ಮಹಾಲಯ ಅಮಾವಾಸ್ಯೆಯ ನಂತರವೇ ನವರಾತ್ರಿ ಆರಂಭ: ಕಾರಣವೇನು?
15 ದಿನಗಳ ಪಿತೃ ಪಕ್ಷವು ಮಹಾಲಯ ಅಮಾವಾಸ್ಯೆಯೊಂದಿಗೆ ಮುಕ್ತಾಯಗೊಳ್ಳುವುದು. 2026ರ ಅಕ್ಟೋಬರ್ 10ರಂದು ಮಹಾಲಯ ಅಮಾವಾಸ್ಯೆ ಬಂದಿದೆ. ಈ ದಿನವು 9 ದಿನಗಳ ಶಾರದೀಯ ನವರಾತ್ರಿಯನ್ನು ಆಚರಿಸಲು ಮುನ್ನುಡಿ ಬರೆಯುವ ದಿನವಾಗಿದೆ. ಮಹಾಲಯದವರೆಗಿನ ಅವಧಿಯನ್ನು ಪಿತೃ ಪಕ್ಷವೆಂದು ಕರೆದರೆ. ಮಹಾಲಯದ ನಂತರ ಬರುವ 15 ದಿನಗಳನ್ನು ದೇವಿ ಪಕ್ಷವೆಂದು ಕರೆಯಲಾಗುತ್ತದೆ. ಭಾರತದ ಕೆಲವೊಂದು ಸ್ಥಳಗಳಲ್ಲಿ ಮಾತ್ರ ದೇವಿ ಪಕ್ಷವೆಂದು 15 ದಿನಗಳ ಕಾಲ ದೇವಿಯ ಆಚರಣೆ ಇರುತ್ತದೆ. ಕೆಲವೊಂದು ಸ್ಥಳಗಳಲ್ಲಿ ಕೇವಲ 9 ದಿನಕ್ಕೆ ನವರಾತ್ರಿಯು ಮುಕ್ತಾಯವಾಗುವುದು. ಪ್ರತೀ ವರ್ಷ ಮಹಾಲಯ ಅಮಾವಾಸ್ಯೆ ಮುಗಿಯುತ್ತಿದ್ದಂತೆ ನವರಾತ್ರಿ ಹಬ್ಬ ಆರಂಭವಾಗುವುದು. ಮಹಾಲಯ ಅಮಾವಾಸ್ಯೆಯು ದುರ್ಗಾ ದೇವಿಯ ಆಗಮನದೊಂದಿಗೆ ಯಾಕೆ ನಿಟಕವಾದ ಸಂಬಂಧವನ್ನು ಹೊಂದಿದೆ ಎಂಬುದು ಅನೇಕರಿಗೆ ತಿಳಿದಿಲ್ಲ. ಈ ಲೇಖನದಲ್ಲಿ ಇದರ ಕುರಿತು ಮಾಹಿತಿಯನ್ನು ನೀಡಲಾಗಿದೆ.
1. ನವರಾತ್ರಿ ಮಹಾಲಯದೊಂದಿಗೆ ಯಾಕೆ ಪ್ರಾರಂಭವಾಗುವುದು.?
ತಾಂತ್ರಿಕವಾಗಿ ಹೇಳುವುದಾದರೆ, ಮಹಾಲಯವು ಐದು ದಿನಗಳ ದುರ್ಗಾ ಪೂಜೆಯ ಮೊದಲ ದಿನವಲ್ಲ. ಬದಲಾಗಿ, ಇದು ದುರ್ಗಾ ದೇವಿಯ ಆರಾಧನೆ ಮತ್ತು ‘ದೇವಿ ಪಕ್ಷ’ಕ್ಕೆ ಸಂಬಂಧಿಸಿದ ಅವಧಿಯ ಆರಂಭವನ್ನು ಸೂಚಿಸುತ್ತದೆ. ಬಂಗಾಳದಲ್ಲಿ, ಮಹಾಲಯ ಮತ್ತು ದುರ್ಗಾ ಪೂಜೆಯ ನಡುವಿನ ಸಾಂಸ್ಕೃತಿಕ ನಂಟು ಎಷ್ಟು ಬಲವಾಗಿದೆಯೆಂದರೆ, ಈ ದಿನವನ್ನು ಹಬ್ಬದ ಸಿದ್ಧತೆಯ ಅಥವಾ ದಿನಗಣನೆಯ ಆರಂಭದ ಕ್ಷಣವೆಂದು ಪರಿಗಣಿಸಲಾಗುತ್ತದೆ. ಮಹಾಲಯವು ಪಿತೃ ಪಕ್ಷದ ಕೊನೆಯ ದಿನವಾಗಿರುವುದು. ಈ ದಿನ ಜನರು ದುರ್ಗಾ ದೇವಿಯ ವಿವಿಧ ರೂಪಗಳನ್ನು ಪೂಜಿಸುವುದಕ್ಕೂ ಮುನ್ನ ಪಿತೃಗಳಿಗೆ ಗೌರವವನ್ನು ಸಲ್ಲಿಸಿ ನಂತರ ದುರ್ಗಾ ದೇವಿಯ ಆರಾಧನೆಯತ್ತ ಸಾಗುತ್ತಾರೆ.

Read this – Mahalaya Amavasya ; ಪಿತೃಗಳನ್ನು ಸ್ಮರಿಸುವ ಈ ದಿನದ ಮಹತ್ವವೇನು?
