಾಗಿತ್ತು...ʼ - ಮದುವೆಯಾದ 10 ವರ್ಷಕ್ಕೇ  ವಿಚ್ಛೇದನ ಪಡೆಯಲು ನಿಜವಾದ ಕಾರಣ ಇದೇ ...

ದಕ್ಷಿಣ ಭಾರತದ ಸ್ಟಾರ್ ನಟಿ ಎನಿಸಿಕೊಂಡಿದ್ದ ಪ್ರೇಮಾ (Prema), ನಟನೆಯಿಂದ ದೂರಾಗಿ ಬಳಿಕ 2017 ರಲ್ಲಿ ಮತ್ತೆ ಕಮ್ ಬ್ಯಾಕ್ ಸಹ ಮಾಡಿದರು. ಎವರ್‌ಗ್ರೀನ್ ನಟಿ ಪ್ರೇಮಾ ಅವರು ಇತ್ತೀಚೆಗೆ ತಮ್ಮ ಸುದೀರ್ಘ 23 ವರ್ಷಗಳ ಸಿನಿಮಾ ಬದುಕಿನ ಸಿಹಿ-ಕಹಿ ನೆನಪುಗಳನ್ನು ಹಂಚಿಕೊಂಡಿದ್ದಾರೆ. ಯಾವುದೇ ಸಿನಿಮಾ ಹಿನ್ನೆಲೆ ಇಲ್ಲದೆ ಚಿತ್ರರಂಗಕ್ಕೆ ಕಾಲಿಟ್ಟ ಅವರು, ಸ್ಟಾರ್ ನಟಿಯಾಗಿ ಬೆಳೆದ ಹಾದಿ ಎಷ್ಟೊಂದು ಕಠಿಣವಾಗಿತ್ತು ಎಂಬುದನ್ನ ಮನಬಿಚ್ಚಿ ಮಾತನಾಡಿದ್ದಾರೆ. ಈ ವೇಳೆ ಸಿನಿಮಾ ಒಂದರಲ್ಲಿ ನಟಿಸುವಾಗ ಅನುಭವಿಸಿದ ನೋವು, ಅದರಂದ ಆದ ಹಾನಿಯ ಬಗ್ಗೆಯೂ ಮಾತನಾಡಿದ್ದಾರೆ ನಟಿ.

ಪ್ರೇಮಾ ಅವರಿಗೆ ಮೊದಲಿನಿಂದಲೂ ಗಗನಸಖಿ ಆಗಬೇಕೆಂಬ ಹಂಬಲ ಇತ್ತಂತೆ. ಆದರೆ ತಾಯಿಯ ಪ್ರೋತ್ಸಾಹದಿಂದಾಗಿ ಅವರು ಬಣ್ಣದ ಲೋಕಕ್ಕೆ ಕಾಲಿಟ್ಟರು. ಉಪೇಂದ್ರ ನಿರ್ದೇಶನದ ‘ಓಂ’ ಸಿನಿಮಾ ಅವರ ವೃತ್ತಿಜೀವನಕ್ಕೆ ದೊಡ್ಡ ತಿರುವು ನೀಡಿತು. ಪ್ರೇಮ ನಟಿಸಿದ ಎರಡನೇ ಸಿನಿಮಾ ಅದು. ಆ ಚಿತ್ರದ ರಿಯಲಿಸ್ಟಿಕ್ ನಟನೆಗಾಗಿ ಅವರು ಗಾಜಿನ ಚೂರುಗಳು ಮತ್ತು ಬೆಂಕಿಯ ನಡುವೆ ಕೆಲಸ ಮಾಡಬೇಕಾಗಿದ್ದ ಕಠಿಣ ಸಂದರ್ಭಗಳನ್ನು ಅವರು ನೆನಪಿಸಿಕೊಂಡಿದ್ದಾರೆ.

ತೆಲುಗಿನಲ್ಲಿ ‘ಧರ್ಮಚಕ್ರಂ’ ಮತ್ತು ‘ದೇವಿ’ಯಂತಹ ಸೂಪರ್ ಹಿಟ್ ಚಿತ್ರಗಳನ್ನು ನೀಡಿದ ಪ್ರೇಮಾ ಅವರಿಗೆ ಆರಂಭದಲ್ಲಿ ಭಾಷೆಯ ಸಮಸ್ಯೆ ಎದುರಾಗಿತ್ತಂತೆ. ಖ್ಯಾತ ನಿರ್ದೇಶಕ ಕೋಡಿ ರಾಮಕೃಷ್ಣ ಅವರು ತಮಗೆ ತೆಲುಗು ಕಲಿಸಿಕೊಟ್ಟರು ಎಂದು ಪ್ರೇಮ ನೆನಪು ಮಾಡಿಕೊಂಡಿದ್ದಾರೆ. ಆಗ ಇಂದಿನಂತೆ ಕ್ಯಾರವಾನ್ ಸೌಲಭ್ಯಗಳಿರಲಿಲ್ಲ, ಸೆಟ್‌ನಲ್ಲಿ ಎಲ್ಲರೂ ಒಂದೇ ಕೋಣೆಯಲ್ಲಿ ಕುಳಿತು ಕೆಲಸ ಮಾಡಬೇಕಿತ್ತು ಎಂದು ಹಳೆಯ ದಿನಗಳನ್ನು ನೆನಪಿಸಿಕೊಂಡಿದ್ದಾರೆ.

