ಮಳವಳ್ಳಿ ಟು ಬೆಂಗಳೂರು ನಗುವಿನ ಮೂಲಕ ಜನರ ಮನಗೆದ್ದ ʻಗಿಲ್ಲಿ ನಟʼ ಯಾರು ಗೊತ್ತಾ?
Gilli Nata: ಸೋಷಿಯಲ್ ಮೀಡಿಯಾದಲ್ಲಿ ಬಹಳಷ್ಟು ಖ್ಯಾತಿ ಪಡೆದಿರುವ ಗಿಲ್ಲಿ ನಟ ಜೀ ಕನ್ನಡ ನ್ಯೂಸ್ ಜೊತೆ ಮಾತನಾಡಿದ್ದಾರೆ. ಕಾಮಿಡಿ ಕಿಲಾಡಿಗಳು ಸೀಸನ್ 4 ಫಸ್ಟ್ ರನ್ನರ್ ಅಪ್ ಆಗಿದ್ದ ಇವರು ತಮ್ಮ ಜರ್ನಿಯ ಬಗ್ಗೆ ಕುತೂಹಲಕಾರಿ ಸಂಗತಿಗಳನ್ನು ಹಂಚಿಕೊಂಡಿದ್ದಾರೆ. ಗಿಲ್ಲಿ ನಟ ಮೂಲತಃ ಮಂಡ್ಯ ಜಿಲ್ಲೆಯವರು. ನಲ್ಲಿ ಮೂಳೆ ಕಂಟೆಂಟ್‌ಯಿಂದ ಫೇಮಸ್ ಆದ ಇವರು, ಡೈರೆಕ್ಟರ್ ಆಗಬೇಕು ಎಂದುಕೊಂಡಿದ್ದರಂತೆ. ಇದೀಗ ಹೊಚ್ಚ ಹೊಸ ರಿಯಾಲಿಟಿ ಶೋ ಭರ್ಜರಿ ಬ್ಯಾಚುಲರ್ಸ್ ನಲ್ಲಿ ಎಂಟ್ರಿ ಕೊಟ್ಟಿದ್ದಾರೆ.
View this post on Instagram
ಡೈರೆಕ್ಟರ್ ಆಗಬೇಕು ಎಂದುಕೊಂಡಿದ್ದರಂತೆ !
ಬೆಂಗಳೂರು ಎಂಬುದು ಮಹಾಸಾಗರ. ಇದು ನೋಡಿದವರನ್ನೆಲ್ಲಾ ಕೈ ಬೀಸಿ ಕರೆಯುತ್ತದೆ. ಆದರೆ ಸಮುದ್ರದ ಆಳಕ್ಕೆ ಇಳಿದಾಗಲೇ ಗೊತ್ತಾಗುವುದು. ಬಯಸಿದ ಮುತ್ತುಗಳು ಸಿಗುತ್ತವಾ? ಈಜುವುದಕ್ಕೆ ಬಾರದೆ ಹೋದರೆ ಪರಿಸ್ಥಿತಿ ಏನಾಗುತ್ತದೆ ಎಂಬುದೆಲ್ಲಾ ಈ ಮಹಾಸಾಗರದಲ್ಲಿ ಗೊತ್ತಾಗುವುದು ಎಂದು ಹೇಳಿದ್ದಾರೆ. ಗಿಲ್ಲಿ ನಟ ಹಾಗೋ ಐಟಿಐ ಓದಿದ್ದಾರೆ. ಮಂಡ್ಯದಲ್ಲಿ ಓದು ಮುಗಿಸಿರುವ ಇವರು, ಅಲ್ಲಿಂದ ಸೀದಾ ಬಂದಿಳಿದಿದ್ದೆ ಬೆಂಗಳೂರು ಮಹಾನಗರಿಗೆ .
ಸಿನಿಮಾ ಇಂಡಸ್ಟ್ರಿಗೆ ಬರಬೇಕು ಅಂತ ಧೈರ್ಯ ಮಾಡಿ ಮಂಡ್ಯದ ಮಳವಳ್ಳಿಯಿಂದ ಬೆಂಗಳೂರಿಗೆ ಬಂದಾಯ್ತು. ಬರುವ ತನಕ ಏನು ಮಾಡಬೇಕು ಎಂಬ ಐಡಿಯಾ ಇರಲಿಲ್ಲ. ಸ್ನೇಹಿತರ ಸಹಾಯದಿಂದ ಡೈರೆಕ್ಷನ್ ಡಿಪಾರ್ಟ್ಮೆಂಟ್ ಕೆಲಸಕ್ಕೆ ಸೇರಿದೆ. ಹಳ್ಳಿಯಿಂದ ಬೆಂಗಳೂರಿಗೆ ಮಕ್ಕಳು ಬಂದರೆ ಮುಗೀತು, ಮಗ ಏನೋ ಸಂಪಾದನೆ ಮಾಡಿಬಿಡುತ್ತಾನೆ ಅಂತ ಮನೆಯವರು, ಓ ಅವನು ಉದ್ಧಾರ ಆಗೋದಾ ಕಣೋ ಅಂತ ಊರವರು ಅಂದುಕೊಂಡು ಬಿಡುತ್ತಾರೆ.
