ಪುಳಿಯೋಗರೆ ಗೊಜ್ಜಿನ ಪುಡಿ– Puliyogare Gojjina PowderRecipe in Kannada
ಬೇಕಾಗುವ ಪದಾರ್ಥಗಳು…
- ದನಿಯಾ – 100 ಗ್ರಾಂ
- ಬ್ಯಾಡಗಿ ಒಣಮೆಣಸಿನಕಾಯಿ- 100 ಗ್ರಾಂ
- ಜೀರಿಗೆ- 4 ಚಮಚ
- ಮೆಂತ್ಯೆ – 3 ಚಮಚ
- ಕಾಳು ಮೆಣಸು- 2 ಚಮಚ
- ಒಣಕೊಬ್ಬರಿ- ಸ್ವಲ್ಪ
- ಎಳ್ಳು-8 ಚಮಚ
- ಇಂಗು- 2 ಚಿಟಿಕೆಯಷ್ಟು
- ಸಾಸಿವೆ- 3 ಚಮಚ
- ಕರಿಬೇವು- ಸ್ವಲ್ಪ
ಮಾಡುವ ವಿಧಾನ…
- ಮೊದಲು ಬಾಣಲೆ ಬಿಸಿ ಮಾಡಿ, ಎಳ್ಳನ್ನು ಹುರಿಯಿರಿ, ಬಳಿಕ ಕೊಬ್ಬರಿ ತುರಿಯನ್ನು ಹಾಕಿ ಹುರಿಯಿರಿ. ಎಳ್ಳು ಸಿಡಿಯಲು ಆರಂಭಿಸಿದಾಗ ಮತ್ತು ಕೊಬ್ಬರಿ ಬಣ್ಣ ಬದಲಾಗಲು ಆರಂಭವಾಗುತ್ತಿದ್ದಂತೆ ಒಲೆ ಆರಿಸಿ. ಅದನ್ನು ಬಾಣಲೆಯಿಂದ ತೆಗೆಯಿರಿ.
- ಬಳಿಕ ಬಾಣಲೆಗೆ ಎಣ್ಣೆ ಹಾಕಿ, ಮೆಣಸಿನಕಾಯಿ, ದನಿಯಾ, ಮೆಂತ್ಯೆ , ಜೀರಿಗೆ, ಕರಿಬೇವಿನ ಎಲೆ ಸೇರಿ ಎಲ್ಲಾ ಪದಾರ್ಥಗಳನ್ನು ಒಂದಾದ ಮೇಲೆ ಒಂದು ಹುರಿಯಿರಿ.
- ಹುರಿದ ಎಲ್ಲಾ ಸಾಮಾಗ್ರಿಗಳನ್ನು ಒಂದು ತಟ್ಟೆಗೆ ವರ್ಗಾಯಿಸಿ, ತಣ್ಣಗಾಗಲು ಬಿಡಿ.
- ತಣ್ಣಗಾದ ಬಳಿಕ ಎಲ್ಲಾ ಸಾಮಗ್ರಿಗಳನ್ನು ಒಟ್ಟಿಗೆ ತರಿತರಿಯಾಗಿ ಪುಡಿ ಮಾಡಿಕೊಳ್ಳಿ. ಇದೀಗ ಪುಳಿಯೋಗರೆ ಗೊಜ್ಜಿಗೆ ಪುಡಿ ಸಿದ್ಧ.
ಚಿಕನ್ ಘೀರೋಸ್ಟ್- Chicken ghee roast Recipe in Kannada
Subscribe for Free and
Support Us
ನಿಮ್ಮ ಈ - ಮೇಲ್ ಬಳಸಿ 👇ಇದೀಗ ಉಚಿತವಾಗಿ 🆓 ಚಂದಾದಾರರಾಗಿ..! ನಿಮಗೆ ನಮ್ಮ ಕಥೆಗಳು, ಹಾಡುಗಳು ಮತ್ತು ಮಾಹಿತಿ ಇಷ್ಟವಾದರೆ ನಿಮ್ಮ ಸಮೂಹಕ್ಕೆ ಶೇರ್ ಮಾಡುವುದನ್ನ ಮರೆಯದಿರಿ