Paneer Makhani Biryani Recipe – ಪನ್ನೀರ್ ಮಖಾನಿ ಬಿರಿಯಾನಿ
ಬಿರಿಯಾನಿ ಎಂದರೆ ಮಾಂಸಾಹಾರ ಮಾತ್ರ ಎಂಬ ಮಾತಿಲ್ಲ. ಸಸ್ಯಾಹಾರ ಪ್ರಿಯರಿಗೂ ವಿಭಿನ್ನ ರುಚಿಯ ಬಿರಿಯಾನಿ ತಯಾರಿಸಬಹುದು. ಪನ್ನೀರ್ ಮಖಾನಿ ಗ್ರೇವಿ ಮತ್ತು ಸುವಾಸನೆಯ ಬಾಸ್ಮತಿ ಅನ್ನವನ್ನು ಪದರಗಳಾಗಿ ಜೋಡಿಸಿ ಮಾಡುವ ಈ ಬಿರಿಯಾನಿ ರುಚಿಯಲ್ಲಿ ವಿಶೇಷವಾಗಿರುತ್ತದೆ. ಮನೆಯಲ್ಲೇ ಸುಲಭವಾಗಿ ತಯಾರಿಸಬಹುದಾದ ಈ ಖಾದ್ಯವನ್ನು ವಾರಾಂತ್ಯದ ಊಟ ಅಥವಾ ವಿಶೇಷ ಸಂದರ್ಭಗಳಲ್ಲಿ ಪ್ರಯತ್ನಿಸಬಹುದು.
ಬೇಕಾಗುವ ಪದಾರ್ಥಗಳು
- ಬಾಸ್ಮತಿ ಅಕ್ಕಿ – 500 ಗ್ರಾಂ
- ಪನ್ನೀರ್ – 250 ಗ್ರಾಂ
- ಟೊಮ್ಯಾಟೊ – 3
- ಈರುಳ್ಳಿ – 4
- ಟೊಮ್ಯಾಟೊ ಪ್ಯೂರಿ – 1 ಕಪ್
- ಗಟ್ಟಿಯಾದ ಮೊಸರು – 1 ಕಪ್
- ಗೋಡಂಬಿ – ಅಗತ್ಯಕ್ಕೆ ತಕ್ಕಷ್ಟು
- ಕೆಂಪು ಮೆಣಸಿನಕಾಯಿ – 10
- ಬೆಣ್ಣೆ – ಅಗತ್ಯಕ್ಕೆ ತಕ್ಕಷ್ಟು
- ತುಪ್ಪ – ಅಗತ್ಯಕ್ಕೆ ತಕ್ಕಷ್ಟು
- ತಾಜಾ ಕ್ರೀಮ್ – 1 ಕಪ್
- ಕಸೂರಿ ಮೇಥಿ – ಅಗತ್ಯಕ್ಕೆ ತಕ್ಕಷ್ಟು
- ಶುಂಠಿ-ಬೆಳ್ಳುಳ್ಳಿ ಪೇಸ್ಟ್ – ಅಗತ್ಯಕ್ಕೆ ತಕ್ಕಷ್ಟು
- ಪುದೀನಾ ಸೊಪ್ಪು – ಅಗತ್ಯಕ್ಕೆ ತಕ್ಕಷ್ಟು
- ಕೊತ್ತಂಬರಿ ಸೊಪ್ಪು – ಅಗತ್ಯಕ್ಕೆ ತಕ್ಕಷ್ಟು
- ಗರಂ ಮಸಾಲೆ – ಅಗತ್ಯಕ್ಕೆ ತಕ್ಕಷ್ಟು
- ದನಿಯಾ ಪುಡಿ – ಅಗತ್ಯಕ್ಕೆ ತಕ್ಕಷ್ಟು
- ಖಾರದ ಮೆಣಸಿನ ಪುಡಿ – ಅಗತ್ಯಕ್ಕೆ ತಕ್ಕಷ್ಟು
- ಅರಿಶಿನ – ಅಗತ್ಯಕ್ಕೆ ತಕ್ಕಷ್ಟು
