ಅಯ್ಯಪ್ಪ ಸ್ವಾಮಿ ಮಾಲೆ ಧರಿಸುವುದು ಹೇಗೆ..? ಗುರುಸ್ವಾಮಿಗಳೆಂದರೆ ಯಾರು..?
ಶಬರಿಮಲೆಗೆ ಹೋಗಬೇಕೆಂದರೆ ಅಯ್ಯಪ್ಪ ಸ್ವಾಮಿ ವ್ರತಧಾರಿಗಳು ಕಟ್ಟು ನಿಟ್ಟಿನ ನಿಯಮಗಳನ್ನು ಪಾಲಿಸಬೇಕಾಗುತ್ತದೆ. ಅಯ್ಯಪ್ಪ ಸ್ವಾಮಿ ಮಾಲೆ ಧರಿಸುವವರು ಯಾವ ನಿಯಮಗಳನ್ನು ಪಾಲಿಸಬೇಕು..? ಗುರುಸ್ವಾಮಿಗಳು ಎಂದರೆ ಯಾರು..? ಅಯ್ಯಪ್ಪ ಸ್ವಾಮಿ ವ್ರತಧಾರಿಗಳು ಹೇಗಿರಬೇಕು..?
ಶಬರಿಮಲೆ ಎಂದಾಕ್ಷಣ ನಮಗೆ ಮೊದಲು ನೆನಪಿಗೆ ಬರೋದು ಅಯ್ಯಪ್ಪ ಸ್ವಾಮಿ ಮತ್ತು ಮಾಲೆ ಧರಿಸುವ ಭಕ್ತರು. ಅಯ್ಯಪ್ಪ ಸ್ವಾಮಿಯ ಸಾನಿಧ್ಯವಾದ ಶಬರಿಮಲೆಯನ್ನು ಜಾತ್ಯಾತೀತೆಯ ನೆಲೆಬೀಡೆಂದರೆ ತಪ್ಪಾಗಲಾರದು. ಯಾಕೆಂದರೆ ಮಾಲೆ ಧರಿಸಿದ ಯಾವುದೇ ಜಾತಿಯ ಭಕ್ತನಾದರೂ ಕೂಡ ಶಬರಿಮಲೆಯಲ್ಲಿ ಒಂದಾಗುತ್ತಾರೆ. ಇಲ್ಲಿ ಭಕ್ತರ ಭಕ್ತಯೇ ಪ್ರಧಾನವಾಗಿರುತ್ತದೆ. ಮಾಲೆ ಧರಿಸಿದ ಪ್ರತಿಯೊಂದು ಅಯ್ಯಪ್ಪನ ಭಕ್ತರು ಒಂದು ಕುಟುಂಬದಂತೆ ಮಕರ ಸಂಕ್ರಾಂತಿಯಂದು ಶಬರಿ ಮಲೆಯಲ್ಲಿ ಬಂದು ಸೇರುತ್ತಾರೆ.
ಭಕ್ತರು ತಮ್ಮ ಕಷ್ಟಗಳನ್ನು ದೂರಾಗಿಸುವಂತೆ ಅಯ್ಯಪ್ಪ ಸ್ವಾಮಿಯ ಬಳಿ ಬೇಡಿಕೆಯನ್ನಿಟ್ಟು ಮಾಲೆಯನ್ನು ಧರಿಸುತ್ತಾರೆ. ಮಾಲೆ ಧರಿಸಿದಾಗ ಭಕ್ತರು ಕಠಿಣ ವ್ರತವನ್ನು ಪಾಲಿಸಬೇಕಾಗುತ್ತದೆ. ಮಾಲೆ ಧರಿಸಿದ ವ್ರತ ಧಾರಿಗಳು ಕೊರೆಯುವ ಚಳಿಯ್ಲಲ್ಲಿ ಮುಂಜಾನೆ ಬೇಗ ಎದ್ದು, ತಣ್ಣೀರಿನಿಂದ ಸ್ನಾನ ಮಾಡುತ್ತಾರೆ. ಹಿಡಿದ ವ್ರತ ಮುಗಿಯದ ತನಕ ಕಾಲಿಗೆ ಚಪ್ಪಲಿಯನ್ನು ಧರಿಸುವುದಿಲ್ಲ. ಮಾಂಸಾಹಾರದೊಂದಿಗೆ ತಮ್ಮ ಐಷಾರಾಮಿ ಜೀವನ ಶೈಲಿಯನ್ನು ತ್ಯಜಿಸಿ, ದುಶ್ಚಟಗಳಿಂದ ದೂರಾಗಿ ಅಯ್ಯಪ್ಪನ ನಾಮ ಸ್ಮರಣೆಯಲ್ಲಿ ತಲ್ಲೀನರಾಗಿರುತ್ತಾರೆ.
