ಭಗವಾನ್ ಶಿವ ಮತ್ತು ಪೌರಾಣಿಕ ಮೋಹಿನಿಯ ನಡುವಿನ ಒಕ್ಕೂಟದಿಂದ ಅವರು ಜನಿಸಿದನೆಂದು ನಂಬಲಾಗಿದೆ, ಇದನ್ನು ಭಗವಾನ್ ವಿಷ್ಣುವಿನ ಅವತಾರವೆಂದು ಪರಿಗಣಿಸಲಾಗಿದೆ. ಆದ್ದರಿಂದ, ಅಯ್ಯಪ್ಪನನ್ನು ‘ಹರಿಹರನ್ ಪುತಿರನ್’ ಎಂದೂ ಕರೆಯಲಾಗುತ್ತದೆ, ಅಂದರೆ ಹರಿ ಅಥವಾ ವಿಷ್ಣು ಮತ್ತು ‘ಹರನ್’ ಅಥವಾ ಶಿವ ಇಬ್ಬರ ಮಗ.
Read Here – Shree Vishnu Dashavatara; Krishna 8th Avatar of Vishnu; ಕೃಷ್ಣನ ಕಥೆ
ಅಯ್ಯಪ್ಪ ಸ್ವಾಮಿಯ ರಾಜವಂಶ – 1
ಮಧುರೈ, ತಿರುನೆಲ್ವೇಲಿ ಮತ್ತು ರಾಮನಾಥಪುರವನ್ನು ವ್ಯಾಪಿಸಿಕೊಂಡಿದ್ದ ಪಾಂಡ್ಯ ಸಾಮ್ರಾಜ್ಯದ ಆಡಳಿತಗಾರ ತಿರುಮಲ ನಾಯ್ಕರಿಂದ ಉಚ್ಚಾಟನೆಗೊಂಡ ಪಾಂಡ್ಯ ರಾಜವಂಶದ ಸದಸ್ಯರು ವಳ್ಳಿಯೂರ್ ತೆಂಕಾಶಿ, ಚೆಂಗೋಟ್ಟ, ಅಚ್ಚಂ ಕೋವಿಲ್ ಮುಂತಾದೆಡೆಗಳಲ್ಲಿ ವಾಸಿಸುತ್ತಿದ್ದರು. ಅವರು ತಮ್ಮ ಪ್ರಾಬಲ್ಯವನ್ನು ತಿರುವಾಂಕೂರಿನ ಕೆಲವು ಭಾಗಗಳಲ್ಲಿಯೂ ಸ್ಥಾಪಿಸಿದ್ದರು.
ಅವರಲ್ಲಿ ಶಿವಗಿರಿಯ ಚೆಂಬಳನಾಟ್ಟು ಕೋವಿಲ್ನಲ್ಲಿದ್ದ ಕೆಲವರಿಗೆ ತಿರುವಾಂಕೂರಿನ ರಾಜನು ಪಂದಳ ರಾಜ್ಯವನ್ನು ಆಳುವ ಅವಕಾಶವನ್ನು ನೀಡಿದ್ದನು. 800 ವರ್ಷಗಳ ಹಿಂದೆ ಈ ರಾಜವಂಶದಲ್ಲಿ, ಅಯ್ಯಪ್ಪ ಸ್ವಾಮಿಯ ಸಾಕುತಂದೆ ಎನಿಸಿದ ರಾಜಶೇಖರನ್ ಎಂಬ ಅರಸು ರಾಜ್ಯವಾಳಿಕೊಂಡಿದ್ದನು. ನೀತಿವಂತನೂ ಧರ್ಮನಿಷ್ಠನೂ ಆದ ಅರಸನ ಆಡಳಿತ ಕಾಲದಲ್ಲಿ ಪ್ರಜಾ ಜನರು ಸಂತುಷ್ಟರಾಗಿದ್ದರು. ಆ ಕಾಲವು ರಾಜ್ಯದ ಸುವರ್ಣ ಕಾಲಘಟ್ಟವೆನಿಸಿತ್ತು. ರಾಜ್ಯವು ಸುಭಿಕ್ಷೆಯಿಂದ ಕೂಡಿದ್ದರೂ ಒಂದು ದುಃಖ ಮಾತ್ರ ರಾಜನನ್ನು ಸದಾ ಕಾಡುತ್ತಿತ್ತು. ಆ ರಾಜನಿಗೆ ಸಂತಾನ ಸೌಭಾಗ್ಯ ಪ್ರಾಪ್ತವಾಗಿರಲಿಲ್ಲ.
