ಇಂದು ಚಿದ್ರ ಚಿದ್ರವಾಗುತ್ತಿರುವ ಭಾರತೀಯ ನಗರ,ಹಳ್ಳಿ, ಕೇರಿಗಳನ್ನು ಒಂದಾಗಿ ಕರೆದದ್ದು ನಮ್ಮ ಜಾನಪದ ಮತ್ತು ಅದ ಮೂಲ ಹಲವು.
ಮಹಾಭಾರತದ ಮೂಲ ತುಂಬಾ ಹಳೆಯದು, ಭಾರತ ಖಂಡ ಅದಕ್ಕಿಂತ ಹಳೆದು ಮತ್ತು ಅದನ್ನು ನಮ್ಮ ಜನಪದ ಕಂಡ ರೀತಿಯೇ ಬೇರೆ ! ಬೇಸರವೆಂದರೆ ನಮ್ಮ ಇತಿಹಾಸ ಅದರ ಬಗ್ಗೆ ಆಸಕ್ತಿ ತೋರಿದ್ದು ತುಂಬಾ ಕಡಿಮೆ.

ಪ್ರಾಚೀನ ಭಾರತೀಯರ ಉಪ-ಖಂಡದ ವಾಯವ್ಯ ಪ್ರದೇಶವು ಹಲವಾರು ಜನಪದಗಳಾಗಿ ವಿಂಗಡಿಸಲ್ಪಟ್ಟಿತ್ತು, ಪ್ರತಿ ಜನಪದವೂ ಮತ್ತೊಂದರಿಂದ ಗಡಿಯಿಂದ ಬೇರ್ಪಡಿಸಲ್ಪಟ್ಟಿತ್ತು.
ಮಹಾ ಜನಪದಗಳು ಭಾರತೀಯ ರಾಜ್ಯಗಳು ಅಥವಾ ದೇಶಗಳು ಎಂಬುದಾಗಿ ಕರೆಯಲ್ಪಡುತ್ತವೆ. ಅರೆ-ಅಲೆಮಾರಿ ಬುಡಕಟ್ಟು ಘಟಕಗಳ ಜೊತೆಗೆ ಪ್ರಾರಂಭವಾಯಿತು. ಜನರ ಮನಸ್ಸಿನಲ್ಲಿದ್ದ ಪ್ರಮುಖ ಕಲ್ಪನೆಯು ಮೂಲಭೂತವಾಗಿ ಭೂಗೋಳಕ್ಕಿಂತ ಹೆಚ್ಚಾಗಿ ಬುಡಕಟ್ಟನ್ನು ಅವಲಂಬಿಸಿತ್ತು, ಆ ಕಾರಣದಿಂದ ಯಾದಿಗಳು ಜನರ ಹೆಸರುಗಳನ್ನೇ ಒಳಗೊಂಡಿವೆ ಮತ್ತು ಅಲ್ಲಿ ದೇಶಗಳ ಉಲ್ಲೇಖವು ಕಂಡುಬರುವುದಿಲ್ಲ.
- ಅಂಗ
- ಕೊಸಲ
- ಕಾಂಬೋಜ
- ಮಗಧ
- ಮತ್ಸ್ಯ
- ವಜ್ಜಿ
- ಮಲ್ಲ
- ಚೇದಿ
- ವತ್ಸ
- ಕುರು
- ಪಾಂಚಾಲ
- ಮಚ್ಚ
- ಶೂರಸೇನ
- ಅಸ್ಸಾಕಾ
- ಆವಂತಿ
- ಗಾಂಧಾರ

- ಅಂಗ – ಕಾಶಿ – ವಾರಾಣಸಿ
ಅತ್ಯಂತ ಹಳೆಯ ಮತ್ತು ಇಂದಿಗೂ ಜನವಸತಿಯಿಂದ ಕೂಡಿದ ನಗರಗಳಲ್ಲಿ ಇದೂ ಒಂದು. 3500 ವರ್ಷಗಳ ಲಿಖಿತ ಇತಿಹಾಸವಿರುವ ಪಟ್ಟಣವಾಗಿದೆ. ಮೊದಲ ಬಾರಿಗೆ ರಾಮಾಯಣವನ್ನು ರಚಿಸಿದ ರಾಮಚರಿತಮಾನಸದ ಲೇಖಕ ಗೋಸ್ವಾಮಿ ತುಲಸೀದಾಸರು ಈ ನಗರದಲ್ಲಿ ವಾಸಿಸುತ್ತಿದ್ದರು.
ಬನಾರಸ ಘರಾಣಾ ಎಂಬ ವಿಶಿಷ್ಟ ಸಂಗೀತ ಪದ್ಧತಿಯನ್ನು ಹಿಂದೂಸ್ತಾನಿ ಸಂಗೀತಕ್ಕೆ ಈ ನಗರವು ಕೊಡುಗೆಯಾಗಿ ಕೊಟ್ಟಿದೆ. ಕಾಶಿಯು ತನ್ನ ವಿಶಿಷ್ಟ ಸಂಸ್ಕೃತಿಗಾಗಿ ಪ್ರಸಿದ್ಧವಾಗಿದೆ
ಇನ್ನಷ್ಟು ಮಾಹಿತಿಗಾಗಿ ತಪ್ಪದೆ ಶೇರೆ ಮಾಡಿ ಮತ್ತು ಹಿಂಬಾಲಿಸಿ…….
[email-subscribers-form id=”1″]