Welcome to Kannada Folks   Click to listen highlighted text! Welcome to Kannada Folks
HomeNewsCultureStory of Ayyappa Swamy - In Search of Tiger - Chapter 3

Story of Ayyappa Swamy – In Search of Tiger – Chapter 3

Spread the love

ಮಣಿಕಂಠನು ಹುಲಿಯ ಹಾಲು ತರುವ ಸಲುವಾಗಿ ಹೊರಡಲು ಸಿದ್ಧನಾದ.

ಮಣಿಕಂಠನು ಹುಲಿಯ ಹಾಲು ತರುವ ಸಲುವಾಗಿ ಹೊರಡಲು ಸಿದ್ಧನಾದರೂ ಆತನ ಕಿರುಹರಯವನ್ನು ಮತ್ತು ಮುಂದೆ ನಡೆಯಲಿರುವ ಆತನ ಕಿರೀಟಧಾರಣೆಯನ್ನು ಎತ್ತಿ ತೋರಿಸಿದ ರಾಜಶೇಖರನು ಅವನಿಗೆ ಒಪ್ಪಿಗೆ ನೀಡಲಿಲ್ಲ. ಕುಟುಂಬಕ್ಕಾಗಿ ಒಂದು ಉಪಕಾರವನ್ನು ಮಾಡಲು ತನಗೆ ಒಪ್ಪಿಗೆಯನ್ನು ನೀಡಬೇಕೆಂದು ಮಣಿಕಂಠನು ತಂದೆಯನ್ನು ಒತ್ತಾಯಿಸಿದನು.

Read Story here – Story of Ayyappa Swamy; ಅಯ್ಯಪ್ಪ ಸ್ವಾಮಿಯ ಕಥೆ; Chapter 1

Ayyappan : The Celibate God - Mythlok

ಜವಾಬ್ದಾರಿಯುತನಾದ ತಂದೆ ಎಂಬ ನೆಲೆಯಲ್ಲಿ ಮಗನ ಅಪೇಕ್ಷೆಯನ್ನು ಕಡೆಗಣಿಸಿದರೂ ಸನ್ನಿವೇಶದ ಒತ್ತಡದಿಂದಾಗಿ ಹುಲಿಯ ಹಾಲು ತರುವ ಸಲುವಾಗಿ ಕಾಡಿಗೆ ತೆರಳಲು ಮಗನಿಗೆ ಒಪ್ಪಿಗೆ ನೀಡಬೇಕಾಗಿ ಬಂತು. ಮಣಿಕಂಠನ ನೆರವಿಗಾಗಿ ಸಾಹಸಿಗಳಾದ ಭಟರ ಒಂದು ತಂಡವನ್ನು ಅವನೊಂದಿಗೆ ಕಾಡಿಗೆ ಕಳಿಸಲು ಅರಸನು ತೀರ್ಮಾನಿಸಿದನು. ಆದರೆ ಜನರ ಗುಂಪುಗಳನ್ನು ಕಂಡೊಡನೆ ಹುಲಿಯು ಓಡಿ ಹೋಗುವುದೆಂಬ ಕಾರಣದಿಂದ ಮಣಿಕಂಠನು ತಂದೆಯ ತೀರ್ಮಾನವನ್ನು ಒಪ್ಪಲಿಲ್ಲ. ಕೊನೆಗೆ ವಾತ್ಸಲ್ಯಮಯಿಯಾದ ತಂದೆಯು ಆಹಾರ ಸಾಮಗ್ರಿಗಳನ್ನೂ ಶಿವಭಕ್ತಿಯ ಸೂಚಕವಾದ ಹಾಗೂ ಮೂರು ಕಣ್ಣುಗಳಿರುವ ತೆಂಗಿನಕಾಯಿಯನ್ನೂ ಇತ್ತು ಮಗನನ್ನು ಕಳಿಸಿಕೊಟ್ಟನು.

