ಬ್ರೆಡ್ ರೋಲ್‌ಗಳನ್ನು ಬೇಯಿಸುವುದು ಹೇಗೆ
ಬೇಕಾಗುವ ಪದಾರ್ಥಗಳು…
- ಆಲೂಗಡ್ಡೆ- 2
- ಈರುಳ್ಳಿ- 1 (ಸಣ್ಣಗೆ ಹೆಚ್ಚಿದ್ದು)
- ಹಸಿ ಮೆಣಸಿನ ಕಾಯಿ- 2
- ಉಪ್ಪು-ರುಚಿಗೆ ತಕ್ಕಷ್ಟು
- ಖಾರದ ಪುಡಿ- ಸ್ವಲ್ಪ
- ಜೀರಿಗೆ ಪುಡಿ-ಸ್ವಲ್ಪ
- ಚಾಟ್ ಮಸಾಲೆ ಪುಡಿ- ಸ್ವಲ್ಪ
- ಬ್ರೆಡ್ ಸ್ಲೈಸ್- 5-6
- ಮೈದಾ ಹಿಟ್ಟು- ಸ್ವಲ್ಪ
- ಎಣ್ಣೆಗೆ- ಕರಿಯಲು ಅಗತ್ಯಕ್ಕೆ ತಕ್ಕಷ್ಟು
ಮಾಡುವ ವಿಧಾನ…
- ಮೊದಲಿಗೆ ಕುಕ್ಕರ್’ಗೆ ಆಲೂಗಡ್ಡೆಗಳನ್ನು ಹಾಕಿ ಚೆನ್ನಾಗಿ ಬೇಯಿಸಿಕೊಳ್ಳಿ. ನಂತರ ಸಿಪ್ಪೆ ತೆಗೆದು, ನುಣ್ಣಗೆ ಮಾಡಿಕೊಳ್ಳಿ.
- ಇದಕ್ಕೆ ಈರುಳ್ಳಿ, ಹಸಿ ಮೆಣಸಿನ ಕಾಯಿ, ಉಪ್ಪು, ಖಾರದ ಪುಡಿ, ಜೀರಿಗೆ ಪುಡಿ, ಚಾಟ್ ಮಸಾಲೆ ಪುಡಿ ಎಲ್ಲವನ್ನೂ ಹಾಕಿ ಮಿಶ್ರಣ ಮಾಡಿಕೊಳ್ಳಿ.
- ಬಳಿಕ ಮಿಶ್ರಣವನ್ನು ಚಿಕ್ಕ ಚಿಕ್ಕ ಸಿಲಿಂಡರ್ ಆಕಾರಕ್ಕೆ ಮಾಡಿಕೊಳ್ಳಿ.
- ಇದೀಗ ಬ್ರೆಡ್ ಪೀಸ್ ಗಳನ್ನು ತೆಗೆದುಕೊಂಡು ನಾಲ್ಕು ಬದಿಯಲ್ಲಿರುವ ಬ್ರೌನ್ ಬ್ರೆಡ್ ನ್ನು ಕತ್ತರಿಸಿಕೊಳ್ಳಿ.
- ನಂತರ ಮೈದಾ ಹಿಟ್ಟಿಗೆ ನೀರು ಹಾಕಿ ಪೇಸ್ಟ್ ರೀತಿ ಮಾಡಿಕೊಳ್ಳಿ.
- ಬಳಿಕ ಲಟ್ಟಣಿಗೆಯಲ್ಲಿ ಬ್ರೆಡ್ ಸ್ಲೈಸ್ ಗಳನ್ನು ಒತ್ತಿಕೊಂಡು, ಇದಕ್ಕೆ ಈಗಾಗಲೇ ಮಾಡಿಟ್ಟುಕೊಂಡಿದ್ದ ಮೈದಾ ಹಿಟ್ಟಿನ ಪೇಸ್ಟ್ ನ್ನು ಸವರಿಕೊಂಡು, ಮಸಾಲೆ ಮಿಶ್ರಣವನ್ನು ಇಟ್ಟು ರೋಲ್ ಮಾಡಿ.
- ಒಲೆಯ ಮೇಲೆ ಬಾಣಲೆ ಇಟ್ಟು, ರೋಲ್ ಗಳನ್ನು ಹಾಕಿ ಕಂದು ಬಣ್ಣ ಬರುವವರೆಗೆ ಕರಿದರೆ, ರುಚಿಕರವಾದ ಬ್ರೆಡ್ ರೋಲ್ ಸವಿಯಲು ಸಿದ್ಧ.
Read more here
Fish Soup Recipe By Healthy Food Fusion kannada
Doctor Suggests Foods Diabetics Should Eat For Breakfast To Manage Blood Sugar:
Uses of water in Kannada 10 uses of water
Important points of health in kannada
Subscribe for Free and
Support Us
ನಿಮ್ಮ ಈ - ಮೇಲ್ ಬಳಸಿ 👇ಇದೀಗ ಉಚಿತವಾಗಿ 🆓 ಚಂದಾದಾರರಾಗಿ..! ನಿಮಗೆ ನಮ್ಮ ಕಥೆಗಳು, ಹಾಡುಗಳು ಮತ್ತು ಮಾಹಿತಿ ಇಷ್ಟವಾದರೆ ನಿಮ್ಮ ಸಮೂಹಕ್ಕೆ ಶೇರ್ ಮಾಡುವುದನ್ನ ಮರೆಯದಿರಿ