Ayyappa Sharanu Gosha- ಅಯ್ಯಪ್ಪ ಶರಣು ಘೋಷ; Swamiye Sharanam Iyyappa
ಇಲ್ಲಿದೆ ಸಂಪೂರ್ಣ ವಿವಿರ
ಮಂಡಲ ವ್ರತ
ಶಬರಿಮಲೆಯ ತೀರ್ಥಯಾತ್ರೆ ಎಂದರೆ ಇಂದ್ರಿಯಗಳ ಪರೀಕ್ಷೆಯೇ ಆಗಿದೆ. ತೀರ್ಥಯಾತ್ರೆಯನ್ನು ಯಶಸ್ವಿಯಾಗಿ ಪೂರೈಸುವುದಕ್ಕಾಗಿ ಯಾತ್ರಿಕರು ಸರಳವಾದ ಜೀವನ ರೀತಿಯನ್ನೊಳಗೊಂಡ ವ್ರತಾನುಷ್ಠಾನ ಮಾಡಿಕೊಳ್ಳಬೇಕು. ಸರಳವಾದ ಜೀವನ ವಿಧಾನದ ಪ್ರತೀಕವಾದ ಮಾಲೆಯನ್ನು ಧರಿಸುವುದರೊಂದಿಗೆ ವ್ರತಾರಂಭವಾಗುವುದು. ಈ ಕಾರ್ಯಕ್ರಮವನ್ನು ‘ಮಾಲೆ ಹಾಕುವುದು’ ಎಂಬುದಾಗಿ ಹೇಳುತ್ತಾರೆ. ಅಯ್ಯಪ್ಪನ ಲೋಕೆಟ್ಟನ್ನು ಹೊಂದಿದ ಮುತ್ತಿನ ಮಾಲೆಯನ್ನು ವ್ರತಧಾರಿಗಳು ಧರಿಸುತ್ತಾರೆ.
ಮಾಲೆ ಹಾಕಿ ಆಯಿತೆಂದರೆ ಆ ಭಕ್ತರು ಎಲ್ಲಾ ಲೌಕಿಕ ಸುಖಗಳನ್ನು ತ್ಯಜಿಸಿಕೊಂಡಿರುವ ಜೀವನವನ್ನು ನಡೆಸಬೇಕಾಗಿದೆ. ಹೊಗೆಬತ್ತಿ ಸೇದುವಿಕೆ ಮತ್ತು ಮದ್ಯಪಾನವನ್ನು ಕಡ್ಡಾಯವಾಗಿ ತ್ಯಜಿಸಬೇಕಾಗಿದೆ. ತೀರ್ಥಯಾತ್ರೆಯ ಕಾಲದಲ್ಲಿ ಭಕ್ತರು ಲೈಂಗಿಕ ಜೀವನದಿಂದ ಪೂರ್ತಿಯಾಗಿ ವಿಮುಖರಾಗಬೇಕು. ಆಚರಣೆಗಳ ನಿಯಮಾನುಸಾರ ಒಬ್ಬ ಅರ್ಚಕನಿಂದಲೋ ಗುರುಸ್ವಾಮಿಯಿಂದಲೋ ಮಾಲೆ ಹಾಕಿಸಿಕೊಳ್ಳಬೇಕು. ಹದಿನೆಂಟು ವರ್ಷಗಳ ಕಾಲ ಶಬರಿಮಲೆಯಲ್ಲಿ ಕಾಲಿಟ್ಟ ವ್ಯಕ್ತಿಯನ್ನೇ ಗುರುಸ್ವಾಮಿ ಎಂದು ಕರೆಯಲಾಗುತ್ತದೆ. ಮನೆಯ ಪೂಜೆಯ ಕೋಣೆಯಲ್ಲಿ ಒಬ್ಬರಿಗೆ ಮಾಲೆ ಹಾಕಬಹುದು. ತೀರ್ಥಯಾತ್ರೆ ಪೂರ್ತಿಗೊಳಿಸಿದ ಬಳಿಕ ಮಾಲೆಯನ್ನು ಬೇರೆಾಗಿ ತೆಗೆದಿರಿಸಬಹುದಾಗಿದೆ.
Ekadantaya Vakratundaya Gauri Tanayaya Dheemahi lyrics; ಏಕದಂತಾಯ ವಕ್ರತುಂಡಾಯ
ಗಂಟು ತುಂಬುವುದು
ಅಯ್ಯಪ್ಪ ಭಕ್ತರು ವ್ರತಾನುಷ್ಠಾನದಲ್ಲಿರುವ ನಲ್ವತ್ತೊಂದು ದಿನಗಳ ಸರಳ ಜೀವನವನ್ನು ‘ಮಂಡಲ ವ್ರತ’ ಎನ್ನುತ್ತಾರೆ. ಭಕ್ತರು ಸರಳವೂ ಭಕ್ತಿ ನಿರ್ಭರವೂ ಆದ ಮತ್ತು ದುರ್ನಡತೆಯಿಂದ ದೂರವಿರುವ ಜೀವನವನ್ನು ವ್ರತದ ಕಾಲದಲ್ಲಿ ನಡೆಸಬೇಕು. ಮಾಲೆ ಹಾಕುವುದು ಎಂಬುದು ವ್ರತಧಾರಣೆ ಮಾಡಿದುದರ ಸೂಚನೆಯಾಗಿದೆ. ಶನಿವಾರವಾಗಲಿ ಅಥವಾ ಉತ್ತರಾ ನಕ್ಷತ್ರವಾಗಲಿ ಮಾಲೆ ಧರಿಸಲು ಉತ್ತಮ ಎಂಬುದು ಭಕ್ತರ ನಂಬಿಕೆ. ಉತ್ತರಾ ನಕ್ಷತ್ರವು ಸ್ವಾಮಿ ಅಯ್ಯಪ್ಪನ ಜನ್ಮನಕ್ಷತ್ರವಾಗಿದೆ.
