Rishab Shetty on Raghavendra Swamy-ರಿಷಬ್ ಶೆಟ್ಟಿ ರಾಘವೇಂದ್ರ ಸ್ವಾಮಿ ಬಗ್ಗೆ ಮಾತು
ಮಂತ್ರಾಲಯದಲ್ಲಿ ರಾಯರ ಗುರುವೈಭವೋತ್ಸವ ಕಾರ್ಯಕ್ರಮ ನಡೆದಿದೆ. ಅದರಲ್ಲಿ ಜಗ್ಗೇಶ್ (Jaggesh), ರಿಷಬ್ ಶೆಟ್ಟಿ ಮುಂತಾದವರು ಭಾಗಿ ಆಗಿದ್ದಾರೆ. ಈ ವೇದಿಕೆಯಲ್ಲಿ ರಿಷಬ್ ಶೆಟ್ಟಿ ಅವರು ಮಾತನಾಡಿದರು.

Read this : Bangalore Hospital Baby Injured-ಶಿಶು ಬೆರಳಿಗೆ ಗಾಯ ನರ್ಸ್ ನಿರ್ಲಕ್ಷ್ಯ |Kannada Folks
ರಾಯರಲ್ಲಿ ತಾಯಿ ಹರಕೆ ಕಟ್ಟಿಕೊಂಡಿದ್ದರಿಂದ ತಾವು ಗುರುವಾರವೇ ಜನಿಸಿದ್ದು ಎಂದು ರಿಷಬ್ ಶೆಟ್ಟಿ ಅವರು ಹೇಳಿದರು. ‘ಇದು ನಾನು ಎಲ್ಲಿಯೂ ಹಂಚಿಕೊಳ್ಳದೇ ಇರುವ ವಿಚಾರ. ಆಗ ನಾನು ಹುಟ್ಟಿರಲಿಲ್ಲ. ನಮ್ಮ ಮನೆ ತುಂಬಾ ಕಷ್ಟದಲ್ಲಿ ಇದ್ದಂತಹ ಕಾಲ ಅದು. ಮಗ ಹುಟ್ಟಲಿ, ಅವನು ಹುಟ್ಟಿದ ಮೇಲೆ ಒಳ್ಳೆಯದಾಗಲಿ ಅಂತ ರಾಯರಲ್ಲಿ ನಮ್ಮ ತಾಯಿ ಹರಕೆ ಹೊತ್ತುಕೊಂಡರು. ಆನಂತರವೇ ನಾನು ಹುಟ್ಟಿದ್ದು. ನಾನು ಗುರುವಾರವೇ ಜನಿಸಿದ್ದು. ಏನೇ ಕಷ್ಟ ಬಂದರೂ ರಾಯರಿಂದ ಒಳ್ಳೆಯದಾಗತ್ತೆ ಅಂತ ನಮ್ಮ ತಾಯಿ ಹೇಳುತ್ತಾರೆ. ಶೂಟಿಂಗ್ ವೇಳೆ ಏನೇ ಸಮಸ್ಯೆ ಬಂದರೂ ರಾಯರನ್ನು ನೆನಪಿಸಿಕೊಂಡರೆ ಪರಿಹಾರ ಆಗುತ್ತದೆ’ ಎಂದು ರಿಷಬ್ ಶೆಟ್ಟಿ (Rishab Shetty) ಹೇಳಿದರು.
Follow Us
Follow KannadaFolks channel on WhatsApp
Visit the Kannadafolks.in follow the latest updates
Subscribe and Receive exclusive content and updates on your favourite topics
Subscribe to KannadaFloks YouTube Channel and watch Videos
Support Us 