- ದಾಲ್ಚಿನ್ನಿ, ಏಲಕ್ಕಿ, ಲವಂಗ, ಬೇ ಎಲೆ, ಸ್ಟಾರ್ ಅನಿಸ್
- ಉಪ್ಪು – ರುಚಿಗೆ ತಕ್ಕಷ್ಟು

Read this – Sweet Potato Chaat Recipe ; ಸಿಹಿಗೆಣಸು ರೆಸಿಪಿ
ಪನ್ನೀರ್ ಮಖಾನಿ ಬಿರಿಯಾನಿ ಮಾಡುವ ವಿಧಾನ
1. ಮಖಾನಿ ಗ್ರೇವಿ ತಯಾರಿಸಿ
ಮೊದಲು ಟೊಮ್ಯಾಟೊ, ಈರುಳ್ಳಿ, ಕೆಂಪು ಮೆಣಸಿನಕಾಯಿ ಮತ್ತು ಗೋಡಂಬಿಯನ್ನು ಬೇಯಿಸಿಕೊಳ್ಳಿ. ಇವು ತಣ್ಣಗಾದ ನಂತರ ಮಿಕ್ಸರ್ನಲ್ಲಿ ನುಣ್ಣಗೆ ರುಬ್ಬಿ ಪೇಸ್ಟ್ ತಯಾರಿಸಿಕೊಳ್ಳಿ.
2. ಮಸಾಲೆ ಹುರಿಯಿರಿ
ಬಾಣಲೆಯಲ್ಲಿ ತುಪ್ಪ ಬಿಸಿ ಮಾಡಿ. ಇದಕ್ಕೆ ಬೇ ಎಲೆ, ದಾಲ್ಚಿನ್ನಿ, ಏಲಕ್ಕಿ, ಲವಂಗ ಹಾಗೂ ಶುಂಠಿ-ಬೆಳ್ಳುಳ್ಳಿ ಪೇಸ್ಟ್ ಸೇರಿಸಿ ಹುರಿಯಿರಿ. ನಂತರ ಅರಿಶಿನ, ಖಾರದ ಮೆಣಸಿನ ಪುಡಿ, ದನಿಯಾ ಪುಡಿ ಮತ್ತು ಉಪ್ಪು ಸೇರಿಸಿ ಚೆನ್ನಾಗಿ ಕಲಸಿ.
ಈಗ ಸಿದ್ಧಪಡಿಸಿಕೊಂಡ ಟೊಮ್ಯಾಟೊ-ಈರುಳ್ಳಿ ಪೇಸ್ಟ್ ಸೇರಿಸಿ ಮಧ್ಯಮ ಉರಿಯಲ್ಲಿ ಬೇಯಿಸಿ. ಬಳಿಕ ಗರಂ ಮಸಾಲೆ, ಕಸೂರಿ ಮೇಥಿ, ಟೊಮ್ಯಾಟೊ ಪ್ಯೂರಿ, ಮೊಸರು ಮತ್ತು ತಾಜಾ ಕ್ರೀಮ್ ಸೇರಿಸಿ ಸುಮಾರು 10 ನಿಮಿಷ ಬೇಯಿಸಿ.
Read this – Moong Dal Pakoda recipe in kannada ; ಹೆಸರುಬೇಳೆ ಪಕೋಡಾ
3. ಅನ್ನ ಅರ್ಧ ಬೇಯಿಸಿ
ಮತ್ತೊಂದು ಪಾತ್ರೆಯಲ್ಲಿ ನೀರು ಕುದಿಸಿ ಅದಕ್ಕೆ ಗರಂ ಮಸಾಲೆ, ಪುದೀನಾ ಮತ್ತು ಕೊತ್ತಂಬರಿ ಸೊಪ್ಪು ಸೇರಿಸಿ. ಬಾಸ್ಮತಿ ಅಕ್ಕಿಯನ್ನು ಹಾಕಿ ಅರ್ಧದಷ್ಟು ಮಾತ್ರ ಬೇಯಿಸಿಕೊಳ್ಳಿ. ಅಕ್ಕಿ ಸಂಪೂರ್ಣವಾಗಿ ಬೆಂದು ಹೋಗದಂತೆ ಗಮನಿಸಿ.