ನಲ್ವತ್ತೊಂದು ದಿನಗಳ ವ್ರತ ಎಂಬ ವ್ಯವಸ್ಥೆಯಲ್ಲಿ ಉತ್ತಮ ಶಿಸ್ತು ಮತ್ತು ಆರೋಗ್ಯಕರ ಅಭ್ಯಾಸಗಳನ್ನು ಜೀವನದಲ್ಲಿ ಅಳವಡಿಸಿಕೊಳ್ಳಬೇಕು ಎಂಬುದೆ ಇಲ್ಲಿರುವ ಉದ್ದೇಶ. ಆತ್ಮಸಂಯಮ ಮತ್ತು ಪ್ರಾರ್ಥನೆಯ ಸಂಯೋಜನೆಯಿಂದ ಜೀವನದಲ್ಲಿ ಸದ್ಗುಣಗಳನ್ನು ಹುಟ್ಟುಹಾಕಿ ಅವುಗಳನ್ನು ಗಟ್ಟಿಗೊಳಿಸುವುದು ಇಲ್ಲಿನ ಲಕ್ಷ್ಯ. ವ್ರತಾನುಷ್ಠಾನದ ಸಮಯದಲ್ಲಿ ಕಪ್ಪು ಬಣ್ಣದ ವಸ್ತ್ರಗಳನ್ನು ಧರಿಸುವುದರ ಮೂಲಕ ಲೌಕಿಕವಾದ ಕೆಲಸಗಳಲ್ಲಿರುವ ವಿರಕ್ತಿ ಪ್ರಕಟವಾಗುತ್ತದೆ. ಕೂದಲು ಕತ್ತರಿಸುವುದು, ಮುಖಕ್ಷೌರ ಮಾಡುವುದು, ಉಗುರು ಕತ್ತರಿಸುವುದು ಇವೆಲ್ಲ ವ್ರತದ ಕಾಲದಲ್ಲಿ ನಿಷಿದ್ಧವಾಗಿವೆ.

ಪೇಟ್ಟ ತುಳ್ಳಲ್
ಶಬರಿಮರಿಮಲೆ ತೀರ್ಥಯಾತ್ರೆಗಾಗಿ ಇರುಮುಡಿ ಗಂಟಿಗಿರುವ ವಸ್ತುಗಳನ್ನು ಸಿದ್ಧಪಡಿಸುವುದು ಮತ್ತು ಗಂಟುಕಟ್ಟುವುದು ಇಲ್ಲಿ ಒಂದು ಆಚರಣೆಯಾಗಿದೆ. ಗುರುಸ್ವಾಮಿಯ ನಿರ್ದೇಶನದಂತೆ ಇದು ನಡೆಯಬೇಕಾಗಿದೆ. ಸರಳವಾದ ಜೀವನ ನಡೆಸಿ, ವ್ರತಸ್ವೀಕರಿಸಿ, ಇರುಮುಡಿ ಗಂಟನ್ನು ತಲೆಯಲ್ಲಿ ಹೊತ್ತು ಬರುವವರಿಗಷ್ಟೇ ಪವಿತ್ರವಾದ ಹದಿನೆಂಟು ಮೆಟ್ಟಲುಗಳನ್ನು ಮೆಟ್ಟಲು ಅನುಮತಿ ಕೊಡಲಾಗುತ್ತದೆ. ಉಳಿದ ಭಕ್ತರು ಬೇರೊಂದು ದಾರಿಯ ಮೂಲಕ ಶ್ರೀಕೋವಿಲಿನ ಮುಂಭಾಗಕ್ಕೆ ಬಂದು ನಮಸ್ಕರಿಸಬಹುದಾಗಿದೆ.
Deva madeva baro lyrics; Mahadeshwara Song Lyrics
ಗಂಟುತುಂಬಿಸುವುದರ ಭಾಗವಾಗಿ ಸುಲಿದ ತೆಂಗಿನ ಕಾಯಿಯೊಳಗೆ ಶರಣ ಕೂಗಿನೊಂದಿಗೆ ಅಭಿಷೇಕಕ್ಕಿರುವ ದನದ ತುಪ್ಪವನ್ನು ತುಂಬಿಸುತ್ತಾರೆ. ಸುಲಿದ ತೆಂಗಿನ ಕಾಯಿಯ ಶಿರಸ್ಸಿನಲ್ಲಿ ಚಿಕ್ಕ ತೂತೊಂದನ್ನು ಮಾಡಿ, ನೀರನ್ನು ಹೊರತೆಗೆದು, ಅದರಲ್ಲಿ ತುಪ್ಪವನ್ನು ತುಂಬಿಸುವುದೂ ಸಾಂಕೇತಿಕವಾಗಿದೆ. ಮನಸ್ಸಿನಲ್ಲಿ ತುಂಬಿದ ಲೌಕಿಕ ಸಂಬಂಧಗಳನ್ನು ಕೈಬಿಟ್ಟು ಆಧ್ಯಾತ್ಮಿಕ ಚಿಂತನೆಯನ್ನು ತುಂಬುವುದು ಎಂಬುದು ಇಲ್ಲಿ ತಾತ್ಪರ್ಯ. ತುಪ್ಪ ತುಂಬಿಸಿದ ತೆಂಗಿನಕಾಯಿ ಅಯ್ಯಪ್ಪ ಸ್ವಾಮಿಗೆ ಅರ್ಪಿತವಾಗುವ ಸೇವೆಯಾಗಿದೆ.
ಇರುಮುಡಿ ಗಂಟಿನಲ್ಲಿ ಎರಡು ಭಾಗಗಳಿದ್ದು ಮುಂದಿನ ಭಾಗದಲ್ಲಿ ತುಪ್ಪ ತುಂಬಿರುವ ತೆಂಗಿನ ಕಾಯಿಯನ್ನೂ ಅಯ್ಯಪ್ಪ ಸ್ವಾಮಿಗಿರುವ ಇತರ ಪೂಜಾದ್ರವ್ಯಗಳನ್ನು ಇಟ್ಟುಕೊಂಡು ಹಗ್ಗದಿಂದ ಕಟ್ಟಿ ಭದ್ರಪಡಿಸಿಕೊಳ್ಳಬೇಕು. ಈ ಭಾಗವನ್ನು ಆಧ್ಯಾತ್ಮಿಕ ಶಕ್ತಿಯಿಂದ ತುಂಬಿರುವುದಾಗಿ ಭಾವಿಸಲಾಗುತ್ತದೆ. ಹಿಂದಿನ ಭಾಗದಲ್ಲಿ ವಿವಿಧ ಪವಿತ್ರ ಕ್ಷೇತ್ರಗಳಲ್ಲಿ ಒಡೆಯಲಿರುವ ತೆಂಗಿನಕಾಯಿಗಳನ್ನು ತುಂಬಿಸಿಕೊಳ್ಳುತ್ತಾರೆ.
ಪರಂಪರಾಗತ ದಾರಿಗಳು
ಅಯ್ಯಪ್ಪ ಸ್ವಾಮಿಯು ಯುದ್ಧದಲ್ಲಿ ರಾಕ್ಷಸಿ ಮಹಿಷಿಯನ್ನು ನಿಗ್ರಹಿಸಿದ ಸಂಭ್ರಮವನ್ನು ಪೇಟ್ಟ ತುಳ್ಳಲ್ ಆಚರಣೆ ಸೂಚಿಸುತ್ತದೆ. ಇದು ಅನ್ಯಾಯದ ಮೇಲೆ ನ್ಯಾಯವು ಸಂಪಾದಿಸಿದ ಗೆಲುವನ್ನು ಕೂಗಿ ಹೇಳುವ ಪಾವನಕರ ನೃತ್ಯವಾಗಿದೆ. ಶಬರಿಮಲೆ ತೀರ್ಥಯಾತ್ರೆಯ ಅಂತಿಮ ಪಾದದಲ್ಲಿ ಈ ನೃತ್ಯ ನಡೆಯುತ್ತದೆ. ಸಂಪ್ರದಾಯವನ್ನನುಸರಿಸಿ ಅಂಬಲಪುಳ ತಂಡದವರು ಮೊದಲಿಗೆ ಪೇಟ್ಟ ನೃತ್ಯವನ್ನು ಮಾಡುತ್ತಾರೆ.
ಸಾವಿರಕ್ಕಿಂತಲೂ ಹೆಚ್ಚು ಭಕ್ತರನ್ನೊಳಗೊಂಡ ಈ ತಂಡವು ಮಧ್ಯಾಹ್ನದ ಹೊತ್ತಿಗೆ ಪೇಟ್ಟ ಜಂಕ್ಶನಿನ ಕೊಚ್ಚಂಬಿಲದ ಮೇಲೆ ಆಕಾಶದಲ್ಲಿ ಗರುಡ ಹಾರುವುದನ್ನು ಕಂಡೊಡನೆ ಕುಣಿತವನ್ನು ಆರಂಭಿಸುತ್ತಾರೆ. ಈ ತಂಡವು ಅಯ್ಯಪ್ಪ ಸ್ವಾಮಿಯ ಉಪಸೇನಾಪತಿಯಾದ ವಾವರನಿಗೆ ವಂದನೆ ಸಲ್ಲಿಸುವುದಕ್ಕಾಗಿ ನಯಿನಾರ್ ಮಸೀದಿಯತ್ತ ಸಾಗುತ್ತದೆ. ತಂಡದವರನ್ನು ಎರುಮೇಲಿ ಮಹಲ್ ಜಮಾತ್ ಕಮಿಟಿಯ ಕಾರ್ಯಕರ್ತರು ಔಪಚಾರಿಕವಾಗಿ ಸ್ವಾಗತಿಸುತ್ತಾರೆ.
