Mysore Dasara 2026 – ಮೈಸೂರು ದಸರಾ 2026ರ ಸಂಪೂರ್ಣ ಮಾಹಿತಿ
ಮೈಸೂರು: ಅಕ್ಟೋಬರ್ 11ರಂದು ನಾಡಿನ ಅಧಿದೇವತೆ ಚಾಮುಂಡಿ ತಾಯಿಗೆ ಗಣ್ಯರು ವಿಶೇಷ ಪೂಜೆ ಸಲ್ಲಿಸುವ ಮೂಲಕ ಈ ಬಾರಿಯ ನಾಡಹಬ್ಬ ದಸರಾ ಉದ್ಘಾಟನೆ ಆಗಲಿದ್ದು, ಬಳಿಕ 10 ದಿನಗಳ ಕಾಲ ವಿವಿಧ ರೀತಿಯ ವೈವಿಧ್ಯಮಯ ಕಾರ್ಯಕ್ರಮಗಳು ನಡೆಯಲಿವೆ. 11ನೇ ದಿನ ವಿಶ್ವವಿಖ್ಯಾತ ದಸರಾ ಜಂಬೂಸವಾರಿ ಮೆರವಣಿಗೆ ಇರಲಿದೆ.
ಅಕ್ಟೋಬರ್ 11ರ ಭಾನುವಾರ ಬೆಳಗ್ಗೆ 11:50ರಿಂದ 12:13ರೊಳಗೆ ಸಲ್ಲುವ ಶುಭ ಧನುರ್ ಲಗ್ನದಲ್ಲಿ ಚಾಮುಂಡಿ ಬೆಟ್ಟದಲ್ಲಿ ಶ್ರೀ ಚಾಮುಂಡೇಶ್ವರಿ ದೇವಿಯ ಅಗ್ರಪೂಜೆಯೊಂದಿಗೆ ಕೊಪ್ಪಳ ಗವಿಮಠದ ಅಭಿನವ ಶ್ರೀ ಗವಿಸಿದ್ದೇಶ್ವರ ಮಹಾಸ್ವಾಮಿಗಳು ದಸರಾ ಮಹೋತ್ಸವವನ್ನು ಉದ್ಘಾಟಿಸಲಿದ್ದಾರೆ. ಬಳಿಕ ವಿವಿಧ ಕಾರ್ಯಕ್ರಮಗಳಿಗೆ ಚಾಲನೆ ಸಿಗಲಿದೆ.
ಅಕ್ಟೋಬರ್11ರ ಬೆಳಗ್ಗೆ 11:30ಕ್ಕೆ ಫಲಪುಷ್ಪ ಪ್ರದರ್ಶನ, ಮಧ್ಯಾಹ್ನ 12:30ಕ್ಕೆ ಪುಷ್ಪ ಮೇಳ ಮತ್ತು ಸಸ್ಯ ತೋಟ ಉದ್ಘಾಟನೆ, ಸಂಜೆ 4 ಗಂಟೆಗೆ ದಸರಾ ಕುಸ್ತಿ ಪಂದ್ಯಾವಳಿ, ಕನ್ನಡ ಪುಸ್ತಕ ಮಾರಾಟ ಮೇಳ, ಸಂಜೆ 4:30ಕ್ಕೆ ಲಲಿತಕಲೆ ಮತ್ತು ಕರಕುಶಲ ಶಿಬಿರ, ರಾಜ್ಯ ದಸರಾ ಸಿಎಂ ಕಪ್ ಕ್ರೀಡಾಕೂಟ, ಸಂಜೆ 5 ಗಂಟೆಗೆ ದಸರಾ ಸಾಂಸ್ಕೃತಿಕ ಕಾರ್ಯಕ್ರಮಗಳ ಉದ್ಘಾಟನೆ ಮತ್ತು ರಾಜ್ಯ ಸಂಗೀತ ವಿದ್ವಾನ್ ಪ್ರಶಸ್ತಿ ಪ್ರದಾನ ಸಮಾರಂಭ, ಸಂಜೆ 6:30ಕ್ಕೆ ವಿದ್ಯುತ್ ದೀಪಾಲಂಕಾರ ಹಸಿರು ಚಪ್ಪರ, ರಾತ್ರಿ 7 ಗಂಟೆಗೆ ಕರ್ನಾಟಕ ವಸ್ತು ಪ್ರದರ್ಶನ ಪ್ರಾಧಿಕಾರ ಆವರಣದಲ್ಲಿ ವಸ್ತು ಪ್ರದರ್ಶನ, ಮೈಸೂರು ಅರಮನೆ ವೇದಿಕೆಯಲ್ಲಿ ನೃತ್ಯರೂಪಕ: ದೇವಿ ಕಾರ್ಯಕ್ರಮಗಳಿಗೆ ಚಾಲನೆ ನೀಡಲಾಗುತ್ತದೆ.ಅ.12ರ ಸೋಮವಾರ ರಾತ್ರಿ 7 ಗಂಟೆಗೆ ಅರಮನೆ ವೇದಿಕೆಯಲ್ಲಿ ರಘು ದೀಕ್ಷಿತ್ ಮತ್ತು ತಂಡದ ತತ್ವ ಸಂಗೀತ (ಸಮಕಾಲೀನ) ಕಾರ್ಯಕ್ರಮ ನಡೆಯಲಿದೆ.

Read this – Navratri Across India – ಭಾರತದಲ್ಲಿ ನವರಾತ್ರಿ ಆಚರಣೆ
ಅ.13ರ ಮಂಗಳವಾರ ಬೆಳಗ್ಗೆ 6:30ಕ್ಕೆ ರಂಗೋಲಿ ಸ್ಪರ್ಧೆ, ಬೆ.10 ಗಂಟೆಗೆ ದಸರಾ ಉದ್ಘಾಟನೆ, ಬೆ.11 ಗಂಟೆಗೆ ಮಹಿಳಾ ದಸರಾ-2026, ಹಾಸ್ಯ/ಚುಟುಕು ಕವಿಗೋಷ್ಠಿ, ಸಂಜೆ 6 ಗಂಟೆಗೆ ಉತ್ತನಹಳ್ಳಿ ಜ್ವಾಲಾಮುಖಿ ತ್ರಿಪುರಸುಂದರಿ ದೇವಸ್ಥಾನ ಸಮೀಪ ಯುವ ದಸರಾ ಉದ್ಘಾಟನೆ ಮತ್ತು ಕಾರ್ಯಕ್ರಮ ನಡೆಯಲಿದ್ದು, ರಾತ್ರಿ 7 ಗಂಟೆಗೆ ಅರಮನೆ ವೇದಿಕೆಯಲ್ಲಿ ಸ್ವರಯಾನ ಕಾರ್ಯಕ್ರಮ ಇರಲಿದೆ.ಅ.14ರ ಬುಧವಾರ ಬೆಳಗ್ಗೆ 10 ಗಂಟೆಗೆ ಯೋಗ ದಸರಾ, 10:30ಕ್ಕೆ ಯುವ ಕವಿಗೋಷ್ಠಿ, ಬೆ.11ಕ್ಕೆ ಮಕ್ಕಳ ದಸರಾ, ಸಂಜೆ 6 ಗಂಟೆಗೆ ಯುವ ದಸರಾ ಕಾರ್ಯಕ್ರಮ, ರಾತ್ರಿ 7 ಗಂಟೆಗೆ ಅರಮನೆ ವೇದಿಕೆಯಲ್ಲಿ ಕ್ಲಾಸಿಕಲ್ ಫ್ಯೂಷನ್ ಆಕ್ಟ್ ಕಾರ್ಯಕ್ರಮ ನಡೆಯಲಿದೆ.
