ಮೆಂತ್ಯೆ ಪಲಾವ್- Menthya pulao
ಬೇಕಾಗುವ ಪದಾರ್ಥಗಳು
- ಹಸಿ ಮೆಣಸಿನಕಾಯಿ- 6
- ಎಣ್ಣೆ/ತುಪ್ಪ- 3 ಚಮಚ
- ಬಾಸುಮತಿ ಅಕ್ಕಿ / ಸಾಮಾನ್ಯ ಅಕ್ಕಿ- 1 ಬಟ್ಟಲು
- ಚಕ್ಕೆ, ಲವಂಗ- ಸ್ವಲ್ಪ
- ಸೋಂಪು- ಸ್ವಲ್ಪ
- ಚಕ್ರಮೊಗ್ಗು- 1
- ಜೀರಿಗೆ- ಸ್ವಲ್ಪ
- ಬಿರಿಯಾನಿ ಎಲೆ- 4-5
- ಶುಂಠಿ-ಬೆಳ್ಳುಳ್ಳಿ- ಸ್ವಲ್ಪ
- ಗೋಡಂಬಿ- ಸ್ವಲ್ಪ
- ಪುದಿನ ಸೊಪ್ಪು- ಸ್ವಲ್ಪ
- ಈರುಳ್ಳಿ – 1 ದೊಡ್ಡದು
- ಮೆಂತ್ಯೆ ಸೊಪ್ಪು- 1 ಕಟ್ಟು
- ಹಸಿ ಬಟಾಣಿ- ಅರ್ಧ ಬಟ್ಟಸು
- ಅರಶಿನ ಪುಡಿ- ಸ್ವಲ್ಪ
- ಉಪ್ಪು- ರುಚಿಗೆ ತಕ್ಕಷ್ಟು 
ಮಾಡುವ ವಿಧಾನ…
- ಮೊದಲು ಅಕ್ಕಿಯನ್ನು ಚೆನ್ನಾಗಿ ತೊಳೆದು 20ರಿಂದ 30 ನಿಮಿಷ ನೆನೆಸಿಡಿ. ಈಗ ಒಲೆ ಮೇಲೆ ಕುಕ್ಕರ್ ಇಟ್ಟು ಅದಕ್ಕೆ ಎಣ್ಣೆ/ತುಪ್ಪಹಾಕಿ, ಇದು ಕಾದ ಬಳಿಕ ಚಕ್ಕೆ, ಲವಂಗ, ಸೋಂಪು, ಬಿರಿಯಾನಿ ಎಲೆ, ಜೀರಿಗೆ, ಚಕ್ರಮೊಗ್ಗು ಎಲ್ಲವನ್ನು ಒಟ್ಟಿಗೆ ಹಾಕಿ ಫ್ರೈ ಮಾಡಿಕೊಳ್ಳಿ. ಇದಕ್ಕೆ ಶುಂಠಿ ಬೆಳ್ಳುಳ್ಳಿ ಪೇಸ್ಟ್ ಹಾಕಿ, ಗೋಡಂಬಿ ಇದ್ದರೂ ಬಳಸಬಹುದು.
- ಇದಾದ ಬಳಿಕ ಹಸಿ ಮೆಣಸಿನ ಕಾಯಿ ಹಾಕಿ. ಪುದೀನ ಸೊಪ್ಪು ಹಾಗೂ ಕತ್ತರಿಸಿದ ಈರುಳ್ಳಿ ಹಾಕಿ ಚೆನ್ನಾಗಿ ಫ್ರೈ ಮಾಡಿಕೊಳ್ಳಿ. ಈರುಳ್ಳಿ ಫ್ರೈ ಆದ ಬಳಿಕ ಚೆನ್ನಾಗಿ ತೊಳೆದಿರುವ ಮೆಂತ್ಯೆ ಸೊಪ್ಪನ್ನು ಹಾಕಿ ಚೆನ್ನಾಗಿ ಮಿಶ್ರಣ ಮಾಡಿ. ಇದರ ಜೊತೆಗೆ ಹಸಿ ಬಟಾಣಿ ಹಾಕಿ. ಬಳಿಕ ಚೆನ್ನಾಗಿ ಮಿಕ್ಸ್ ಮಾಡಿ ಫ್ರೈ ಮಾಡಿಕೊಳ್ಳಿ.
- 1 ನಿಮಿಷದ ಬಳಿಕ ಅದಕ್ಕೆ ಅರಶಿನ ಪುಡಿ ಹಾಕಿ 3 ನಿಮಿಷ ಫ್ರೈ ಮಾಡಿ. ಚೆನ್ನಾಗಿ ಫ್ರೈ ಮಾಡಿದ ಬಳಿಕ ನೆನೆಸಿಟ್ಟಿರುವ ಅಕ್ಕಿಯನ್ನು ಅದಕ್ಕೆ ಹಾಕಿ ಮೊದಲು ಮಿಕ್ಸ್ ಮಾಡಿ 1 ನಿಮಿಷ ಮಿಶ್ರಣ ಮಾಡಿಕೊಳ್ಳಿ. ಬಳಿಕ ಯಾವ ಬಟ್ಟಲಿನಲ್ಲಿ ಅಕ್ಕಿ ತೆಗೆದುಕೊಂಡಿದ್ದೀರೋ ಅದೇ ಬಟ್ಟಲಿನಲ್ಲಿ ಎರಡರಷ್ಟು ನೀರನ್ನು ಹಾಕಿ ಅದಕ್ಕೆ ಉಪ್ಪು ಸೇರಿಸಿ ಚೆನ್ನಾಗಿ ಮಿಶ್ರಣ ಮಾಡಿ.
- ಈ ರೀತಿ ಮಿಶ್ರಣ ಮಾಡಿದ ತಕ್ಷಣ ಕುಕ್ಕರ್‌ನ ಮುಚ್ಚಳ ಹಾಕಿ ಮೂರು ಸೀಟಿ ಹಾಕುವವರೆಗೆ ಬಿಡಿ. ಮೂರು ಸೀಟಿಯ ಬಳಿಕ ಉರಿ ಆಫ್ ಮಾಡಿ ಹಾಗೆಯೇ ಬಿಡಿ. ಇದೀಗ ರುಚಿಕರವಾದ ಮೆಂತ್ಯೆ ಪಲಾವ್ ಸವಿಯಲು ಸಿದ್ಧ.
How to make the Traditional Tasty Mango
Subscribe for Free and  Support Us
Support Us 
ನಿಮ್ಮ ಈ - ಮೇಲ್ ಬಳಸಿ 👇ಇದೀಗ ಉಚಿತವಾಗಿ 🆓 ಚಂದಾದಾರರಾಗಿ..!  ನಿಮಗೆ ನಮ್ಮ ಕಥೆಗಳು, ಹಾಡುಗಳು ಮತ್ತು ಮಾಹಿತಿ ಇಷ್ಟವಾದರೆ ನಿಮ್ಮ ಸಮೂಹಕ್ಕೆ ಶೇರ್ ಮಾಡುವುದನ್ನ ಮರೆಯದಿರಿ 