ಅವರು ಒಂದು ಕಿ.ವಿೂ ದೂರದಲ್ಲಿರುವ ಶ್ರೀ ಧರ್ಮಶಾಸ್ತಾ ದೇವಾಲಯದವರೆಗೆ ಭಕ್ತರನ್ನು ಹಿಂಬಾಲಿಸುತ್ತಾರೆ. ಅಲ್ಲಿ ಜಮಾತ್ ಕಮಿಟಿ ಕಾರ್ಯಕರ್ತರನ್ನು ಮತ್ತು ಅಯ್ಯಪ್ಪ ಭಕ್ತರನ್ನು ದೇವಸ್ವಂಬೋರ್ಡ್ ಅಧಿಕಾರಿಗಳು ಸ್ವಾಗತಿಸುತ್ತಾರೆ. ಆಲಂಗಾಡ್ ತಂಡದ ಪೇಟ್ಟ ತುಳ್ಳಲ್ ಸಾಯಂಕಾಲ ಹಲ ಬೆಳಕಿನಲ್ಲಿ ನಕ್ಷತ್ರ ಮಿನುಗುವ ಹೊತ್ತಿಗೆ ಆರಂಭವಾಗುತ್ತದೆ. ಉಭಯ ತಂಡದವರೂ ರಾತ್ರಿ ವಲಿಯಂಬಲದಲ್ಲಿ ತಂಗುತ್ತಾರೆ: ಬಳಿಕ ಪಂಬೆಗೆ ಹೋಗಿ ಪಂಬ ಔತಣದಲ್ಲಿ ಭಾಗವಹಿಸುತ್ತಾರೆ. ಅನಂತರ ಸನ್ನಿಧಾನದಲ್ಲಿ ಜರಗುವ ಮಕರವಿಳಕ್ಕು ಉತ್ಸವದಲ್ಲಿ ಪಾಲ್ಗೊಳ್ಳುವುದಕ್ಕಾಗಿ ಮುಂದುವರಿಯುತ್ತಾರೆ.
ಉತ್ಸವಗಳು
ಶಬರಿಮಲೆ ಆರೋಹಣಕ್ಕೆ ಎರುಮೇಲಿ, ವಂಡಿಪ್ಪೆರಿಯಾರ್, ಚಾಲಕ್ಕಯ ಎಂಬೀ ಬೇರೆ ಬೇರೆ ದಾರಿಗಳಿವೆ. ಎರುಮೇಲಿ ಮೂಲಕ ಸಾಗುವ ಮಾರ್ಗವನ್ನು ಪರಂಪರಾಗತ ದಾರಿಯೆಂದು ತಿಳಿಯಲಾಗುತ್ತದೆ. ಮಹಿಷಿಯನ್ನು ನಿಗ್ರಹಿಸುವುದಕ್ಕಾಗಿ ಅಯ್ಯಪ್ಪನು ಈ ದಾರಿಯನ್ನೇ ಬಳಸಿಕೊಂಡನು ಎಂಬುದಿಲ್ಲಿ ಮುಖ್ಯ.
ಅತಿ ಹೆಚ್ಚು ಕಷ್ಟಕರವೆನಿಸಿದ ಈ ದಾರಿಯ ಮೂಲಕ ಶಬರಿಮಲೆಯನ್ನು ಹೋಗಿ ಸೇರಲು ಹಲವು ಗುಡ್ಡಗಳನ್ನು ಏರುತ್ತ 61 ಕಿ.ವಿೂ ಕಾಡುದಾರಿಯಲ್ಲಿ ನಡೆಯಬೇಕು. ಎರುಮೇಲಿ ದಾರಿಯಾಗಿ ಪಯಣಿಸುವ ಭಕ್ತರಿಗೆ ಶಬರಿಮಲೆ ತಲಪುವುದರ ಮೊದಲು ಹಲವಾರು ಸ್ಥಳಗಳನ್ನು ಸಂದರ್ಶಿಸಲು ಸಾಧ್ಯವಿದೆ. ಎರುಮೇಲಿಯ ಧರ್ಮಶಾಸ್ತಾವನ್ನೂ ವಾವರ ಸ್ವಾಮಿಯನ್ನೂ ನಮಿಸಿ ಭಕ್ತರು ಪ್ರಯಾಣವನ್ನು ಆರಂಭಿಸುತ್ತಾರೆ.
