ರಾಜೀವ ಟೀವಿ ನೋಡುತ್ತಾ ಹೆಂಡತಿ ನೆನಪು ಜಾಸ್ತಿಯಾಗಿ ಜೋತೆಗೆ ಹೋಟ್ಟೆ ಹಸಿವು ಜಾಸ್ತಿಯಾಗಿ ಊಟಕ್ಕೆ ಏನಾದರು ಇದೆಯೇ ಎಂದು ಅಡುಗೆ ಮನೆಗೆ ಹೋದ ಆದರೆ ಅಲ್ಲಿಂದ ಯಾವುದೋ ವಾಸನೆ ಬರುತಿತ್ತು. ಏನದೂ ಎಂದು ನೋಡಿದರೆ
ಉಪ್ಪಿಟ್ಟು ಬೇವರಿತ್ತು ! ತುಂಬಾ ಹಸಿದಿದ್ದ ರಾಜೀವಾ ಯಾವುದಕ್ಕೂ ಗಮನ ಕೊಡಲಿಲ್ಲ ಕಾರಣ ಹೆಂಡತಿ ಬರುವುದು ಸಂಜೆ ಎಂದು ತಿಳಿದಿತ್ತು ಮತ್ತು ಹೋಸದಾಗಿ ಅಡುಗೆ ಮಾಡುವ ತಾಳ್ಮೆ ಅವನಿಗೆ ಇರಲಿಲ್ಲ.
ಉಪ್ಪಿಟ್ಟು ಹೇಗಿದ್ದರೂ ಸಾಂಬಾರು ಇದ್ದಿದ್ದರಿಂದ ಯಾವುದೇ ಕಾರಣಕ್ಕೂ ಕಾಯದೆ ಎರೆಡು ಸೇರಿಸಿ ಕಲಸಿ ಟೀವಿ ಮುಂದೆ ಬಂದು ಕುಳಿತ. ಸಾಂಬಾರು ಸುವಾಸನೆಯಿಂದ ಉಪ್ಪಿಟ್ಟು ಸೋಲ್ಪ ಸವೆದಿತ್ತು ಇತ್ತ ರಾಜೀವಾ ಟೀವಿ ನೋಡುತ್ತಾ ಒಂದೋಂದೇ ತುತ್ತು ಬಾಯಿಗೆ ಇಟ್ಟು ನೀರು ಕುಡಿದ.
ಸೋಲ್ಪ ಸಮಾದಾನದಿಂದ ಕುಳಿತ, ಹೊಟ್ಟೆ ತುಂಬಿದ ಕಾರಣ ನಿದ್ದೆ ಕಣ್ಣಿಗೆ ಅಪ್ಪಳಿಸುವಂತಾಗಿ ಉಪ್ಪಿಟ್ಟಿನ ಸೋಬಾನೆ ಯಿಂದ ಬೆಡ್ ರೂಂ ಗೆ ಬಂದು ಬೊರಲಾಗಿ ಮಲಗಿದ.
ಸಂಜೆ ಗಡಿಬಿಡಿಯಲ್ಲಿ ಬಂದ ಉಮಾ ಟೀವಿ ಒಡುತ್ತಿದ್ದರೂ ಹಾಲ್ ನಲ್ಲಿ ಯಾರು ಇಲ್ಲದದ್ದನ್ನು ನೋಡಿ ಗಾಬರಿ ಜೋತೆಯಲ್ಲಿ ಬೆಡ್ ರೂಂ ಗೆ ಬಂದು ರಾಜೀವನನ್ನು ನೋಡಿ ಭಯಗೊಂಡಳು.. (…….. )