Homeಕನ್ನಡ ಫೊಕ್ಸ್Ganesh Chaturthi Songs 2024 : Devotional songs and here are the...

Ganesh Chaturthi Songs 2024 : Devotional songs and here are the lyrics.

ಗಣೇಶ್ ಚತುರ್ಥಿ ಸಾಂಗ್ಸ್ ೨೦೨೪ : ಗಣೇಶ ಚತುರ್ಥಿಗೆ ವಿಘ್ನ ನಿವಾರಕನ ಸ್ತುತಿಸುವ ಭಕ್ತಿಗೀತೆಗಳು, ಇಲ್ಲಿವೆ ಲಿರಿಕ್ಸ್‌

Ganesha Images – Browse 102,721 Stock Photos, Vectors, and ...

  1. ಮೊದಲೊಂದಿಪೆ ನಿನಗೆ ಗಣನಾಥ (Vandipe ninage gananatha Lyrics)

(ಯಾವುದೇ ಕಾರ್ಯ ಮಾಡುವ ಮೊದಲು ಗಣೇಶನ ಮೊದಲು ಸ್ತುತಿಸಿದರೆ, ಪೂಜಿಸಬೇಕು, ಇದನ್ನು ಶ್ರೀಪಾದರಾಜರು ರಾಗ-ನಾಟ, ತಾಳ-ಆದಿಯಲ್ಲಿ ಈ ರೀತಿ ಹಾಡಿದ್ದಾರೆ).

ವಂದಿಪೆ ನಿನಗೆ ಗಣನಾಥಾ, ಮೊದಲೊಂದಿಪೆ ನಿನಗೆ ಗಣನಾಥಾ || ಪ ||

ಬಂದವಿಘ್ನಕಳೆ ಗಣನಾಥ || ಅ.ಪ ||

ಆದಿಯಲ್ಲಿ ಧರ್ಮರಾಜ ಪೂಜಿಸಿದ ನಿನ್ನ ಪಾದ

ಸಾಧಿಸಿದ ರಾಜ್ಯ ಗಣನಾಥ || ೧ ||

ಹಿಂದೆ ರಾವಣನು ಮದದಿಂದ ನಿನ್ನ ಪೂಜಿಸದೆ

ಸಂದ ರಣದಲಿ ಗಣನಾಥ || ೨ ||

ಮಂಗಳ ಮೂರುತಿ ಸಿರಿ ರಂಗವಿಟ್ಠಲನ್ನ ಪಾದ

ಭೃಂಗನೆ ಪಾಲಿಸೋ ಗಣನಾಥ || ೩ ||

  1. ಗಜಮುಖನೆ ಗಣಪತಿಯೇ ನಿನಗೆ ವಂದನೆ ( Gajamukhane Ganapathiye Lyrics)

(ಈ ಭಕ್ತಿಗೀತೆಯೂ ಗಣೇಶನನ್ನು ವಿಶೇಷವಾಗಿ ಚೌತಿಯ ದಿನದಂದು ನೆನಪಿಸಿಕೊಳ್ಳಲು, ಭಜಿಸಲು ಸೂಕ್ತವಾಗಿದೆ).