ಎರುಮೇಲಿಯಿಂದ ನಾಲ್ಕು ಕಿ.ವಿೂ. ಮುಂದಕ್ಕೆ ಸರಿದಾಗ, ಹಿಂದೆ ಅಯ್ಯಪ್ಪ ಸ್ವಾಮಿ ತನ್ನ ಪಯಣದ ಕಾಲದಲ್ಲಿ ವಿಶ್ರಮಿಸಿದ ಪೇರೂರ್ತೋಡ್ ಎಂಬ ಸ್ಥಳಕ್ಕೆ ತಲಪುತ್ತಾರೆ. ಶಬರಿಮಲೆಯ ಆರೋಹಣದ ಆರಂಭ ಎಂಬ ನೆಲೆಯಲ್ಲಿಯೂ ಈ ಸ್ಥಳಕ್ಕೆ ಪ್ರಾಧಾನ್ಯವಿದೆ. ಪೇರೂರ್ತೋಡಿನ ಆಚೆ ಇರುವ ಕಾಡು ಅಯ್ಯಪ್ಪನ ‘ಪೂಂಗಾವನ’ವೆಂದು ಪ್ರಸಿದ್ಧಿ ಪಡೆದಿದೆ. ಈ ದಾರಿಯಲ್ಲಿ ಮುಂದಿನ ಕೇಂದ್ರವು ಪೇರೂರ್ ತೋಡಿಗೆ 10 ಕಿ.ವಿೂ ಆಚೆ ಇರುವ ಕಾಳಕೆಟ್ಟಿ ಎಂಬ ಸ್ಥಳವಾಗಿದೆ.
ಅಯ್ಯಪ್ಪನು ಮಹಿಷಿಯನ್ನು ಕೊಲ್ಲುವುದಕ್ಕೆ ಸಾಕ್ಷಿಯಾದ ಭಗವಾನ್ ಶಿವನು ತನ್ನ ಎತ್ತನ್ನು ಇಲ್ಲಿ ಕಟ್ಟಿ ಹಾಕಿದ್ದನು ಎಂಬುದು ನಂಬಿಕೆ. ತೀರ್ಥಯಾತ್ರಿಕರು ಇಲ್ಲಿನ ದೇವಾಲಯದಲ್ಲಿ ಕರ್ಪೂರ ದೀಪವನ್ನು ಉರಿಸಿ ಪ್ರಾರ್ಥಿಸುತ್ತಾರೆ ಮತ್ತು ತೆಂಗಿನ ಕಾಯಿ ಒಡೆಯುತ್ತಾರೆ. ಕಾಳಕೆಟ್ಟಿಯಿಂದ ಎರಡು ಕಿ.ವಿೂ ಮುಂದೆ, ಪಂಬ ನದಿಯ ಪೋಷಕ ನದಿಯೆನಿಸಿದ ಅಳುತ ಹರಿಯುತ್ತದೆ. ಕೀಳ್ಕಾಂತುಕ್ಕಾಯ ಅಳುತಮಲ ಏರುವುದರ ಮೊದಲು ಭಕ್ತರು ಅಳುತದಲ್ಲಿರುವ ಕಲ್ಲುಗಳನ್ನು ಹೆಕ್ಕಿ ಒಟ್ಟುಗೂಡಿಸುತ್ತಾರೆ.
ಇಲ್ಲಿಂದ ಮುಂದೆ ಎರಡು ಕಿ.ವಿೂ ದೀರ್ಘವಿರುವ ಗುಡ್ಡದ ಆರೋಹಣ ದಾರಿ ಕಡಿದಾದ ಗುಡ್ಡಗಾಡು ಪ್ರದೇಶವಾಗಿದ್ದು ಅತ್ಯಂತ ತ್ರಾಸದಾಯಕವಾದುದು. ಅಳುತ ಮಲೆಯ ಶಿಖರದಲ್ಲಿ ‘ಕಲ್ಲಿಡುಂಕುನ್ನು’ ಇದೆ. ಮಹಿಷಿಯ ದೇಹದ ಪಳೆಯುಳಿಕೆಗಳನ್ನು ದೂರೀಕರಿಸುವ ಸಂಕೇತವಾಗಿ ಭಕ್ತರು ತಾವು ಶೇಖರಿಸಿದ್ದ ಕಲ್ಲುಗಳನ್ನು ಇಲ್ಲಿ ಎಸೆಯುತ್ತಾರೆ.
ಎರಡನೇ ದಾರಿ
ಮಲೆಯನ್ನು ಏರಿ ಯಶಸ್ವಿಯಾಗಿ ಶಿಖರವನ್ನು ತಲಪಿದ ಬಳಿಕ ಇಂಜಿಪ್ಪಾರಕ್ಕೋಟ್ಟ ಮೊದಲುಗೊಂಡು ಮಲೆಯನ್ನು ಇಳಿಯುವುದಾಗಿದೆ. ಇಂಜಿಪ್ಪಾರಕ್ಕೋಟೆಯಲ್ಲಿ ‘ಕೋಟೆಯಲ್ಲಿನ ಶಾಸ್ತಾವು’ ಎಂಬ ಹೆಸರಿನಿಂದ ಪ್ರಸಿದ್ಧನಾದ ಶಾಸ್ತಾವಿನ ಪ್ರತಿಷ್ಠೆಯಿದೆ. ಭಕ್ತರು ಅಲ್ಲಿ ಪೂಜೆ ಸಲ್ಲಿಸುತ್ತಾರೆ. ಇಲ್ಲಿನ ಇಳಿಜಾರು ಪ್ರದೇಶದಲ್ಲಿರುವ ಇಳಿಯುವಿಕೆ ಕರಿಮಲತ್ತೋಡಿನಲ್ಲಿ ಕೊನೆಗೊಳ್ಳುತ್ತದೆ. ಅದರ ಸವಿೂಪದಲ್ಲೆ ಒಂದು ಬದಿಯಲ್ಲಿ ಅಳುತ ಬೆಟ್ಟವೂ ಮತ್ತೊಂದು ಬದಿಯಲ್ಲಿ ಕರಿಮಲ ಬೆಟ್ಟವೂ ಕಾಣುತ್ತವೆ.

