Welcome to Kannada Folks   Click to listen highlighted text! Welcome to Kannada Folks
HomeNewsತಮಿಳುನಾಡು ರಾಜಕೀಯ: ವಿಜಯ್ ಪಕ್ಷದ ಮೊದಲ ಸಭೆಗೆ ಭಾರಿ ಜನಸ್ತೋಮ: ದಳಪತಿ 'ಶತ್ರು'ಗಳ ಹೆಸರು

ತಮಿಳುನಾಡು ರಾಜಕೀಯ: ವಿಜಯ್ ಪಕ್ಷದ ಮೊದಲ ಸಭೆಗೆ ಭಾರಿ ಜನಸ್ತೋಮ: ದಳಪತಿ ‘ಶತ್ರು’ಗಳ ಹೆಸರು

ತಮಿಳುನಾಡು ರಾಜಕೀಯ: ವಿಜಯ್ ಪಕ್ಷದ ಮೊದಲ ಸಭೆಗೆ ಭಾರಿ                           ಜನಸ್ತೋಮ: ದಳಪತಿ ‘ಶತ್ರು’ಗಳ

ವಿಜಯ್ ದಳಪತಿ ಟಿವಿಕೆ ಪಾರ್ಟಿ:ತಮಿಳಗ ವೆಟ್ರಿ ಕಳಗಂ ಪಕ್ಷದ ಮೂಲಕ ತಮಿಳುನಾಡು ರಾಜಕೀಯ ಅಖಾಡಕ್ಕೆ ಇಳಿದಿರುವ ನಟ ವಿಜಯ್ ದಳಪತಿ, ತಮ್ಮ ಮೊದಲ ರಾಜಕೀಯ ಸಭೆಯಲ್ಲಿಯೇ ರಾಜಕೀಯ ಎದುರಾಳಿಗಳಲ್ಲಿ ನಡುಕ ಹುಟ್ಟಿಸಿದ್ದಾರೆ. ವಿಲ್ಲುಪುರಂ ಜಿಲ್ಲೆಯ ವಿಕ್ರವಾಂಡಿಯಲ್ಲಿ ಆಯೋಜಿಸಲಾಗಿದ್ದ ಮೊದಲ ಸಭೆಯಲ್ಲಿ ಲಕ್ಷಾಂತರ ಮಂದಿ ಸೇರಿದ್ದರು. ಈ ವೇಳೆ ಅವರು ಆಡಳಿತಾರೂಢ ಡಿಎಂಕೆ ಹಾಗೂ ವಿರೋಧ ಪಕ್ಷಗಳ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ.

Ravana&;s Family Episode 4  Ravana had seven brothers and two sisters

  • ದಳಪತಿ ವಿಜಯ್‌ ತಮಿಳಗ ವೆಟ್ರಿ ಕಳಗಂ ಪಕ್ಷದ ಮೊದಲ ಸಮಾವೇಶ
  • ವಿಲ್ಲುಪುರಂ ಜಿಲ್ಲೆಯ ವಿಕ್ರವಾಂಡಿಯಲ್ಲಿ ಲಕ್ಷಕ್ಕೂ ಅಧಿಕ ಮಂದಿ ಭಾಗಿ
    • ಚೆನ್ನೈ: ರಾಜಕೀಯ ಪ್ರವೇಶಕ್ಕಾಗಿ ಹೊಸ ಪಕ್ಷ ಘೋಷಿಸಿರುವ ತಮಿಳುನಾಡು ಚಿತ್ರರಂಗದ ಜನಪ್ರಿಯ ನಟ ದಳಪತಿ ವಿಜಯ್‌ ಅವರಿಗೆ ಭಾರಿ ಬೆಂಬಲ ವ್ಯಕ್ತವಾಗಿದೆ. ಮುಂಬರುವ ತಮಿಳುನಾಡು ವಿಧಾನಸಭೆ ಚುನಾವಣೆ ಮೇಲೆ ಕಣ್ಣಿಟ್ಟಿರುವ ಅವರು ಭಾನುವಾರ ತಮ್ಮ ‘ತಮಿಳಗ ವೆಟ್ರಿ ಕಳಗಂ'(ಟಿವಿಕೆ) ಪಕ್ಷದ ಮೊದಲ ರಾಜ್ಯಮಟ್ಟದ ಸಮಾವೇಶ ಭಾನುವಾರ ನಡೆಸಿದರು. ವಿಲ್ಲುಪುರಂ ಜಿಲ್ಲೆಯ ವಿಕ್ರವಾಂಡಿಯಲ್ಲಿ ಆಯೋಜಿಸಲಾಗಿದ್ದ ಸಮಾವೇಶದಲ್ಲಿ ಲಕ್ಷಕ್ಕೂ ಹೆಚ್ಚು ಮಂದಿ ವಿಜಯ್‌ ಬೆಂಬಲಿಗರು, ಟಿವಿಕೆ ಕಾರ್ಯಕರ್ತರು ಭಾಗಿಯಾಗಿದ್ದು ವಿಶೇಷ.Actor Vijay's Tamilaga Vettri Kazhagam Rally LIVE Updates: 'Those spoiling  the country with divisive politics are TVK's primary ideological enemy,'  says Tamil superstar in first political speech | India News - The

