Kannada Nadina Jeevanadi Song Lyrics in Kannada
ಕನ್ನಡ ನಾಡಿನ ಜೀವನದಿ ಈ ಕಾವೇರಿ
ಓಹೋ ಜೀವನದಿ ಈ ಕಾವೇರಿ
ಅನ್ನವ ನೀಡುವ ದೇವನದಿ ಈ ವಯ್ಯಾರಿ
ಓಹೋ ದೇವನದಿ ಈ ವಯ್ಯಾರಿ
ಈ ತಾಯಿಯು ನಕ್ಕರೆ ಸಂತೋಷದ ಸಕ್ಕರೆ
ಮಮತೆಯ ಮಾತೆಗೆ ಭಾಗ್ಯದ ದಾತೆಗೆ
ಮಾಡುವೆ ಭಕ್ತಿಯ ವಂದನೆ
Jaya Janardhana Krishna Radhika Pathe Lyrics Kannada Song – ಜಯ ಜನಾರ್ದನಾ ಕೃಷ್ಣಾ ರಾಧಿಕಾಪತೇ
ಕನ್ನಡ ನಾಡಿನ ಜೀವನದಿ ಈ ಕಾವೇರಿ
ಓಹೋ ಜೀವನದಿ ಈ ಕಾವೇರಿ
ಕೊಡಗಲಿ ನೀ ಹುಟ್ಟಿ ಹರಿಯುವೆ ನಲಿವಿಂದ
ತರುತಲಿ ಎಲ್ಲೆಲ್ಲೂ ಆನಂದ
ಹಸಿರಿನ ಬೆಳೆ ತಂದು ಕುಡಿಯುವ ಜಲ ತಂದು
ಚೆಲ್ಲುವೆ ನಗೆಯೆನೆಂಬ ಶ್ರೀಗಂಧ
ಧುಮುಕುತ ವೇಗದ ಜಲಪಾತದಲಿ ವಿದ್ಯುತ್ ನೀಡುವೆ
ಬಯಲಲಿ ಕಾಡಲಿ ಕಲ ಕಲ ಹರಿಯುತ ನಾಟ್ಯವ ಮಾಡುವೆ
ಮಂದಗಾಮಿನಿ ಶಾಂತಿವಾಹಿನಿ
ಚಿರ ನೂತನ ಚೇತನ ದಾತೆಯು ನೀನೆ ದಕ್ಷಿಣ ಮಂದಾಕಿನಿ
ಕನ್ನಡ ನಾಡಿನ ಜೀವನದಿ ಈ ಕಾವೇರಿ
ಓಹೋ ಜೀವನದಿ ಈ ಕಾವೇರಿ
Kakig banna kaanta song ; ಕಾಕಿಗ್ ಬಣ್ಣ… ಕಾಂತ? Kannada Song Lyrics ; RAKSHIT SHETTY
ಹುಟ್ಟುವ ಕಡೆಯೊಂದು ಫಲ ಕೊಡೊ ಕಡೆಯೊಂದು
ಸಾಗರದಲಿ ನದಿಗೆಂದು ಸಂಗಮವು
ತವರಿನ ಮನೆಯೊಂದು ಗಂಡನ ಮನೆಯೊಂದು
ಹೆಣ್ಣಿಗೆ ಇದೆ ಎಂದು ಜೀವನವು
ತಂದೆಯು ತಾಯಿಯು ಅಣ್ಣನು ತಂಗಿಯು ಎಲ್ಲಾ ದೂರವು
ಹೊಸ ಮನೆ ಹೊಸ ಜನ ಹೊಸ ಹೊಸ ಬಂಧವು ಅಲ್ಲೇ ಸಂತೋಷವು
ಮನೆಯ ದೀಪವು ಬಾಳ ಸಂಗೀತವು
ಮನ ಮೆಚ್ಚಿದ ಮಡದಿಯು ಸಿಕ್ಕಿದ ವೇಳೆ ಸ್ವರ್ಗ ಸಂಸಾರವು
Dwapara Kannada Song Lyrics – Ganesh Krishnam Pranaya Sakhi
ಕನ್ನಡ ನಾಡಿನ ಜೀವನದಿ ಈ ಕಾವೇರಿ
ಓಹೋ ಜೀವನದಿ ಈ ಕಾವೇರಿ
ಅನ್ನವ ನೀಡುವ ದೇವನದಿ ಈ ವಯ್ಯಾರಿ
ಓಹೋ ದೇವನದಿ ಈ ವಯ್ಯಾರಿ
ಈ ತಾಯಿಯು ನಕ್ಕರೆ ಸಂತೋಷದ ಸಕ್ಕರೆ
ಮಮತೆಯ ಮಾತೆಗೆ ಭಾಗ್ಯದ ದಾತೆಗೆ
ಮಾಡುವೆ ಭಕ್ತಿಯ ವಂದನೆ