HomeNews‘10 ವಾರ’ ಅಂತ ಹೇಳಿಲ್ಲ ಎಂದು ದೇವ್ರಾಣೆ, ತಾಯಾಣೆ ಇಟ್ಟ ತ್ರಿವಿಕ್ರಮ್! ಪ್ರೋಮೋ ಹಾಕಿ Expose...

‘10 ವಾರ’ ಅಂತ ಹೇಳಿಲ್ಲ ಎಂದು ದೇವ್ರಾಣೆ, ತಾಯಾಣೆ ಇಟ್ಟ ತ್ರಿವಿಕ್ರಮ್! ಪ್ರೋಮೋ ಹಾಕಿ Expose ಮಾಡಿಬಿಟ್ಟ Bigg Boss!

Spread the love

‘10 ವಾರಅಂತ ಹೇಳಿಲ್ಲ ಎಂದು ದೇವ್ರಾಣೆ, ತಾಯಾಣೆ ಇಟ್ಟ ತ್ರಿವಿಕ್ರಮ್! ಪ್ರೋಮೋ ಹಾಕಿ Expose ಮಾಡಿಬಿಟ್ಟ Bigg Boss!

ಬಿಗ್ ಬಾಸ್ ಕನ್ನಡ 11 ವಾರ 5:’10 ವಾರದ ಮೇಲೆ ಅವರ ಅವಶ್ಯಕತೆ ಇಲ್ಲ ಅಣ್ಣ. 10 ವಾರ ಆದ್ಮೇಲೆ ಏನ್ಮಾಡ್ತೀಯಾ?’’ ಅಂತ ತ್ರಿವಿಕ್ರಮ್ ಹೇಳಿರೋದನ್ನ ಸ್ವತಃ ‘ಬಿಗ್ ಬಾಸ್’ ಪ್ರೋಮೋದಲ್ಲಿ ಎಕ್ಸ್‌ಪೋಸ್ ಮಾಡಿದ್ದಾರೆ. ಆದರೆ, ತ್ರಿವಿಕ್ರಮ್ ಮಾತ್ರ ತಾವು ಹಾಗೆ ಹೇಳೇ ಇಲ್ಲ ಎಂದು ವಾದಿಸಿದ್ದಾರೆ. ಸಾಲದಕ್ಕೆ ತಾಯಾಣೆ, ದೇವ್ರಾಣೆ ಇಟ್ಟಿದ್ದಾರೆ!

  • ತ್ರಿವಿಕ್ರಮ್ ವಿರುದ್ಧ ಸಿಡಿದ ಮೋಕ್ಷಿತಾ ಪೈ: ‘10 ವಾರ ಇರೋರು ಅಂತ ಹೇಳೋಕೆ ನೀವ್ಯಾರು?’
  • ತ್ರಿವಿಕ್ರಮ್ ಬಾಯಿಂದ ‘10 ವಾರ’ ಅಂತ ಬಂದಿರೋದನ್ನ ‘ಬಿಗ್ ಬಾಸ್’ ಪ್ರೋಮೋದಲ್ಲಿಯೇ ಹಾಕಿದ್ರು!
  • ಹೇಳೋದು ಹೇಳಿ.. ಆಮೇಲೆ ಹೇಳಿಲ್ಲ ಅಂತ ಸುಳ್ಳು ವಾದಿಸಿದ್ರಾ ತ್ರಿವಿಕ್ರಮ್?

‘10 ವಾರ’ ಅಂತ ಹೇಳಿಲ್ಲ ಎಂದು ದೇವ್ರಾಣೆ, ತಾಯಾಣೆ ಇಟ್ಟ ತ್ರಿವಿಕ್ರಮ್! ಪ್ರೋಮೋ ಹಾಕಿ Expose ಮಾಡಿಬಿಟ್ಟ Bigg Boss!

