ಬಾದಾಮಿ-ಖರ್ಜೂರದ ಹಾಲು
ಬೇಕಾಗುವ ಪದಾರ್ಥಗಳು…
- ಹಾಲು – 3 ಬಟ್ಟಲು
- ಖರ್ಜೂರ – 10
- ಸಕ್ಕರೆ ಅಥವಾ ಬೆಲ್ಲ- ರುಚಿಗೆ ತಕ್ಕಷ್ಟು
- ಬಾದಾಮಿ – 12
- ಏಲಕ್ಕಿ ಪುಡಿ – ಕಾಲು ಚಮಚ
- ಕೇಸರಿ ದಳ– ಸ್ವಲ್ಪ (ಬಿಸಿ ಹಾಲಿನಲ್ಲಿ ನೆನೆಸಿಟ್ಟುಕೊಳ್ಳಿ)
ಮಾಡುವ ವಿಧಾನ…
- ಮೊದಲಿಗೆ ಬಾದಾಮಿಯನ್ನು ರಾತ್ರಿ ಅಥವಾ 5 ಗಂಟೆಗಳ ಕಾಲ ನೀರಿನಲ್ಲಿ ನೆನೆಸಿಡಬೇಕು. ನಂತರ ಅದರ ಸಿಪ್ಪೆ ಸುಲಿದು ಪಕ್ಕಕ್ಕಿಡಿ.
- ಪಾತ್ರೆಯಲ್ಲಿ ಹಾಲನ್ನು ಸುಮಾರು 5 ನಿಮಿಷಗಳ ಕಾಲ ಕುದಿಸಿಕೊಳ್ಳಿ.
- ಬಾದಾಮಿ ಹಾಗೂ ಖರ್ಜೂರವನ್ನು 5 ಚಮಚ ಹಾಲಿನೊಂದಿಗೆ ಮಿಕ್ಸಿ ಜಾರ್‌ನಲ್ಲಿ ಹಾಕಿ, ಚೆನ್ನಾಗಿ ಪೇಸ್ಟ್ ಮಾಡಿಕೊಳ್ಳಿ.
- ಈಗ ಪೇಸ್ಟ್ ಅನ್ನು ಕುದಿಯುತ್ತಿರುವ ಹಾಲಿಗೆ ಹಾಕಿ 3-4 ನಿಮಿಷ ಕುದಿಯಲು ಬಿಡಿ. ಸಕ್ಕರೆ ಅಥವಾ ಬೆಲ್ಲವನ್ನು ಸೇರಿಸಿ. ಬಳಿಕ ಏಲಕ್ಕಿ ಪುಡಿ ಸೇರಿಸಿ, ಉರಿಯನ್ನು ಆಫ್ ಮಾಡಿ.
- ಕೊನೆಯಲ್ಲಿ ಹಾಲಿನಲ್ಲಿ ನೆನೆಸಿದ ಕೇಸರಿ ದಳವನ್ನು ಸೇರಿಸಿ, ಬಾದಾಮಿ ಚೂರುಗಳಿಂದ ಅಲಂಕರಿಸಿದರೆ, ರುಚಿಕರ ಹಾಗೂ ಆರೋಗ್ಯಕರ ಬಾದಾಮಿ-ಖರ್ಜೂರದ ಹಾಲು ಸವಿಯಲು ಸಿದ್ಧ.
Read more here
Doctor Suggests Foods Diabetics Should Eat For Breakfast To Manage Blood Sugar:
Lemon Chutney Recipe in ನಿಂಬೆ ಚಟ್ನಿ kannada
Lemon Chutney Recipe in ನಿಂಬೆ ಚಟ್ನಿ kannada
Subscribe for Free and
Support Us
ನಿಮ್ಮ ಈ - ಮೇಲ್ ಬಳಸಿ 👇ಇದೀಗ ಉಚಿತವಾಗಿ 🆓 ಚಂದಾದಾರರಾಗಿ..! ನಿಮಗೆ ನಮ್ಮ ಕಥೆಗಳು, ಹಾಡುಗಳು ಮತ್ತು ಮಾಹಿತಿ ಇಷ್ಟವಾದರೆ ನಿಮ್ಮ ಸಮೂಹಕ್ಕೆ ಶೇರ್ ಮಾಡುವುದನ್ನ ಮರೆಯದಿರಿ