ಕರಿಮಲ ಬೆಟ್ಟವು ಆನೆಗಳ ವಿಹಾರ ಕೇಂದ್ರವಾಗಿದೆ. ಕಾಡು ಕೋಣಗಳು ನೀರು ಕುಡಿಯುವುದಕ್ಕಾಗಿ ಕರಿಮಲ ತೋಡಿಗೆ ಬರುತ್ತವೆ. ಮರಗಟ್ಟುವ ಚಳಿ ಮತ್ತು ಕಾಡುಪ್ರಾಣಿಗಳಿಂದ ರಕ್ಷಣೆ ಪಡೆಯುವುದಕ್ಕಾಗಿ ಭಕ್ತರು ಇಲ್ಲಿ ಬೆಂಕಿ ಉರಿಸುತ್ತಾರೆ. ಕರಿಮಲೆಯು ಏಳು ಹಂತಗಳನ್ನು ಹೊಂದಿದೆ. ಹಾಗಾಗಿ ಯಾತ್ರಿಕರು ಹಂತ ಹಂತವಾಗಿ ಯಾತ್ರೆಯನ್ನು ಮುನ್ನಡೆಸುತ್ತಾರೆ. ಮುಂದಿನ ಐದು ಕಿ.ವಿೂ ಆರೋಹಣವು ಬಹಳ ಕಠಿಣವಾದುದು.
‘ಸ್ವಾಮಿಯೇ ಶರಣಮಯ್ಯಪ್ಪಾ’ ಎಂದು ಶರಣ ಮಂತ್ರವನ್ನು ಕೂಗುತ್ತಾ ಭಕ್ತರು ಮಲೆಯನ್ನು ಏರುತ್ತಾರೆ. ಕರಿಮಲೆ ಬೆಟ್ಟದ ತುದಿಯಲ್ಲಿರುವ ಸಮತಟ್ಟಾದ ಪ್ರದೇಶ ಭಕ್ತರಿಗೆ ವಿಶ್ರಮಿಸಲು ಅನುಕೂಲಕರವಾಗಿದೆ. ಒಂದು ಬಾವಿಯೊಳಗಿನ ಬಾವಿ ಎನಿಸಿದನಾಳಿ ಬಾವಿಯ ತಣ್ಣೀರು ಮಲೆಏರಿ ದಣಿದ ಭಕ್ತರ ಬಾಯಾರಿಕೆ ಮತ್ತು ಆಯಾಸವನ್ನು ದೂರೀಕರಿಸುತ್ತದೆ. ಇಲ್ಲಿ ಪ್ರತಿಷ್ಠೆಗೊಂಡಿರುವ ಕರಿಮಲಂದನ್, ಕೊಚ್ಚುಕಡುತ್ತ ಸ್ವಾಮಿ, ಭಗವತಿ ಎಂಬ ದೇವರುಗಳಿಗೆ ಭಕ್ತರು ಪೂಜೆ ಸಲ್ಲಿಸಬಹುದಾಗಿದೆ.
ಮೂರನೇ ದಾರಿ
ವಲಿಯಾನವಟ್ಟಂ ಮತ್ತು ಚೆರಿಯಾನವಟ್ಟಂ ಎಂಬ ಸ್ಥಳಗಳಿಂದ ಮುಂದೆ ಐದು ಕಿ.ವಿೂ ತನಕ ನೇರ ಇಳಿಜಾರು ದಾರಿ. ಅಲ್ಲಿ ಸಾಗಿದ ಭಕ್ತರು ಪಂಪಾ ನದಿಯನ್ನು ತಲಪುತ್ತಾರೆ.
ಪಂದಳದ ಅರಸನಾಗಿದ್ದ ರಾಜಶೇಖರನಿಗೆ ಶಿಶುರೂಪದಲ್ಲಿದ್ದ ಅಯ್ಯಪ್ಪನು ಪಂಬೆಯಲ್ಲಿ ಕಾಣಸಿಕ್ಕಿದನು ಎಂಬುದು ನಂಬಿಕೆ. ಇದುವೆ ಶಬರಿಮಲೆ ತೀರ್ಥಯಾತ್ರೆಯಲ್ಲಿ ಪಂಬೆಗೆ ದೊರಕಿದ ಪ್ರಾಧಾನ್ಯಕ್ಕೆ ಕಾರಣ.
