Deva madeva baro lyrics – Mahadeshwara Song Lyrics
About the Song
Movie | Sri Madeshwarana Mahime |
Song | Deva Maadeva Baaro |
Music | M.S Maruthi |
Lyrics | Kasthuru Manjunath |
Singer | R. Ravikumar |
ದೇವ ಮಾದೇವ ಬಾರೋ
ಸ್ವಾಮಿ ಮಲೆಯ ಮಾದೇವ ಬಾರೋ
ದೇವ ಮಾದೇವ ಬಾರೋ
ಸ್ವಾಮಿ ಮಲೆಯ ಮಾದೇವ ಬಾರೋ II2II
ಏಳೇಳು ಮಲೆಯ ಮೆರೆದೂ
ನಡುಮಲೆಯಲ್ಲಿ ನೆಲೆಗೊಂಡು
ಏಳೇಳು ಮಲೆಯ ಮೆರೆದೂ
ನಡುಮಲೆಯಲ್ಲಿ ನೆಲೆಗೊಂಡೂ
ನಗು ನಗುತ ಕುಳಿತಿರುವ
ದೇವ ಮಾದೇವ ಬಾರೋ
ಸ್ವಾಮಿ ಮಲೆಯ ಮಾದೇವ ಬಾರೋ… II2II
ಚೆಲುವಾದ ಗಿರಿಯವನೇ ಸ್ವಾಮಿ
ಚಿನ್ನದ ತೇರಿನವನೇ
ಎಪ್ಪತ್ತೇಳು ಮಲೆಯ ಒಡೆಯ
ಎಣ್ಣೆ ಮಜ್ಜನದ ಪ್ರಿಯ
ಹಾಲರವಿಯಾ ಮೇಲೆ ವಾಲಾಡುವ ಸ್ವಾಮಿ
ಆಆಆಆ
ಗಂಡುಲಿಯ ಬೆನ್ನೇರಿ ಮೆರೆದಾಡುವ ಸ್ವಾಮಿ
ಹಾಲರವಿಯ ಮೇಲೆ ವಾಲಾಡುವ ಸ್ವಾಮಿ
ಗಂಡುಲಿಯ ಬೆನ್ನೇರಿ ಮೆರೆದಾಡುವ ಸ್ವಾಮಿ
ದೇವಾದಿ ದೇವರನೆ ಕಾಪಾಡಿದ ಸ್ವಾಮಿ
ದೇವ ಮಾದೇವ ಬಾರೋ ಸ್ವಾಮಿ
ಮಲೆಯ ಮಾದೇವ ಬಾರೋ II2II
ಅನವರತ ನಿನ್ನ ಲೀಲೇ ಪಾಡುವೆ
ದಯೆ ಇರಲಿ ನನ್ನ ಮೇಲೇ
ಈ ಬಡವನಾ ಮೊರೆಗೇ ಒಲಿದು
ಬಾರಯ್ಯ ನನ್ನ ಮನೆಗೇ
ಬಾಳಲ್ಲಿ ಬಲು ನೊಂದು ಬಳಲಿರುವೆನು ತಂದೆ
ದೀನ ದಯಾ ಸಿಂಧು ನೀನೇ ಗತಿಯು ಮುಂದೆ
ಬಾಳಲ್ಲಿ ಬಲು ನೊಂದು ಬಳಲಿರುವೆನು ತಂದೆ
ದೀನ ದಯಾ ಸಿಂಧು ನೀನೇ ಗತಿಯು ಮುಂದೆ
ನೀ ಬಂದು ನನ್ನೊಮ್ಮೆ ಹರಸೆಂದು ಬೇಡುವೆ
ದೇವ ಮಾದೇವ ಬಾರೋ ಸ್ವಾಮಿ
ಮಲೆಯ ಮಾದೇವ ಬಾರೋ
ದೇವಾ ಮಾದೇವ ಬಾರೋ ಸ್ವಾಮಿ
ಮಲೆಯ ಮಾದೇವ ಬಾರೋ II2II
ಏಳೇಳು ಮಲೆಯ ಮೆರೆದೂ
ನಡುಮಲೆಯಲ್ಲಿ ನೆಲೆಗೊಂಡು
ಏಳೇಳು ಮಲೆಯ ಮೆರೆದೂ
ನಡುಮಲೆಯಲ್ಲಿ ನೆಲೆಗೊಂಡೂ
ನಗು ನಗುತ ಕುಳಿತಿರುವ
ದೇವಾ ಮಾದೇವ ಬಾರೋ ಸ್ವಾಮಿ
ಮಲೆಯ ಮಾದೇವ ಬಾರೋ
ದೇವಾ ಮಾದೇವ ಬಾರೋ ಸ್ವಾಮಿ
ಮಲೆಯ ಮಾದೇವ ಬಾರೋ… ಓ ಒ II2II
Get more Devotional Songs – Mahadeshwara Songs