ಯಾಕೆ ಬಡಿದಾಡ್ತಿ ತಮ್ಮ, ಯಾಕೆ ಬಡಿದಾಡ್ತಿ ತಮ್ಮ
ಮಾಯ ಮೆಚ್ಚಿ, ಸಂಸಾರ ನೆಚ್ಚಿ
ನೀ ಹೋಗದರಿಯೆ ತಮ್ಮ ಕಣ್ಣ ಮುಚ್ಚಿ, ಮಣ್ಣ ಮುಚ್ಚಿ

ಹೆಂಡ್ರು ಮಕ್ಳಿರುವರು ತಮ್ಮ ಎಲ್ಲಿ ತನಕ
ಹೆಂಡ್ರು ಮಕ್ಳಿರುವರು ತಮ್ಮ ಎಲ್ಲಿ ತನಕ
ಇದ್ರೆ ತಿಂಬೋ ತನಕ, ಇದ್ರೆ ತಿಂಬೋ ತನಕ
ಸತ್ತಾಗ ಬರುವರು ತಮ್ಮ ಗುಣಿ ತನಕ
ಸತ್ತಾಗ ಬರುವರು ತಮ್ಮ ಗುಣಿ ತನಕ
ಮಣ್ಣು ಮುಚ್ಚೋ ತನಕ, ಮಣ್ಣು ಮುಚ್ಚೋ ತನಕ
ಯಾಕೆ ಬಡಿದಾಡ್ತಿ ತಮ್ಮ, ಯಾಕೆ ಬಡಿದಾಡ್ತಿ ತಮ್ಮ
ಮಾಯ ಮೆಚ್ಚಿ ಸಂಸಾರ ನೆಚ್ಚಿ
ನೀ ಹೋಗದರಿಯೆ ತಮ್ಮ ಕಣ್ಣ ಮುಚ್ಚಿ, ಮಣ್ಣ ಮುಚ್ಚಿ
ನೀ ಹೋಗದರಿಯೆ ತಮ್ಮ ಕಣ್ಣ ಮುಚ್ಚಿ, ಮಣ್ಣ ಮುಚ್ಚಿ
ಅಣ್ಣ ತಮ್ಮ ಅಕ್ಕ ತಂಗಿ ಎಲ್ಲಿ ತನಕ
ಅಣ್ಣ ತಮ್ಮ ಅಕ್ಕ ತಂಗಿ ಎಲ್ಲಿ ತನಕ
ಬದುಕೀ ಬೆಳೆಯೋ ತನಕ, ಬದುಕೀ ಬೆಳೆಯೋ ತನಕ
ಸತ್ತಾಗ ಬರುವರು ತಮ್ಮ ಗುಣಿ ತನಕ
ಸತ್ತಾಗ ಬರುವರು ತಮ್ಮ ಗುಣಿ ತನಕ
ಮಣ್ಣು ಮುಚ್ಚೋ ತನಕ, ಮಣ್ಣು ಮುಚ್ಚೋ ತನಕ
ಯಾಕೆ ಬಡಿದಾಡ್ತಿ ತಮ್ಮ, ಯಾಕೆ ಬಡಿದಾಡ್ತಿ ತಮ್ಮ
ಮಾಯ ಮೆಚ್ಚಿ ಸಂಸಾರ ನೆಚ್ಚಿ
ನೀ ಹೋಗೊದರಿಯೆ ತಮ್ಮ ಕಣ್ಣ ಮುಚ್ಚಿ ಮಣ್ಣ ಮುಚ್ಚಿ

ಹೆಣ್ಣು ಹೊನ್ನು ಮಣ್ಣು ನಿನ್ನದು ಎಲ್ಲಿ ತನಕ
ಹೆಣ್ಣು ಹೊನ್ನು ಮಣ್ಣು ನಿನ್ನದು ಎಲ್ಲಿ ತನಕ
ನಿನ್ನ ಕೊರಳಿಗೆ ಕುಣಿಕೆ ಬೀಳೋ ತನಕ
ನಿನ್ನ ಕೊರಳಿಗೆ ಕುಣಿಕೆ ಬೀಳೋ ತನಕ
ನಿನ್ನಾಸೆ ಪ್ರಾಣಪಕ್ಷಿ ಹಾರೋ ತನಕ
ನಿನ್ನಾಸೆ ಪ್ರಾಣಪಕ್ಷಿ ಹಾರೋ ತನಕ
ಕಳಚಯ್ಯ ಮಾಯದ ಪೊರೆಯ ಮುಕ್ತಿ ಹೊಂದಾಕ
ಕಳಚಯ್ಯ ಮಾಯದ ಪೊರೆಯ ಮುಕ್ತಿ ಹೊಂದಾಕ
ಯಾಕೆ ಬಡಿದಾಡ್ತಿ ತಮ್ಮ, ಯಾಕೆ ಬಡಿದಾಡ್ತಿ ತಮ್ಮ
ಮಾಯ ಮೆಚ್ಚಿ ಸಂಸಾರ ನೆಚ್ಚಿ
ನೀ ಹೋಗೊದರಿಯೆ ತಮ್ಮ ಕಣ್ಣ ಮುಚ್ಚಿ, ಮಣ್ಣ ಮುಚ್ಚಿ

Support Us