ಇದು ಬೆಂಗಳೂರು, ಒಂದು ಕಾಲದಲ್ಲಿ ಈ ಜಾಗವನ್ನು ದೆಲ್ಲಿ, ಗೋವದಂತೆ ದೇಶದ ವಾಣಿಜ್ಯ ಕೇಂದ್ರವನ್ನಾಗಿಸಲು ಆಗ್ರಹಿಸಿ ಹೋರಾಟ ನಡೆದಿತ್ತು.
ಹಾಗೇನಾದರು ಹಾಗಿದ್ದರೆ ಕಾಣೆಯಾಗಿರುವ ೧೬ ಭಾಷೆಗಳಂತೆ ಕನ್ನಡವು ಮರೆಯಾಗಿರುತ್ತಿತ್ತು. ಸಂಪ್ರದಾಯ, ಆಚರಣೆಗಳನ್ನು ಬಾವಚಿತ್ರಗಳಲ್ಲಿ ನೋಡಬೇಕಿತ್ತು.
ಭಾಷೆ ಯಾವುದೇ ಕಾರಣಕ್ಕೂ ತೊಡುಕಲ್ಲ ಮತ್ತು ಸಾಮಾನ್ಯ ಸಂಗತಿಯೂ ಆಲ್ಲ ! ಎಲ್ಲಾ ಭಾಷೆಯನ್ನೂ ಕಲಿಯಿರಿ ಆದರೆ ಮಲತಾಯಿ ದೋರಣೆ ತೋರದೆ ಸ್ವಂತ ಭಾಷೆಯನ್ನು ಪ್ರೀತಿಸಿ.
ಹೌದು ಇಂದು ಬೆಂಗಳೂರಿನಲ್ಲಿ ಕನ್ನಡ ಮಾತನಾಡಲು ಅನುಮತಿ ಪಡೆಯಬೇಕಿದೆ ಎಂಬ ವಿಷಯ ಈ ಘಟನೆಯ ನಂತರ ತಿಳಿತು.
ಯಾವಾಗಲೂ ತನ್ನ ಸ್ವಂತ ( ) ಭಾಷೆಯಲ್ಲಿ ವಿವರಣೆ ನೀಡುವ ಮ್ಯಾನೇಜರ್ ನಾವು ಕನ್ನಡದಲ್ಲಿ ಉತ್ತರಿಸಿದರೆ ಗುರಾಯಿಸುವುದೇಕೆ ?.. ನಮ್ಮ ವಿವರಣೆಯನ್ನು ಆಂಗ್ಲದಲ್ಲಿ ಹೇಳಿ ಎಂದು ಒತ್ತಾಯಿಸುವ ಈ ಜನ ಅವರು ಏಕೆ ಇಲ್ಲಿಯ ಭಾಷೆಯನ್ನು ಕಲಿಯುವುದಿಲ್ಲಾ ?
ದೈರ್ಯಮಾಡಿ ನಾನಂತೂ ವಿಚಾರಿಸಿಯೇ ಬಿಟ್ಟೆ … ಸಾರ್ ನೀವು ಬೆಂಗಳೂರಿಗೆ ಬಂದು ಸುಮಾರು ಎಂಟು ವರ್ಷ ಕಳೆದಿದೆ, ನೀವೇಕೆ ಕನ್ನಡ ಕಲಿಯಬಾರದು ?! ಅದಕ್ಕೆ ಆತ ನಾನೇಕೆ ಕನ್ನಡ್ ಕಲಿಯಬೇಕು ಎಂದು ಅವನ ಭಾಷೆಯಲ್ಲಿ ಹೇಳಿ ದಿಟ್ಟಿಸಿ ನೋಡ ತೊಡಗಿದ …!
ಅದರೂ ಅವನ ಉತ್ತರದಲ್ಲಿ ನನ್ನ ಉತ್ತರ ಹುಡುಕ ತೋಡಗಿದೆ. ಹೌದು ಅವನು ಮಾತನಾಡುವ ಭಾಷೆಗೆ ಎಲ್ಲಾರು ಸ್ಪಂದಿಸುವಾಗ, ಮರಳಿ ಅವನದೇ ಭಾಷೆಯಲ್ಲಿ ತೋದಲಿಸಿ ಉತ್ತರಿಸಿವಾಗ ಅವನು ಏಕೆ ಕನ್ನಡ ಕಲಿಯಬೇಕು ?
ನೆಲೆ ಇಲ್ಲಿಯದು, ತಿನ್ನುವ ಬೆಳೆ ಇಲ್ಲಿಯದು ಅನುಭವಿಸುವ ನಾಡು ಇಲ್ಲಿಯದು ಆದರೆ ಇಲ್ಲಿನ ಭಾಷೆ ತಿಳಿದುಕೊಂಡರೆ ಭಾವೈಕ್ಯತೆ ಹೆಚ್ಚುವುದಿಲ್ಲವೇ ..,?
ಇದು ಆಳವಾದ ವಿಷಯ ಅರ್ಥೈಸಿಕೊಳ್ಳುವುದು ಕಷ್ಟ ?!
ಪಾಠ ಮಾಡುವ ಬೆಂಗಾಳಿ ಶಿಕ್ಷಿಯ ಕಥೆ ಬೇರೆಯೇ ಇದೆ…. ಮುಂದುವರಿದು
- Don’t miss visiting these 5 Shiva temples in Karthika Month-ಶಿವನ ದೇವಸ್ಥಾನ
- Lemon pepper Paneer Recipe in kannada-ಲೆಮನ್ ಪೆಪ್ಪರ್ ಪನ್ನೀರ್
- Shiva Ashtakam Lyrics-ಶಿವಾಷ್ಟಕಂ
- Dalit CM faces backlash-ದಲಿತ ಮುಖ್ಯಮಂತ್ರಿಗೆ ತೀವ್ರ ವಿರೋಧ
- Auspicious Karthika Month Begins-ಕಾರ್ತಿಕ ಮಾಸ ಆರಂಭ
Support Us 


