ಮೂರು ಕಣ್ಣಿನ ಮುಗಿಲಬಣ್ಣದ ಮುದ್ದುಮಾದಯ್ಯ..
ಮೂರು ಕಣ್ಣಿನ ಮುಗಿಲು ಬಣ್ಣದ ಮುದ್ದು ಮಾದಯ್ಯ..
ನೆತ್ತಿಯ ಮ್ಯಾಲೆ ನಾಗರನ್ಹೆಡೆ ನಲ್ದು ಬಾರಯ್ಯ
ನಿಮ್ಮ ನೆತ್ತಿಯ ಮ್ಯಾಲೆ ನಾಗರನ್ಹೆಡೆನಲ್ದು ಬಾರಯ್ಯII
ಅಯ್ಯಮೂರುಕಣ್ಣಿನ ಮುಗಿಲಬಣ್ಣದ ಮುದ್ದುಮಾದಯ್ಯ
ಮೂರು ಕಣ್ಣಿನ ಮುಗಿಲು ಬಣ್ಣದ ಮುದ್ದು ಮಾದಯ್ಯ..
ನೆತ್ತಿಯ ಮ್ಯಾಲೆ ನಾಗರನ್ಹೆಡೆ ನಲ್ದು ಬಾರಯ್ಯ
ನಿಮ್ಮ ನೆತ್ತಿಯ ಮ್ಯಾಲೆ ನಾಗರನ್ಹೆಡೆ ನಲ್ದು ಬಾರಯ್ಯII
ಕೂಗಿ ಕೂಗಿ ಕರೆದೆವಲ್ಲೋ ಕುಣಿಯುತ ಬಾರಯ್ಯ
ಕೂಗಿ ಕೂಗಿ ಕರೆದೆವಲ್ಲೋ ಕುಣಿಯುತ ಬಾರಯ್ಯ.II
ಕೂಗಿನ ದನಿಗೆ ನವಿಲಿನಂತೆ ನಲಿದು ಬಾರಯ್ಯ…
ನಮ್ಮಕೂಗಿನದನಿಗೆ ನವಿಲಿನಂತೆ ನಲಿದುಬಾರಯ್ಯII
ಮಲ್ಲಿಗೆ ಹೂವ ಮುಡಿದು ಬಾರೋ ಮಲೆಯ ಮಾದಯ್ಯ…
ಮಲ್ಲಿಗೆ ಹೂವ ಮುಡಿದು ಬಾರೋಮಲೆಯ ಮಾದಯ್ಯ.II
ಮೆಲ್ಲ ಮೆಲ್ಲಗೆ ಪಾದವ ಇಟ್ಟು ಒಲಿದು ಬಾರಯ್ಯ.
ನೀ ಮೆಲ್ಲ ಮೆಲ್ಲಗೆ ಪಾದವ ಇಟ್ಟುಒಲಿದು ಬಾರಯ್ಯII
ಅಯ್ಯ ಮೂರುಕಣ್ಣಿನ ಮುಗಿಲ ಬಣ್ಣದ ಮುದ್ದುಮಾದಯ್ಯ
ನೆತ್ತಿಯ ಮ್ಯಾಲೆ ನಾಗರನ್ಹೆಡೆ ನಲ್ದು ಬಾರಯ್ಯ
ನಿಮ್ಮ ನೆತ್ತಿಯ ಮ್ಯಾಲೆ ನಾಗರನ್ಹೆಡೆ
ನಲ್ದು ಬಾರಯ್ಯ
ಕಂಬದ ಬೋಳಿ ದಿಂಬದ ಮ್ಯಾಲೆ ನಿಂದು ನೋಡಯ್ಯ
ಕಂಬದ ಬೋಳಿ ದಿಂಬದ ಮ್ಯಾಲೆ ನಿಂದು ನೋಡಯ್ಯII
ಪಡುವಾಲ ಪರುಷೆ ಬರುವ ಚಂದವ ನೋಡಯ್ಯ
ನಿನ್ನ ಪಡುವಾಲ ಪರುಷೆ ಬರುವ ಚಂದವ ನೋಡಯ್ಯII
ಕರಿಯಾ ಕಂಬಳಿ ಗದ್ದುಗೆಯಿಂದ ಎದ್ದು ಬಾರಯ್ಯ
ಕರಿಯಾ ಕಂಬಳಿ ಗದ್ದುಗೆಯಿಂದ ಎದ್ದು ಬಾರಯ್ಯII
ನೀನು ಭಾರಿ ಚಿರುಗನಏರಿಕೊಂಡು ಬ್ಯಾಗನೆಬಾರಯ್ಯ
ನೀನು ಭಾರಿ ಚಿರುಗನ ಏರಿಕೊಂಡುಬ್ಯಾಗನೆ ಬಾರಯ್ಯII
ಮೂರು ಕಣ್ಣಿನ ಮುಗಿಲ ಬಣ್ಣದ ಮುದ್ದು ಮಾದಯ್ಯ
ನೆತ್ತಿಯ ಮ್ಯಾಲೆ ನಾಗರನ್ಹೆಡೆ ನಲ್ದು ಬಾರಯ್ಯ
ನಿಮ್ಮ ನೆತ್ತಿಯ ಮೇಲೆ ನಾಗರನ್ಹೆಡೆ
ನಲ್ದು ಬಾರಯ್ಯ
ಕೆಂಡದೋಕುಳಿ ಗಂಡ ನೀನು ಕೆಂಡಗಣ್ಣಯ್ಯ
ಕೆಂಡದೋಕುಳಿ ಗಂಡ ನೀನು ಕೆಂಡಗಣ್ಣಯ್ಯII
ಕೆಂಡ ಕೊಂಡಕೆ ದಯ ಮಾಡೋ ದುಂಡು ಮಾದಯ್ಯ
ಕೆಂಡ ಕೊಂಡಕೆ ದಯ ಮಾಡೋ ದುಂಡು ಮಾದಯ್ಯII
ಬಾಣದಲ್ಲಿ ಮಿಂಚುಳದಂಗೆ ಜಾಣ ಮಾದಯ್ಯ
ಬಾಣದಲ್ಲಿ ಮಿಂಚುಳದಂಗೆ ಜಾಣ ಮಾದಯ್ಯII
ನೀನು ಪಾಶುಪತಿ ಪಂಜು ಬಾಣ ತೊಟ್ಟು ಬಾರಯ್ಯ
ನೀನು ಪಾಶುಪತಿ ಪಂಜು ಬಾಣತೊಟ್ಟು ಬಾರಯ್ಯII
ಮೂರು ಕಣ್ಣಿನ ಮುಗಿಲ ಬಣ್ಣದ ಮುದ್ದುಮಾದಯ್ಯ
ಮೂರು ಕಣ್ಣಿನ ಮುಗಿಲ ಬಣ್ಣದ ಮುದ್ದು ಮಾದಯ್ಯII
ನೆತ್ತಿಯ ಮ್ಯಾಲೆ ನಾಗರನ್ಹೆಡೆ ನಲ್ದು ಬಾರಯ್ಯ
ನಿಮ್ಮ ನೆತ್ತಿಯ ಮ್ಯಾಲೆ ನಾಗರನ್ಹೆಡೆ
ನಲ್ದು ಬಾರಯ್ಯ