2. ದುರ್ಗಾ ದೇವಿಯನ್ನು ಆಹ್ವಾನಿಸುವ ಸಂಪ್ರದಾಯ:
ಮಹಾಲಯ ಅಮಾವಾಸ್ಯೆಯು ದುರ್ಗಾ ದೇವಿಯ ಆಹ್ವಾನದೊಂದಿಗೆ ನಿಕಟ ಸಂಬಂಧವನ್ನು ಹೊಂದಿದೆ. ಇದು ದುರ್ಗಾ ದೇವಿಯು ತನ್ನ ಭಕ್ತರನ್ನು ಆಶೀರ್ವದಿಸಲು ಭೂಮಿಗೆ ಆಗಮಿಸುವ ಮುನ್ಸೂಚನೆಯಾಗಿದೆ. ಈ ದಿನ ದುರ್ಗಾ ದೇವಿಯನ್ನು ಪೂಜಿಸುವುದಕ್ಕೂ ಮುನ್ನ ಕಲಶ ಸ್ಥಾಪನೆಯನ್ನು ಮಾಡುವ ಸಂಪ್ರದಾಯವಿದೆ. ಕಲಶ ಸ್ಥಾಪನೆಯ ಮೂಲಕ ದುರ್ಗಾ ದೇವಿಯನ್ನು ಭೂಮಿಗೆ ಆಹ್ವಾನಿಸಲಾಗುವುದು. ಇದನ್ನೇ ಘಟಸ್ಥಾಪನೆ ಎಂದು ಕರೆಯಲಾಗುತ್ತದೆ. ಇದಾದ ಬಳಿಕ ದುರ್ಗಾ ದೇವಿಯ ಆರಾಧನೆ ಪ್ರಾರಂಭವಾಗುವುದು.
3. ಮಹಾಲಯ ಅಮಾವಾಸ್ಯೆಯೇ ದುರ್ಗಾ ಪೂಜೆಯ ಮೊದಲ ದಿನವೇ.?
ನವರಾತ್ರಿ ಹಬ್ಬದ ಮೊದಲನೇ ದಿನವೇ ಮಹಾಲಯ ಅಮಾವಾಸ್ಯೆಯೇ ಎಂದು ಕೇಳುವುದಾದರೆ. ಅದು ತಪ್ಪು. ಮಹಾಲಯ ಅಮಾವಾಸ್ಯೆಯು ದುರ್ಗಾ ಪೂಜೆಯ ಅಂದರೆ, ನವರಾತ್ರಿಯ ಮೊದಲನೇ ದಿನವಲ್ಲ. ಮಹಾಲಯ ಅಮಾವಾಸ್ಯೆಯು ಪಿತೃ ಪಕ್ಷದಿಂದ ದೇವಿ ಪಕ್ಷಕ್ಕೆ ಪರಿವರ್ತನೆಯಾಗುವ ಅಮಾವಾಸ್ಯೆಯ ದಿನವಾಗಿದೆ ಮತ್ತು ಇದನ್ನು ಸಾಂಪ್ರದಾಯಿಕವಾಗಿ ದುರ್ಗಾ ಪೂಜೆಯ ಮುನ್ನುಡಿ ಎಂದು ಪರಿಗಣಿಸಲಾಗುತ್ತದೆ. ಮಹಾಲಯವು ಕೇವಲ ದುರ್ಗಾ ಪೂಜೆಯ ನಿರೀಕ್ಷೆಯ ಸಮಯವಲ್ಲ. ಅನೇಕ ಹಿಂದೂ ಕುಟುಂಬಗಳಿಗೆ ಇದು ಪೂರ್ವಜರನ್ನು ಸ್ಮರಿಸುವ ಪ್ರಮುಖ ದಿನವೂ ಆಗಿದೆ.
Read this – ನವರಾತ್ರಿಯ ನಾಲ್ಕನೇ ದಿನವನ್ನು ಹೇಗೆ ಆಚರಿಸುತ್ತಾರೆ?- Navratri Celebration
2026ರ ಮಹಾಲಯ ಅಮಾವಾಸ್ಯೆಯು ಅಕ್ಟೋಬರ್ 10ರಂದು ಬರುವುದರಿಂದ, ಆ ದಿನವು ಮತ್ತೊಮ್ಮೆ ಪೂರ್ವಜರ ಸ್ಮರಣೆಯೊಂದಿಗೆ ದುರ್ಗಾ ದೇವಿಯನ್ನು ಭೂಮಿಗೆ ಆಹ್ವಾನಿಸಲಾಗುವುದು. ಮಹಾಲಯ ಅಮಾವಾಸ್ಯೆಯ ಮರುದಿನ ಅಂದರೆ, 2026ರ ಮಹಾಲಯ ಅಮಾವಾಸ್ಯೆಯು ಅಕ್ಟೋಬರ್ 10ರಂದು ಬಂದರೆ, ನವರಾತ್ರಿ ಅಥವಾ ದುರ್ಗಾ ಪೂಜೆಯು ಅಕ್ಟೋಬರ್ 11 ರಂದು ಭಾನುವಾರದಿಂದ ಪ್ರಾರಂಭವಾಗುವುದು.
Follow Us
Follow KannadaFolks channel on WhatsApp
Visit the Kannadafolks.in follow the latest updates
Subscribe and Receive exclusive content and updates on your favourite topics
Subscribe to KannadaFloks YouTube Channel and watch Videos
Support Us 