Story of Ayyappa Swamy – ಅಯ್ಯಪ್ಪ ಸ್ವಾಮಿಯ ಕಥೆ – Chapter 2; ಪಂದಳ ರಾಜನ ಸಂರಕ್ಷಣೆಯಲ್ಲಿ

ಮಣಿಕಂಠನು ಅರಣ್ಯವನ್ನು ಪ್ರವೇಶಿಸಿದಾಗ ಭಗವಾನ್ ಶಿವನ ಪಂಚಭೂತಗಣಗಳೂ ಒಟ್ಟಿಗೆ ಸೇರಿಕೊಂಡವು. ಪಯಣದ ನಡುವೆ ದೇವಲೋಕದಲ್ಲಿ ಮಹಿಷಿಯು ನಡೆಸುತ್ತಿರುವ ಅನ್ಯಾಯಗಳೆಲ್ಲ ಮಣಿಕಂಠನ ಗಮನಕ್ಕೆ ಬಂದುವು. ಅವನಲ್ಲಿರುವ ನ್ಯಾಯದ ಪ್ರಜ್ಞೆ ಜಾಗೃತವಾಯಿತು. ಅವನು ಮಹಿಷಿಯನ್ನು ಹಿಡಿದೆಳೆದು ಭೂಲೋಕಕ್ಕೆ ಎಸೆದನು. ಅವಳು ಅಯುತಾ ನದಿಯ ದಂಡೆಗೆ ಬಂದು ಬಿದ್ದಳು.

ಇಬ್ಬರ ನಡುವೆ ಘೋರವಾದ ಯುದ್ಧ ನಡೆಯಿತು. ಕೊನೆಗೆ ಮಣಿಕಂಠನು ಮಹಿಷಿಯ ಎದೆಯನ್ನೇರಿ ತಾಂಡವ ನೃತ್ಯಗೈದನು. ಅದರ ಪ್ರತಿಧ್ವನಿ ಭೂಮಿಯಲ್ಲೂ ಸ್ವರ್ಗದಲ್ಲೂ ವ್ಯಾಪಿಸಿತು. ದೇವತೆಗಳೂ ಭಯ ಚಕಿತರಾದರು. ತನ್ನ ಮೇಲೆ ನೃತ್ಯ ಮಾಡುವುದು ಹರಿಹರಸುತನಾದ ಪುಣ್ಯ ಪುರುಷನೆಂಬುದನ್ನು ಮಹಿಷಿ ಅರಿತುಕೊಂಡಳು. ಆ ಚಿಕ್ಕ ಬಾಲಕನಿಗೆ ನಮಸ್ಕರಿಸಿ ಮರಣಕ್ಕೆ ಶರಣಾದಳು.

ಭಗವಾನ್ ಶಿವನೂ ಮಹಾವಿಷ್ಣುವೂ ಕಾಳಕೆಟ್ಟಿಯ ಶಿಖರದಿಂದ ಮಣಿಕಂಠನ ನೃತ್ಯವನ್ನು ಕಂಡಿದ್ದರು. (ಕವಲನ್ ಎಂಬ ಕರಂಬನ ಮಗಳಾದ ಲೀಲ ಎಂಬಾಕೆ ಮಹಿಷಿಯಾಗಿ ಹುಟ್ಟಿಬಂದಿದ್ದಳು. ಶ್ರೀ ಧರ್ಮಶಾಸ್ತಾವಿನ ಅನುಗ್ರಹದಿಂದ ಅವಳು ಶಾಪದಿಂದ ಮೋಕ್ಷ ಪಡೆದು ಮಾಣಿಕಪ್ಪುರತ್ತಮ್ಮೆಯಾದಳೆಂದು ಐತಿಹ್ಯವಿದೆ. ಆ ಹೆಸರಿನಲ್ಲಿ ಅವಳಿಗೆ ಒಂದು ದೇವಾಲಯವನ್ನೂ ನಿರ್ಮಿಸಲಾಗಿದೆ.)