ಗಂಗಾಜಲದಂತೆ ಪಂಪಾಜಲವೂ ತಮ್ಮನ್ನು ಪಾಪದಿಂದ ಮುಕ್ತಗೊಳಿಸುವುದು ಎಂದು ಭಕ್ತರು ನಂಬುತ್ತಾರೆ. ಪಂಪಾನದಿಯಿಂದ ಎಂಟು ಕಿ.ವಿೂ ದೂರದಲ್ಲಿ ಶ್ರೀಕೋವಿಲ್ ಇರುವ ಸನ್ನಿಧಾನವಿದೆ. ನೀಲಿಮಲೆ, ಅಪ್ಪಾಚ್ಚಿಮೇಡು, ಶಬರಿಪೀಠ, ಶರಂಕುತ್ತಿ ಎಂಬಿವು ಈ ದಾರಿಯಲ್ಲಿ ಕಾಣಸಿಗುವ ಪ್ರಧಾನ ಸ್ಥಳಗಳು. ಜೀವನದ ಏಳು ಬೀಳುಗಳನ್ನು ನೆನಪಿಸುವ ಹಾಗೂ ಗುರಿಯತ್ತ ಧೈರ್ಯದಿಂದ ಮುನ್ನುಗ್ಗಲು ಪ್ರೇರೇಪಿಸುವ ಕೆಲಸವನ್ನು ಶಬರಿಮಲೆ ತೀರ್ಥಯಾತ್ರೆಯ ಆರೋಹಣ ಅವರೋಹಣಗಳು ಮಾಡುತ್ತವೆ ಎಂದು ತಿಳಿಯಬಹುದು.
ಪುಣ್ಯಂ ಪೂಂಗಾವನಂ
ಸೌರಮಾನ ತಿಂಗಳಾದ ವಿೂನ ಮಾಸ ಅಥವಾ ತಮಿಳರ ಪೈಂಗುನಿ ಮಾಸದಲ್ಲಿ ಶಬರಿಮಲೆ ಕ್ಷೇತ್ರದ ಅತ್ಯಂತ ಸಂಭ್ರಮದ ವಾರ್ಷಿಕ ಉತ್ಸವ ಜರಗುತ್ತದೆ. ಉತ್ಸವದ ಸಮಯದಲ್ಲಿ ಹತ್ತು ದಿನಗಳ ಕಾಲ ದೇವಾಲಯವು ತೆರೆದಿರುತ್ತದೆ. ಧ್ವಜಾರೋಹಣದೊಂದಿಗೆ ಉತ್ಸವ ಆರಂಭಗೊಳ್ಳುತ್ತದೆ. ಉತ್ಸವಬಲಿ, ಶ್ರೀಭೂತಬಲಿ ಮೊದಲಾದ ಹಲವು ವಿಶೇಷ ಪೂಜೆಗಳು ಮುಂದಿನ ದಿನಗಳಲ್ಲಿ ಜರಗುತ್ತವೆ.
ವಾರ್ಷಿಕ ಉತ್ಸವದ ಒಂಬತ್ತನೇ ದಿನ ಪಳ್ಳಿಬೇಟೆ ನಡೆಯುವುದು. ಇದರ ಭಾಗವಾಗಿ ಶ್ರೀ ಅಯ್ಯಪ್ಪನು ಸಂಭ್ರಮದೊಂದಿಗೆ ‘ಅರಸುಬೇಟೆ’ಗಾಗಿ ಶರಂಕುತ್ತಿಗೆ ಹೋದುದನ್ನು ವಿಧ್ಯುಕ್ತವಾಗಿ ಆಚರಿಸುತ್ತಾರೆ. ಇದರ ಮುಂದುವರಿಕೆಯಾಗಿ ಪವಿತ್ರವಾದ ಪಂಪಾ ನದಿಯಲ್ಲಿ ಆರಾಟ್ಟ್ ಕಾರ್ಯಕ್ರಮ ಜರಗುತ್ತದೆ. ಪೈಂಗುನಿ ಉತ್ತರಂ ಎಂಬ ಪ್ರತ್ಯೇಕವಾದ ಪೂಜಾವಿಧಿಗಳೊಂದಿಗೆ ಉತ್ಸವವು ಸಮಾಪನಗೊಳ್ಳುತ್ತದೆ. ಉತ್ತರಾ ಅಯ್ಯಪ್ಪ ಸ್ವಾಮಿಯ ಜನ್ಮನಕ್ಷತ್ರವಷ್ಟೆ.
Read More Here
> Story of Ayyappa Swamy; ಅಯ್ಯಪ್ಪ ಸ್ವಾಮಿಯ ಕಥೆ; Chapter 1
> Story of Ayyappa Swamy – ಅಯ್ಯಪ್ಪ ಸ್ವಾಮಿಯ ಕಥೆ – Chapter 2; ಪಂದಳ ರಾಜನ ಸಂರಕ್ಷಣೆಯಲ್ಲಿ
> Siddayya Swamy Banni; ಹಾಡಿದವರ ಮನವ ಬಲ್ಲೆ; Siddappaji Kalagnana
> Akka Mahadevi Vachana; ಜೀವನಕ್ಕೆ ಸಂಬಂಧಿಸಿದಂತೆ ಅಕ್ಕಮಹಾದೇವಿಯವರ ವಚನಗಳು