‘ಬಿಗ್ ಬಾಸ್ ಕನ್ನಡ 11’ ಕಾರ್ಯಕ್ರಮದಲ್ಲಿ ಮೋಕ್ಷಿತಾ ಪೈ ರೊಚ್ಚಿಗೆದ್ದಿದ್ದಾರೆ. ಅದ್ಯಾವ ಘಳಿಗೆಯಲ್ಲಿ ಮೋಕ್ಷಿತಾ ಪೈ ಬಾಟಂ 2 ಹಂತ ತಲುಪಿದ್ರೋ.. ತಮ್ಮ ಸಿಟ್ಟು, ಅಸಮಾಧಾನವನ್ನೆಲ್ಲಾ ಮೋಕ್ಷಿತಾ ಪೈ ಹೊರಹಾಕಿದ್ದಾರೆ. ಅದರಲ್ಲೂ ತ್ರಿವಿಕ್ರಮ್‌ ತಮಗೆ ‘10 ವಾರ ಇರೋರು’ ಅಂತ ಹೇಳಿದ್ದು ಗೊತ್ತಾದ್ಮೇಲೆ ಮೋಕ್ಷಿತಾ ಪೈ ಅಕ್ಷರಶಃ ಸಿಡಿದುಬಿಟ್ಟರು. ಮೋಕ್ಷಿತಾ ಪೈ ಕೂಗಾಡುತ್ತಿದ್ದಾಗ.. ‘ಕುಂಬಳಕಾಯಿ ಕಳ್ಳ ಅಂದ್ರೆ ಹೆಗಲು ಮುಟ್ಟಿಕೊಂಡು ನೋಡಿಕೊಂಡರು’ ಎಂಬ ಮಾತಿನಂತೆ ತ್ರಿವಿಕ್ರಮ್ ಮಧ್ಯೆ ಪ್ರವೇಶಿಸಿದ್ದು ಹೌದು. ಆನಂತರ ತಾವು ‘10 ವಾರ’ ಅಂತ ಹೇಳೇ ಇಲ್ಲ ಅಂತ ತ್ರಿವಿಕ್ರಮ್ ವಾದಿಸಿದರು. ಸಾಲದಕ್ಕೆ ತಾಯಾಣೆ, ದೇವ್ರಾಣೆ ಮಾಡಿದರು. ಇಂಟ್ರೆಸ್ಟಿಂಗ್ ವಿಷ್ಯ ಅಂದ್ರೆ… ತ್ರಿವಿಕ್ರಮ್‌ ‘10 ವಾರ’ ಅಂತ ಹೇಳಿರೋ ಮ್ಯಾಟರ್‌ನ ಪ್ರೋಮೋದಲ್ಲೇ ‘ಬಿಗ್ ಬಾಸ್’ ಹಾಕಿಬಿಟ್ಟಿದ್ದಾರೆ. ಹೀಗಾಗಿ, ತ್ರಿವಿಕ್ರಮ್ ಸುಳ್ಳು ಯಾಕೆ ಹೇಳ್ತಿದ್ದಾರೆ ಅನ್ನೋದು ವೀಕ್ಷಕರ ಪ್ರಶ್ನೆ

ಉಗ್ರಂ ಮಂಜು ಹೇಳಿರೋದೇನು?

‘’10 ವಾರ ಇರೋರ ಜೊತೆ ಇದ್ದುಕೊಂಡು ಏನಣ್ಣ ಮಾಡ್ತೀಯಾ? ಅವರು ಹೋಗಾದ್ಮೇಲೆ ನೀನೊಬ್ಬನೇ ಇದ್ದು ಏನು ಮಾಡ್ತೀಯಾ? ಬಂದು ಸೇರ್ಕೋ. ನಾನು ನಡೆಸ್ತೀನಿ. ಜೊತೆಯಲ್ಲಿರು’’ ಅಂತ ಉಗ್ರಂ ಮಂಜುಗೆ ತ್ರಿವಿಕ್ರಮ್ ಹೇಳಿದ್ರಂತೆ. ಈ ವಿಷಯವನ್ನ ಮೋಕ್ಷಿತಾ ಪೈ ಹಾಗೂ ಗೌತಮಿ ಜಾಧವ್‌ಗೆ ಉಗ್ರಂ ಮಂಜು ಹೇಳಿಬಿಟ್ಟರು. ಇದನ್ನ ಕೇಳಿ ಮೋಕ್ಷಿತಾ ಪೈ ಕನಲಿ ಕೆಂಡವಾದರು. ಗೌತಮಿ ಜಾಧವ್ ಹಾಗೂ ಮೋಕ್ಷಿತಾ ಪೈ ಜೊತೆ ಉಗ್ರಂ ಮಂಜು ಆತ್ಮೀಯವಾಗಿದ್ದಾರೆ. ಹೀಗಾಗಿ, ತ್ರಿವಿಕ್ರಮ್ ಹೇಳಿರೋದು ತಮಗೆ ಅಂತ ಮೋಕ್ಷಿತಾ ಪೈ ವಾದಿಸಿದ್ದಾರೆ.ಸುಳ್ಳು ಹೇಳಿದ್ರಾ ತ್ರಿವಿಕ್ರಮ್,'10 ವಾರ' ಅಂತ ಹೇಳಿಲ್ಲ ಎಂದು ದೇವ್ರಾಣೆ, ತಾಯಾಣೆ ಇಟ್ಟ  ತ್ರಿವಿಕ್ರಮ್! ಪ್ರೋಮೋ ಹಾಕಿ Expose ಮಾಡಿಬಿಟ್ಟ Bigg Boss! - bbk 11 week 5 did  trivikram lie ...

