Monday Mantra: ಸೋಮವಾರ ಈ ಶಿವ ಮಂತ್ರ ಪಠಿಸಿದರೆ ಪ್ರತೀ ಕೆಲಸದಲ್ಲೂ ಸಕ್ಸಸ್.
ಸೋಮವಾರವು ಚಂದ್ರನೊಂದಿಗೆ ಸಂಬಂಧಿಸಿದೆ ಮತ್ತು ಇದನ್ನು ಶಿವನ ದಿನವೆಂದು ಪರಿಗಣಿಸಲಾಗುತ್ತದೆ. ಸೋಮವಾರದ ದಿನದಂದು ಶಿವನ ಆರಾಧನೆಯೂ ವಿಶೇಷವಾಗಿದೆ. ಈ ದಿನದಂದು ಶಿವ ಪೂಜೆಯನ್ನು ಮಾಡಲಾಗುತ್ತದೆ ಮತ್ತು ಶಿವನಿಗೆ ಪ್ರಿಯವಾದ ಕೆಲಸಗಳನ್ನು ಮಾಡಲಾಗುತ್ತದೆ.
ಅದರಲ್ಲೂ ಶಿವನನ್ನು ಮಂತ್ರಗಳೊಂದಿಗೆ ಆರಾಧನೆ ಮಾಡುವುದರಿಂದ ಹೆಚ್ಚು ಪ್ರಯೋಜನಕಾರಿಯಾಗಿರುತ್ತದೆ. ಶಿವ ಮಂತ್ರಗಳನ್ನು ಪಠಿಸುವಾಗ ಎಚ್ಚರಿಕೆಯಿಂದ ಮತ್ತು ನಿಯಮಿತವಾಗಿ ಪಠಿಸಬೇಕು. ಇದರಿಂದ ವ್ಯಕ್ತಿಯು ಆಧ್ಯಾತ್ಮಿಕ, ಮಾನಸಿಕ ಪ್ರಗತಿಯನ್ನು ಕಂಡುಕೊಳ್ಳುತ್ತಾನೆ. ಮಾನಸಿಕ ಸ್ಥಿರತೆಯನ್ನು ಸಾಧಿಸಲು, ಆಧ್ಯಾತ್ಮಿಕ ಚೈತನ್ಯವನ್ನು ಹೊಂದಲು ಶಿವ ಮಂತ್ರಗಳನ್ನು ಪಠಿಸುವುದು ಪ್ರಮುಖವಾಗಿರುತ್ತದೆ.
Read Here also – Shiva Tandava Stothram Full Lyrics; Kannada and English
ಆರೋಗ್ಯ ನೀಡುವ ಮಂತ್ರ – Healthy Manthras
”ಓಂ ತ್ರ್ಯಂಬಕಂ ಯಜಾಮಹೇ ಸುಗಂಧಿಂ ಪುಷ್ಟಿ ವರ್ಧನಂ
ಊರ್ವರುಕಮಿವ ಬಂಧನಾನ್
ಮೃತ್ಯೋರ್ಮುಕ್ಷೀಯ ಮಾಮೃತಾತ್”
ಈ ಮಂತ್ರವು ಶಿವನ ಕೃಪೆಯನ್ನು ಮತ್ತು ಆತನಿಂದ ರಕ್ಷಣೆಯನ್ನು ಪಡೆದುಕೊಳ್ಳಲು ಪಠಿಸುವ ಮಂತ್ರವಾಗಿದೆ ಹಾಗೂ ಈ ಮಂತ್ರವು ಶಿವ ಭಕ್ತನಿಗೆ ಆರೋಗ್ಯ ಮತ್ತು ಸುರಕ್ಷತೆಯ ಆಶೀರ್ವಾದವನ್ನು ನೀಡುತ್ತದೆ.
