ನಲಿಯುತಾ ಹೃದಯ ಹಾಡನು ಹಾಡಿದೆ – ಹೃದಯ ಹಾಡಿತು
ಹೃದಯ ಹಾಡಿತು (1991) – ನಲಿಯುತಾ ಹೃದಯ ಹಾಡನು ಹಾಡಿದೆ
ಸಾಹಿತ್ಯ: ಚಿ. ಉದಯಶಂಕರ್ ಸಂಗೀತ: ಉಪೇಂದ್ರಕುಮಾರ್ ಗಾಯನ: ಡಾ| ರಾಜ್‍ಕುಮಾರ್
ನಲಿಯುತಾ ಹೃದಯ ಹಾಡನು ಹಾಡಿದೆ
ನಯನವು ಬಯಕೆ ಸಾವಿರ ಹೇಳಿದೆ
ನಲಿಯುತಾ ಹೃದಯ ಹಾಡನು ಹಾಡಿದೆ
ನಯನವು ಬಯಕೆ ಸಾವಿರ ಹೇಳಿದೆ
ಬಾನಲ್ಲಿ ಬೆಳಕಿಂದು ಮೂಡಿದೆ ಬೆಳಕಲ್ಲಿ ಹೊಸಬಾಳು ಕಂಡಿದೆ
ಹೊಸಬಾಳು ಹೊಸ ಆಸೆ ತಂದಿದೆ ಹೊಸಆಸೆ ಜೊತೆಯೊಂದ ಕೇಳಿದೆ
ಬರಡಾದ ಲತೆಯೀಗ ಹಸಿರಾಗಿದೆ ಹೊಸಜೀವ ಬಂತೆಂದು ಕುಣಿದಾಡಿದೆ
ಬರಡಾದ ಲತೆಯೀಗ ಹಸಿರಾಗಿದೆ ಹೊಸಜೀವ ಬಂತೆಂದು ಕುಣಿದಾಡಿದೆ
ಬೆಳಗಿನ ರವಿಯು ಮೂಡಿದ ಬಾನಲಿ ಬೆಳಗಿನ ತೆರೆಯ ಹಾಸಿದ ಬಾಳಲಿ
ಆ ಚಂದ್ರ ಮೇಲಿಂದ ಬಂದನೂ ತಂಪಾದ ಬೆಳಕನ್ನು ತಂದನೂ
ಅನುರಾಗದಾನಂದ ತುಂಬುತಾ ಜೊತೆಯಾಗೆ ಧರೆಯಲ್ಲೇ ನಿಂತನೂ
ಕಣ್ಣೋಟ ಬೆರೆತಾಗ ಆನಂದವೋ ತುಟಿಯಲ್ಲೇ ಮರೆಯಾಯ್ತು ಮಾತೆಲ್ಲವು
ಕಣ್ಣೋಟ ಬೆರೆತಾಗ ಆನಂದವು ತುಟಿಯಲ್ಲೇ ಮರೆಯಾಯ್ತು ಮಾತೆಲ್ಲವು
ನಲಿಯುತ ಹೃದಯ ಹಾಡನು ಹಾಡಿದೆ ನಯನವು ಬಯಕೆ ಸಾವಿರ ಹೇಳಿದೆ
Read more here
Belli Rathadali Surya Thanda song in kannada ಬೆಳ್ಳಿರಥದಲಿ ಸೂರ್ಯ ತಂದ ಕಿರಣ
Saavirakke Obba Kalavida Song Lyrics in Kannada ಸಾವಿರಕೆ ಒಬ್ಬ ಕಲಾವಿದ
Chikkejamanru Rama Rama Rama Sad Song kannada
Premada Hoogara Chikkejamanru songs kannada ಚಿಕ್ಕೆಜಮಾನ್ರು