HomeNewsBigg Boss Kannada 11 : ಬಿಗ್​ಬಾಸ್ ಮನೆಗೆ ಧನರಾಜ್​ ಫ್ಯಾಮಿಲಿ ಎಂಟ್ರಿ

Bigg Boss Kannada 11 : ಬಿಗ್​ಬಾಸ್ ಮನೆಗೆ ಧನರಾಜ್​ ಫ್ಯಾಮಿಲಿ ಎಂಟ್ರಿ

Spread the love

ಅಬ್ಬಾ, ಇದು ದಾಖಲೆಯೇ ಸರಿ! ಧನರಾಜ್ ಫ್ಯಾಮಿಲಿಯಿಂದ ‘ಬಿಗ್ ಬಾಸ್’ ಮನೆಗೆ ಬಂದವರೆಷ್ಟು ಮಂದಿ?

‘ಬಿಗ್ ಬಾಸ್‌’ ಮನೆಯಲ್ಲಿ ಈಗ ಫ್ಯಾಮಿಲಿ ರೌಂಡ್ ನಡೆಯುತ್ತಿದೆ. ಹಾಗಾಗಿ, ಮನೆಯೊಳಗೆ ಇರುವ ಸ್ಪರ್ಧಿಗಳನ್ನು ನೋಡಲು ಫ್ಯಾಮಿಲಿ ಸದಸ್ಯರು ಬರುತ್ತಿದ್ದಾರೆ. ಒಬ್ಬ ಸ್ಪರ್ಧಿಯನ್ನು ನೋಡಲು ಫೋಷಕರು, ಪತಿ, ಪತ್ನಿ, ಸಹೋದರ, ಸಹೋದರಿಯರು ಹೀಗೆ ಕುಟುಂಬದ ಮೂರ್ನಾಲ್ಕು ಮಂದಿ ಆಗಮಿಸಬಹುದು. ಆದರೆ ಧನರಾಜ್ ಆಚಾರ್ ವಿಚಾರದಲ್ಲಿ ಅದು ದಾಖಲೆಯಾಗಿಯೇ ಆಗಿ ಉಳಿದಿದೆ.

ಬಿಗ್​ಬಾಸ್​ ಮನೆಗೆ ಬಿಗ್‌‌ ಎಂಟ್ರಿ ಕೊಟ್ಟ ಧನರಾಜ್ ಫ್ಯಾಮಿಲಿ! – Guarantee Newsಧನರಾಜ್‌ ಅವರನ್ನು ನೋಡಲು ಬಂದವರೆಷ್ಟು?

ಹೌದು, ‘ಉಗ್ರಂ’ ಮಂಜು ಅವರನ್ನು ನೋಡಲು ಅವರ ತಂದೆ, ತಾಯಿ, ತಂಗಿ ಮತ್ತು ಮಗಳು ಬಂದಿದ್ದರು. ಚೈತ್ರಾಗಾಗಿ ಅಮ್ಮ ಮತ್ತು ತಂಗಿ ಬಂದಿದ್ದರು. ಗೌತಮಿಗಾಗಿ ಪತಿ ಅಭಿಷೇಕ್ ಬಂದಿದ್ದರೆ, ತ್ರಿವಿಕ್ರಮ್‌ಗಾಗಿ ತಾಯಿ ಆಗಮಿಸಿದ್ದರು. ಹೀಗೆ ಬಂದ ಹೊರಗಿನಿಂದ ಫ್ಯಾಮಿಲಿ ಮೆಂಬರ್ಸ್ ಸಂಖ್ಯೆ 5 ದಾಟಿಲ್ಲ ಎನ್ನಬಹುದು. ಆದರೆ ಧನರಾಜ್ ಅವರನ್ನು ನೋಡಲು ಒಟ್ಟು 35ಕ್ಕೂ ಅಧಿಕ ಮಂದಿ ಬಿಗ್ ಬಾಸ್ ಮನೆಯೊಳಗೆ ಆಗಮಿಸಿದ್ದು ವಿಶೇಷ!

Kannada Nadina Jivanadi Song Lyrics

ಗಾರ್ಡನ್ ಏರಿಯಾದಲ್ಲಿ ಡ್ಯಾನ್ಸ್

ಮೊದಲು ಧನರಾಜ್ ಆಚಾರ್ ಕುಟುಂಬದಿಂದ ಬಂದಿದ್ದ 30ಕ್ಕೂ ಅಧಿಕ ಮಂದಿ ಗಾರ್ಡನ್ ಏರಿಯಾದಲ್ಲಿ ಕಾಣಿಸಿಕೊಂಡರು. ಅವರನ್ನೆಲ್ಲಾ ಭೇಟಿ ಖುಷಿಪಟ್ಟ ಧನರಾಜ್, ಅವರ ಜತೆ ಸೇರಿ ಡ್ಯಾನ್ಸ್ ಮಾಡಿದರು. ಅಷ್ಟು ಮಂದಿ ಖುಷಿಯಿಂದ ಡ್ಯಾನ್ಸ್ ಮಾಡಿದ್ದು ಸಖತ್ ಆಗಿತ್ತು. ಆದರೆ ಅವರಲ್ಲಿ ಯಾರಿಗೂ ಕೂಡ ಬಿಗ್ ಬಾಸ್ ಮನೆಯೊಳಗೆ ಪ್ರವೇಶ ಸಿಗಲಿಲ್ಲ. ಎಲ್ಲರೂ ಡ್ಯಾನ್ಸ್ ಮಾಡಿ, ಹೊರಗಡೆಯಿಂದಲೇ ಇತರೆ ಸದಸ್ಯರಿಗೆ ವಿಶ್ ಮಾಡಿ ಹೊರಟರು

