ಸೋಯಾ ಬೀನ್ ಕಬಾಬ್- Soya bean kebab Recipe in Kannada
ಬೇಕಾಗುವ ಪದಾರ್ಥಗಳು…
- ಸೋಯಾ ಬೀನ್- 20-25
- ಶುಂಠಿ-ಬೆಳ್ಳುಳ್ಳಿ ಪೇಸ್ಟ್-2 ಚಮಚ
- ಹಸಿ ಮೆಣಸಿನಕಾಯಿ-2
- ಈರುಳ್ಳಿ- 3
- ಮೊಸರು-ಸ್ವಲ್ಪ
- ಕೊತ್ತಂಬರಿ ಸೊಪ್ಪು- ಸ್ವಲ್ಪ
- ಖಾರದ ಪುಡಿ- ಒಂದು ಚಮಚ
- ಗರಂ ಮಸಾಲ- ಒಂದೂವರೆ ಚಮಚ
- ಕಾಳು ಮೆಣಸಿನ ಪುಡಿ- 1 ಚಮಚ
- ಎಣ್ಣೆ- ಕರಿಯಲು ಅಗತ್ಯವಿದ್ದಷ್ಟು
- ಉಪ್ಪು- ರುಚಿಗೆ ತಕ್ಕಷ್ಟು
ಮಾಡುವ ವಿಧಾನ…
- ಸೋಯಾ ಬೀನ್ ಅನ್ನು 20-25 ನಿಮಿಷ ಬಿಸಿ ನೀರಿನಲ್ಲಿ ನೆನೆಸಿ. ಬಳಿಕ ಹಸಿ ಮೆಣಸಿನಕಾಯಿ, ಈರುಳ್ಳಿ, ಕೊತ್ತಂಬರಿ ಸೊಪ್ಪನ್ನು ಮಿಕ್ಸಿ ಜಾರಿಗೆ ಹಾಕಿ ಪೇಸ್ಟ್ ಮಾಡಿಟ್ಟುಕೊಳ್ಳಿ. ನಂತರ ಇದೇ ಮಿಕ್ಸಿ ಜಾರಿಗೆ ನೆನೆಸಿದ ಸೋಯಾ ಬೀನ್ ಹಾಕಿ ರುಬ್ಬಿಕೊಳ್ಳಿ. ಇದಕ್ಕೆ ಶುಂಠಿ- ಬೆಳ್ಳುಳ್ಳಿ ಪೇಸ್ಟ್. ಖಾರದ ಪುಡಿ, ಗರಂ ಮಸಾಲ, 2 ಚಮಚ ಮೊಸರು, ಕಾಳು ಮೆಣಸಿನ ಪುಡಿ, ಉಪ್ಪು, ಕೊತ್ತಂಬರಿ ಸೊಪ್ಪು ಹಾಕಿ ಮಿಶ್ರಣ ಮಾಡಿ ಅರ್ಧ ಗಂಟೆ ನೆನೆಯಲು ಬಿಡಿ.
ಪ್ಯಾನ್ ಬಿಸಿ ಮಾಡಿ, ಅದರಲ್ಲಿ ಎಣ್ಣೆ ಹಾಕಿ, ಎಣ್ಣೆ ಬಿಸಿಯಾದಾಗ ಮಸಾಲೆಯುಕ್ತ ಸೋಯಾ ಬೀನ್ ನಿಮಗೆ ಬೇಕಾಗ ಆಕಾರದಲ್ಲಿ ತಟ್ಟಿ ಎಣ್ಣೆ ಹಾಕಿ 10 ನಿಮಿಷ ಫ್ರೈ ಮಾಡಿದರೆ ರುಚಿಯಾದ ಸೋಯಾ ಬೀನ್ ಕಬಾಬ್ ಸವಿಯಲು ಸಿದ್ಧ
Read here- Chicken pepper fry Recipe in Kannada
Subscribe for Free and
Support Us
ನಿಮ್ಮ ಈ - ಮೇಲ್ ಬಳಸಿ 👇ಇದೀಗ ಉಚಿತವಾಗಿ 🆓 ಚಂದಾದಾರರಾಗಿ..! ನಿಮಗೆ ನಮ್ಮ ಕಥೆಗಳು, ಹಾಡುಗಳು ಮತ್ತು ಮಾಹಿತಿ ಇಷ್ಟವಾದರೆ ನಿಮ್ಮ ಸಮೂಹಕ್ಕೆ ಶೇರ್ ಮಾಡುವುದನ್ನ ಮರೆಯದಿರಿ