Read Here – Ayyappa Sharanu Gosha- ಅಯ್ಯಪ್ಪ ಶರಣು ಘೋಷ; Swamiye Sharanam Iyyappa

ಮಹಿಷಿಯ ನಿಗ್ರಹದ ಬಳಿಕ ಮಣಿಕಂಠನು ಹುಲಿಯ ಹಾಲನ್ನು ಸಂಗ್ರಹಿಸುವ ಸಲುವಾಗಿ ಅರಣ್ಯವನ್ನು ಪ್ರವೇಶಿಸಿದನು. ಅಲ್ಲಿ ಭಗವಾನ್ ಶಿವನು ಅವನಿಗೆ ದರ್ಶನ ನೀಡಿದನು. ಆತನು ಮಣಿಕಂಠನ ಪ್ರಧಾನವಾದ ಒಂದು ಜವಾಬ್ದಾರಿ ಪೂರ್ತಿಗೊಂಡದ್ದಾಗಿ ಹೇಳಿದನು. ಇನ್ನೊಂದು ಕರ್ತವ್ಯ ಬಾಕಿ ಇದೆ ಎಂದೂ ತಿಳಿಸಿದನು. ಮಣಿಕಂಠನ ವ್ಯಾಕುಲಗೊಂಡ ತಂದೆಯ ಕುರಿತೂ ರೋಗಪೀಡಿತಳಾದ ತಾಯಿಯ ಕುರಿತೂ ನೆನಪಿಸಿದನು. ಅಮೂಲ್ಯವಾದ ಹುಲಿಯ ಹಾಲನ್ನು ಸಂಗ್ರಹಿಸಲು ದೇವೇಂದ್ರನ ಸಹಾಯವನ್ನು ಕೋರುವುದಾಗಿಯೂ ಮಾತು ಕೊಟ್ಟನು.Ayyappan - The Son of Shiva and Vishnu - Amar Chitra Katha

ದೇವೇಂದ್ರನು ಹುಲಿಯ ರೂಪ ತಾಳಿ ಮಣಿಕಂಠನೊಡನೆ ಅರಮನೆಯತ್ತ ಹೊರಟನು. ಉಳಿದ ದೇವತೆಗಳು ಗಂಡು ಹುಲಿಗಳಾಗಿ ದೇವಿಯರು ಹೆಣ್ಣು ಹುಲಿಗಳಾಗಿ ಅವರನ್ನು ಹಿಂಬಾಲಿಸಿದರು. ಮರಿಹುಲಿಯೂ ಇತರ ದೊಡ್ಡ ಹುಲಿಗಳ ತಂಡವೂ ಬರುತ್ತಿರುವುದನ್ನು ಕಂಡು ಹೆದರಿದ ಪಂದಳದ ಜನರು ಓಡಿ ಹೋಗಿ ಮನೆಗಳಲ್ಲಿ ಅವಿತರು. ಆಶ್ಚರ್ಯಚಕಿತನಾದ ರಾಜನ ಮುಂದೆ ಹಿಂದೆ ಕಾಡಿನಲ್ಲಿ ಭೇಟಿಯಾಗಿದ್ದ ಸನ್ಯಾಸಿಯು ಫಕ್ಕನೆ ಪ್ರತ್ಯಕ್ಷನಾಗಿ ಮಣಿಕಂಠನ ದೈವತ್ವದ ರಹಸ್ಯವನ್ನು ಸ್ಪಷ್ಟಪಡಿಸಿದನು.

ಮಣಿಕಂಠನು ಹುಲಿಗಳೊಂದಿಗೆ ಅರಮನೆಯ ಪ್ರವೇಶ ದ್ವಾರಕ್ಕೆ ಹತ್ತಿರವಾಗಲು ರಾಜನಲ್ಲಿ ಮೌನ ಹಾಗೂ ವಿಷಾದಭಾವ ತುಂಬಿತು. ಹುಲಿಂು ಬೆನ್ನಿನ ಮೇಲಿಂದ ಕೆಳಗಿಳಿದ ಬಾಲಕನು ಚಕ್ರವರ್ತಿಯೊಂದಿಗೆ ಹೇಳಿದನು ‘‘ಮರಿ ಹಾಕಿದ ಹುಲಿಯನ್ನು ತಂದಿದ್ದೇನೆ. ಇನ್ನು ಆದಷ್ಟು ಬೇಗನೆ ಹಾಲು ಸಂಗ್ರಹಿಸಿ ತಾಯಿಯ ಅದ್ಭುತ ರೋಗವನ್ನು ದೂರೀಕರಿಸುವ’’. ರಾಜನು ಹೆಚ್ಚು ಹೊತ್ತು ತಡೆಯಲಾರದೆ ಬಾಲಕನ ಪಾದಗಳಿಗೆ ಬಿದ್ದು ಕ್ಷಮೆ ಯಾಚಿಸಿದನು. ಕೊನೆಗೆ, ರಾಣಿಯ ಕಪಟ ನಾಟಕದ ರಹಸ್ಯ ಬಯಲಾದ ಆ ನಿಮಿಷದಲ್ಲಿ ಮಣಿಕಂಠನು ಅರಣ್ಯದತ್ತ ತೆರಳಿದನು. ಕಾಡಿನಿಂದ ಹಿಂತಿರುಗಿ ಬರುವಾಗ ಅವನಿಗೆ ಹನ್ನೆರಡು ವರ್ಷ ಪ್ರಾಯವಾಗಿತ್ತು.