ಅ.15ರ ಗುರುವಾರ ಬೆಳಗ್ಗೆ 7 ಗಂಟೆಗೆ ಪಾರಂಪರಿಕ ನಡಿಗೆ, ಬೆ.10:30ಕ್ಕೆ ಚಿಗುರು ಕವಿಗೋಷ್ಠಿ, ಸಂಜೆ 6 ಗಂಟೆಗೆ ಯುವ ದಸರಾ ಕಾರ್ಯಕ್ರಮ, ರಾತ್ರಿ 7 ಗಂಟೆಗೆ ಅರಮನೆ ವೇದಿಕೆಯಲ್ಲಿ ಇಂಡಿಯನ್ ಕಂಟೆಂಪರರಿ ಫ್ಯೂಷನ್ ಕಾರ್ಯಕ್ರಮ ನಡೆಯಲಿದೆ.ಅ.16ರ ಶುಕ್ರವಾರ ಬೆಳಗ್ಗೆ 7 ಗಂಟೆಗೆ ಪಾರಂಪರಿಕ ಸೈಕಲ್ ಸವಾರಿ, ಬೆ.8 ಗಂಟೆಗೆ ರಾಜ್ಯಮಟ್ಟದ ದಸರಾ ಯೋಗಾಸನ ಸ್ಪರ್ಧೆ, ಬೆ.9:30ಕ್ಕೆ ರೈತ ದಸರಾ ಮೆರವಣಿಗೆ, ಬೆ.10:30ಕ್ಕೆ ಜನಪದ ಕಾವ್ಯಗೋಷ್ಠಿ, ಬೆ.11ಕ್ಕೆ ಕೃಷಿ ವಸ್ತು ಪ್ರದರ್ಶನ, ಬೆ.11:15ಕ್ಕೆ ರೈತ ದಸರಾ ಸಭಾಂಗಣ ಕಾರ್ಯಕ್ರಮ, ಸಂಜೆ 6 ಗಂಟೆಗೆ ಯುವ ದಸರಾ ಕಾರ್ಯಕ್ರಮ, ರಾತ್ರಿ 7 ಗಂಟೆಗೆ ಅರಮನೆ ವೇದಿಕೆಯಲ್ಲಿ ಪೊಲೀಸ್ ಬ್ಯಾಂಡ್ ತಂಡದಿಂದ ಕರ್ನಾಟಕ ಮತ್ತು ಇಂಗ್ಲಿಷ್ ಬ್ಯಾಂಡ್ ಕಾರ್ಯಕ್ರಮ ಆಯೋಜಿಸಲಾಗಿದೆ.
Read this – The Untold Story :Navadurga – ನವದುರ್ಗೆಯ ನವ ಅವತಾರಗಳ ಹಿಂದಿನ ಪುರಾಣ ಕಥೆ
ಅ.17ರ ಶನಿವಾರ ಬೆಳಗ್ಗೆ 7 ಗಂಟೆಗೆ ಪಾರಂಪರಿಕ ಉಡುಗೆಯಲ್ಲಿ ದಂಪತಿಗಳಿಗಾಗಿ ಪಾರಂಪರಿಕ ನಡಿಗೆ, ಬೆ.10:30ಕ್ಕೆ ಪ್ರಧಾನ ಕವಿಗೋಷ್ಠಿ, ಸಂಜೆ 5:30ಕ್ಕೆ ನಾಡ ಕುಸ್ತಿ/ ಪಾಯಿಂಟ್ ಕುಸ್ತಿ ಮುಕ್ತಾಯ ಸಮಾರಂಭ, ಸಂಜೆ 6ಕ್ಕೆ ಯುವ ದಸರಾ ಕಾರ್ಯಕ್ರಮ, ಸಂ.6:30ಕ್ಕೆ ರಾಜ್ಯಮಟ್ಟದ ಹಾಲು ಕರೆಯುವ ಸ್ಪರ್ಧೆ ವಿಜೇತರಿಗೆ ಬಹುಮಾನ ವಿತರಣೆ, ರಾತ್ರಿ 7 ಗಂಟೆಗೆ ಅರಮನೆ ವೇದಿಕೆಯಲ್ಲಿ ಸಂಗೀತ ಸಂಜೆ ಹಾಗೂ ರಾತ್ರಿ 8 ಗಂಟೆಗೆ ಬನ್ನಿಮಂಟಪದ ಪಂಜಿನ ಕವಾಯತು ಮೈದಾನದಲ್ಲಿ ಡ್ರೋನ್ ಪ್ರದರ್ಶನ ನಡೆಯಲಿದೆ.