ಗಜಮುಖನೆ ಗಣಪತಿಯೇ ನಿನಗೆ ವಂದನೆ

ನಂಬಿದ ವರ ಪಾಲಿನ ಕಲ್ಪ ತರು ನೀನೆ

ಭಾದ್ರಪದ ಶುಕ್ಲದಾ ಚೌತಿ ಯಂದು

ನೀ ಮನೆ ಮನೆಗೂ ದಯ ಮಾಡಿ ಹರಸು ಎಂದು

ನಿನ್ನ ಸನ್ನಿಧಾನದಿ ತಲೆ ಬಾಗಿ ಕೈಯ್ಯ ಮುಗಿದು

ಬೇಡುವಾ ಭಕ್ತರಿಗೆ ನೀ ದಯಾ ಸಿಂಧು

ಗಜಮುಖನೆ ಗಣಪತಿಯೇ ನಿನಗೆ ವಂದನೆ

ನಂಬಿದ ವರ ಪಾಲಿನ ಕಲ್ಪ ತರು ನೀನೆ

ಈರೇಳು ಲೋಕದ ಅಣುವಣುವಿನಾ

ಇಹ ಪರದಾ ಸಾಧನಕೆ ನೀ ಕಾರಣ

ನಿನ್ನೊಲುಮೆನೋಟದಾ ಒಂದು ಹೊನ್ನ ಕಿರಣಾ

ನೀವಿದರೆ ಸಾಕಯ್ಯಾ ಜನ್ಮ ಪಾವನ

ಗಜಮುಖನೆ ಗಣಪತಿಯೇ ನಿನಗೆ ವಂದನೆ

ನಂಬಿದ ವರ ಪಾಲಿನ ಕಲ್ಪ ತರು ನೀನೆ

ಪಾರ್ವತಿ ಪರ ಶಿವನಾ ಪ್ರೇಮ ಪುತ್ರನೆ

ಪಾಲಿಸುವಾ ಪರ ದೈವಾ ಬೇರೆ ಕಾಣೆ

ಪಾಪದ ಪಂಕದಲಿ ಪದುಮ ಎನಿಸು ಎನ್ನ

ಪಾದ ಸೇವೆ ಒಂದೇ ಧರ್ಮ ಸಾಧನ

ಗಜಮುಖನೆ ಗಣಪತಿಯೇ ನಿನಗೆ ವಂದನೆ

ನಂಬಿದ ವರ ಪಾಲಿನ ಕಲ್ಪ ತರು ನೀನೆ

  1. ಗಜಮುಖ ವಂದಿಸುವೆ (Gajamukha Vandisuve Lyrics)

(ವಿಶೇಷವಾಗಿ ಆನೆಯ ಮುಖ (ಗಜ ಮುಖ) ಹೊಂದಿರುವ ಗಣೇಶನನ್ನು ಸ್ತುತಿಸುವ ಭಕ್ತಿಗೀತೆಯಿದು)

ಗಜಮುಖ ವಂದಿಸುವೆ ಕರುಣಿಸಿ ಕಾಯೋ

ಗಜಮುಖ ವಂದಿಪೆ ಗಜಗೌರಿಯ ಪುತ್ರ

ಅಜನ ಪಿತನ ಮೊಮ್ಮಗನ ಮೋಹದ ಬಾಲಾ | |

ನೀಲಕಂಠನ ಸುತ ಬಾಲಗಣೇಶನೇ

ಬಾರಿ ಬಾರಿಗೆ ನಿನ್ನ ಸ್ಮರಣೆ ಮಾಡುವೆನು |

ಪರ್ವತನಾ ಪುತ್ರಿ ಪಾರ್ವತಿಯ ಕುಮಾರ

ಗರುವಿಯ ಚಂದ್ರಗೆ ಸ್ಠಿರಶಾಪ ಕೊಟ್ಟನೋ ||

ಮತಿಗೆಟ್ಟ ರಾವಣ ಪೂಜಿಸದೆ

ಸೀತಾಪತಿ ಕರದಿಂದಲಿ ಹತನಾಗಿ ಹೋದನು |

ವಾರಿಜನಾಭ ಶ್ರೀ ಹಯವದನನ ಪಾದ

ಸೇರುವ ಮಾರ್ಗದ ದಾರಿಯ ತೋರಿಸೋ | |

  1. ಗಜವದನ ಬೇಡುವೆ (Gajavadana beduve Kannada Lyrics)

ಗಜವದನ ಬೇಡುವೆ | ಗೌರೀತನಯ

ಗಜವದನ ಬೇಡುವೆ

ತ್ರಿಜಗವಂದಿತನೆ ಸುಜನರ ಪೊರೆವನೆ

ಪಾಶಾಂಕುಶಧರ ಪರಮಪವಿತ್ರ

ಮೂಷಿಕವಾಹನ ಮುನಿಜನಪ್ರೇಮ

ಮೋದದಿ ನಿನ್ನಯ ಪಾದವ ತೋರೋ

ಸಾಧುವಂದಿತನೆ ಆದರದಿಂದಲಿ

ಸರಸಿಜನಾಭ ಶ್ರೀ ಪುರಂದರವಿಠಲನ

ನಿರುತ ನೆನೆಯುವಂತೆ ದಯ ಮಾಡೋ

  1. ಶರಣು ಶರಣಯ್ಯ ಶರಣು ಬೆನಕ (Sharanu Sharanayya Sharanu Benaka Lyrics)

