Saavirakke Obba Kalavida – ಸಾವಿರಕೆ ಒಬ್ಬ ಕಲಾವಿದ
ಸಾವಿರಕೆ ಒಬ್ಬ ಕಲಾವಿದ
ಸಾಹಿತ್ಯ: ಹಂಸಲೇಖ
ಗಾಯಕರು: ಎಸ್.ಜಾನಕಿ
ಸಾವಿರಕೆ ಒಬ್ಬ ಕಲಾವಿದ
ಸಾವಿರಕೆ ಒಬ್ಬ ಕಲಾವಿದ
ಹುಮ್ಮನದ ಚಿತ್ರ ಕಲಾವಿದ
ಚೈತ್ರ ಮಾಸವ ಚಿತ್ರ ಮಾಡಿದ
ಅಭಿಮಾನವ ಹೋಳೆ ಮಾಡಿದ
ಸಾವಿರಕೆ ಒಬ್ಬ ಕಲಾವಿದ
ಹುಮ್ಮನದ ಚಿತ್ರ ಕಲಾವಿದ
ಕೈಯಲಿ ಪುಟ್ಟ ಕುಂಚ, ಕಣ್ಣಲೋ ಈ ಪ್ರಪಂಚ
ಆ ಮನಸೆಲ್ಲೋ, ಆ ತಪಸೆಲ್ಲೋ,
ಬಿಳೀ ಹಾಳೆಯಲಿ ರಸ ವೇಳೆಯಲಿ ಈ ಚಿತ್ತಾರ…
ಆ ರವಿಗೆ ಬೆಳಕು ನೆರಳಿನ ಆಟ
ಈ ಕುಂಚಕೆ ಏಳು ಬಣ್ಣಗಳ ಕೂಟ
ಸಾವಿರಕೆ ಒಬ್ಬ ಕಲಾವಿದ
ಹುಮ್ಮನದ ಚಿತ್ರ ಕಲಾವಿದ
ಒಳಗಣ್ಣು ತೆರೆದು ನೋಡು,
ಸೌಂದರ್ಯ ಸೂರೇ ಮಾಡು
ಈ ಜಗವೆಲ್ಲಾ ಬರಿ ಕಲೆಯಂತೆ,
ಈ ಕಲೆಯಲ್ಲಿ , ಈ ಬಲೆಯಲ್ಲಿ ನೀ ಸೆರೆಯಾಗು
ಈ ದೇಹಕೆ ತಪ್ಪದು ಎಂದಿಗೂ ಸಾವು ನೋವು
ಈ ಜೀವಕೆ ತಪ್ಪದೆ ತಿನಿಸು ಕಲೆಯ ಮೇವು
ಸಾವಿರಕೆ ಒಬ್ಬ ಕಲಾವಿದ
ಹುಮ್ಮನದ ಚಿತ್ರ ಕಲಾವಿದ
ಚೈತ್ರ ಮಾಸವ ಚಿತ್ರ ಮಾಡಿದ
ಅಭಿಮಾನವ ಹೋಳೆ ಮಾಡಿದ
Read more here
Andagara Alimayya Song Kalavida kannada ಅಂದಗಾರ ಅಳಿಮಯ್ಯ
Hey Navile Hennavile Kalavida Song in kannada ಹೇ ನವಿಲೇ ಹೆಣ್ಣವಿಲೇ
Nammamma Nammamma Song Lyrics from Ravichandran ಈ ಸುಗ್ಗಿ ತಂದವಳರಾಮ್ಮಾ
Ganesh Chaturthi Songs 2024 : Devotional songs and here are the lyrics.