ಹೆಂಡ್ತಿ & ಮಗಳನ್ನು ಕಂಡು ಕಣ್ಣೀರು

ನಂತರ ಧನರಾಜ್‌ಗೆ ಮತ್ತೊಂದು ಸರ್ಪ್ರೈಸ್ ಇತ್ತು. ಕನ್ಫೇಷನ್‌ ರೂಮ್‌ನಿಂದ ಧನರಾಜ್ ಆಚಾರ್ ಅವರ ಪತ್ನಿ ಪ್ರಜ್ಞಾ ಆಚಾರ್ ಬಂದರು. ಬರುತ್ತಿದ್ದಂತೆಯೇ ಗಂಡನಿಗೆ ಸಖತ್ ಆಗಿಯೇ ಕ್ಲಾಸ್ ತೆಗೆದುಕೊಂಡರು. ಅತ್ತ ಮಗುವನ್ನ ನೋಡಬೇಕು ಎಂಬ ಕಾತರ ಧನರಾಜ್‌ಗೆ ಕಾಡುತ್ತಿತ್ತು. ಕೊನೆಗೆ ಆಕ್ಟಿವಿಟಿ ಏರಿಯಾದಲ್ಲಿ ಮಗುವನ್ನು ಇರಿಸಲಾಗಿತ್ತು. ಜೊತೆಗೆ ಅಲ್ಲಿ ಧನರಾಜ್ ಅವರ ಪೋಷಕರು ಇದ್ದರು. ಮೂರು ತಿಂಗಳ ನಂತರ ಮಗಳನ್ನು ನೋಡಿ ಖುಷಿಯಾದ ಧನರಾಜ್, ಭಾವುಕರಾಗಿ ಕಣ್ಣೀರಿಟ್ಟರು. ಕೆಲ ಸಮಯದ ಬಳಿಕ ಮಗುವನ್ನು ಕರೆದುಕೊಂಡು ಹೊರಗೆ ಬನ್ನಿ ಎಂಬ ಸಂದೇಶ ಬಂತು. ಅಂತಿಮವಾಗಿ ಧನರಾಜ್ ಕಡೆಯಿಂದ ಅವರ ಚಿಕ್ಕಪ್ಪ ಜಗದೀಶ್ ಮನೆಯೊಳಗೆ ಉಳಿದುಕೊಂಡರು.

ಒಟ್ನಲ್ಲಿ ಧನರಾಜ್ ಅವರನ್ನು ನೋಡುವುದಕ್ಕಾಗಿಯೇ 35ಕ್ಕೂ ಅಧಿಕ ಮಂದಿ ಬಿಗ್ ಬಾಸ್ ಮನೆಯೊಳಗೆ ಬಂದಿದ್ದು ವಿಶೇಷವಾಗಿತ್ತು. ಇಷ್ಟೊಂದು ದೊಡ್ಡ ಕುಟುಂಬವನ್ನು ಕಂಡು ಬಿಗ್ ಬಾಸ್‌ ಮನೆಯೊಳಗೆ ಇದ್ದ ಸ್ಪರ್ಧಿಗಳು ಅಕ್ಷರಶಃ ಶಾಕ್‌ನಲ್ಲಿದ್ದರು

Bigg Boss ಮನೆಯಲ್ಲಿ ಬಿಕ್ಕಿಬಿಕ್ಕಿ ಅತ್ತ ಧನರಾಜ್ ಆಚಾರ್; ಈ ಕಣ್ಣೀರಿನ ಹಿಂದಿದೆ ಎಮೋಷನಲ್ ಕಾರಣ!

Subscribe for Free and Support Us 

ನಿಮ್ಮ ಈ - ಮೇಲ್ ಬಳಸಿ 👇ಇದೀಗ ಉಚಿತವಾಗಿ 🆓 ಚಂದಾದಾರರಾಗಿ..!  ನಿಮಗೆ ನಮ್ಮ ಕಥೆಗಳು, ಹಾಡುಗಳು ಮತ್ತು ಮಾಹಿತಿ ಇಷ್ಟವಾದರೆ ನಿಮ್ಮ ಸಮೂಹಕ್ಕೆ ಶೇರ್ ಮಾಡುವುದನ್ನ ಮರೆಯದಿರಿ 
RELATED ARTICLES

LEAVE A REPLY

Please enter your comment!
Please enter your name here

- Advertisment -

Most Popular

Recent Comments