HomeNewsEntertainmentToxic and Dhurandhar 2 - 10 ಕೋಟಿ ಮಂದಿ ಚಿತ್ರಮಂದಿರಕ್ಕೆ ಬರುವ ನಿರೀಕ್ಷೆ|Kannada Folks

Toxic and Dhurandhar 2 – 10 ಕೋಟಿ ಮಂದಿ ಚಿತ್ರಮಂದಿರಕ್ಕೆ ಬರುವ ನಿರೀಕ್ಷೆ|Kannada Folks

ಮಾರ್ಚ್ 19ರಂದು ‘ಟಾಕ್ಸಿಕ್’ ಮತ್ತು ‘ಧುರಂಧರ್ 2’ ಸಿನಿಮಾಗಳು ಬಿಡುಗಡೆ ಆಗಲಿವೆ. ಈ ಎರಡೂ ಚಿತ್ರಗಳು ಜನಮನ ಗೆಲ್ಲಲು ಸಫಲವಾದರೆ ದೊಡ್ಡ ಸಿನಿ ಹಬ್ಬ ನಡೆಯಲಿದೆ.

Toxic and Dhurandhar 2 – 10 ಕೋಟಿ ಮಂದಿ ಚಿತ್ರಮಂದಿರಕ್ಕೆ ಬರುವ ನಿರೀಕ್ಷೆ

20226ರ ಎರಡು ಬಹುನಿರೀಕ್ಷಿತ ಸಿನಿಮಾಗಳು ಒಂದೇ ದಿನ ಬಿಡುಗಡೆ ಆಗುತ್ತಿರುವುದರ ಬಗ್ಗೆ ಸಾಕಷ್ಟು ಚರ್ಚೆ ಆಗುತ್ತಿದೆ. ‘ಟಾಕ್ಸಿಕ್’ ಮತ್ತು ‘ಧುರಂಧರ್ 2’  ಸಿನಿಮಾಗಳು ಮಾರ್ಚ್ 19ರಂದು ರಿಲೀಸ್ ಆಗಲಿವೆ. ಈ ಸಿನಿಮಾಗಳ ಕ್ಲ್ಯಾಶ್ ಬಗ್ಗೆ ಬಾಕ್ಸ್ ಆಫೀಸ್ ಪಂಡಿತರು ಹಲವು ರೀತಿ ಅಭಿಪ್ರಾಯಗಳನ್ನು ನೀಡುತ್ತಿದ್ದಾರೆ. ಇಂಥ ಕ್ಲ್ಯಾಶ್ ಉತ್ತಮವಲ್ಲ ಎಂದು ಬಹುತೇಕರು ಹೇಳುತ್ತಿದ್ದಾರೆ. ಅಚ್ಚರಿ ಎಂದರೆ, ‘ಧುರಂಧರ್ 2’ ಮತ್ತು ‘ಟಾಕ್ಸಿಕ್’ ಒಟ್ಟು ಸೇರಿ ಬರೋಬ್ಬರಿ 10 ಕೋಟಿ ಪ್ರೇಕ್ಷಕರನ್ನು ಸೆಳೆದುಕೊಳ್ಳಲಿವೆ ಎಂದು ಅಂದಾಜಿಸಲಾಗಿದೆ.Dhurandhar 2 vs Toxic: 'ಧುರಂಧರ್- 2' ರಿಲೀಸ್ ಡೇಟ್ ಬದಲಾಗಲ್ಲ; 'ಟಾಕ್ಸಿಕ್' ಎದುರು  ಫೈಟ್ ತಪ್ಪಲ್ಲ | Dhurandhar 2 vs Toxic: Ranveer Singh and Yash Set for the  Biggest Box Office Clash - Kannada Filmibeat

Read this – Highlights news of the day-ದಿನದ ಪ್ರಮುಖ ಸುದ್ದಿಗಳು

ಯಶ್ ಅವರು ‘ಟಾಕ್ಸಿಕ್’ ಸಿನಿಮಾದಲ್ಲಿ ನಟಿಸಿದ್ದಾರೆ. ಈಗಾಗಲೇ ಈ ಚಿತ್ರದ ಟೀಸರ್ ಧೂಳೆಬ್ಬಿಸಿದೆ. ‘ಕೆಜಿಎಫ್: ಚಾಪ್ಟರ್ 2’ ಗೆಲುವಿನ ಬಳಿಕ ಯಶ್ ನಟಿಸಿದ ಸಿನಿಮಾ ಎಂಬ ಕಾರಣಕ್ಕೆ ‘ಟಾಕ್ಸಿಕ್’ ಸಿಕ್ಕಾಪಟ್ಟೆ ಹೈಪ್ ಸೃಷ್ಟಿ ಮಾಡಿದೆ. ಈ ಸಿನಿಮಾಗೆ ಗೀತು ಮೋಹನ್​ದಾಸ್ ಅವರು ನಿರ್ದೇಶನ ಮಾಡಿದ್ದಾರೆ. ರುಕ್ಮಿಣಿ ವಸಂತ್, ನಯನತಾರಾ ಸೇರಿದಂತೆ ಅನೇಕರು ಈ ಚಿತ್ರದಲ್ಲಿ ಅಭಿನಯಿಸಿದ್ದಾರೆ.

