ಒಂದು ಉಪ್ಪಿಟ್ಟಿನ ಕಥೆ – 4 ಮುಂದುವರಿದ ವ್ಯಥೆ
ಉಪ್ಪಿಟ್ಟು ಹುಟ್ಟುತಾ ಯಾರಿಗೂ ಶತೃ ಅಲ್ಲ ಆದರೂ ಏಕೆ ಅದನ್ನು ದ್ವೇಷಿಸುವುದು ಅಂತ ರಾಜೀವಾ ಯೋಚಿಸುತಿದ್ದ….
ಅದೇ ಸಮಯಕ್ಕೆ ಉಮಾ ಅಡುಗೆಮನೆಯಿಂದ ಹೊರಗೆ ಬಂದು (ಈ ರಾಜೀವ ಏನು ಯೋಚನೆ ಮಾಡುತಿರಬಹುದು ) ಕೇಳಿ ನೋಡೋಣ ಅಂಥ : “ಏನು ಯೋಚ್ನೆ ಇವತ್ತು ಕೆಲಸ ರಜೆ ಇದ್ಯಲ್ಲೇವೆ ಹೊರಗಡೆ ಹೋಗುವ ಮನಸು ಮಡಿದಿರೇನು”? ಎಂದು ಕೇಳಿದಳು !
ಇಲ್ಲಿ ಓದಿ – ಅಂಗಾಧಿಪತಿ ಕರ್ಣರಿಗೂ ಒಂದಾಣಿಕೆ / ಮಹಾಜನಪದಗಳು – ಮಹಾಭಾರತ – ಟೀವಿಯಲ್ಲಿ ಕಥೆಗಳೆಲ್ಲ ನಿಜವಲ್ಲ – ಬಾಗ 3
ರಾಜೀವಾ ( ಇವಳನ್ನು ಒಮ್ಮೆ ಕೇಳುವ ) : ಉಮಾ ಎಲ್ಲ ಅಡುಗೆ ಮುಂದೆ ಈ ಉಪ್ಪಿಟ್ಟು ಇಷ್ಟು ಅಗ್ಗ ಆಗಿದ್ದು ಏಕೆ ?
ಉಮಾ : ಅಗ್ಗ.. ! ಅದು ಹೇಗೆ ಒಂದು ಅಡಿಗೆಯನ್ನು ವಿಮರ್ಶಿಸುವುದು ಮತ್ತು ಅದು ಸರಿಯಲ್ಲ
ರಾಜೀವಾ : ಹಾಗಲ್ಲ ಎಲ್ಲ ರುಚಿಕರ ಅಡುಗೆಗಳ ಮುಂದೆ ಈ ಉಪ್ಪಿಟ್ಟು ಅನ್ನು ಮೂಲೆಗುಂಪು ಮಾಡಿರುದು ಹಾಗೆ ಅನಿಸುತ್ತದೆ.
ಉಮಾ : ಯಾವುದೇ ಅಡುಗೆ ತೀರಾ ಕೆಳಮಟ್ಟದ ರುಚಿ ಹೊಂದಿರುವುದಿಲ್ಲ ಆದರೆ ಪ್ರತಿದಿನ , ಏನು ಮಾಡಲು ತೋಚದಿದ್ದಾಗ , ಬೇಗ ಟಿಫನ್ ಮಾಡಬೇಕು ಅಂದ್ರೆ ನಮ್ಮ ಮಹಿಳೆಯರಿಗೆ ಥಟ್ ಅಂಥ ನೆನಪಾಗೋದು ಈ ಉಪ್ಪಿಟ್ಟು ! ಆದ್ರೆ ಅದನ್ನ ಮುಲಾಜಿನಿಂದ ತಳ್ಳಿದ್ದು ನೀವು ಗಂಡಸರು.
ಇಲ್ಲಿ ಓದಿ – ಫೇಸ್ಬುಕ್ ಸ್ನೇಹಿತನ ಸಾಮೂಹಿಕ ಅತ್ಯಾಚಾರ ಕಥೆ – ಹುಡುಗ ಅಥವಾ ಹುಡುಗಿ ಜಾಗರೂಕರಾಗಿರಿ
ರಾಜೀವಾ : ನಾನು ಹಾಗೆಲ್ಲ ಊಟವನ್ನು ಕೆಳಮಟ್ಟ್ಟದಲ್ಲಿ ನೋಡಲ್ಲ ಏಕೆಂದ್ರೆ ಕೆಲವೊಮ್ಮೆ ನೀನು ಮಾಡುವ ತಕಾರಿ ಉಪ್ಪಿಟ್ಟು , ಅವರೇಕಾಳು ಉಪ್ಪಿಟ್ಟು ಚೆನ್ನಾಗಿರುತ್ತೆ!
ಉಮಾ : ಮತ್ತೆ ಈ ಉಪ್ಪಿಟ್ಟನ್ನು ಅಗ್ಗ ಎಂದಿದ್ದು ಏಕೆ ?
ರಾಜೀವಾ : ನಾನು ಕೇವಲ ಚರ್ಚೆ ಮಾಡುತಿದ್ದೆ ಅಷ್ಟೇ ……
ಉಮಾ : ನಿಮ್ಮದು ಅರ್ಥವಿಲ್ಲದ ಚರ್ಚೆ ನನ್ನ ಅಡುಗೆ ಕೆಡಿಸುತ್ತದೆ. (ಅಡುಗೆಮನೆ ಕಡೆಗೆ ಹೊರಡುವಳು )
ರಾಜೀವಾ : ಉಮಾ ….ಉಮಾ …. ಇವತ್ತು ಆಫೀಸ್ ರಜೆ , ಮನೆಯಲ್ಲಿ ಸ್ಪೆಷಲ್ ಏನು ….. ?
ಉಮಾ : ಭಾನುವಾರದ ಬಿಸಿಯೂಟ “ಉಪ್ಪಿಟ್ಟು ” …..
ಮುಂದುವರಿದ ವ್ಯಥೆ………………………