(ಯಾವುದೇ ಹಬ್ಬಗಳಿರಲಿ, ಜಾತ್ರೆಗಳಿರಲಿ, ಶುಭ ಕಾರ್ಯಗಳಿರಲಿ, ಅಲ್ಲಿ ಶರಣು ಶರಣಯ್ಯ ಶರಣು ಬೆನಕ ಎಂಬ ಭಕ್ತಿ ಇದ್ದರೆ ಹೊಸ ಉತ್ಸಾಹ, ಭಕ್ತಿಭಾವ ಇರುತ್ತದೆ. ಆ ಹಾಡಿನ ಲಿರಿಕ್ಸ್‌ ಇಲ್ಲಿದೆ)

ಶರಣು ಶರಣಯ್ಯ ಶರಣು ಬೆನಕ

ನೀಡಯ್ಯ ಬಾಳೆಲ್ಲ ಬೆಳಗುವ ಬೆಳಕ

ಶರಣು ಶರಣಯ್ಯ ಶರಣು ಬೆನಕ

ನೀಡಯ್ಯ ಬಾಳೆಲ್ಲ ಬೆಳಗುವ ಬೆಳಕ

ನಿನ್ನ ನಂಬಿದ ಜನಕೆ

ಇಹುದಯ್ಯ ಎಲ್ಲ ಸುಖ

ತಂದೆ ಕಾಯೋ ನಮ್ಮ ಕರಿಮುಖ

ಶರಣು ಶರಣಯ್ಯ ಶರಣು ಬೆನಕ

ನೀಡಯ್ಯ ಬಾಳೆಲ್ಲ ಬೆಳಗುವ ಬೆಳಕ

ಎಲ್ಲರೂ ಒಂದಾಗಿ ನಿನ್ನ

ನಮಿಸಿ ನಲಿಯೋದು ನೋಡೋಕೆ ಚೆನ್ನ

ಎಲ್ಲರೂ ಒಂದಾಗಿ ನಿನ್ನ

ನಮಿಸಿ ನಲಿಯೋದು ನೋಡೋಕೆ ಚೆನ್ನ

ಗರಿಕೆ ತಂದರೆ ನೀನು …..

