ಪ್ರೇಮದ ಹೂಗಾರ – ಚಿಕ್ಕೆಜಮಾನ್ರು
ಪ್ರೇಮದ ಹೂಗಾರ
ಸಾಹಿತ್ಯ : ಹಂಸಲೇಖ
ಗಾಯನ : ಎಸ್.ಪಿ. ಬಾಲಸುಬ್ರಹ್ಮಣ್ಯಂ
ಪ್ರೇಮದ ಹೂಗಾರ …. ಪ್ರೇಮದ ಹೂಗಾರ
ಪ್ರೇಮದ ಹೂಗಾರ ಈ ಹಾಡುಗಾರ
ಹೂ ನೀಡುತ್ತಾನೆ ಮುಳ್ಳು ಬೇಡುತ್ತಾನೆ..
ಬೆಲ್ಲದ ಬಣಕಾರ ಈ ಹಾಡುಗಾರ
ಸಿಹಿ ನೀಡುತ್ತಾನೆ ಕಹಿ ಬೇಡುತ್ತಾನೆ
ಮಣ್ಣಿನ ಮಮಕಾರ ತಂಪಿರುವ,
ಮಾನದ ಮಣಿಹಾರ ಹೊಂದಿರುವ ಈ ಭಾವ ಜೀವ…
ಪ್ರೇಮದ ಹೂಗಾರ ಈ ಹಾಡುಗಾರ
ಹೂ ನೀಡುತ್ತಾನೆ ಮುಳ್ಳು ಬೇಡುತ್ತಾನೆ..
ಗಂಧದ ಕೊರಳಾಗಿ ಸ್ವಂತಕ್ಕೆ ಬರಡಾಗಿ
ನೋವಿನಲೂ ತೇಯುವುದು ಈ ಒಡಲು
ಗಂಗೆಯು ತಾನಾಗಿ ನೀರಿಗೆ ಎರವಾಗಿ
ಸೇರುತಿದೆ ಕಂಬನಿಯ ಆ ಕಡಲು…. ಕರುಣೆಯ ಕುಂಬಾರ
ಕರುಣೆಯ ಕುಂಬಾರ ಈ ಹಾಡುಗಾರ
ಮಣ್ಣು ಬೇಡುತ್ತಾನೆ ಕೊಡ ನೀಡುತ್ತಾನೆ
ಮಮತೆಯ ಅಲೆಗಾರ ಈ ಹಾಡುಗಾರ
ಮನೆ ಮಾಡುತ್ತಾನೆ ಹೊರ ಹೋಗುತ್ತಾನೆ ..
ಗೋವಿನ ಹಾಲಂಥ ಮನಸಿರುವ
ಜೇನಂತ ಕೂಸಿನ ಮಾತಿರುವ ಈ ಭಾವ ಜೀವಾ…
ಪ್ರೇಮದ ಹೂಗಾರ ಈ ಹಾಡುಗಾರ
ಹೂ ನೀಡುತ್ತಾನೆ ಮುಳ್ಳು ಬೇಡುತ್ತಾನೆ
ನಿತ್ಯವೂ ತಾನುರಿದು ಲೋಕಕೆ ದಿನಗರೆದು
ಎಚ್ಚರಿಸೋ ಸೂರ್ಯನಿಗೆ ನಿದಿರೆಯಿಲ್ಲಾ
ರಾತ್ರಿಗೆ ತಾನುಳಿದು ತಾಪಕೆ ತಂಪೆರೆದು
ಸಂಚರಿಸೋ ಚಂದ್ರನಿಗೆ ಸ್ವಂತವಿಲ್ಲ
ಊರಿನ ಗೆಣೆಕಾರ…
ಊರಿನ ಗೆಣೆಕಾರ ಈ ಹಾಡುಗಾರ
ಕಾಪಾಡುತ್ತಾನೆ ಕಡೆಯಾಗುತ್ತಾನೆ
ಸತ್ಯದ ಹರಿಕಾರ ಈ ಹಾಡುಗಾರ
ಹೊರಡುತ್ತಾನೆ ಒಂಟಿಯಾಗುತ್ತಾನೆ
ಮಣ್ಣಿನ ಮಮಕಾರ ಕಂಪಿರುವ
ಮಾನದ ಮಣಿ ಹಾರ ಹೊಂದಿರುವಾ ಈ ಭಾವ ಜೀವ
ಪ್ರೇಮದ ಹೂಗಾರ ಈ ಹಾಡುಗಾರ
ಹೂ ನೀಡುತ್ತಾನೆ ಮುಳ್ಳು ಬೇಡುತ್ತಾನೆ
Read more here
Chikkejamanru Rama Rama Rama Sad Song kannada
Rangero Holi Putnanja Song kannada Ravichandran
Baduki Uliyuvene Siddappaji Song Lyrics ಬದುಕಿ ಉಳಿಯುವೆನೇ
Shiva Song Needu Shiva needadiru shiva ನೀಡು ಶಿವ ನೀಡದಿರು ಶಿವ