ಸೋಬಾನೆ ಎನ್ನಿರಮ್ಮಾ – ಚಿಕ್ಕೆಜಮಾನ್ರು
ಸೋಬಾನೆ ಎನ್ನಿರಮ್ಮಾ
ಸಾಹಿತ್ಯ : ಹಂಸಲೇಖ
ಗಾಯನ : ಎಸ್.ಪಿ. ಬಾಲಸುಬ್ರಹ್ಮಣ್ಯಂ, ಎಸ್. ಜಾನಕಿ
ಸೋಬಾನೆ ಎನ್ನಿರಮ್ಮಾ ಸೋಬಾನೆ
ಸೊ ಎನ್ನಿರೋ ಸೋಬಾನೆ ಎನ್ನಿರೋ..
ಸೋಬಾನೆ ಎನ್ನಿರಮ್ಮಾ ಸೋಬಾನೆ
ಸೊ ಎನ್ನಿರೋ ಸೋಬಾನೆ ಎನ್ನಿರೋ..
ಮಲ್ಲಿಗೆ ಮನಸವಳೇ ಸೋಬಾನೆ…
ಗಂಧದ ಗುಣದವನೇ ಸೋಬಾನೆ..
ಸತಿ ಪತಿ ಮೊದಲ ಸತಿ ಕೂಡೋ…
ರಾತ್ರಿಗೆ.. ರಾತ್ರಿಗೆ.. ನಾಚಿಕೆ ಏತಕೆ ಬಾ…
ಸತಿ ಪತಿ ಮೊದಲ ಸತಿ ಹಾಡೋ…
ಹಾಡಿಗೆ.. ಹಾಡಿಗೆ.. ಆತುರ ಏತಕೆ ಬಾ…
ಹಾಲುಂಡರೂ ಖೀರುಂಡರೂ ಬಾಯಾರಿದೆ ಬಾರೆ..
ಹಣ್ಣು ಉಂಡರು ಹಲಸುಉಂಡರು ಹಸಿವಾಗಿದೆ ಬಾರೇ
ಹೂಂ.. ಎಂದರೂ ಉಹೂಂ ಎಂದರೂ ನಾನೆಂದಿಗೂ ನಿಮಗೆ
ಫಲಾಹಾರವೂ ಮೊದಲಾಗಲಿ ಸುಖ ಭೋಜನ ಕಡೆಗೆ
ಕಾಯುವ ಕಾಯಕ ಬೇಸರ.. ಕಾವಲಿ ಕಾದರೆ ಚುರಚುರಾ
ಜಿಂಕೆಯ ಕಣ್ಣವಳೇ ಸೋಬಾನೆ
ದಂತದ ಮೈಯವನೇ ಸೋಬಾನೆ
ಸತಿ ಪತಿ ಮೊದಲ ಸತಿ ಕೂಡೋ…
ರಾತ್ರಿಗೆ… ರಾತ್ರಿಗೆ… ನಾಚಿಕೆ ಏತಕೆ ಬಾ…
ಸತಿ ಪತಿ ಮೊದಲ ಸತಿ ಹಾಡೋ…
ಹಾಡಿಗೆ.. ಹಾಡಿಗೆ.. ಆತುರ ಏತಕೆ ಬಾ…
ತುದಿಗಾಲಲ್ಲಿ ಹಠ ಮಾಡುತ ಕುಣಿದಾಡಿದೆ ಬಯಕೆ
ನವಿರೇಳಿಸಿ ನಶೆಯೇರಿತು ಬಿಗಿಯಾಗಿದೆ ರವಿಕೆ
ಆನಂದಕೆ ಮೊದಲ್ಯಾವುದು ಕೊನೆಯಾಗುವುದು ಈಗ
ಹೊಸದಾದರೂ ಒಗಟಲ್ಲವೋ ಸೋಬಾನ ರಾಗ
ಕಾಯುವ ಕಾಯಕ ಬೇಸರ.. ಕಾವಲಿ ಕಾದರೆ ಚುರಚುರಾ
ಬಾಣದ ನೋಟದವನೇ ಸೋಬಾನೆ
ರಂಭೆಯ ಮಾಟದವಳೆ ಸೋಬಾನೆ
ಸತಿ ಪತಿ ಮೊದಲ ಸತಿ ಹಾಡೋ
ಹಾಡಿಗೆ ಹಾಡಿಗೆ ಆತುರ ಏತಕೆ ಬಾ
ಸತಿ ಪತಿ ಮೊದಲ ಸತಿ ಕೂಡೋ…
ರಾತ್ರಿಗೆ… ರಾತ್ರಿಗೆ… ನಾಚಿಕೆ ಏತಕೆ ಬಾ…
Read more here
Chikkejamanru “Rama Rama Rama Sad Song kannada
Rangero Holi Putnanja Song kannada Ravichandran
Naanu Putnanja Song Lyrics and Music Kannada ನಾನ್ ಪುಟ್ಟನಂಜ
ವರವ ಕೊಡೆ ಚಾಮುಂಡಿ || Varava Kode Chamundi || Devi Song