ಆಆಆಆಆಆಆಆ

ಗರಿಕೆ ತಂದರೆ ನೀನು ಕೊಡುವೆ ವರವನ್ನ

ಗತಿ ನೀನೆ ಗಣಪನೆ ಕೈ ಹಿಡಿಯೋ ಮುನ್ನ

ಶರಣು ಶರಣಯ್ಯ ಶರಣು ಬೆನಕ

ನೀಡಯ್ಯ ಬಾಳೆಲ್ಲ ಬೆಳಗುವ ಬೆಳಕ

ಸೂರ್ಯನೆದುರಲಿ ಮಂಜು ಕರಗುವ ರೀತಿ

ನಿನ್ನ ನೆನೆಯಲು ಒಡನೆ ಓಡುವುದು ಭೀತಿ

ಸೂರ್ಯನೆದುರಲಿ ಮಂಜು ಕರಗುವ ರೀತಿ

ನಿನ್ನ ನೆನೆಯಲು ಒಡನೆ ಓಡುವುದು ಭೀತಿ

ನೀಡಯ್ಯ ಕಷ್ಟಗಳ ಗೆಲ್ಲುವ ಶಕುತಿ

ತೋರಯ್ಯ ನಮ್ಮಲಿ ನಿನ್ನಯ ಪ್ರೀತಿ

ಶರಣು ಶರಣಯ್ಯ ಶರಣು ಬೆನ

ನೀಡಯ್ಯ ಬಾಳೆಲ್ಲ ಬೆಳಗುವ ಬೆಳಕ

ನಿನ್ನ ನಂಬಿದ ಜನಕೆ

ಇಹುದಯ್ಯ ಎಲ್ಲ ಸುಖ

ತಂದೆ ಕಾಯೋ ನಮ್ಮ ಕರಿಮುಖ

ಶರಣು ಶರಣಯ್ಯ ಶರಣು ಬೆನಕ

ನೀಡಯ್ಯ ಬಾಳೆಲ್ಲ ಬೆಳಗುವ ಬೆಳಕ

ಬೆನಕ ಬೆನಕ ಏಕದಂತ

ಪಚ್ಚೆಕಲ್ಲು ಪಾಣಿಮೆಟ್ಲು ಒಪ್ಪುವ ವಿಘ್ನೇಶ್ವರ

ನಿನಗೆ ಇಪ್ಪತ್ತೊಂದು ನಮಸ್ಕಾರಗಳು

  1. ಗಣೇಶ ಅಷ್ಟೋತ್ತರ ಶತ ನಾಮ ಸ್ತೋತ್ರಮ್ (Ganesha Asthothara Lyrics)