ಪ್ರೋಮೋದಲ್ಲಿ ಏನಿದೆ?

‘’10 ವಾರದ ಮೇಲೆ ಅವರ ಅವಶ್ಯಕತೆ ಇಲ್ಲ ಅಣ್ಣ. 10 ವಾರ ಆದ್ಮೇಲೆ ಏನ್ಮಾಡ್ತೀಯಾ?’’ ಎಂದು ಉಗ್ರಂ ಮಂಜುಗೆ ತ್ರಿವಿಕ್ರಮ್‌ ಹೇಳಿರುವ ಮಾತನ್ನ ಪ್ರೋಮೋದಲ್ಲಿ ಬಳಸಲಾಗಿದೆ.

ಹೇಳೇ ಇಲ್ಲ ಅಂತ ವಾದಿಸಿದ ತ್ರಿವಿಕ್ರಮ್!

ಎಲಿಮಿನೇಷನ್‌ನಿಂದ ಸೇಫ್ ಆಗಿ ಮೋಕ್ಷಿತಾ ಪೈ ವಾಪಸ್ ಬಂದ್ಮೇಲೆ ‘’ಯಾರ್ಯಾರು 10 ವಾರದವರು ಅಂತ ನಾನೂ ನೋಡೇಬಿಡ್ತೀನಿ’’ ಅಂತ ಕೂಗಾಡಿದರು. ಈ ವೇಳೆ, ‘’ಯಾರು ಹೇಳಿ’’ ಅಂತ ‘ಕುಂಬಳಕಾಯಿ ಕಳ್ಳ ಎಂದರೆ ಹೆಗಲು ಮುಟ್ಟುಕೊಂಡು ನೋಡಿಕೊಂಡರು’ ಎಂಬ ಮಾತಿನಂತೆ ತ್ರಿವಿಕ್ರಮ್‌ ಮಧ್ಯ ಪ್ರವೇಶಿಸಿದರು. ಈ ವೇಳೆ ಮೋಕ್ಷಿತಾ ಪೈ – ತ್ರಿವಿಕ್ರಮ್ ನಡುವೆ ನಡೆದ ಮಾತಿನ ಚಕಮಕಿ ಇಲ್ಲಿದೆ –

ಮೋಕ್ಷಿತಾ ಪೈ – 10 ವಾರ ಇರುವವರಿಗಾಗಿ ಫಿನಾಲೆ ತಲುಪುವವರನ್ನು ಮರೀಬೇಡಿ ಅಂತ ಯಾರಿಗೆ ಹೇಳಿದ್ರಿ?
ತ್ರಿವಿಕ್ರಮ್ – ಯಾರ ಹತ್ತಿರ ಹೇಳಿದೆ

