HomeNewsMangaluru Web Job Scam-Mangaluru ಚೈನ್ ಲಿಂಕ್ ಜಾಬ್ ದಂಧೆ |Kannada Folks

Mangaluru Web Job Scam-Mangaluru ಚೈನ್ ಲಿಂಕ್ ಜಾಬ್ ದಂಧೆ |Kannada Folks

Students duped in chain-link job scam

Mangaluru Web Job Scam-Mangaluru ಚೈನ್ ಲಿಂಕ್ ಜಾಬ್ ದಂಧೆ

ಮಂಗಳೂರಿನಲ್ಲಿ ‘ವೆಕ್ಸಾನ್’ ಕಂಪನಿ ಉದ್ಯೋಗದ ಆಮಿಷವೊಡ್ಡಿ ನೂರಾರು ವಿದ್ಯಾರ್ಥಿಗಳಿಗೆ ವಂಚಿಸಿದೆ. ವೆಬ್ ಡಿಸೈನರ್, ಡೆವಲಪರ್ ಹುದ್ದೆಗಳ ನೆಪದಲ್ಲಿ, ತರಬೇತಿ ಹಾಗೂ ಹೂಡಿಕೆಗಾಗಿ ತಲಾ 2,500 ರಿಂದ 51,000 ರೂ.ವರೆಗೆ ವಸೂಲಿ ಮಾಡಿದೆ. ಹಣ ಕಳೆದುಕೊಂಡ ವಿದ್ಯಾರ್ಥಿಗಳು ಕದ್ರಿ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ. ಪೊಲೀಸರು ತನಿಖೆ ಆರಂಭಿಸಿದ್ದು, ಇನ್ನಷ್ಟು ಮಂದಿ ವಂಚನೆಗೆ ಒಳಗಾಗುವುದನ್ನು ತಡೆಯಲು ಕ್ರಮ ಕೈಗೊಳ್ಳಲಾಗುತ್ತಿದೆ.

Vexon fraud Company Exposed in Mangalore, Poor Students Targeted in Chain  Link Scam, Student Attempts Suicide | Vexon fraud Company, Mangalore:  ಮಂಗಳೂರಿನಲ್ಲಿ ಮತ್ತೊಂದು ಬ್ಲೇಡ್ ಕಂಪನಿ ; ಬಡ ವಿದ್ಯಾರ್ಥಿಗಳೇ ...

ಮಂಗಳೂರು, ಫೆಬ್ರವರಿ 27: ನಗರದಲ್ಲಿ (Mangalore) ಉದ್ಯೋಗಾವಕಾಶದ ಆಮಿಷವೊಡ್ಡಿ ನೂರಾರು ವಿದ್ಯಾರ್ಥಿಗಳನ್ನು ವಂಚಿಸಿರುವ ಪ್ರಕರಣ ಬೆಳಕಿಗೆ ಬಂದಿದೆ. ಮಹಾರಾಷ್ಟ್ರ ಮೂಲದ ‘ವೆಕ್ಸಾನ್’ ಎಂಬ ಕಂಪನಿ, BMP ಪ್ರೈವೇಟ್ ಲಿಮಿಟೆಡ್ ಎಂಬ ಹೆಸರಿನಲ್ಲಿ ಸಾಮಾಜಿಕ ಜಾಲತಾಣಗಳಲ್ಲಿ ವೆಬ್ ಡಿಸೈನರ್ ಹಾಗೂ ವೆಬ್ ಡೆವಲಪರ್ ಹುದ್ದೆಗಳಿಗಾಗಿ ಜಾಹೀರಾತು ನೀಡುತ್ತಿದ್ದುದಾಗಿ ತಿಳಿದುಬಂದಿದೆ. ಕಂಪನಿಯ ಮೋಸದ ಜಾಲಕ್ಕೆ ಬಿದ್ದ ವಿದ್ಯಾರ್ಥಿಗಳು ಸಾವಿರಾರು ರೂ. ಕಳೆದುಕೊಂಡಿದ್ದು, ಕದ್ರಿ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ. ಈ ವೇಳೆ ಟಿವಿ‌9 ಕ್ಯಾಮರಾ ಕಂಡ ಕಂಪನಿಯ ಸಿಬ್ಬಂದಿ ದಿಕ್ಕಾಪಾಲಾಗಿ ಓಡಿದ್ದಾರೆ.

ಹಣ ಡಬಲ್ ಆಗುತ್ತೆ ಎಂದು ಆಮಿಷವೊಡ್ಡಿ ಮೋಸ!

