How to cook the menthya rice – ಮೆಂತ್ಯ ರೈಸ್
ಬೇಕಾಗುವ ಪದಾರ್ಥಗಳು…
- ಹಸಿಮೆಣಸಿನ ಕಾಯಿ- 8-10
- ಶುಂಠಿ, ಬೆಳ್ಳುಳ್ಳಿ-ಸ್ವಲ್ಪ
- ಪುದೀನಾ- ಸ್ವಲ್ಪ
- ಗಸಗಸೆ-ಸ್ವಲ್ಪ
- ಕೊತ್ತಂಬರಿ ಸೊಪ್ಪು- ಸ್ವಲ್ಪ
- ತೆಂಗಿನ ತುರಿ- 4-6 ಚಮಚ
- ಗೋಂಡಬಿ- 8-10
- ಈರುಳ್ಳಿ- ಸಣ್ಣಗೆ ಹೆಚ್ಚಿದ್ದು 2
- ಕರಿಬೇವು-ಸ್ವಲ್ಪ
- ಪಲಾವ್ ಎಲೆ- ಸ್ವಲ್ಪ
- ಪಲಾವ್ ಸಾಮಾಗ್ರಿ- ಸ್ವಲ್ಪ
- ಬಟಾಣಿ- ಅರ್ಧ ಬಟ್ಟಲು
- ಗರಂ ಮಸಾಲಾ ಪುಡಿ- 1 ಚಮಚ
- ಅರಿಶಿಣದ ಪುಡಿ- ಸ್ವಲ್ಪ
- ಉಪ್ಪು- ರುಚಿಗೆ ತಕ್ಕಷ್ಟು
- ಅಕ್ಕಿ- ಒಂದೂವರೆ ಬಟ್ಟಲು
- ಮೆಂತ್ಯೆ ಸೊಪ್ಪು- 1 ಬಟ್ಟಲು
- ಟೊಮೆಟೋ- ಸಣ್ಣಗೆ ಹೆಚ್ಚಿದ್ದು 3
- ದನಿಯಾ ಪುಡಿ- ಒಂದು ಚಮಚ
- ತುಪ್ಪ -ಸ್ವಲ್ಪ
- ನಿಂಬೆ ರಸ- ಒಂದು ಚಮಚ
World farmers against lab-grown food ವಿಶ್ವ ರೈತರ ಸಂಸ್ಥೆ (WFO)
ಮಾಡುವ ವಿಧಾನ…
- ಮೊದಲಿಗೆ ಮಿಕ್ಸಿ ಜಾರ್’ಗೆ ಹಸಿಮೆಣಸಿನ ಕಾಯಿ. ಶುಂಠಿ, ಬೆಳ್ಳುಳ್ಳಿ, ಪುದೀನಾ, ಗಸಗಸೆ, ಕೊತ್ತಂಬರಿ ಸೊಪ್ಪು, ತೆಂಗಿನ ತುರಿ, ಗೋಂಡಬಿಯನ್ನು ಹಾಕಿ ನುಣ್ಣಗೆ ರುಬ್ಬಿಕೊಳ್ಳಿ.
- ಒಲೆಯ ಮೇಲೆ ಕುಕ್ಕರ್ ಇಟ್ಟು ಅದಕ್ಕೆ ಸ್ವಲ್ಪ ತುಪ್ಪ ಹಾಗೂ ಎಣ್ಣೆಯನ್ನು ಹಾಕಿ. ಕಾದ ನಂತರ ಪಲಾವ್ ಎಲೆ ಹಾಗೂ ಪಲಾವ್ ಸಾಮಾಗ್ರಿಗಳನ್ನು ಹಾಕಿ. ನಂತರ ಈರುಳ್ಳಿಯನ್ನು ಹಾಕಿ ಕೆಂಪಗೆ ಹುರಿದುಕೊಳ್ಳಿ.
- ನಂತರ ಬಟಾಣಿ, ಗರಂ ಮಸಾಲಾ ಪುಡಿ. ಅರಿಶಿಣದ ಪುಡಿ ಹಾಗೂ ರುಬ್ಬಿಕೊಂಡ ಮಸಾಲೆಯನ್ನು ಹಾಕಿ ಚೆನ್ನಾಕಿ ಮಿಶ್ರಣ ಮಾಡಿ. ಇದೀಗ ಮೆಂತ್ಯೆ ಸೊಪ್ಪು, ಟೊಮೆಟೋ, ದನಿಯಾ ಪುಡಿ ಹಾಕಿ ಟೊಮೆಟೋ ಮೆತ್ತಗಾಗುವವರೆಗೆ ಕೈಯಾಡಿಸುತ್ತಿರಿ.
- ನಂತರ ರುಚಿಗೆ ತಕ್ಕಷ್ಟು ಉಪ್ಪು, ಅಕ್ಕಿ ಹಾಗೂ ಅಳತೆ ನೀರು ಹಾಕಿ ಚೆನ್ನಾಗಿ ಮಿಶ್ರಣ ಮಾಡಿ, ತುಪ್ಪ ಹಾಗೂ ನಿಂಬೆ ರಸವನ್ನು ಸೇರಿಸಿ ಮುಚ್ಚಳ ಮುಚ್ಚಿ, 2 ಕೂಗು ಕೂಗಿಸಿದರೆ ರುಚಿಕರವಾದ ಮೆಂತ್ಯೆ ರೈಸ್ ಸವಿಯಲು ಸಿದ್ಧ.
Read more here – Doctor Suggests Foods Diabetics Should Eat For Breakfast To Manage Blood Sugar:
Subscribe for Free and
Support Us
ನಿಮ್ಮ ಈ - ಮೇಲ್ ಬಳಸಿ 👇ಇದೀಗ ಉಚಿತವಾಗಿ 🆓 ಚಂದಾದಾರರಾಗಿ..! ನಿಮಗೆ ನಮ್ಮ ಕಥೆಗಳು, ಹಾಡುಗಳು ಮತ್ತು ಮಾಹಿತಿ ಇಷ್ಟವಾದರೆ ನಿಮ್ಮ ಸಮೂಹಕ್ಕೆ ಶೇರ್ ಮಾಡುವುದನ್ನ ಮರೆಯದಿರಿ