ಮೋಕ್ಷಿತಾ ಪೈ – ನೀವು ಮಂಜಣ್ಣ ಹತ್ತಿರ ಹೇಳಿದ್ದೀರಾ.
ತ್ರಿವಿಕ್ರಮ್ – ಯಾವಾಗಣ್ಣ ಹೇಳಿದೆ?
ಉಗ್ರಂ ಮಂಜು – ಅವತ್ತು ರಾತ್ರಿ ಕೂತ್ಕೊಂಡಿರಬೇಕಾದರೆ, ‘ಯಾಕೆ ಕಾರ್ನರ್ ಆಗ್ತೀಯಾ? 10 ವಾರ ಇದ್ದು ಹೋಗುವವರ ಜೊತೆಗಿದ್ದು, ಅವರು ಹೋಗಾದ್ಮೇಲೆ…
ಮೋಕ್ಷಿತಾ ಪೈ – ನಾನು 10 ವಾರ ಇರ್ತೀನಿ ಅಂತ ಡಿಸೈಡ್ ಮಾಡೋಕೆ ನೀವು ಯಾರು?
ತ್ರಿವಿಕ್ರಮ್ – ಚಾನ್ಸೇ ಇಲ್ಲ ಮೋಕ್ಷಿತಾ.. ಅರ್ಥ ಮಾಡಿಕೊಂಡು ಮಾತಾಡಿ..
ಮೋಕ್ಷಿತಾ ಪೈ – ಮಂಜಣ್ಣ ಇರೋದು ನನ್ನ ಜೊತೆ, ಗೌತಮಿ ಜೊತೆ. ಅದ್ಹೆಂಗೆ ಹೇಳ್ತೀರಾ ನೀವು ನಾವು 10 ವಾರಕ್ಕೆ ಹೋಗ್ತೀವಿ, ನೀವು ಫಿನಾಲೆ ಕಂಟೆಸ್ಟೆಂಟ್ ಅಂತ?
ತ್ರಿವಿಕ್ರಮ್ – ನಿಮಗೆ ಕೋಪ ಬಂದಿದ್ದರೆ ನಿಮಗೆ ಬಿಟ್ಟಿದ್ದು.
ಮೋಕ್ಷಿತಾ ಪೈ – ನಿಮ್ಮ ಮೈಂಡ್‌ ಗೇಮ್‌ ನಾನೇ ನನ್ನ ಕಣ್ಣಾರೆ ನೋಡಿದ್ದೀನಿ ರಂಜಿತ್‌ ಇದ್ದಾಗ. ಕಣ್ಣಲ್ಲೇ ನೀವುಗಳು ಸನ್ನೆ ಮಾಡಿರೋದನ್ನ.
ತ್ರಿವಿಕ್ರಮ್ – ಅದರ ಬಗ್ಗೆ ಕ್ಲಾರಿಟಿ ಸಿಕ್ಕಿದೆ.

ಮೋಕ್ಷಿತಾ ಪೈ – ಮೈಂಡ್‌ ಗೇಮ್‌ ಆಡಿ ನಾಮಿನೇಟ್ ಮಾಡ್ತಿದ್ದೀರಾ.
ತ್ರಿವಿಕ್ರಮ್ – ಬಿಗ್ ಬಾಸ್ ನಂದಾ?
ಮೋಕ್ಷಿತಾ ಪೈ – ನೀವು ಗೋಮುಖ ವ್ಯಾಘ್ರ ತರಹ ಆಟಾಡ್ತಿದ್ದೀರಾ.
ತ್ರಿವಿಕ್ರಮ್ – ನೀವೇನು ತಿಳ್ಕೊಂಡಿದ್ದೀರಾ.. ಅದನ್ನ ಸುಳ್ಳು ಅಂತ ಪ್ರೂವ್ ಮಾಡ್ತೀನಿ.

 

 

 

 

 

 

Subscribe for Free and Support Us 

ನಿಮ್ಮ ಈ - ಮೇಲ್ ಬಳಸಿ 👇ಇದೀಗ ಉಚಿತವಾಗಿ 🆓 ಚಂದಾದಾರರಾಗಿ..!  ನಿಮಗೆ ನಮ್ಮ ಕಥೆಗಳು, ಹಾಡುಗಳು ಮತ್ತು ಮಾಹಿತಿ ಇಷ್ಟವಾದರೆ ನಿಮ್ಮ ಸಮೂಹಕ್ಕೆ ಶೇರ್ ಮಾಡುವುದನ್ನ ಮರೆಯದಿರಿ 
RELATED ARTICLES

LEAVE A REPLY

Please enter your comment!
Please enter your name here

- Advertisment -

Most Popular

Recent Comments

×