Read this also – The Story of Great Ravana -ರಾವಣನ ಹೇಳಲಾಗದ ಕಥೆ
ರಾಜ್ಯಾಧಿಕಾರವನ್ನು ಮುಂದೆ ವಹಿಸಿಕೊಳ್ಳಲು ಉತ್ತರಾಧಿಕಾರಿ ಇಲ್ಲವೆಂದು ರಾಜನೂ ರಾಣಿಯೂ ನಿಸ್ಸಹಾಯಕರಾಗಿ ಭಗವಾನ್ ಶಿವನಲ್ಲಿ ಮಗುವನ್ನು ಕರುಣಿಸಬೇಕೆಂದು ನಿರಂತರವಾಗಿ ಪ್ರಾರ್ಥಿಸುತ್ತಿದ್ದರು.
ಮಹಿಷಾಸುರನೆಂಬ ಅಸುರರಾಜನು ಕಠಿಣ ತಪಸ್ಸಿನಿಂದ ಬ್ರಹ್ಮನನ್ನು ಮೆಚ್ಚಿಸಿ ಭೂಮಿಯಲ್ಲಿ ಯಾರಿಗೂ ತನ್ನನ್ನು ವಧಿಸಲು ಸಾಧ್ಯವಾಗಬಾರದು ಎಂಬ ವರವನ್ನು ಪಡೆದನು. ಬ್ರಹ್ಮನ ವರಬಲದಿಂದ ದುರಹಂಕಾರಿಯಾದ ಮಹಿಷಾಸುರನು ಜನರ ತಂಡ ತಂಡಗಳನ್ನೇ ಕೊಲ್ಲುತ್ತಾ, ಪಟ್ಟಣಗಳನ್ನೂ ಜನವಾಸ ಕೇಂದ್ರಗಳನ್ನೂ ನಾಶ ಮಾಡಿದನು. ಭಯಭೀತರಾದ ಜನರು ಪರರಾಜ್ಯಗಳಿಗೆ ಪಲಾಯನಗೈದರು. ಅಮಾನುಷಿಕ ಶಕ್ತಿವಂತರಿಗೆ ಮಾತ್ರವೇ ಮಹಿಷಾಸುರನನ್ನು ನಿರ್ನಾಮಗೊಳಿಸಲು ಸಾಧ್ಯ ಎಂಬುದನ್ನು ತಿಳಿದುಕೊಂಡ ದೇವತೆಗಳು ದುರ್ಗಾದೇವಿಯನ್ನು ಮೊರೆಹೋದರು. ಅವಳಿಂದ ಅಭಯವನ್ನೂ ಪಡೆದರು. ದೇವಿಗೂ ಮಹಿಷಾಸುರನಿಗೂ ನಡೆದ ಯುದ್ಧದಲ್ಲಿ ನೆತ್ತರಿನ ಹೊಳೆ ಹರಿಯಿತು. ಯುದ್ಧದ ಕೊನೆಯಲ್ಲಿ ಮಹಿಷಾಸುರನು ದೇವಿಯಿಂದ ಹತನಾದನು.
ಮಹಿಷಾಸುರನ ಸೋದರಿಯಾದ ಮಹಿಷಿಯು ತನ್ನ ಸಹೋದರನ ಕೊಲೆಗೆ ಪ್ರತಿಕಾರ ಮಾಡಲು ನಿರ್ಧರಿಸಿ ಬ್ರಹ್ಮನನ್ನು ಕುರಿತು ತಪಸ್ಸು ಮಾಡಿದಳು. ವಿಷ್ಣು(ಹರಿ) ಮತ್ತು ಶಿವ(ಹರ) ಇವರಿಗೆ ಜನಿಸುವ ಸಂತಾನಕ್ಕೆ ಮಾತ್ರವಲ್ಲದೆ ಬೇರಾರಿಂದಲೂ ತನ್ನನ್ನು ಕೊಲ್ಲಲು ಸಾಧ್ಯವಾಗಬಾರದು ಎಂಬ ವರವನ್ನು ಬ್ರಹ್ಮನಿಂದ ಪಡೆದುಕೊಂಡಳು. ಕೂಡಲೇ ದೇವಲೋಕಕ್ಕೆ ಧಾವಿಸಿದ ಮಹಿಷಿಯು ದೇವತೆಗಳನ್ನು ಪೀಡಿಸಲು ಆರಂಭಿಸಿದಳು.
Read Here – How to please Lord Shiva on Monday to fulfill your dreams; Shiva Pooje; ಸೋಮವಾರದಂದು ಶಿವನನ್ನು ಹೇಗೆ ಮೆಚ್ಚಿಸಬೇಕು
ದಿಕ್ಕು ತೋಚದ ದೇವತೆಗಳು ವಿಷ್ಣುವನ್ನು ಮೊರೆಹೊಕ್ಕರು. ಮಹಿಷಿ ಪಡೆದ ವರವನ್ನು ಅರ್ಥೈಸಿಕೊಂಡ ವಿಷ್ಣು ಹಿಂದೆ ಅಸುರರಿಂದ ಅಮೃತವನ್ನು ಅಪಹರಿಸಿ ದೇವತೆಗಳಿಗೆ ನೀಡುವುದಕ್ಕಾಗಿ ತಾನು ತಾಳಿದ್ದ ಮೋಹಿನಿಯ ರೂಪವನ್ನು ಈಗ ಮತ್ತೊಮ್ಮೆ ತಾಳಿದನು. ಮೋಹಿನಿಯಾಗಿ ಶಿವನೊಂದಿಗೆ ಕೂಡಿ ಒಂದು ಗಂಡು ಮಗುವಿಗೆ ಜನ್ಮ ಕೊಟ್ಟನು. ಆ ಮಗುವನ್ನು ಸಂತಾನವಿಲ್ಲದೆ ದುಃಖಿತನಾಗಿದ್ದ, ಶಿವಭಕ್ತನೂ ಆದ, ಪಂದಳ ರಾಜನ ಸಂರಕ್ಷಣೆಯಲ್ಲಿ ಬೆಳೆಸಲು ತೀರ್ಮಾನಿಸಿದನು.
