HomeNewsHealth and Food ಮಾವಿನಕಾಯಿ ಪುಳಿಯೊಗರೆ ಮಾಡುವುದು ಹೇಗೆ

 ಮಾವಿನಕಾಯಿ ಪುಳಿಯೊಗರೆ ಮಾಡುವುದು ಹೇಗೆ

Spread the love

 ಮಾವಿನಕಾಯಿ ಪುಳಿಯೊಗರೆ

ಬೇಕಾಗುವ ಪದಾರ್ಥಗಳು

  • ಅನ್ನ- 1 ಬಟ್ಟಲು
  • ಮಾವಿನಕಾಯಿ- ತುರಿದದ್ದು ಸ್ವಲ್ಪ
  • ಒಣಕೊಬ್ಬರಿ- 1 ಚಮಚ
  • ಬಿಳಿ ಎಳ್ಳು- 1/4 ಚಮಚ
  • ಜೀರಿಗೆ- 1/4 ಚಮಚ
  • ಮೆಂತ್ಯೆ- 1/4 ಚಮಚ
  • ಉದ್ದಿನಬೇಳೆ- 1/4 ಚಮಚ
  • ಕಡಲೆಬೇಳೆ- 1/4 ಟೀ ಚಮಚ
  • ಕಾಳುಮೆಣಸು- ಸ್ವಲ್ಪ
  • ಒಣ ಮೆಣಸಿನ ಕಾಯಿ-4-5
  • ಕರಿಬೇವು-ಸ್ವಲ್ಪ
  • ಬಿಳಿ ಎಳ್ಳು 1/4 ಟೀ ಚಮಚ
  • ಒಣಮೆಣಸಿನಕಾಯಿ-2
  • ಕರಿಬೇವು-ಸ್ವಲ್ಪ
  • ಇಂಗು-ಚಿಟಿಕೆ
  • ಕಡಲೆ-ಬೇಳೆ ಸ್ವಲ್ಪ
  • ಉದ್ದಿನ ಬೇಳೆ-ಸ್ವಲ್ಪ
  • ಕಡಲೆಕಾಯಿ ಬೀಜ-ಸ್ವಲ್ಪ
  • ಅರಿಶಿಣ-ಸ್ವಲ್ಪ
  • ಸಾಸಿವೆ-ಸ್ವಲ್ಪ
  • ಎಣ್ಣೆ – 3 ಚಮಚ
  • ಉಪ್ಪು- ರುಚಿಗೆ ತಕ್ಕಷ್ಟು
  • ಕೊತ್ತಂಬರಿ ಸೊಪ್ಪು- ಸ್ವಲ್ಪHow to Make Mango Puree (Quick + Easy) | Hello Little Home

 ಮಾಡುವ ವಿಧಾನ

ಮೊದಲು ಬಾಣಲೆಗೆ ಒಣಕೊಬ್ಬರಿ, ಬಿಳಿ ಎಳ್ಳು, ಜೀರಿಗೆ, ಮೆಂತ್ಯ, ಉದ್ದಿನಬೇಳೆ, ಕಡಲೆಬೇಳೆ, ಕಾಳುಮೆಣಸು, ಒಣ ಮೆಣಸಿನಕಾಯಿ, ಕರಿಬೇವು ಎಲ್ಲವನ್ನೂ ಸೇರಿಸಿ ಚೆನ್ನಾಗಿ ಹುರಿಯಬೇಕು. ತಣ್ಣಗಾದ ನಂತರ ಮಿಕ್ಸಿಯಲ್ಲಿ ರುಬ್ಬಿ ಪುಡಿ ಮಾಡಿಕೊಳ್ಳಬೇಕು. ನಂತರ ಅದೇ ಮಿಕ್ಸಿಗೆ ತುರಿದ ಮಾವಿನ ಕಾಯಿ ಹಾಗೂ ಸ್ವಲ್ಪ ನೀರು ಸೇರಿಸಿ ರುಬ್ಬಿಕೊಂಡು ಮಿಶ್ರಣ ತಯಾರಿಸಿಕೊಳ್ಳಬೇಕು.

ಬಳಿಕ ಒಗ್ಗರಣೆ ಮಾಡಲು ಬಾಣಲಿಗೆ ಎಣ್ಣೆ, ಸಾಸಿವೆ, ಒಣ ಮೆಣಸು, ಕಡಲೆ ಬೇಳೆ, ಕಡಲೆಬೀಜ, ಉದ್ದಿನ ಬೇಳೆ ಹಾಕಿ ಬೇಯಿಸಬೇಕು. ಕೆಂಪಗಾದ ನಂತರ ಬಿಳಿ ಎಳ್ಳು, ಅರಿಶಿಣ, ರುಬ್ಬಿಕೊಂಡ ಮಾವಿನಕಾಯಿ ಮಿಶ್ರಣವನ್ನು ಹಾಕಿ ಚೆನ್ನಾಗಿ ಕುದಿಸಿ. ಮಿಶ್ರಣ ಬೆಂದ ಮೇಲೆ ಕರಿ ಬೇವು ಹಾಕಿ ಕೈಯಾಡಿಸಿ.

ನಂತರ ಉಪ್ಪು, ಅನ್ನ ಹಾಕಿ ಕಲಸಿಕೊಳ್ಳಿ. ಬಳಿಕ ಕೊತ್ತಂಬರಿ ಸೊಪ್ಪನ್ನು ಹಾಕಿ ಮಿಶ್ರಣ ಮಾಡಿದರೆ, ರುಚಿಕರವಾದ ಮಾವಿನಕಾಯಿ ಪುಳಿಯೋಗರೆ ಸವಿಯಲು ಸಿದ್ಧ.

Read more here

Uses of water in Kannada 10 uses of water

Olavina Udugore Kodalenu Lyrical song in kannada ಒಲವಿನ ಉಡುಗೊರೆ

Top Wishes, Quotes and Best lines For Festivals   Get more here

Subscribe for Free and Support Us 

ನಿಮ್ಮ ಈ - ಮೇಲ್ ಬಳಸಿ 👇ಇದೀಗ ಉಚಿತವಾಗಿ 🆓 ಚಂದಾದಾರರಾಗಿ..!  ನಿಮಗೆ ನಮ್ಮ ಕಥೆಗಳು, ಹಾಡುಗಳು ಮತ್ತು ಮಾಹಿತಿ ಇಷ್ಟವಾದರೆ ನಿಮ್ಮ ಸಮೂಹಕ್ಕೆ ಶೇರ್ ಮಾಡುವುದನ್ನ ಮರೆಯದಿರಿ 
RELATED ARTICLES

LEAVE A REPLY

Please enter your comment!
Please enter your name here

- Advertisment -

Most Popular

Recent Comments