ಅ.18ರ ಭಾನುವಾರ ಬೆಳಗ್ಗೆ 6 ಗಂಟೆಗೆ ಗ್ರಾಮೀಣ ಯೋಗ ದಸರಾ, ಬೆ.10ಕ್ಕೆ ಮುದ್ದು ಪ್ರಾಣಿಗಳ ಪ್ರದರ್ಶನ ಸ್ಪರ್ಧೆ, ಬೆ.10ಕ್ಕೆ ಸಾತಗಳ್ಳಿ ವಿಟಿಯು ಕಾಲೇಜು ಹತ್ತಿರ ಕಂಬಳ ಸ್ಪರ್ಧೆ, ಸಂಜೆ 5:30ಕ್ಕೆ ಮುದ್ದು ಪ್ರಾಣಿಗಳ ಪ್ರದರ್ಶನ ಸ್ಪರ್ಧೆ ವಿಜೇತರಿಗೆ ಬಹುಮಾನ ವಿತರಣೆ, ರಾತ್ರಿ 7 ಗಂಟೆಗೆ ಅರಮನೆ ವೇದಿಕೆಯಲ್ಲಿ ಇನ್ಸ್ಟ್ರುಮೆಂಟಲ್ ಫ್ಯೂಷನ್ ಬ್ಯಾಂಡ್, ರಾತ್ರಿ 8 ಗಂಟೆಗೆ ಡ್ರೋನ್ ಪ್ರದರ್ಶನವಿರಲಿದೆ.ಅ.19ರ ಸೋಮವಾರ ಬೆಳಗ್ಗೆ 6 ಗಂಟೆಗೆ ಯೋಗ ಚಾರಣ ನಡೆಯಲಿದ್ದು, ಸಂಜೆ 5:30ಕ್ಕೆ ಕಂಬಳ ಬಹುಮಾನ ವಿತರಣೆ ಕಾರ್ಯಕ್ರಮ ನಡೆಯಲಿದೆ.ಅ.20ರ ಮಂಗಳವಾರ ಬನ್ನಿಮಂಟಪದ ಪಂಜಿನ ಕವಾಯತು ಮೈದಾನದಲ್ಲಿ ಪಂಜಿನ ಕವಾಯತು ಪೂರ್ವಾಭ್ಯಾಸ ನಡೆಯಲಿದೆ.
Read this – Ayudha Puja Significance ; ಆಯುಧ ಪೂಜೆ ಯಾಕೆ ಮಾಡುತ್ತಾರೆ?
ಅಕ್ಟೋಬರ್ 21ರ ಬುಧವಾರ ಮಧ್ಯಾಹ್ನ 1:36 ರಿಂದ 1:56 ರವರೆಗೆ ಸಲ್ಲುವ ಶುಭ ಮಕರ ಲಗ್ನದಲ್ಲಿ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅರಮನೆ ಬಲರಾಮ ದ್ವಾರದ ಬಳಿ ನಂದಿಧ್ವಜಕ್ಕೆ ಪೂಜೆ ಸಲ್ಲಿಸಿ ಸಂಜೆ 4:10ರಿಂದ 4:35ರವರೆಗೆ ಸಲ್ಲುವ ಶುಭ ಮೀನ ಲಗ್ನದಲ್ಲಿ ಅರಮನೆ ಒಳಾವರಣದಲ್ಲಿ ವಿಶ್ವವಿಖ್ಯಾತ ಜಂಬೂಸವಾರಿ ಮೆರವಣಿಗೆಗೆ ಚಾಲನೆ ನೀಡಲಿದ್ದಾರೆ.
Follow Us
Follow KannadaFolks channel on WhatsApp
Visit the Kannadafolks.in follow the latest updates
Subscribe and Receive exclusive content and updates on your favourite topics
Subscribe to KannadaFloks YouTube Channel and watch Videos
Support Us 