4. ಬಿರಿಯಾನಿಗೆ ಪದರ ಹಾಕಿ
ಈಗ ದಪ್ಪ ತಳದ ಪಾತ್ರೆಯಲ್ಲಿ ತುಪ್ಪ ಹಾಕಿ. ಅದರ ಮೇಲೆ ಸ್ವಲ್ಪ ಹುರಿದ ಈರುಳ್ಳಿ, ಪುದೀನಾ ಮತ್ತು ಕೊತ್ತಂಬರಿ ಸೊಪ್ಪು ಹಾಕಿ. ನಂತರ ಅರ್ಧ ಬೇಯಿಸಿದ ಅನ್ನದ ಒಂದು ಪದರ ಹಾಕಿ.
ಅದರ ಮೇಲೆ ಸಿದ್ಧಪಡಿಸಿದ ಪನ್ನೀರ್ ಮಖಾನಿ ಗ್ರೇವಿಯನ್ನು ಹರಡಿ. ನಂತರ ತುಪ್ಪ, ಬೆಣ್ಣೆ, ಪುದೀನಾ, ಕೊತ್ತಂಬರಿ ಸೊಪ್ಪು ಮತ್ತು ಹುರಿದ ಈರುಳ್ಳಿ ಸೇರಿಸಿ ಮತ್ತೊಂದು ಪದರ ಹಾಕಿ. ಇದೇ ರೀತಿ ಉಳಿದ ಅನ್ನ ಮತ್ತು ಗ್ರೇವಿಯನ್ನು ಪದರಗಳಾಗಿ ಜೋಡಿಸಿ.
5. ದಮ್ನಲ್ಲಿ ಬೇಯಿಸಿ
ಕೊನೆಯಲ್ಲಿ ಮೇಲ್ಭಾಗದಲ್ಲಿ ತುಪ್ಪ, ಬೆಣ್ಣೆ ಮತ್ತು ಹುರಿದ ಈರುಳ್ಳಿ ಹಾಕಿ ಪಾತ್ರೆಯನ್ನು ಮುಚ್ಚಿ. ಕಡಿಮೆ ಉರಿಯಲ್ಲಿ ಸುಮಾರು 10–15 ನಿಮಿಷ ದಮ್ನಲ್ಲಿ ಬೇಯಿಸಿ. ಇದರಿಂದ ಅನ್ನ ಮತ್ತು ಮಖಾನಿ ಗ್ರೇವಿಯ ರುಚಿ ಚೆನ್ನಾಗಿ ಬೆರೆಯುತ್ತದೆ.
Read this – Shrimp fry recipe in kannada ; ಸಿಗಡಿ ಫ್ರೈ
ಸವಿಯುವ ವಿಧಾನ
ಬಿಸಿ ಬಿಸಿ ಪನ್ನೀರ್ ಮಖಾನಿ ಬಿರಿಯಾನಿಯನ್ನು ರೈತಾ ಅಥವಾ ನಿಮ್ಮಿಷ್ಟದ ಚಟ್ನಿಯೊಂದಿಗೆ ಸವಿಯಬಹುದು. ಪನ್ನೀರ್, ಕ್ರೀಮ್ ಮತ್ತು ಮಸಾಲೆಗಳ ಸಂಯೋಜನೆಯಿಂದ ಈ ಬಿರಿಯಾನಿ ಸಾಮಾನ್ಯ ವೆಜ್ ಬಿರಿಯಾನಿಗಿಂತ ವಿಭಿನ್ನ ರುಚಿ ನೀಡುತ್ತದೆ.
Follow Us
Follow KannadaFolks channel on WhatsApp
Visit the Kannadafolks.in follow the latest updates
Subscribe and Receive exclusive content and updates on your favourite topics
Subscribe to KannadaFloks YouTube Channel and watch Videos
Support Us 


