ಬೆಂಗಳೂರು ಕರಗ ಮಹಾತ್ಮೆ
ಯಾರೇ ಅಕ್ಕ ಬೆಂಗಳೂರ್ ಕಾಯೋಳು
ಅಮ್ಮನಿಗೆ ಅಮ್ಮ ಅಣ್ಣಮ್ಮ…
ಯಾರೋ ತಮ್ಮ ಕರಗಾನ್ ಮೆಚ್ಚೋಳು
ಮಲ್ಲಿಗೆಯ ಮುಡಿಯೋ ಅಣ್ಣಮ್ಮ…
ಬರುತೀನ್ ಎಂದರೆ ಇಲ್ಲಿಗೆ
ಬರೋತನಕ ಮೌನಿ…
ಕೊಡತೀನ್ ಹರಕೆ ಎಂದರೆ
ಕೊಡೋತನಕ ಕೋಪಿ
ಹಾಡಿದ್ ಮಾತನ್ ಮೀರ್ದಿರೋ
ಭಕ್ತರೇ ಇವಳ್ಗೆ ಇಷ್ಟ..ಇಷ್ಟ…
|| ಯಾರೇ ಅಕ್ಕ ಬೆಂಗಳೂರ್ ಕಾಯೋಳು
ಅಮ್ಮನಿಗೆ ಅಮ್ಮ ಅಣ್ಣಮ್ಮ…
ಯಾರೋ ತಮ್ಮ ಕರಗಾನ್ ಮೆಚ್ಚೋಳು
ಮಲ್ಲಿಗೆಯ ಮುಡಿಯೋ ಅಣ್ಣಮ್ಮ…||
ಕಾಡು ಮಲ್ಲೇಶನೇ
ಒಮ್ಮೆ ತಾಯ ಬೇಡಿದ
(ಒಮ್ಮೆ ತಾಯ ಬೇಡಿದ…)
ಬೀಳುಪತ್ರೆಯ ಮರವಾ
ಬೆಳೆಸು ಎಂದು ಬಯಸಿದ
(ಬೆಳೆಸು ಎಂದು ಬಯಸಿದ)
ಹರಸಿದಳು ಕರೆಸಿದಳು
ಕೆಂಪೇಗೌಡರ ಇಲ್ಲಿಗೆ…
ಅದರ ಜೊತೆ ನಗರವನ್ನು
ಕಟ್ಟಿಸಿದಳು ಮೆಲ್ಲಗೆ…
ಪೂಜೆ ಬಿಟ್ಟ…ಪೂಜೆ ಬಿಟ್ಟ
ಪೂಜೆ ಬಿಟ್ಟ ನಗರ ದೊರೆಯ
ವಿಜಯನಗರಕೆ….ರವಾನಿಸಿ
ಹಾಕಿಸಿದಳು ಸರೆಯ ವಾಸಕೆ..
ಕೊಟ್ಟ ಮಾತ…ಕೊಟ್ಟ ಮಾತ…
ಕೊಟ್ಟ ಮಾತ..ಬಿಟ್ಟ ಹರಕೆ
ಗ್ಯಪ್ತಿ ಮಾಡಿಸಿ..ಎರಡು ವರುಷ
ಅಳಿಸಿ ನಗಿಸಿ ತಂದ್ಳು ಮನ್ನಿಸಿ
ಬರುತೀನ್ ಎಂದರೆ ಇಲ್ಲಿಗೆ
ಬರೋತನಕ ಮೌನಿ…
ಕೊಡತೀನ್ ಹರಕೆ ಎಂದರೆ
ಕೊಡೋತನಕ ಕೋಪಿ
ಹಾಡಿದ್ ಮಾತನ್ ಮೀರ್ದಿರೋ
ಭಕ್ತರೇ ಇವಳ್ಗೆ ಇಷ್ಟ..ಇಷ್ಟ…
|| ಯಾರೇ ಅಕ್ಕ ಬೆಂಗಳೂರ್ ಕಾಯೋಳು
ಅಮ್ಮನಿಗೆ ಅಮ್ಮ ಅಣ್ಣಮ್ಮ…
ಯಾರೋ ತಮ್ಮ ಕರಗಾನ್ ಮೆಚ್ಚೋಳು
ಮಲ್ಲಿಗೆಯ ಮುಡಿಯೋ ಅಣ್ಣಮ್ಮ…||
ಓ ಓ ಓ ಓ ಓ ಓ …..
ಓ ಓ ಓ ಓ ಓ ಓ….
ಪಾಂಡವಪುರದಲ್ಲಿ ನಮ್ಮ
ಧರ್ಮರಾಯರಿದ್ದರು…
(ಧರ್ಮರಾಯರಿದ್ದರು)
ಹೆಣ್ಣಿಂದ ವನವಾಸವೆಂದು
ಸತಿಯ ನಿಂದಿಸಿದ್ದರು
(ಸತಿಯ ನಿಂದಿಸಿದ್ದರು)
ಭಕ್ತಳೆಂಬ ದ್ರೌಪದಿಯು
ಅಮ್ಮಾ ಅಣ್ಣಮ್ಮ ಎಂದು
ಮಾನವತಿ ಹೆಣ್ಣಗೊಂದು
ಸ್ಥಾನ ಕೊಡು ಬಾರೇ ಎಂದು
ಸೀರೆ ಹುಡುಸಿ…ಬಳೆಯ ತೊಡಿಸಿ
ಸೀರೆ ಹುಡುಸಿ…ಬಳೆಯ ತೊಡಿಸಿ
ತಾಳಿ ಕಟ್ಟಿಸಿ..ಹೆಣ್ಣು ಇಲ್ಲದೆ
ಧರ್ಮ ಇಲ್ಲಾ ಎಂದು ಭೋದಿಸಿ
ಧರ್ಮನಿಗೆ ತಲೆಗೆ ಏಳು….
ಧರ್ಮನಿಗೆ ತಲೆಗೆ ಏಳು
ಮಡಿಕೆ ಕೂರಿಸಿ…
ಕೈಗೆ ಕತ್ತಿ ಕೊಟ್ಟು ಕರಗ
ಶಕ್ತಿ ತೋರಿಸಿ…
ನನ್ನನು ಶಂಕಿಸಿದರೇ…..
ನನ್ನನು ಶಂಕಿಸಿದರೆ
ಪ್ರಳಯ ಎಂದಳಮ್ಮಾ…
ನನಗೆ ನಡೆದುಕೊಂಡ್ರೆ…ಹೇ….
ನನಗೆ ನಡೆದುಕೊಂಡ್ರೆ..
ವಿಜಯ ಎಂದಳಮ್ಮಾ…
ಹಾಡಿದ್ ಮಾತನ್ ಮೀರ್ದಿರೋ
ಭಕ್ತರೇ ಇವಳ್ಗೆ ಇಷ್ಟ..ಇಷ್ಟ…
|| ಯಾರೇ ಅಕ್ಕ ಬೆಂಗಳೂರ್ ಕಾಯೋಳು
ಅಮ್ಮನಿಗೆ ಅಮ್ಮ ಅಣ್ಣಮ್ಮ…
ಯಾರೋ ತಮ್ಮ ಕರಗಾನ್ ಮೆಚ್ಚೋಳು
ಮಲ್ಲಿಗೆಯ ಮುಡಿಯೋ ಅಣ್ಣಮ್ಮ…||