(ಗಣೇಶನ 108 ಹೆಸರುಗಳನ್ನು ಸ್ತುತಿಸುವ ಅಷ್ಟೋತ್ತರ

ವಿನಾಯಕೋ ವಿಘ್ನರಾಜೋ ಗೌರೀಪುತ್ರೋ ಗಣೇಶ್ವರಃ |

ಸ್ಕಂದಾಗ್ರಜೋವ್ಯಯಃ ಪೂತೋ ದಕ್ಷೋಽಧ್ಯಕ್ಷೋ ದ್ವಿಜಪ್ರಿಯಃ

ಅಗ್ನಿಗರ್ವಚ್ಛಿದಿಂದ್ರಶ್ರೀಪ್ರದೋ ವಾಣೀಪ್ರದೋಽವ್ಯಯಃ

ಸರ್ವಸಿದ್ಧಿಪ್ರದಶ್ಶರ್ವತನಯಃ ಶರ್ವರೀಪ್ರಿಯಃ

ಸರ್ವಾತ್ಮಕಃ ಸೃಷ್ಟಿಕರ್ತಾ ದೇವೋನೇಕಾರ್ಚಿತಶ್ಶಿವಃ

ಶುದ್ಧೋ ಬುದ್ಧಿಪ್ರಿಯಶ್ಶಾಂತೋ ಬ್ರಹ್ಮಚಾರೀ ಗಜಾನನಃ

ದ್ವೈಮಾತ್ರೇಯೋ ಮುನಿಸ್ತುತ್ಯೋ ಭಕ್ತವಿಘ್ನವಿನಾಶನಃ

ಏಕದಂತಶ್ಚತುರ್ಬಾಹುಶ್ಚತುರಶ್ಶಕ್ತಿಸಂಯುತಃ

ಲಂಬೋದರಶ್ಶೂರ್ಪಕರ್ಣೋ ಹರರ್ಬ್ರಹ್ಮ ವಿದುತ್ತಮಃ

ಕಾಲೋ ಗ್ರಹಪತಿಃ ಕಾಮೀ ಸೋಮಸೂರ್ಯಾಗ್ನಿಲೋಚನಃ

ಪಾಶಾಂಕುಶಧರಶ್ಚಂಡೋ ಗುಣಾತೀತೋ ನಿರಂಜನಃ

ಅಕಲ್ಮಷಸ್ಸ್ವಯಂಸಿದ್ಧಸ್ಸಿದ್ಧಾರ್ಚಿತಪದಾಂಬುಜಃ

ಬೀಜಪೂರಫಲಾಸಕ್ತೋ ವರದಶ್ಶಾಶ್ವತಃ ಕೃತೀ

ದ್ವಿಜಪ್ರಿಯೋ ವೀತಭಯೋ ಗದೀ ಚಕ್ರೀಕ್ಷುಚಾಪಧೃತ್

ಶ್ರೀದೋಜ ಉತ್ಪಲಕರಃ ಶ್ರೀಪತಿಃ ಸ್ತುತಿಹರ್ಷಿತಃ

ಕುಲಾದ್ರಿಭೇತ್ತಾ ಜಟಿಲಃ ಕಲಿಕಲ್ಮಷನಾಶನಃ

ಚಂದ್ರಚೂಡಾಮಣಿಃ ಕಾಂತಃ ಪಾಪಹಾರೀ ಸಮಾಹಿತಃ

ಅಶ್ರಿತಶ್ರೀಕರಸ್ಸೌಮ್ಯೋ ಭಕ್ತವಾಂಛಿತದಾಯಕಃ

ಶಾಂತಃ ಕೈವಲ್ಯಸುಖದಸ್ಸಚ್ಚಿದಾನಂದವಿಗ್ರಹಃ

ಜ್ಞಾನೀ ದಯಾಯುತೋ ದಾಂತೋ ಬ್ರಹ್ಮದ್ವೇಷವಿವರ್ಜಿತಃ

ಪ್ರಮತ್ತದೈತ್ಯಭಯದಃ ಶ್ರೀಕಂಠೋ ವಿಬುಧೇಶ್ವರಃ

ರಮಾರ್ಚಿತೋವಿಧಿರ್ನಾಗರಾಜಯಜ್ಞೋಪವೀತವಾನ್

ಸ್ಥೂಲಕಂಠಃ ಸ್ವಯಂಕರ್ತಾ ಸಾಮಘೋಷಪ್ರಿಯಃ ಪರಃ

ಸ್ಥೂಲತುಂಡೋಽಗ್ರಣೀರ್ಧೀರೋ ವಾಗೀಶಸ್ಸಿದ್ಧಿದಾಯಕಃ

ದೂರ್ವಾಬಿಲ್ವಪ್ರಿಯೋಽವ್ಯಕ್ತಮೂರ್ತಿರದ್ಭುತಮೂರ್ತಿಮಾನ್

ಶೈಲೇಂದ್ರತನುಜೋತ್ಸಂಗಖೇಲನೋತ್ಸುಕಮಾನಸಃ

ಸ್ವಲಾವಣ್ಯಸುಧಾಸಾರೋ ಜಿತಮನ್ಮಥವಿಗ್ರಹಃ

ಸಮಸ್ತಜಗದಾಧಾರೋ ಮಾಯೀ ಮೂಷಕವಾಹನಃ

ಹೃಷ್ಟಸ್ತುಷ್ಟಃ ಪ್ರಸನ್ನಾತ್ಮಾ ಸರ್ವಸಿದ್ಧಿಪ್ರದಾಯಕಃ

ಅಷ್ಟೋತ್ತರಶತೇನೈವಂ ನಾಮ್ನಾಂ ವಿಘ್ನೇಶ್ವರಂ ವಿಭುಂ

ತುಷ್ಟಾವ ಶಂಕರಃ ಪುತ್ರಂ ತ್ರಿಪುರಂ ಹಂತುಮುತ್ಯತಃ

ಯಃ ಪೂಜಯೇದನೇನೈವ ಭಕ್ತ್ಯಾ ಸಿದ್ಧಿವಿನಾಯಕಮ್

ದೂರ್ವಾದಳೈರ್ಬಿಲ್ವಪತ್ರೈಃ ಪುಷ್ಪೈರ್ವಾ ಚಂದನಾಕ್ಷತೈಃ

ಸರ್ವಾನ್ಕಾಮಾನವಾಪ್ನೋತಿ ಸರ್ವವಿಘ್ನೈಃ ಪ್ರಮುಚ್ಯತೇ

Gauri Ganesh Festival 2024: Date, Time, Puja, and Ritual

Angarki Chaturthi 2024: Step-by-Step guide to worship Lord Ganesh

Ekadantaya Vakratundaya Gauri Tanayaya Dheemahi lyrics; ಏಕದಂತಾಯ ವಕ್ರತುಂಡಾಯ

RELATED ARTICLES

LEAVE A REPLY

Please enter your comment!
Please enter your name here

- Advertisment -

Most Popular

Recent Comments