‘ಧುರಂಧರ್ 2’ ಸಿನಿಮಾ ಕೂಡ ಸಣ್ಣದೇನಲ್ಲ. ರಣವೀರ್ ಸಿಂಗ್, ಅರ್ಜುನ್ ರಾಮ್​ಪಾಲ್, ಸಾರಾ ಅರ್ಜುನ್, ಸಂಜಯ್ ದತ್ ಮುಂತಾದವರು ನಟಿಸಿರುವ ಈ ಸಿನಿಮಾಗೆ ಆದಿತ್ಯ ಧಾರ್ ಅವರು ನಿರ್ದೇಶನ ಮಾಡಿದ್ದಾರೆ. ‘ಧುರಂಧರ್’ ಸಿನಿಮಾ ಬ್ಲಾಕ್ ಬಸ್ಟರ್ ಹಿಟ್ ಆಗಿರುವುದರಿಂದ ಸೀಕ್ವೆಲ್ ಮೇಲೆ ನಿರೀಕ್ಷೆ ಜಾಸ್ತಿ ಇದೆ. ಮಾರ್ಚ್ 19ರಂದು ಈ ಸಿನಿಮಾ ಕೂಡ ಭರ್ಜರಿ ಓಪನಿಂಗ್ ಪಡೆದುಕೊಳ್ಳಲಿದೆ.

ಈ ಎರಡು ಸಿನಿಮಾಗಳ ಪೈಕಿ ಒಂದು ಚಿತ್ರದ ರಿಲೀಸ್ ದಿನಾಂಕ ಮುಂದೂಡಿಕೆ ಆದರೆ ದೊಡ್ಡ ಕ್ಲ್ಯಾಶ್ ತಪ್ಪುತ್ತದೆ. ಎರಡೂ ಸಿನಿಮಾಗಳು ಬೇರೆ ಬೇರೆ ದಿನಾಂಕಗಳಲ್ಲಿ ಬಿಡುಗಡೆ ಆದರೆ ತಲಾ 1000 ಕೋಟಿ ರೂಪಾಯಿ ಕಲೆಕ್ಷನ್ ಮಾಡುವ ಸಾಮರ್ಥ್ಯ ಹೊಂದಿವೆ. ಆದರೆ ಎರಡೂ ಚಿತ್ರತಂಡಗಳು ಹಠಕ್ಕೆ ಬಿದ್ದು ಒಂದೇ ದಿನ ರಿಲೀಸ್ ಆಗುತ್ತಿವೆ.

Read this – Rishab Shetty  ಹಂಪಿಯಲ್ಲಿ ರಿಷಬ್ ಶೆಟ್ಟಿಯ ;ಜೈ ಹನುಮಾನ್; ಮುಹೂರ್ತ |Kannada Folks

‘ಟಾಕ್ಸಿಕ್’ ಚಿತ್ರತಂಡದವರು ಮೊದಲು ರಿಲೀಸ್ ದಿನಾಂಕ ಅನೌನ್ಸ್ ಮಾಡಿದ್ದರು. ಮಾರ್ಚ್ 19ರಂದು ಬಿಡುಗಡೆ ಎಂದು ಖಚಿತಪಡಿಸಿದ್ದರು. ಆದರೆ ‘ಧುರಂಧರ್ 2’ ಚಿತ್ರತಂಡ ಕೂಡ ಅದೇ ದಿನಾಂಕದಲ್ಲಿ ರಿಲೀಸ್ ಮಾಡುವುದಾಗಿ ಹಠ ಹಿಡಿದಿದೆ. ಬಿಡುಗಡೆಗೆ ಇನ್ನು ಕೆಲವೇ ದಿನಗಳು ಬಾಕಿ ಇರುವಾಗ ಹಲವು ಬಗೆಯ ಲೆಕ್ಕಾಚಾರಗಳು ನಡೆಯುತ್ತಿವೆ.

Follow Us 

Follow KannadaFolks channel on WhatsApp

Visit the Kannadafolks.in follow the latest updates

Subscribe and Receive exclusive content and updates on your favourite topics

Subscribe to KannadaFloks YouTube Channel and watch Videos

Subscribe for Free and Support Us 

ನಿಮ್ಮ ಈ - ಮೇಲ್ ಬಳಸಿ 👇ಇದೀಗ ಉಚಿತವಾಗಿ 🆓 ಚಂದಾದಾರರಾಗಿ..!  ನಿಮಗೆ ನಮ್ಮ ಕಥೆಗಳು, ಹಾಡುಗಳು ಮತ್ತು ಮಾಹಿತಿ ಇಷ್ಟವಾದರೆ ನಿಮ್ಮ ಸಮೂಹಕ್ಕೆ ಶೇರ್ ಮಾಡುವುದನ್ನ ಮರೆಯದಿರಿ 
RELATED ARTICLES

LEAVE A REPLY

Please enter your comment!
Please enter your name here

- Advertisment -

Most Popular

Recent Comments

×