HomeLyricsKadalige Ondu Kone Ide Indrajith Movie - Lyrical Song in kannada ...

Kadalige Ondu Kone Ide Indrajith Movie – Lyrical Song in kannada – ಕಡಲಿಗೆ ಒಂದು ಕೊನೆಯಿದೆ

Spread the love

ಕಡಲಿಗೆ ಒಂದು ಕೊನೆಯಿದೆ ಸ್ನೇಹಕೆ ಎಲ್ಲಿದೆ – ಇಂದ್ರಜಿತ್

 

ಇಂದ್ರಜಿತ್
ಸಂಗೀತ ಮತ್ತು ಸಾಹಿತ್ಯ : ಹಂಸಲೇಖ,
ಗಾಯನ : ಎಸ್ ಪಿ ಬಿ , ಚಂದ್ರಿಕಾ ಗುರುರಾಜKadalige Ondu Koneyide | Indrajith | HD Audio - YouTube

ಕಡಲಿಗೆ ಒಂದು ಕೊನೆಯಿದೆ  ಸ್ನೇಹಕೆ ಎಲ್ಲಿದೆ
ಸಾವಿಗೂ  ಒಂದು ಮಿತಿ ಇದೆ ಪ್ರೀತಿಗೆ ಎಲ್ಲಿದೇ
ಸ್ನೇಹ ಎಂಬ ಹೂಬನದಲ್ಲಿ ಬಾ ಓಲಾಡುವಾ
ಪ್ರೀತಿ ಎಂಬ ಬಾನಂಚಲಿ ಬಾ ತೇಲಾಡುವಾ ..
ನೋಡಲ್ಲಿ ಆ ಬೆಳ್ಳಿ ಸೂರ್ಯನು ಹರಸುತ ಜೊತೆಯಲಿ ಬಂದನು
ನೋಡಲ್ಲಿ ಆ ಬೆಳ್ಳಿ ಸೂರ್ಯನು ಹರಸುತ ಜೊತೆಯಲಿ ಬಂದನು
ಕಡಲಿಗೆ ಒಂದು ಕೊನೆಯಿದೆ  ಸ್ನೇಹಕೆ ಎಲ್ಲಿದೆ
ಸಾವಿಗೂ  ಒಂದು ಮಿತಿ ಇದೆ ಪ್ರೀತಿಗೆ ಎಲ್ಲಿದೇ

ಓ..ಹೋ  ಮುಂಜಾವಿನ ಹೂಮೇಲಿನ ಆ ಮಂಜಿನ ನಗು ಇಲ್ಲಿದೇ
ಆ..ಹಾ ಅನುರಾಗದ ಆ ಮೋದದ ಆನಂದದ ಹಾಡಿಲ್ಲಿದೆ
ಈ ಕಣ್ಣ ಕೊಳದ ಹಂಸವೇ ನೀನು ಹೃದಯ ಮಿಡಿಯುವೇ
ಈ ನನ್ನ ಎದೆಯ ತುಡಿತವೇ ನೀನು ನನ್ನ ನುಡಿಸುವೇ
ಬಾ ಹೃದಯದೊಲವೇ ಹೊಂಬಿಸಿಲ ಚೆಲುವೇ  ನೀನಿರಲು ಎಲ್ಲ ಗೆಲುವೇ ಗೆಲುವೇ

ಈ ಬಾಳಿನಾ ಮುಗಿಯದ ಪಯಣದ ನಡುವೆಯೂ
ನೋಡಲ್ಲಿ ಆ ಬೆಳ್ಳಿ ಸೂರ್ಯನು ಹರಸುತ ಜೊತೆಯಲಿ ಬಂದನು
ಕಡಲಿಗೆ ಒಂದು ಕೊನೆಯಿದೆ  ಸ್ನೇಹಕೆ ಎಲ್ಲಿದೆ
ಸಾವಿಗೂ  ಒಂದು ಮಿತಿ ಇದೆ ಪ್ರೀತಿಗೆ ಎಲ್ಲಿದೇ

ಓ..ಹೋ  ಇತಿಹಾಸದ ಛಲಗಾರರ ಬೆನ್ನಹಿಂದೆಯೇ ಹೆಣ್ಣೊಂದಿದೇ
ಈ.. ಹೋರಾಟದ ಬಲವೆಲ್ಲವೂ ಈ ನಿನ್ನಯ ಒಲವಲ್ಲಿದೆ
ಈ ಉಸಿರ ಮೇಲೆಯೇ ನಿನ್ನಯ ಹೆಸರು ನಾನು ಬರೆಯುವೇ
ಈ ಹೆಸರ ನೆನಪು ಮರೆಯದೇ ನಾನು ಹೀಗೆ ಉಳಿಸುವೇ
ಬಾ ಹೃದಯದೊಲವೇ ಹೊಂಬಿಸಿಲ ಚೆಲುವೇ  ನೀನಿರಲು ಎಲ್ಲ ಗೆಲುವೇ ಗೆಲುವೇ

ಈ ಬಾಳಿನಾ ಮುಗಿಯದ ಪಯಣದ ನಡುವೆಯೂ
ನೋಡಲ್ಲಿ ಆ ಬೆಳ್ಳಿ ಸೂರ್ಯನು ಹರಸುತ ಜೊತೆಯಲಿ ಬಂದನು
ಕಡಲಿಗೆ ಒಂದು ಕೊನೆಯಿದೆ  ಸ್ನೇಹಕೆ ಎಲ್ಲಿದೆ
ಸಾವಿಗೂ  ಒಂದು ಮಿತಿ ಇದೆ ಪ್ರೀತಿಗೆ ಎಲ್ಲಿದೇ
ಸ್ನೇಹ ಎಂಬ ಹೂಬನದಲ್ಲಿ ಬಾ ಓಲಾಡುವಾ
ಪ್ರೀತಿ ಎಂಬ ಬಾನಂಚಲಿ ಬಾ ತೇಲಾಡುವಾ ..
ನೋಡಲ್ಲಿ ಆ ಬೆಳ್ಳಿ ಸೂರ್ಯನು ಹರಸುತ ಜೊತೆಯಲಿ ಬಂದನು

 

Read more here

Saavirakke Obba Kalavida Song Lyrics in Kannada   ಸಾವಿರಕೆ ಒಬ್ಬ ಕಲಾವಿದ   

Chikkejamanru  Buguri Buguri  Song  kannada Ravichandran 

Aananda Paramaananda Song Lyrics   Sri Manjunatha  ಆನಂದ ಪರಮಾನಂದ

Baduki Uliyuvene   Siddappaji Song   Lyrics   ಬದುಕಿ ಉಳಿಯುವೆನೇ

 

 

Subscribe for Free and Support Us 

ನಿಮ್ಮ ಈ - ಮೇಲ್ ಬಳಸಿ 👇ಇದೀಗ ಉಚಿತವಾಗಿ 🆓 ಚಂದಾದಾರರಾಗಿ..!  ನಿಮಗೆ ನಮ್ಮ ಕಥೆಗಳು, ಹಾಡುಗಳು ಮತ್ತು ಮಾಹಿತಿ ಇಷ್ಟವಾದರೆ ನಿಮ್ಮ ಸಮೂಹಕ್ಕೆ ಶೇರ್ ಮಾಡುವುದನ್ನ ಮರೆಯದಿರಿ 
RELATED ARTICLES

LEAVE A REPLY

Please enter your comment!
Please enter your name here

- Advertisment -

Most Popular

Recent Comments

×