HomeLyricsHrudaya Samudra kalaki song lyrics - ಹೃದಯ ಸಮುದ್ರ ಕಲಕಿ

Hrudaya Samudra kalaki song lyrics – ಹೃದಯ ಸಮುದ್ರ ಕಲಕಿ

ಡಾ. ರಾಜ್‌ಕುಮಾರ್ ಅವರ ಧ್ವನಿಯಲ್ಲಿ ಮೂಡಿಬಂದ "ಹೃದಯ ಸಮುದ್ರ ಕಲಕಿ" ಹಾಡು ಅನ್ಯಾಯದ ವಿರುದ್ಧ ಹೋರಾಟ, ಧೈರ್ಯ ಮತ್ತು ನ್ಯಾಯದ ಸಂದೇಶ ಸಾರುವ ಶಕ್ತಿಶಾಲಿ ಕನ್ನಡ ಚಲನಚಿತ್ರ ಗೀತೆ.

Hrudaya Samudra kalaki song lyrics – ಹೃದಯ ಸಮುದ್ರ ಕಲಕಿ

ಓಂ…ಓಂ…ಓಂ…ಓಂ…ಓಂ….
ಹೃದಯ ಸಮುದ್ರ ಕಲಕಿ
ಹೊತ್ತಿದೆ ದ್ವೇಷದ ಬೆಂಕಿ
ರೋಶಾಗ್ನಿ ಜ್ವಾಲೆ ಉರಿದುರಿದೂ….

ಹೃದಯ ಸಮುದ್ರ ಕಲಕಿ
ಹೊತ್ತಿದೆ ದ್ವೇಷದ ಬೆಂಕಿ
ರೋಶಾಗ್ನಿ ಜ್ವಾಲೆ ಉರಿದುರಿದೂ…
ದುಷ್ಟ ಸಂಹಾರಕೆ ಸತ್ಯ ಝೇಂಕಾರಕೆ
ಪ್ರಾಣ ಒತ್ತೆ ಇಟ್ಟು…ಹೋ….ರಾಡುವೆ
ದಿಟ್ಟ ಹೆಜ್ಜೆ ಇಟ್ಟು, ಯಜ್ಞ ದೀಕ್ಷೆ ತೊಟ್ಟು ,
ನಡೆಸುವೆ ಅಶ್ವಮೇಧ..
ಅಶ್ವಮೇಧ..
ಅಶ್ವಮೇಧ..
.ಅಶ್ವಮೇಧ…

ಸೂರ್ಯ ಚಂದ್ರರೇ…ನಿನ್ನ ಕಂಗಳು
ಗಿರಿ ಶೃಂಗವೇ ನಿನ್ನ ಅಂಗವೋ..ಓಓಓಓ
ಓಓಓ…ಓಓಓಓಓಓಓಓಓಓಓ…
ದಿಕ್ಪಾಲಕರೆ ನಿನ್ನ ಕಾಲ್ಗಳು
ಮಿಂಚು ಸಿಡಿಲು ನಿನ್ನ ವೇಗವು
ಜೀವ ಜೀವದಲಿ ಬೆರೆತು ಹೋದ…
ಭಾವ ಭಾವದಲಿ ಕರಗಿ ಹೋದ….
ಜೀವಾಶ್ವವೇ…ದೂರಾದೆಯ
ಪ್ರಾಣಾಶ್ವವೇ…ಮರೆಯಾದೆಯ
ದಿಟ್ಟ ಹೆಜ್ಜೆ ಇಟ್ಟು ಯಜ್ಞ ದೀಕ್ಷೆ ತೊಟ್ಟು
ನಡೆಸುವೆ ಅಶ್ವಮೇಧ…
ಅಶ್ವಮೇಧ…
ಅಶ್ವಮೇಧ….
ಅಶ್ವಮೇಧ…..

ವಿಷ ವ್ಯೂಹವ ಕುಟ್ಟಿ ಕೆಡವಲು
ವೀರ ಪೌರುಷ ಎತ್ತಿ ಹಿಡಿದು
ತಕಿಟ ಧಿಂ ಧಿರನ, ತಕಿಟ ಧಿಂ ಧಿರನ,
ತಕಿಟ ಧಿಂ ಧಿರನ ಧೀಂ…
ಧಿರನ ಧಿರನ ಧಿರನ ಧಿರನ, ಧಿಂ ತನ
ತಕಿಟ ಧಿಂ, ತಕಿಟ ಧಿಂ, ಧಿಂ ತನ
ಛದ್ಮ ವೇಷವ ಹೊರ ಎಳೆಯಲು
ಕ್ಷಾತ್ರ ತೇಜದ ಕತ್ತಿ ಇರಿದು
ಖೂಳ ರಾಕ್ಷಸರ ಕೊಚ್ಚಿ ನಡೆವೆ
ನೀತಿ ನೇಮಗಳ ಬಿತ್ತಿ ಬೆಳೆವೆ….
ಆಕಾಶವೇ…ಮೇಲ್ಬೀಳಲಿ
ಭೂತಾಯಿಯೇ… ಬಾಯ್ಬಿರಿಯಲಿ
ದಿಟ್ಟ ಹೆಜ್ಜೆ ಇಟ್ಟು ಯಜ್ಞ ದೀಕ್ಷೆ ತೊಟ್ಟು
ನಡೆಸುವೆ ಅಶ್ವಮೇಧ…
ಅಶ್ವಮೇಧ..
ಅಶ್ವಮೇಧ….
ಅಶ್ವಮೇಧ…

ಹೃದಯ ಸಮುದ್ರ ಕಲಕಿ
ಹೊತ್ತಿದೆ ದ್ವೇಷದ ಬೆಂಕಿ
ರೋಶಾಗ್ನಿ ಜ್ವಾಲೆ ಉರಿದುರಿದು
ದುಷ್ಟ ಸಂಹಾರಕೆ , ಸತ್ಯ ಝೇಂಕಾರಕೆ
ಪ್ರಾಣ ಒತ್ತೆ ಇಟ್ಟು….ಹೋ….ರಾಡುವೆ
ದಿಟ್ಟ ಹೆಜ್ಜೆ ಇಟ್ಟು ಯಜ್ಞ ದೀಕ್ಷೆ ತೊಟ್ಟು

ನಡೆಸುವೆ ಅಶ್ವಮೇಧ…
ಅಶ್ವಮೇಧ..
ಅಶ್ವಮೇಧ…
ಅಶ್ವಮೇಧ…….
ಆಆಆಆ…..ಆಆಆಆಆಅಆಅ

Subscribe for Free and Support Us 

ನಿಮ್ಮ ಈ - ಮೇಲ್ ಬಳಸಿ 👇ಇದೀಗ ಉಚಿತವಾಗಿ 🆓 ಚಂದಾದಾರರಾಗಿ..!  ನಿಮಗೆ ನಮ್ಮ ಕಥೆಗಳು, ಹಾಡುಗಳು ಮತ್ತು ಮಾಹಿತಿ ಇಷ್ಟವಾದರೆ ನಿಮ್ಮ ಸಮೂಹಕ್ಕೆ ಶೇರ್ ಮಾಡುವುದನ್ನ ಮರೆಯದಿರಿ 
RELATED ARTICLES

LEAVE A REPLY

Please enter your comment!
Please enter your name here

- Advertisment -

Most Popular

Recent Comments