HomeNewsCultureOndu dalada Kamaladalli - ಒಂದು ದಳದ ಕಮಲದಲ್ಲಿ Full song lyrics - Om...

Ondu dalada Kamaladalli – ಒಂದು ದಳದ ಕಮಲದಲ್ಲಿ Full song lyrics – Om Namaha shivaya

Spread the love

ಒಂದು ದಳದ ಕಮಲದಲ್ಲಿ ಹೊಮ್ಮಿಬಂದ ಲಿಂಗವೇ

ಮಧ್ಯಪ್ರಾಣ ಲಿಂಗವೇ ಸತ್ಯಶಾಂತಿ ಲಿಂಗವೇ

ಓಂ ನಮಃ ಶಿವಾಯ ಓಂ ನಮಃ ಶಿವಾಯ

ಎರಡು ದಳದ ಕಮಲದಲ್ಲಿ ಎದ್ದುಬಂದ ಲಿಂಗವೇ

ಆತ್ಮಜ್ಯೋತಿ ಲಿಂಗವೇ ಶಿವನರೂಪಿ ಲಿಂಗವೇ

ಓಂ ನಮಃ ಶಿವಾಯ ಓಂ ನಮಃ ಶಿವಾಯ

ಮೂರು ದಳದ ಕಮಲದಲ್ಲಿ ಮೂಡಿಬಂದ ಲಿಂಗವೇ

ಮೂರು ಕಣ್ಣ ಲಿಂಗವೇ ಮುಕ್ಕೋಟಿ ಲಿಂಗವೇ

ಓಂ ನಮಃ ಶಿವಾಯ ಓಂ ನಮಃ ಶಿವಾಯ

ನಾಲ್ಕು ದಳದ ಕಮಲದಲ್ಲಿ ನಾಗಜ್ಯೋತಿ ಲಿಂಗವೇ

ನಾದಪ್ರಿಯ ಲಿಂಗವೇ ಭಕ್ತಪ್ರಿಯ ಲಿಂಗವೇ

ಓಂ ನಮಃ ಶಿವಾಯ ಓಂ ನಮಃ ಶಿವಾಯ

ಐದು ದಳದ ಕಮಲದಲ್ಲಿ ಐಕ್ಯವಾದ ಲಿಂಗವೇ

ಪಂಚಮುಖದ ಲಿಂಗವೇ ಪಂಚಪ್ರಾಣ ಲಿಂಗವೇ

ಓಂ ನಮಃ ಶಿವಾಯ ಓಂ ನಮಃ ಶಿವಾಯ

ಆರು ದಳದ ಕಮಲದಲ್ಲಿ ಹಾರಿಬಂದ ಲಿಂಗವೇ

ಹರನ ಆತ್ಮ ಲಿಂಗವೇ ಅಡವಿಸ್ವಾಮಿ ಲಿಂಗವೇ

ಓಂ ನಮಃ ಶಿವಾಯ ಓಂ ನಮಃ ಶಿವಾಯ

ಏಳು ದಳದ ಕಮಲದಲ್ಲಿ ಎದ್ದುಬಂದ ಲಿಂಗವೇ

ಏಳುಲೋಕ ಲಿಂಗವೇ ಏಳು ತತ್ತ್ವ ಲಿಂಗವೇ

ಓಂ ನಮಃ ಶಿವಾಯ ಓಂ ನಮಃ ಶಿವಾಯ

ಎಂಟು ದಳದ ಕಮಲದಲ್ಲಿ ಘಂಟನಾದ ಲಿಂಗವೇ

ಅಷ್ಟದಿಕ್ಕು ಲಿಂಗವೇ ನಿನ್ನ ವಶವು ಲಿಂಗವೇ

ಓಂ ನಮಃ ಶಿವಾಯ ಓಂ ನಮಃ ಶಿವಾಯ

ಒಂಭತ್ತು ದಳದ ಕಮಲದಲ್ಲಿ ತುಂಬಿ ಬಂದ ಲಿಂಗವೇ

ಒಂಭತ್ತು ಗ್ರಹವು ಕಾಡದಂತೆ ಕಾಯೋ ನಮ್ಮ್ ಲಿಂಗವೇ

ಓಂ ನಮಃ ಶಿವಾಯ ಓಂ ನಮಃ ಶಿವಾಯ

ಹತ್ತು ದಳದ ಕಮಲದಲ್ಲಿ ಹತ್ತಿಬಂದ ಲಿಂಗವೇ

ಹತ್ತು ತಲೆಯ ರಾವಣಗೊಲಿದ ಕರುಣಾಳು ಲಿಂಗವೇ

ಓಂ ನಮಃ ಶಿವಾಯ ಓಂ ನಮಃ ಶಿವಾಯ

Subscribe for Free and Support Us 

ನಿಮ್ಮ ಈ - ಮೇಲ್ ಬಳಸಿ 👇ಇದೀಗ ಉಚಿತವಾಗಿ 🆓 ಚಂದಾದಾರರಾಗಿ..!  ನಿಮಗೆ ನಮ್ಮ ಕಥೆಗಳು, ಹಾಡುಗಳು ಮತ್ತು ಮಾಹಿತಿ ಇಷ್ಟವಾದರೆ ನಿಮ್ಮ ಸಮೂಹಕ್ಕೆ ಶೇರ್ ಮಾಡುವುದನ್ನ ಮರೆಯದಿರಿ 
kannadafolks
kannadafolkshttps://kannadafolks.in/
ಜನಪದ ಜಾತಿ, ಮತ, ಧರ್ಮ ಮೀರಿದ್ದು. ಅದು ಮಾತು, ಹಾಡು ಮೂಲಕ ಒಬ್ಬರಿಂದ ಮತ್ತೊಬ್ಬರಿಗೆ ಪಸರಿಸಿದ ಸಂಸ್ಕೃತಿ. ನಾವಿಂದು ಆಕಾಶದಿಂದ, ಸಾಗರದ ತಳದವರೆಗೆ ಹೋಗಿ ಅನ್ವೇಷನೆ ಯಾಗಿದೆ.
RELATED ARTICLES

LEAVE A REPLY

Please enter your comment!
Please enter your name here

- Advertisment -

Most Popular

Recent Comments