HomeLyricsThayi Sharade Loka Pujite song lyrics - ತಾಯೆ ಶಾರದೆ ಲೋಕ ಪೂಜಿತೆ

Thayi Sharade Loka Pujite song lyrics – ತಾಯೆ ಶಾರದೆ ಲೋಕ ಪೂಜಿತೆ

ತಾಯಿ ಶಾರದೆಗೆ ಭಕ್ತಿಯಿಂದ ಸಮರ್ಪಿಸಲಾದ ಈ ಸುಂದರ ಗೀತೆಯಲ್ಲಿ ಜ್ಞಾನ, ಶಾಂತಿ, ಸನ್ಮತಿ ಮತ್ತು ಉತ್ತಮ ಬದುಕಿಗಾಗಿ ದೇವಿಯ ಆಶೀರ್ವಾದವನ್ನು ಕೋರಲಾಗಿದೆ.

Thayi Sharade Loka Pujite song lyrics – ತಾಯೆ ಶಾರದೆ ಲೋಕ ಪೂಜಿತೆ

ತಾಯೆ ಶಾರದೆ ಲೋಕ ಪೂಜಿತೆ
ಜ್ಞಾನದಾತೆ ನಮೋಸ್ತುತೆ
ತಾಯೆ ಶಾರದೆ ಲೋಕ
ಪೂಜಿತೆ ಜ್ಞಾನದಾತೆ ನಮೋಸ್ತುತೆ
ಪ್ರೇಮದಿಂದಲಿ ಸಲಹು ಮಾ..ತೆ
ನೀಡು ಸನ್ಮತಿ ಸೌ…ಖ್ಯದಾತೆ
ಪ್ರೇಮದಿಂದಲಿ ಸಲಹು ಮಾತೆ
ನೀಡು ಸನ್ಮತಿ ಸೌ…ಖ್ಯದಾತೆ
ತಾಯೆ ಶಾರದೆ ಲೋಕ ಪೂಜಿತೆ
ಜ್ಞಾನದಾತೆ ನಮೋಸ್ತುತೆ

ಅಂಧಕಾರವ ಓಡಿಸು
ಜ್ಞಾನ ಜ್ಯೋತಿಯ ಬೆಳಗಿಸು..
 ಅಂಧಕಾರವ ಓಡಿಸು
ಜ್ಞಾನ ಜ್ಯೋತಿಯ ಬೆಳಗಿಸು
ಹೃದಯ ಮಂದಿರದಲ್ಲಿ ನೆಲೆಸು
ಚಿಂತೆಯಾ…ಅಳಿಸು
ಹೃದಯ ಮಂದಿರದಲ್ಲಿ ನೆಲೆಸು
ಚಿಂತೆಯಾ….ಅಳಿಸು
ಶಾಂತಿಯಾ ಉಳಿಸು…
ಶಾಂತಿಯಾ ಉಳಿಸು…
ತಾಯೆ ಶಾರದೆ ಲೋಕ ಪೂಜಿತೆ
ಜ್ಞಾನದಾತೆ ನಮೋಸ್ತುತೆ

ನಿನ್ನ ಮಡಿಲಿನ ಮಕ್ಕಳಮ್ಮ
ನಿನ್ನ ನಂಬಿದ ಕಂದರಮ್ಮ
ನಿನ್ನ ಮಡಿಲಿನ ಮಕ್ಕಳಮ್ಮ
ನಿನ್ನ ನಂಬಿದ ಕಂದರಮ್ಮ
ನಿನ್ನ ಕರುಣೆಯ ಬೆಳಕಲೆಮ್ಮ
ಬಾಳನೂ ಬೆಳಗ…ಮ್ಮ
ನಿನ್ನ ಕರುಣೆಯ
ಬೆಳಕಲೆಮ್ಮ ಬಾಳನೂ ಬೆಳಗ….ಮ್ಮ
 ನಮ್ಮ ಕೋರಿಕೆ ಆಲಿಸಮ್
ನಮ್ಮ ಕೋರಿಕೆ ಆಲಿಸಮ್ಮ…
ತಾಯೆ ಶಾರದೆ ಲೋಕ ಪೂಜಿತೆ
ಜ್ಞಾನದಾತೆ ನಮೋಸ್ತುತೆ

 ಒಳ್ಳೆ ಮಾತುಗಳಾಡಿಸು…
ಒಳ್ಳೆ ಕೆಲಸವ ಮಾ…ಡಿಸು….
ಒಳ್ಳೆ ಮಾತುಗಳಾಡಿಸು…
ಒಳ್ಳೆ ಕೆಲಸವ ಮಾ…ಡಿಸು..
ಒಳ್ಳೆ ದಾರಿಯಲೆಮ್ಮ ನಡೆಸು
ವಿದ್ಯೆಯಾ ಕಲಿಸು….
ಒಳ್ಳೆ ದಾರಿಯಲೆಮ್ಮ ನಡೆಸು
ವಿದ್ಯೆಯಾ ಕಲಿಸು….
ಆಸೆ ಪೂರೈಸೂ
ಆಸೆ ಪೂರೈಸೂ…
ತಾಯೆ ಶಾರದೆ ಲೋಕ ಪೂಜಿತೆ
ಜ್ಞಾನದಾತೆ ನಮೋಸ್ತುತೆ
ಪ್ರೇಮದಿಂದಲಿ ಸಲಹು ಮಾತೆ
ನೀಡು ಸನ್ಮತಿ ಸೌಖ್ಯದಾತೆ
ತಾಯೆ ಶಾರದೆ ಲೋಕ ಪೂಜಿತೆ
ಜ್ಞಾನದಾತೆ ನಮೋಸ್ತುತೆ
ಜ್ಞಾನದಾತೆ ನಮೋಸ್ತುತೆ

Subscribe for Free and Support Us 

ನಿಮ್ಮ ಈ - ಮೇಲ್ ಬಳಸಿ 👇ಇದೀಗ ಉಚಿತವಾಗಿ 🆓 ಚಂದಾದಾರರಾಗಿ..!  ನಿಮಗೆ ನಮ್ಮ ಕಥೆಗಳು, ಹಾಡುಗಳು ಮತ್ತು ಮಾಹಿತಿ ಇಷ್ಟವಾದರೆ ನಿಮ್ಮ ಸಮೂಹಕ್ಕೆ ಶೇರ್ ಮಾಡುವುದನ್ನ ಮರೆಯದಿರಿ 
RELATED ARTICLES

Leave a Reply

- Advertisment -

Most Popular

Recent Comments