      100 ಅಡಿ ಎತ್ತರದ ಧ್ವಜಸ್ತಂಭದಲ್ಲಿ ಪಕ್ಷದ ಧ್ಬಜಾರೋಹಣ ನಡೆಸಿ ಮಾತನಾಡಿದ ವಿಜಯ್‌,” ಜನ ವಿರೋಧಿ ಸರಕಾರವನ್ನು ‘ದ್ರಾವಿಡ’ ಎಂಬ ಮಾದರಿಯ ಮುಖವಾಡದ ಅಡಿಯಲ್ಲಿ ತಮಿಳುನಾಡಿನಲ್ಲಿ ನಡೆಸಲಾಗುತ್ತಿದೆ. ಟಿವಿಕೆಯಿಂದ ರಾಜ್ಯ ರಾಜಕೀಯ ಮತ್ತು ಜನ ಕಲ್ಯಾಣಕ್ಕೆ ಹೊಸ ದಿಕ್ಕುತೋರಲಾಗುವುದು. ನಾವು ಇಲ್ಲಿ ಯಾರ ಹೆಸರನ್ನು ಕೂಡ ಹೇಳಿ ವಾಗ್ದಾಳಿ ನಡೆಸಲ್ಲ. ಜನರಿಗಾಗಿ ಕೆಲಸ ಮಾಡುವುದು ಒಂದೇ ನಮ್ಮ ಗುರಿ,” ಎಂದು ಪರೋಕ್ಷವಾಗಿ ಡಿಎಂಕೆ ಸರಕಾರ ಹಾಗೂ ಪ್ರತಿಪಕ್ಷಗಳ ವಿರುದ್ಧ ಹರಿಹಾಯ್ದರು.

      ತಮ್ಮ ವೈರಿಗಳನ್ನು ಹೆಸರಿಸಿದ ದಳಪತಿ

      ಬಿಜೆಪಿ ವಿರುದ್ಧ ಪರೋಕ್ಷವಾಗಿ ಕಿಡಿಕಾರಿದ ಅವರು, “ದ್ವೇಷ ರಾಜಕಾರಣ ನಮ್ಮ ವೈರಿ. ವಿಭಜನಾ ರಾಜಕಾರಣ ಮತ್ತು ದ್ವೇಷ ನಮ್ಮ ಶತ್ರು. ನಾನು ರಾಜಕೀಯ ಪಾವಿತ್ರ್ಯ ಹಾಗೂ ರಾಜಕೀಯ ಸಭ್ಯತೆಯನ್ನು ಕಾಪಾಡಿಕೊಳ್ಳುತ್ತೇನೆ. ಈ ಜನಸಮೂಹ ಹಣಕ್ಕಾಗಿ ಬಂದಿರುವುದಲ್ಲ, ಆದರೆ ಒಳಿತಿನ ಕಾರಣಕ್ಕಾಗಿ.. ಇನ್ನು ಹಿಂದೆ ತಿರುಗಿ ನೋಡುವ ಪ್ರಶ್ನೆಯೇ ಇಲ್ಲ” ಎಂದು ಗುಡುಗಿದರು.ದ್ರಾವಿಡ ಮಾದರಿ ಮುಖವಾಡದ ಅಡಿಯಲ್ಲಿ ಜನವಿರೋಧಿ ಸರಕಾರ