Vishnu Sahasranama Stotram in Kannada – ಶ್ರೀ ವಿಷ್ಣು ಸಹಸ್ರನಾಮ ಸ್ತೋತ್ರಂ
ಶಿವನಿಂದ ರಕ್ಷಣೆ ನೀಡುವ ಮಂತ್ರ – Protection Mantras
”ಓಂ ನಮೋ ಭಗವತೇ ರುದ್ರಾಯಃ”
ರುದ್ರನು ಶಿವನ ಒಂದು ರೌದ್ರ ರೂಪವಾಗಿದೆ. ಈ ಮಂತ್ರವು ಭಗವಾನ್ ರುದ್ರನನ್ನು ಪೂಜಿಸುವಾಗ ಪಠಿಸುವ ಮಂತ್ರವಾಗಿದೆ ಮತ್ತು ಭಕ್ತನಿಗೆ ಅವನ ಸ್ಥಿರವಾದ ರಕ್ಷಣೆ ಮತ್ತು ಅನುಗ್ರಹವನ್ನು ಕರುಣಿಸುವ ಮಂತ್ರವಾಗಿದೆ. ಶಿವನ ಈ ಮಂತ್ರವನ್ನು ಪಠಿಸುವ ವ್ಯಕ್ತಿಯು ಆತನಿಂದ
ಎಲ್ಲಾ ಸಂಕಷ್ಟಗಳಲ್ಲೂ ರಕ್ಷಣೆಯನ್ನು
ಪಡೆದುಕೊಳ್ಳುತ್ತಾನೆ.
ಸಂತೋಷ ನೀಡುವ ಶಿವ ಮಂತ್ರ- Happiness
”ಓಂ ಜಯ ಶಿವ ಓಂಕಾರ” ಮತ್ತು ”ಹರ ಹರ ಮಹಾದೇವ”
ಶಿವನಿಗೆ ಸಮರ್ಪಿತವಾದ ಈ ಮಂತ್ರವು ಭಗವಾನ್ ಶಿವನ ಮಹಿಮೆ ಮತ್ತು ಆತನ ಶಕ್ತಿಯನ್ನು ವರ್ಣಿಸುವ ಮಂತ್ರವಾಗಿದೆ. ಹಾಗೂ ಈ ಮಂತ್ರವು ಭಕ್ತನಿಗೆ, ಶಾಂತಿ, ಯಶಸ್ಸು ಮತ್ತು ಸಂತೋಷಕ್ಕಾಗಿ ಶಿವನ ಆಶೀರ್ವಾದವನ್ನು ನೀಡುತ್ತದೆ.
ಜ್ಞಾನ ನೀಡುವ ಶಿವ ಮಂತ್ರ – Knowledge Gaining
“ಓಂ ಹೌಂ ಜೂಂ ಸಃ ಜೂಂ ಸಃ ಜೂಂ ಸಃ ಭೋ”
ಈ ಮಂತ್ರವು ಶಿವನ ಅನುಗ್ರಹ ಮತ್ತು ಪ್ರಾಚೀನ ಜ್ಞಾನವನ್ನು ಪಡೆಯಲು ಸಹಾಯ ಮಾಡುತ್ತದೆ. ಯಾವುದಾದರೂ ವ್ಯಕ್ತಿ ತನ್ನ ಜೀವನದಲ್ಲಿ ಜ್ಞಾನಿಯಾಗಲೂ ಬಯಸಿದರೆ, ಎಲ್ಲಾ ವಿಷಯಗಳಲ್ಲೂ ಉನ್ನತಿಯನ್ನು ಸಾಧಿಸಲು ಬಯಸಿದರೆ ಈ ಶಿವ ಮಂತ್ರವನ್ನು ನೀವು ಪಠಿಸಬೇಕು
ಶಿವನ ಅನುಗ್ರಹ ನೀಡುವ ಮಂತ್ರ – Blessing Mantras
”ಓಂ ಹ್ರೀಂ ಹೂಂ ಫಟ್ ಸ್ವಾಹಃ” ಮತ್ತು ”ಓಂ ನಮೋ ನಮಃ” ಮತ್ತು ”ಓಂ ನಮಃ ಶಿವಾಯ ಅಸ್ತುಃ‘‘
ವ್ಯಕ್ತಿಯು ಈ ಮೂರು ಶಿವ ಮಂತ್ರಗಳನ್ನು ಪಠಿಸುವುದರಿಂದ ಶಿವನ ವಿಶೇಷ ಆಶೀರ್ವಾದವನ್ನು ಪಡೆದುಕೊಳ್ಳುತ್ತಾನೆ. ಶಿವನು ನಿಮ್ಮ ಮೇಲೆ ಆತನ ದಯೆಯನ್ನು ತೋರುತ್ತಾನೆ.
Shree Vishnu Dashavatara; Krishna 8th Avatar of Vishnu; ಕೃಷ್ಣನ ಕಥೆ