ಅವರಿಗೆ ಉತ್ತರ ಕೊಡುವುದಕ್ಕೂ ಆಗುವುದಿಲ್ಲ, ಜವಾಬ್ದಾರಿ ನಿಭಾಯಿಸದೇ ಇರುವುದಕ್ಕೂ ಆಗುವುದಿಲ್ಲ. ಅಂಥದ್ದೇ ಸ್ಥಿತಿಯಲ್ಲಿ ನಾನು ಸಿಕ್ಕಿ ಹಾಕಿಕೊಂಡಿದ್ದೆ ಎಂದು ತಮ್ಮ ಕಷ್ಟದ ದಿನಗಳನ್ನು ಗಿಲ್ಲಿ ನಟ ನೆನೆದಿದ್ದಾರೆ.
ಡೈರೆಕ್ಷನ್ ಡಿಪಾರ್ಟ್‌ಮೆಂಟ್‌ನಲ್ಲಿ ಕೆಲಸ ಮಾಡಿದರೂ ಹಣ ಮಾತ್ರ ಸಿಗುತ್ತಿರಲಿಲ್ಲ. ಸಿನಿಮಾ ಇಂಡಸ್ಟ್ರಿ ಬಿಡುವುದಕ್ಕೆ ಇಷ್ಟವಿರದೆ ಸೆಟ್ ಕೆಲಸಕ್ಕೆ ಸೇರಿದೆ. ಆ ಕೆಲಸವನ್ನು ಮಾಡುತ್ತಿರುವಾಗ ನೋವು ಕಾಡುತ್ತಿತ್ತು. ಏನೋ ಅಂದುಕೊಂಡು ಏನೋ ಮಾಡುತ್ತಿದ್ದೀನಲ್ಲ ಅಂದುಕೊಂಡೆ. ಆಗ ನಾನು ಸ್ಕ್ರಿಪ್ಟ್ ಗಳನ್ನು ಬರೆಯೋದಕ್ಕೆ ಶುರು ಮಾಡಿದೆ. ಸ್ಕಿಟ್ ಮಾಡುವುದಕ್ಕೆ ಶುರು ಮಾಡಿದೆ. ಆದರೆ ಹಣ ಸಿಗುತ್ತೆ ಅಂತ ಸೆಟ್ ಹಾಕುವ ಕೆಲಸದಲ್ಲಿಯೇ ಇದ್ದೆ ಎಂದು ಹೇಳಿದರು
ಗಿಲ್ಲಿ ನಟ ಪಕ್ಕಾ ಮಂಡ್ಯ ಸ್ಟೈಲ್ ನಲ್ಲಿ ಮೂರು ಶಾರ್ಟ್ ಸಿನಿಮಾಗಳನ್ನು ಮಾಡಿದ್ದಾರೆ. ಈ ಶಾರ್ಟ್ ಮೂವಿಗಳಿಂದಲೇ ಜನರ ಮನಗೆದ್ದಿದ್ದಾರೆ. ಸೆಲ್ಫಿ ತೆಗೆದುಕೊಳ್ಳಲು ಹೋಗಿ ಸೂಸೈಡ್ ಮಾಡಿಕೊಂಡಿದ್ದು, ಟಿಕ್ ಟಾಕ್‌ನಲ್ಲಿ ಹೆಂಡತಿ ಎಷ್ಟರ ಮಟ್ಟಿಗೆ ಅಡಿಕ್ಟ್ ಆಗಿರುತ್ತಾಳೆ. ಆನ್ ಲೈನ್ ಕ್ಲಾಸಿಗೆ ಅಂತ ಮೊಬೈಲ್ ತೆಗೆದುಕೊಟ್ಟರೆ ಮಗಳೂ ಏನೆಲ್ಲಾ ಮಾಡುತ್ತಾಳೆ ಎಂಬ ವಿಚಾರವನ್ನಿಟ್ಟುಕೊಂಡು ಈ ಮೂರು ಶಾರ್ಟ್ ಫಿಲ್ಮ್‌ಗಳನ್ನು ಮಾಡಿದ್ದಾರೆ. ಅದು ಪಕ್ಕಾ ಮಂಡ್ಯ ಭಾಷೆಯಲ್ಲಿದ್ದು, ಜನರನ್ನು ನಗೆಗಡಲಲ್ಲಿ ತೇಲಿಸುತ್ತವೆಆಗ ತಮ್ಮ ತಂದೆ ಕುಳ್ಳಯ್ಯ ಮತ್ತು ತಾಯಿ ಸಾವಿತಾ .
10 ಸಲ ಸೋತು 1 ಸಲ ಗೆದ್ದಿರುವೆ; ಬೆಸ್ಟ್ ಎಂಟರ್ಟೈನರ್ ಅವಾರ್ಡ್ ಪಡೆದ ಗಿಲ್ಲಿ ನಟ
ಜೀ ಕನ್ನಡ ವಾಹಿನಿಯ ಜನಪ್ರಿಯ ವ್ಯಕ್ತಿ ಗಿಲ್ಲಿ ನಟರಾಜ್ ಈ ವರ್ಷ ಜೀ ಕನ್ನಡದ ಬೆಸ್ಟ್ ಎಂಟರ್ಟೈನರ್ ಅವಾರ್ಡ್ ಪಡೆದುಕೊಂಡಿದ್ದಾರೆ. ವೇದಿಕೆ ಮೇಲೆ ಅವಾರ್ಡ್ ಪಡೆಯಲುತ್ತಲೇ ಕುಣಿದ ಗಿಲ್ಲಿ ಕೊಟ್ಟ ಕೊಟ್ಟ ವಿನ್ನಿಂಗ್ ಸ್ಪೀಚ್ ವೈರಲ್ ಆಗಿದೆ