    • Italy PM Giorgia Meloni Wishes PM Modi On His 74th Birthday
    • “ಸಮಾಜದ ಒಳಗೆ ವಿಭಜನೆ ಉಂಟುಮಾಡುವ ಗುಂಪು ಇದೆ. ಈ ವಿಭಜನೆ ಸೃಷ್ಟಿಸುವವರು ನಮ್ಮ ಮೊದಲ ಶತ್ರುಗಳು. ದ್ರಾವಿಡ ಸಿದ್ಧಾಂತ ಎತ್ತಿಹಿಡಿಯುವುದಾಗಿ ಪ್ರತಿಪಾದಿಸುತ್ತಿರುವವರು ವಾಸ್ತವವಾಗಿ ತಮಿಳುನಾಡನ್ನು ಕುಟುಂಬದ ಉದ್ಯಮದಂತೆ ಶೋಷಣೆ ಮಾಡುತ್ತಿರುವವರು ನಮ್ಮ ಎರಡನೇ ವೈರಿಗಳು. ಬಿಜೆಪಿ ನಮ್ಮ ರಾಜಕೀಯ ಸೈದ್ಧಾಂತಿಕ ಎದುರಾಳಿ, ಡಿಎಂಕೆ ನಮ್ಮ ರಾಜಕೀಯ ಎದುರಾಳಿ” ಎಂದು

“ನಾನು ಇಲ್ಲಿ ಹೆಚ್ಚುವರಿ ಲಗೇಜ್ ಆಗಿ ಬಂದಿಲ್ಲ. ನಾನು ತಮಿಳುನಾಡಿನ ಪ್ರಮುಖ ಶಕ್ತಿಯಾಗಲು ಬಯಸಿದ್ದೇನೆ. ರಾಜಕೀಯ ಏಕೆ ಎಂದು ಆರಂಭದಲ್ಲಿ ಆಲೋಚಿಸಿದ್ದೆ. ಆದರೆ ನನ್ನ ಸ್ವಂತದ ಬಗ್ಗೆ ಆಲೋಚಿಸುವುದು ಸ್ವಾರ್ಥ ಅಲ್ಲವೇ?” ಎಂದರು.

ಟಿವಿಕೆ ಸಂಕಲ್ಪಗಳು

  • ರಾಜ್ಯಪಾಲರ ಹುದ್ದೆ ರದ್ದತಿಗೆ ಬೆಂಬಲ
  • ದ್ವಿಭಾಷಾ ನೀತಿಯ ಪರ ನಿಲುವು
  • ಶಿಕ್ಷಣವನ್ನು ರಾಜ್ಯಗಳ ವ್ಯಾಪ್ತಿಗೆ ತರಲು ಒತ್ತಡ
  • ಶೇ. 33ರಷ್ಟು ಟಿಕೆಟ್‌ಗಳು ಮಹಿಳೆಯರಿಗೆ
  • ಕಾಮರಾಜರ್‌ ಮಾಡೆಲ್‌ ಶಾಲೆಗಳ ಸ್ಥಾಪನೆ
  • ಐಟಿ ಉತ್ತೇಜನಕ್ಕಾಗಿ ರಾಜ್ಯದಲ್ಲಿ ಪ್ರತ್ಯೇಕ ಐಟಿ ವಿಶ್ವವಿದ್ಯಾಲಯ ಸ್ಥಾಪನೆ
  • ಮರಳು ಮಾಫಿಯಾ ಹತ್ತಿಕ್ಕಲು ವಿಶೇಷ ಕಾನೂನು

2026ರ ತಮಿಳುನಾಡು ವಿಧಾನಸಭೆ ಚುನಾವಣೆಯಲ್ಲಿ ನಮ್ಮ ಪಕ್ಷ ಎಲ್ಲ 234 ಸೀಟುಗಳಲ್ಲಿ ಸ್ಪರ್ಧಿಸಲಿದೆ ಎಂದು ಘೋಷಣೆ ಮಾಡಿದ ಅವರು, ತಾವು ಅಧಿಕಾರ ಹಂಚಿಕೆಯ ವಿರೋಧಿ ಅಲ್ಲ ಎಂಬುದನ್ನೂ ಸ್ಪಷ್ಟಪಡಿಸಿದರು.

RELATED ARTICLES

LEAVE A REPLY

Please enter your comment!
Please enter your name here

- Advertisment -

Most Popular

Recent Comments

×
Click to listen highlighted text!