Mungondada Madeshwara full song – madappa songs – ಮುಂಗೊಂಡದಾ ಮಾದೇಶ್ವರಗೆ ಶರಣು ಶರಣಯ್ಯ – ಮುಂಗೊಂಡದಾ ಮಾದೇಶ್ವರಗೆ …
ಮುಂಗೊಂಡದ ಮಾದೇವನವರು ಮುಂದಲ ಪೂಜೆಗೆ ಬರುವಾಗ
ಹಣ್ಣು ಕಾಯಿ ಸಾಂಬ್ರಾಣಿಯ ಗಮಲ ಮಂಜುಗವಿದವೆ ….II
ಬೆಟ್ಟದ ಮಾದೇವ ಬರುವಾಗಾ ಹುಟ್ಟುಗಲ್ಲು ಗುಡಿಗುಟ್ಟಿದವೂ
ಹುಲಿಯ ಮೇಲೆ ಮದೆವಾ ಬರುವಾ ಮಾಯಾ ನೋಡಣ್ಣ ……
ಮುಂಗೋಡದ ಮಾದೇಶ್ವರಗೆ ಶರಣು ಶರಣಯ್ಯ
ಮಾಯಕರಾ ಮಾದೇಶ್ವರಗೆ ಶರಣು ಶರಣಯ್ಯ ….II 2 II
ಕಾಣಿಕೆ ತಂದಿವಿನಿ ಸ್ವಾಮಿ ಕಾಣೆನಲ್ಲೋ ಮಾದೇಶ್ವರನಾ ..
ಮಾಯ್ಕಾರ ಮದೆವಾ ಬರುವ ಮಾಯಾ ನೋಡಣ್ಣ …II
ಗಂಡುಲಿ ಮ್ಯಾಲಿಂದ ಗದ್ದುಗೆಯೂ ಸ್ವಾಮಿ ಹಿಂಡುಲಿ ಮ್ಯಾಲಿಂದ ಇಳ್ದರಿರೂ
ಎತ್ತಿದರೋ ದುಂಡು ಮಾದಯ್ಯನಾ ಗಂಡು ಹುಲಿಯ ಮ್ಯಾಲೆ …
ಮುಂಗೋಡದ ಮಾದೇಶ್ವರಗೆ ಶರಣು ಶರಣಯ್ಯ
ಮಾಯಕರಾ ಮಾದೇಶ್ವರಗೆ ಶರಣು ಶರಣಯ್ಯ ….II 2 II
ಕಾಡು ಪಾರಿವಾಳ ನಕ್ಕಿ ಕಣ್ಣ ನವಿಲು ಮರಿ ದುಂಬಿಗಳೂ …
ನವಲನಕ್ಕೀ ಬಿಟ್ಟಿ ದುಂಡಯ್ಯನ ಕೂಗಿ ಕರೆದಾವೆ …II
ಕೋಗಿಲೆ ಎದ್ದು ಕೊಂಬೆಯ ಏರಿ ಕೂಗುತವೋ ಮಾದೇಶ್ವರನಾ ..
ರಾಗವೆತ್ತಿ ದುಂಡು ಮಾದಯ್ಯನ ಕರಿಯುತ್ತವೆ ನೋಡೀ ..
ಮುಂಗೋಡದ ಮಾದೇಶ್ವರಗೆ ಶರಣು ಶರಣಯ್ಯ
ಮಾಯಕರಾ ಮಾದೇಶ್ವರಗೆ ಶರಣು ಶರಣಯ್ಯ ….II 2 II
ಎಲ್ಲಾ ರೂಪವು ತಾನಂತೆ ಶಿವ ಎಲ್ಲೆಲಿಯು ತಾನಿಹನಂತೆ
ಅಲ್ಲಲ್ಲಿ ಹರಸುತ ಗುಡಿಗಳ ತಿರುಗುವ ಜನಗಳ ಕಣ್ಣಿಗೆ ಕಲ್ಲಂತೆ….II
ಕಣ್ಣಿಲ್ಲದವರಿಗೆ ಕಣ್ಣಂತೆ ಶಿವ ಕಣ್ಣಿಗೆ ಕಣ್ಣಾಗಿಹನಂತೆ …
ಎಲ್ಲರ ಜೇವಾದಿ ಮಾದಪ್ಪ ಬಣ್ಣಬಣ್ಣವಾಗಿಹನಂತೆ ….
ಮುಂಗೋಡದ ಮಾದೇಶ್ವರಗೆ ಶರಣು ಶರಣಯ್ಯ
ಮಾಯಕರಾ ಮಾದೇಶ್ವರಗೆ ಶರಣು ಶರಣಯ್ಯ ….II 2 II