ಕನ್ನಡ ಗಂಗೆಯಲಿ ಮೀಯುವೆ ನಾನೀಗ – ಶೃಂಗಾರ ಕಾವ್ಯ
ಶೃಂಗಾರ ಕಾವ್ಯ (1993)
ಕನ್ನಡ ಗಂಗೆಯಲಿ ಮೀಯುವೆ ನಾನೀಗ, ಮೀಯುವೆ ನಾನೀಗ
ಸಾಹಿತ್ಯ: ಹಂಸಲೇಖ
ಸಂಗೀತ: ಹಂಸಲೇಖ
ಹಾಡಿದವರು: ಎಸ್.ಪಿ.ಬಿ.
ಕನ್ನಡ ಗಂಗೆಯಲಿ ಮೀಯುವೆ ನಾನೀಗ, ಮೀಯುವೆ ನಾನೀಗ
ಕನ್ನಡ ಗಂಗೆಯಲಿ ಮೀಯುವೆ ನಾನೀಗ, ಮೀಯುವೆ ನಾನೀಗ
ಗಂಧದ ಕಂಪಿನಲಿ, ಹಾಡುವೆ ನಾನೀಗ, ಹಾಡುವೆ ನಾನೀಗ
ಜೀವನ ಗಾಯನ ಪಾವನವೊ, ದೇವರ ವರದಿಂದ…
ಕನ್ನಡ ಗಂಗೆಯಲಿ ಮೀಯುವೆ ನಾನೀಗ, ಮೀಯುವೆ ನಾನೀಗ
ಒಲವಿನ ಶೃತಿಯಿರಲು, ಮನಬಯಸಿದ ಸತಿಯಿರಲು
ಸರಳತೆ ಸವಿಯಿರಲು, ನಿಜ ಗೆಳೆಯರು ಜೊತೆಯಿರಲು
ಸ್ವರ್ಗದ ಕನಸೇತಕೆ, ಮುಕ್ತಿಯ ಭ್ರಮೆಯೇತಕೆ, ಬದುಕಿಗೇ…
ಹೊನ್ನಿನ ಹೊರೆಯೇತಕೆ, ಕೀರ್ತಿಯ ಸೆರೆಯೇತಕೆ, ಬದುಕಿಗೇ….
ಸುಂದರ ಸಂಸಾರ ಸವಿ ಸಾಲದೆ
ಕನ್ನಡ ಗಂಗೆಯಲಿ ಮೀಯುವೆ ನಾನೀಗ, ಮೀಯುವೆ ನಾನೀಗ
ಗಂಧದ ಕಂಪಿನಲಿ, ಹಾಡುವೆ ನಾನೀಗ, ಹಾಡುವೆ ನಾನೀಗ
ಜೀವನ ಗಾಯನ ಪಾವನವೊ, ದೇವರ ವರದಿಂದ…..
ಕನ್ನಡ ಗಂಗೆಯಲಿ ಮೀಯುವೆ ನಾನೀಗ, ಮೀಯುವೆ ನಾನೀಗ
ಕಲೆಗಳ ತವರಿರಲು, ಕವಿ ಋಷಿಗಳ ಬಲವಿರಲು
ಕಲಿಕೆಯ ಕಡಲಿರಲು, ಗುರಿತಲುಪಿಸೊ ಹಡಗಿರಲು
ನಿತ್ಯವು ಹೊಸ ಸಾಧನೆ, ಸತ್ಯವೆ ಆಲೋಚನೆ, ಬದುಕಿಗೇ….
ಸ್ನೇಹವೆ ಸಹಚಾರಿಯೋ, ಪ್ರೇಮವೇ ಸಹಪಾಠಿಯೋ, ಬದುಕಿಗೇ…..
ಸುಂದರ ಸಂಸಾರ ಸವಿ ಸಾಲದೆ
ಕನ್ನಡ ಗಂಗೆಯಲಿ ಮೀಯುವೆ ನಾನೀಗ, ಮೀಯುವೆ ನಾನೀಗ
ಗಂಧದ ಕಂಪಿನಲಿ, ಹಾಡುವೆ ನಾನೀಗ, ಹಾಡುವೆ ನಾನೀಗ
ಜೀವನ ಗಾಯನ ಪಾವನವೊ, ದೇವರ ವರದಿಂದ…..
ಕನ್ನಡ ಗಂಗೆಯಲಿ ಮೀಯುವೆ ನಾನೀಗ, ಮೀಯುವೆ ನಾನೀಗ
Read more here
Shrungara Kavya Video Song Shrungara Kavya Kannada
O Meghave Meghave Song Shrungara Kavya kannada
Sri Chakradarege song Swathi Muthu Sudeep in kannada ಸ್ವಾತಿ ಮುತ್ತು
Jeevanavellavu Naa Haaduve Song Shrungara Kavya kannada