Shiva Shiva Yendare Bhayavilla Kannada Song – Bhakta Siriyala – ಶಿವ ಶಿವ ಎಂದರೆ ಭಯವಿಲ್ಲ..
ಶಿವ ಶಿವ ಎಂದರೆ ಭಯವಿಲ್ಲ..
ಶಿವ ಶಿವ ಎಂದರೆ ಭಯವಿಲ್ಲ
ನಾಮಕ್ಕೆ ಸಾಟಿ ಬೇರಿಲ್ಲ
ಶಿವನಾಮಕ್ಕೆ ಸಾಟಿ ಬೇರಿಲ್ಲ
ಶಿವಭಕ್ತನಿಗೆ ನರಕ ಇಲ್ಲ…ಆ ಆ ಆ..
ಶಿವಭಕ್ತನಿಗೆ ನರಕ ಇಲ್ಲ…
ಜನುಮಜನುಮಗಳ ಕಾಟವವಿಲ್ಲಾ …
|| ಶಿವ ಶಿವ ಎಂದರೆ ಭಯವಿಲ್ಲ
ನಾಮಕ್ಕೆ ಸಾಟಿ ಬೇರಿಲ್ಲ
ಶಿವನಾಮಕ್ಕೆ ಸಾಟಿ ಬೇರಿಲ್ಲ…||
ಅನ್ನದಾನವ ತೊರೆಯದಿರು
ನಾನು ನನ್ನದು ಎನ್ನದಿರು
ಅನ್ನದಾನವ ತೊರೆಯದಿರು
ನಾನು ನನ್ನದು ಎನ್ನದಿರು
ಉನ್ನತಿ ಸಾಧಿಸೆ ಹಗಲಿರುಳು…
ಉನ್ನತಿ ಸಾಧಿಸೆ ಹಗಲಿರುಳು
ದೀನಾನಾಥನ ಮರೆಯದಿರು
Read More About Lord Shiva :-
1. Shiva Song; Needu Shiva needadiru shiva; ನೀಡು ಶಿವ ನೀಡದಿರು ಶಿವ
2. How to please Lord Shiva on Monday to fulfill your dreams; Shiva Pooje; ಸೋಮವಾರದಂದು ಶಿವನನ್ನು ಹೇಗೆ ಮೆಚ್ಚಿಸಬೇಕು
3. Top Stories of Lord Shiva- ಮನೆ ಮಕ್ಕಳೆಲ್ಲ ಕುಳಿತು ಕೇಳಬೇಕಾದ ಭಗವಾನ್ ಶಿವನ ಕಥೆ
4. How to Plan a Trip to Rishikesh
5. Shiva with Bramha Kapala; Lord Shiva become beggar; ಬಿಕ್ಷಾಟನೆ ಕಥೆ
|| ಶಿವ ಶಿವ ಎಂದರೆ ಭಯವಿಲ್ಲ
ನಾಮಕ್ಕೆ ಸಾಟಿ ಬೇರಿಲ್ಲ
ಶಿವನಾಮಕ್ಕೆ ಸಾಟಿ ಬೇರಿಲ್ಲ…||
ಭೋಗ ಭಾಗ್ಯದ ಬಲೆಯೊಳಗೆ
ಬಳಲಿ ಬಾಡದೆ ಇಳೆಯೊಳಗೆ
ಭೋಗ ಭಾಗ್ಯದ ಬಲೆಯೊಳಗೆ
ಬಳಲಿ ಬಾಡದೆ ಇಳೆಯೊಳಗೆ
ಕಾಯಕ ಮಾಡುತ ಎಂದೆಂದೂ….
ಕಾಯಕ ಮಾಡುತ ಎಂದೆಂದೂ
ಆತ್ಮಾನಂದವ ಸವಿಯುತಿರು
|| ಶಿವ ಶಿವ ಎಂದರೆ ಭಯವಿಲ್ಲ
ನಾಮಕ್ಕೆ ಸಾಟಿ ಬೇರಿಲ್ಲ
ಶಿವನಾಮಕ್ಕೆ ಸಾಟಿ ಬೇರಿಲ್ಲ…||
ದಾನವೇ ಜಗದೊಳು ತಪವಯ್ಯಾ
ಧ್ಯಾನವೇ ಘನಕರ ಜಪವಯ್ಯಾ
ದಾನವೇ ಜಗದೊಳು ತಪವಯ್ಯಾ
ಧ್ಯಾನವೇ ಘನಕರ ಜಪವಯ್ಯಾ
ಅಪಕಾರವ ನೀ ಮಾಡಿದರೇ…..
ಅಪಕಾರವ ನೀ ಮಾಡಿದರೇ
ಕೈಲಾಸವದು ಸಿಗದಲ್ಲಾ…
|| ಶಿವ ಶಿವ ಎಂದರೆ ಭಯವಿಲ್ಲ
ನಾಮಕ್ಕೆ ಸಾಟಿ ಬೇರಿಲ್ಲ
ಶಿವನಾಮಕ್ಕೆ ಸಾಟಿ ಬೇರಿಲ್ಲ…||