ಮಂಗಳೂರು ನಗರದ ಅಳಕೆ–ಕುದ್ರೋಳಿ ಭಾಗದ ಬಿರ್ವಾ ಕಾಂಪ್ಲೆಕ್ಸ್ ಮೂರನೇ ಮಹಡಿಯಲ್ಲಿ ಕಂಪನಿಯ ಕಾರ್ಯಾಚರಣೆ ನಡೆಯುತ್ತಿತ್ತು ಎನ್ನಲಾಗಿದೆ. ಮೊದಲು ಮೂರು ದಿನಗಳ ತರಬೇತಿ ನೀಡುವುದಾಗಿ ಹೇಳಿ ಅಭ್ಯರ್ಥಿಗಳಿಂದ ತಲಾ 2,500 ರೂಪಾಯಿ ವಸೂಲಿ ಮಾಡಲಾಗಿತ್ತು. ತರಬೇತಿ ವೇಳೆ ಕೆಲವೇ ತಿಂಗಳಲ್ಲಿ ಲಕ್ಷಾಂತರ ಆದಾಯ ಗಳಿಸಬಹುದು ಎಂದು ನಂಬಿಕೆ ಮೂಡಿಸಿ, ನಂತರ 11 ಸಾವಿರದಿಂದ 51 ಸಾವಿರ ರೂಪಾಯಿ ತನಕ ಹೂಡಿಕೆ ಮಾಡುವಂತೆ ಒತ್ತಾಯಿಸುತ್ತಿದ್ದರೆಂದು ಆರೋಪಿಸಲಾಗಿದೆ.

ಮನೆಯಲ್ಲಿ ಸುಳ್ಳು ಹೇಳಿ ಎಂದು ಒತ್ತಾಯ

ಹಣವಿಲ್ಲದಿದ್ದರೆ ಮನೆಯಿಂದ ಸುಳ್ಳು ಹೇಳಿ ತರಲು, ಚಿನ್ನ ಅಡವಿಡಲು ಸಹ ಸಲಹೆ ನೀಡಲಾಗುತ್ತಿತ್ತು ಎಂದು ವಿದ್ಯಾರ್ಥಿಗಳು ಆರೋಪಿಸಿದ್ದಾರೆ. ಹೂಡಿಕೆ ಮಾಡಿದ ಹಣಕ್ಕೆ ಮೊಬೈಲ್ ಚಾರ್ಜರ್, ಇಯರ್‌ಫೋನ್, ಸೀರೆ, ಕಾಸ್ಮೆಟಿಕ್ ವಸ್ತುಗಳನ್ನು ನೀಡಿ, ಮತ್ತಷ್ಟು ಜನರನ್ನು ಸೇರಿಸಿದರೆ ಕಮಿಷನ್ ಸಿಗುತ್ತದೆ ಎಂದು ಆಮಿಷ ಒಡ್ಡಲಾಗುತ್ತಿತ್ತಂತೆ. ಅದಲ್ಲದಂತೆ ಒಬ್ಬ ವಿದ್ಯಾರ್ಥಿ ಇನ್ನೋ ಮೂವರನ್ನು ಕರೆತಂದರೆ 11 ಸಾವಿರ ಕಮಿಷನ್ ನೀಡುವುದಾಗಿಯೂ ನಂಬಿಸಲಾಗಿತ್ತು ಎಂದು ವಿದ್ಯಾರ್ಥಿಗಳು ದೂರಿದ್ದಾರೆ.

ವಂಚನೆಗೆ ಒಳಗಾದ ವಿದ್ಯಾರ್ಥಿಗಳು ಕದ್ರಿ ಪೊಲೀಸ್ ಠಾಣೆಗೆ ದೂರು ನೀಡಿದ್ದು, ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ತನಿಖೆ ಆರಂಭಿಸಿದ್ದಾರೆ. ನಮ್ಮಂತೆ ಇನ್ನಾರೂ ಮೋಸ ಹೋಗಬಾರದು, ಸಂಬಂಧಿತ ಕಂಪನಿಯ ವಿರುದ್ಧ ಕಠಿಣ ಕ್ರಮ ಕೈಗೊಳ್ಳಬೇಕು ಎಂದು ವಿದ್ಯಾರ್ಥಿಗಳು ಆಗ್ರಹಿಸಿದ್ದಾರೆ.

Follow Us 

Follow KannadaFolks channel on WhatsApp

Visit the Kannadafolks.in follow the latest updates

Subscribe and Receive exclusive content and updates on your favourite topics

Subscribe to KannadaFloks YouTube Channel and watch Videos

Subscribe for Free and Support Us 

ನಿಮ್ಮ ಈ - ಮೇಲ್ ಬಳಸಿ 👇ಇದೀಗ ಉಚಿತವಾಗಿ 🆓 ಚಂದಾದಾರರಾಗಿ..!  ನಿಮಗೆ ನಮ್ಮ ಕಥೆಗಳು, ಹಾಡುಗಳು ಮತ್ತು ಮಾಹಿತಿ ಇಷ್ಟವಾದರೆ ನಿಮ್ಮ ಸಮೂಹಕ್ಕೆ ಶೇರ್ ಮಾಡುವುದನ್ನ ಮರೆಯದಿರಿ 
RELATED ARTICLES

LEAVE A REPLY

Please enter your comment!
Please enter your name here

- Advertisment -

Most Popular

Recent Comments

×