ಮಹಿಳಾ ಪ್ರಧಾನ ಚಿತ್ರಗಳಲ್ಲಿ ಮೈಲಿಗಲ್ಲು ಸೃಷ್ಟಿಸಿದ ‘ದೇವಿ’ ಚಿತ್ರದ ಪಾತ್ರಕ್ಕಾಗಿ ಅವರು ವಿಶೇಷ ಲೆನ್ಸ್‌ಗಳನ್ನು ಧರಿಸಬೇಕಾಗಿತ್ತು. ಇದರ ಪರಿಣಾಮವಾಗಿ ‘ದೇವಿ’ ಚಿತ್ರದ ಚಿತ್ರೀಕರಣದ ಸಮಯದಲ್ಲಿ ಅವರಿಗೆ ತೀವ್ರವಾದ ಕಣ್ಣಿನ ಸೋಂಕು ಕಾಣಿಸಿಕೊಂಡಿತ್ತು. ನಟನೆಯ ಮೇಲಿನ ಅತಿಯಾದ ಪ್ರೀತಿಯಿಂದ ಆ ಕಷ್ಟವನ್ನೂ ಅವರು ಮೆಟ್ಟಿ ನಿಂತಿದ್ದಾಗಿ ಪ್ರೇಮ ಹೇಳಿಕೊಂಡಿದ್ದಾರೆ. ತೆಲುಗಿನ ವೆಂಕಟೇಶ್, ಮೋಹನ್ ಬಾಬು ಮತ್ತು ಜಗಪತಿ ಬಾಬು ಅವರಂತಹ ದಿಗ್ಗಜ ನಟರ ಜೊತೆ ಕೆಲಸ ಮಾಡಿದ ಅನುಭವ ಹಂಚಿಕೊಂಡ ಪ್ರೇಮಾ, ಮೋಹನ್ ಬಾಬು ಮತ್ತು ವಿಷ್ಣುವರ್ಧನ್ ಅವರ ಶಿಸ್ತು ಮತ್ತು ಸಮಯಪಾಲನೆ ತಮ್ಮ ಮೇಲೆ ದೊಡ್ಡ ಪ್ರಭಾವ ಬೀರಿದೆ ಎಂದು ತಿಳಿಸಿದ್ದಾರೆ.

1995 ರಲ್ಲಿ ಚಿತ್ರರಂಗಕ್ಕೆ ಕಾಲಿಟ್ಟ ನಟಿ ಪ್ರೇಮ, 2009ರ ವರೆಗೆ ಕನ್ನಡ, ತೆಲುಗು ಸಿನಿಮಾಗಳಲ್ಲಿ ಸಕ್ರಿಯರಾಗಿದ್ದರು. ಅದಾದ ಬಳಿಕ ಚಿತ್ರರಂಗದಿಂದ ದೂರಾದ ಪ್ರೇಮ, ವೈಯಕ್ತಿಕ ಜೀವನದಲ್ಲಿ ಬ್ಯುಸಿ ಆದರು. ಆದರೆ ವೈಯಕ್ತಿಕ ಜೀವನದಲ್ಲಿ ಅನುಭವಿಸಿದ ಕೆಲವು ಏರು-ಪೇರುಗಳ ಬಳಿಕ 2017 ರಲ್ಲಿ ಮತ್ತೆ ಚಿತ್ರರಗಕ್ಕೆ ರೀ ಎಂಟ್ರಿ ಕೊಟ್ಟರು. ಈಗ ಅಲ್ಲೊಂದು-ಇಲ್ಲೊಂದು ಕನ್ನಡ ಮತ್ತು ತೆಲುಗು ಸಿನಿಮಾಗಳಲ್ಲಿ ನಟಿಸುತ್ತಿದ್ದಾರೆ.

Follow Us 

Follow KannadaFolks channel on WhatsApp

Visit the Kannadafolks.in follow the latest updates

Subscribe and Receive exclusive content and updates on your favourite topics

Subscribe to KannadaFloks YouTube Channel and watch Videos

Subscribe for Free and Support Us 

ನಿಮ್ಮ ಈ - ಮೇಲ್ ಬಳಸಿ 👇ಇದೀಗ ಉಚಿತವಾಗಿ 🆓 ಚಂದಾದಾರರಾಗಿ..!  ನಿಮಗೆ ನಮ್ಮ ಕಥೆಗಳು, ಹಾಡುಗಳು ಮತ್ತು ಮಾಹಿತಿ ಇಷ್ಟವಾದರೆ ನಿಮ್ಮ ಸಮೂಹಕ್ಕೆ ಶೇರ್ ಮಾಡುವುದನ್ನ ಮರೆಯದಿರಿ 
RELATED ARTICLES

LEAVE A REPLY

Please enter your comment!
Please enter your name here

- Advertisment -

Most Popular

Recent Comments

×