Read here – Ayyappa Mala; ಅಯ್ಯಪ್ಪ ಸ್ವಾಮಿ ಮಾಲೆ ಧರಿಸುವುದು ಹೇಗೆ- Complete details

ತನ್ನ ಮಗನು ನಾಡನ್ನು ಬಿಟ್ಟು ಕಾಡಿಗೆ ತೆರಳಲು ಕಾರಣನಾದ ದಿವಾನನನ್ನು ದಂಡಿಸಬೇಕೆಂದು ಅರಸನು ತೀರ್ಮಾನಿಸಿದನು. ಆದರೆ, ಎಲ್ಲವೂ ದೈವೇಚ್ಛೆಯಂತೆ ನಡೆಯುವುದೆಂದೂ ಸಂಯಮವನ್ನು ಪಾಲಿಸಬೇಕೆಂದೂ ಮಣಿಕಂಠನು ಸಲಹೆ ನೀಡಿದನು. ತನ್ನ ಅವತಾರದ ಉದ್ದೇಶವನ್ನು ಪೂರ್ತಿಗೊಳಿಸಿದ್ದರಿಂದ ತಾನು ದೇವಲೋಕಕ್ಕೆ ಹಿಂತಿರುಗುವುದಾಗಿಯೂ ತಂದೆಗೆ ಸೂಚಿಸಿದನು. ತನ್ನಲ್ಲಿ ತೋರಿದ ಭಕ್ತಿ ವಿಶ್ವಾಸಗಳ ಬಗ್ಗೆ ತಾನು ಸಂತುಷ್ಟನೆಂದೂ ಅದಕ್ಕಿರುವ ಪ್ರತಿಫಲ ಎಂಬ ನೆಲೆಯಲ್ಲಿ ರಾಜನಿಗೆ ಆತನು ಬಯಸಿದ ಒಂದು ವರವನ್ನು ಈಯಲು ಸಿದ್ಧನಾಗಿರುವುದಾಗಿಯೂ ತಿಳಿಸಿದನು.

ಮಣಿಕಂಠನ ಸ್ಮರಣೆಗಾಗಿ ಒಂದು ದೇವಾಲಯವನ್ನು ನಿರ್ಮಿಸಬೇಕೆಂಬ ಅಭಿಲಾಷೆ ಇದೆಯೆಂದೂ ಅದಕ್ಕೆತಕ್ಕುದಾದ ಜಾಗವನ್ನು ತೋರಿಸಿಕೊಡಬೇಕೆಂದೂ ಆ ಕ್ಷಣದಲ್ಲಿ ರಾಜಶೇಖರನು ತನ್ನ ಅಪೇಕ್ಷೆಯನ್ನು ಮುಂದಿಟ್ಟನು.

ಮುಂದುವರೆಯುವುದು .........

Subscribe for Free and Support Us 

ನಿಮ್ಮ ಈ - ಮೇಲ್ ಬಳಸಿ 👇ಇದೀಗ ಉಚಿತವಾಗಿ 🆓 ಚಂದಾದಾರರಾಗಿ..!  ನಿಮಗೆ ನಮ್ಮ ಕಥೆಗಳು, ಹಾಡುಗಳು ಮತ್ತು ಮಾಹಿತಿ ಇಷ್ಟವಾದರೆ ನಿಮ್ಮ ಸಮೂಹಕ್ಕೆ ಶೇರ್ ಮಾಡುವುದನ್ನ ಮರೆಯದಿರಿ 
kannadafolks
kannadafolkshttps://kannadafolks.in/
ಜನಪದ ಜಾತಿ, ಮತ, ಧರ್ಮ ಮೀರಿದ್ದು. ಅದು ಮಾತು, ಹಾಡು ಮೂಲಕ ಒಬ್ಬರಿಂದ ಮತ್ತೊಬ್ಬರಿಗೆ ಪಸರಿಸಿದ ಸಂಸ್ಕೃತಿ. ನಾವಿಂದು ಆಕಾಶದಿಂದ, ಸಾಗರದ ತಳದವರೆಗೆ ಹೋಗಿ ಅನ್ವೇಷನೆ ಯಾಗಿದೆ.
RELATED ARTICLES

LEAVE A REPLY

Please enter your comment!
Please enter your name here

- Advertisment -

Most Popular

Recent Comments

×
Click to listen highlighted text!