ಪಂದಳ ರಾಜನ ಸಂರಕ್ಷಣೆಯಲ್ಲಿ
ಒಮ್ಮೆ ಪಂಪಾ ನದಿಯ ದಡದಲ್ಲಿರುವ ಕಾಡಿನಲ್ಲಿ ಬೇಟೆಯಾಡುವ ಸಲುವಾಗಿ ಹೋದ ಪಂದಳ ರಾಜನು ಪ್ರಾಕೃತಿಕ ಸೌಂದರ್ಯ ಮತ್ತು ಜಲಪಾತಗಳ ಮನೋಹರತೆಯಲ್ಲಿ ಮುಳುಗಿ ಹೋದನು. ಅಷ್ಟರಲ್ಲಿ ಕಾಡಿನೊಳಗಿಂದ ಒಂದು ಶಿಶುವಿನ ಅಳಲು ಕೇಳಿಬಂತು.
ಅಚ್ಚರಿಗೊಂಡ ರಾಜನು ಆ ದನಿಯನ್ನು ಹಿಂಬಾಲಿಸಿ ಹೋದನು. ಅಲ್ಲಿ ಅರಸನು ಕೈಕಾಲು ಅಲ್ಲಾಡಿಸುತ್ತಿರುವ ಒಂದು ಮುದ್ದು ಮಗುವನ್ನು ಕಂಡನು. ಕೌತುಕದಿಂದ ಆ ಮಗುವನ್ನು ನೆಟ್ಟ ನೋಟದಿಂದ ನೋಡುತ್ತಿದ್ದ ರಾಜನ ಮುಂದೆ ಸನ್ಯಾಸಿಯೊಬ್ಬ ಪ್ರತ್ಯಕ್ಷನಾಗಿ ಆ ಶಿಶುವನ್ನು ಅರಮನೆಗೆ ಒಯ್ಯುವಂತೆ ಸೂಚಿಸಿದನು.
ಆ ಮಗುವಿನ ಸಾನ್ನಿಧ್ಯದಿಂದ ರಾಜವಂಶದ ಮೇಲಿರುವ ಕರಿ ನೆರಳು ದೂರವಾಗುವುದೆಂದೂ ಹನ್ನೆರಡು ವರ್ಷ ಪ್ರಾಯ ಪೂರ್ತಿಯಾದಾಗ ಮಗುವಿನ ದಿವ್ಯತ್ವ ಪ್ರಕಟವಾಗುವುದೆಂದೂ ಹೇಳಿ ಸನ್ಯಾಸಿ ರಾಜನನ್ನು ಎಚ್ಚರಿಸಿದನು. ಮಗುವಿನ ಕುತ್ತಿಗೆಯಲ್ಲಿರುವ ಚಿನ್ನದ ಸರವನ್ನು ಕಂಡ ಸನ್ಯಾಸಿ ಅವನಿಗೆ ಮಣಿಕಂಠನೆಂದು ನಾಮಕರಣ ಮಾಡಲು ಸೂಚಿಸಿದನು.
ರಾಜನು ಹರ್ಷೋನ್ಮಾದದೊಂದಿಗೆ ಮಗುವನ್ನು ಅರಮನೆಗೆ ಕೊಂಡು ಹೋಗಿ ಮಹಾರಾಣಿಗೆ ನಡೆದ ಎಲ್ಲ ವಿಷಯಗಳನ್ನೂ ತಿಳಿಸಿದನು. ಶಿವನ ಅನುಗ್ರಹದಿಂದಲೇ ಇವೆಲ್ಲಾ ಸಂಭವಿಸಿದುವೆಂದು ಅವರಿಬ್ಬರೂ ನಂಬಿದರು. ರಾಜಶೇಖರನ ಅನಂತರ ಅರಸಾಗಲು ಆಸೆ ಪಟ್ಟಿದ್ದ ದಿವಾನನ ಹೊರತಾಗಿ ಎಲ್ಲರೂ ರಾಜ ದಂಪತಿಯ ಸಂತಸದಲ್ಲಿ ಪಾಲ್ಗೊಂಡರು.
ಮುಂದುವರೆಯುವುದು ...........